ಶ್ರೀಚಕ್ರಾರ್ಚನ ಚಂದ್ರಿಕಾ ಕೃತಿಯ ಪರಿಚಯ


ಶ್ರೀ ಚಕ್ರಾರ್ಚನ ಚಂದ್ರಿಕಾ ಕೃತಿಯ ಬಗ್ಗೆ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ತಮ್ಮ ಶುಭಾಶೀರ್ವಾದವನ್ನು ಕಳಿಸಿ

ಪರಾಶಕ್ತಿಯ ಉಪಾಸನೆಗೆ ಅಗತ್ಯವಿರುವ ಎಲ್ಲಾ ವಿವರಗಳನ್ನೂ ಈ ಕೃತಿ ಹೊಂದಿದ್ದು ಅಗತ್ಯವಿರುವ ಕಡೆ ಕನ್ನಡದಲ್ಲಿವಿವರಣೆ ನೀಡಿರುವುದು ತುಂಬಾ ಸೂಕ್ತವಾಗಿದೆ. ಮಹಾಜನರು ಶ್ರೀ ವಿದ್ಯಾ ಉಪಾಸನೆಗೆ ಸಹಕಾರಿಯಾದ ಈ ಕೃತಿಯನ್ನು ಆದರಿಸಲಿ ಎಂದು ಹಾರೈಸಿದ್ದಾರೆ.

ಬೆಂಗಳೂರು ರಾಜರಾಜೇಶ್ವರೀ ನಗರದ ಶ್ರೀ ಕೈಲಾಸಾಶ್ರಮ ಮಹಾಸಂಸ್ಥಾನದ ಪೀಠಾಧಿಪತಿಗಳು ಶ್ರೀ ಶ್ರೀ ಶ್ರೀ ಜಯೇಂದ್ರ ಪುರಿ ಮಹಾಸ್ವಾಮಿಗಳು ಶುಭ ಹಾರೈಸಿ

ದೇವೀ ಉಪಾಸಕರಿಗೆ ಇದು ಉತ್ತಮ ಕೊಡೊಗೆಯಾಗಿ, ಶ್ರೀ ವಿದ್ಯೋಪಾಸಕರಿಗೆ ಚಂದ್ರಿಕೆಯಾಗಿಯೂ ಭಾಸ್ಕರಪ್ರಾಯವಾಗಿಯೂ ಇದ್ದು ಪೂಜಾ ವಿಧಾನದಲ್ಲಿ ಪರಿಷ್ಕಾರಕ್ಕೆ ಕಾರಣೀಭೂತವಾಗಿ ಲೋಕಕ್ಕೆ ಕ್ಷೇಮವನ್ಣುಂಟುಮಾಡಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಆಶೀರ್ವದಿಸಿದ್ದಾರೆ

ಹೊರನಾಡು ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರೀ ದೇವಸ್ಥಾನದ ಧರ್ಮಕರ್ತರಾದ ಡಾ ಜಿ ಭೀಮೇಶ್ವರ ಜೋಷಿಯವರು ತಮ್ಮ ಶುಭಸಂದೇಶದಲ್ಲಿ

ಶ್ರೀಚಕ್ರಾರ್ಚನೆಯ ಶಾಸ್ತ್ರೋಕ್ತ ವಿಧಿವಿಧಾನಗನ್ನು ಸಮಗ್ರವಾಗಿ ಒಳಗೊಂಡಿರುವುದು ಸಂತೋಷದ ವಿಷಯ. ಇದು ಒಂದು ಉತ್ತಮ ಆಧ್ಯಾತ್ಮಿಕ ಸಂಗ್ರಹಣೆಯಾಗುವುದರಲ್ಲಿ ಅತಿಶಯವಿಲ್ಲಾ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಶುಭ ಕೋಇದ್ದಾರೆ.

ಸುಕ್ಷೇತ್ರ ಕುಪ್ಪೂರು ಗದ್ದಿಗೆ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಡಾ ಷ ಬ್ರ ಶ್ರೀ ಯತೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಕಲ್ಪನೆಯ ಕೂಸು ಈ ಕೃತಿಯ ಮುಖಪುಟ. ಇದರ ವಿನ್ಯಾಸ ಮಾಡುವಾಗ ಪ್ರತಿಯೊಂದು ಹಂತದಲ್ಲೂ ಸೂಚನೆ ನೀಡಿ ಅನುಗ್ರಹಿಸಿದ್ದಾರೆ. ಶ್ರೀಗಳು ದೇವೀ ಉಪಾಸಕರು. ನವರಾತ್ರಿಯಲ್ಲಿ ಶ್ರೀ ಚಂಡೀಹವನವನ್ನು ಶ್ರದ್ಧಾ ಭಕ್ತಿಯಿಂದ ಹಮ್ಮಿಕೊಳ್ಳುವ ಏಕೈಕ ವೀರಶೈವ ಪೀಠ ಇದಾಗಿದೆ.
ಶ್ರೀ ಚಕ್ರಾರ್ಚನೆಯ ವಿಸ್ತೃತ ವಿಧಾನವನ್ನು ಸರಳವಾಗಿ ವಿವರಿಸಿರುವ ಈ ಕೃತಿಯು ಎಲ್ಲಾ ಆಸ್ತಿಕ ಬಂಧುಗಳಿಗೆ ಒಂದು ಸಿಹಿಯಾದ ಪಾಕವಾಗಿದೆ ಎಂದು ಹೇಳಿ ತಮ್ಮ ಆಶೀರ್ವಾದವನ್ನು ಅನುಗ್ರಹಿಸಿದ್ದಾರೆ.

ಶ್ರೀ ಮದ್ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ ಷ ಬ್ರ ಶ್ರೀ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ದೇವೀ ಉಪಾಸಕರು, ಶ್ರೀ ಚಕ್ರಾರ್ಚನೆ ಅವರ ನಿತ್ಯಪೂಜಾವಿದಿಗಳಲ್ಲಿ ಅವಿಭಾಜ್ಯ ಅಂಗವಾಗಿದೆ.
ಶ್ರೀ ವಿದ್ಯಾ ಮಂತ್ರ ಉಪದೇಶವಿಲ್ಲದವರೂ ಸಹಾ ಶೀ ಚಕ್ರಾರ್ಚನೆ ಮಾಡಬಲ್ಲ ಸರಳ ವಿಧಾನವನ್ನು ಈ ಕೃತಿಯು ನಿರೂಪಿಸಿದ್ದು, ಈ ಪವಿತ್ರ ಕೃತಿಯು ಭೋಗ ಮೋಕ್ಶ್ಜಗಳನ್ನು ನೀಡುವ ಮಾರ್ಗೋಪಾಯವನ್ನು ಹೇಳಿದೆ. ಈ ಕೃತಿಯ ಸದುಪಯೋಗವನ್ನು ಸರ್ವರೂ ಪಡೆಯುವಂತಾಗಲೀ ಎಂದು ಹಾರೈಸಿದ್ದಾರೆ.

ಈ ಚಕ್ರಾರ್ಚನ ಪದ್ದತಿಯು 14 ನೇ ಶತಮಾನದಿಂದ ಈ ಗುರುಪರಂಪರೆಯಲ್ಲಿ ಆಚರಣೆಯಲ್ಲಿದ್ದು, ಅದನ್ನು ಸಂಗ್ರಹಿಸಿ ಮೊಟ್ಟಮೊದಲಬಾರಿಗೆ 1938 ರಲ್ಲಿ ದೇವನಾಗರೀ ಲಿಪಿಯಲ್ಲಿ ಮುದ್ರಣದ ರೂಪವನ್ನು ಕೊಟ್ಟ ನನ್ನ ಪರಮೇಷ್ಥಿ ಗುರು ಬ್ರಹ್ಮರ್ಷಿ ಚಿದಾನಂದನಾಥರ ಮೊಮ್ಮಕ್ಕಳು ಶ್ರೀ ವೃಷಭಾನಂದನಾಥರು ಸಂದೇಶವನ್ನು ಕಳಿಸಿ ತಮ್ಮ ಸಂತೋಷವನ್ನು ವ್ಯಕ್ತ ಪಡಿಸಿ ದ್ದಾರೆ.
ಬ್ರಹ್ಮರ್ಷಿ ಚಿದಾನಂತರು ಸ್ಥಾಪಿಸಿದ ಶ್ರೀ ಗುಹಾನಂದಮಂಡಲಿಯ ಪ್ರಸ್ತುತ ಅಧ್ಯಕ್ಷರಾದ ಚರ್ಯಾನಂದನಾಥ ಸಮೇತ ಚರ್ಯಾಂಬ ಅವರು ಸಂದೇಶ ಕಳಿಸಿ ಶುಭ ಕೋರಿದ್ದಾರೆ.

ನನ್ನ ಶ್ರೀ ವಿದ್ಯಾಗುರುಪತ್ನಿ, ಶ್ರೀ ಪರಾಂಬ ಅವರು ಈ ಕೃತಿಗೆ ಉಪೋದ್ಘಾತವನ್ನು ಬರೆಯುವ ಮೂಲಕ ನನ್ನನ್ನು ಅನುಗ್ರಹಿಸಿ ಆಶೀರ್ವದಿಸಿದ್ದಾರೆ.

ಶ್ರೀ ಚಕ್ರಾರ್ಚನ ಚಂದ್ರಿಕಾ ಮುದ್ರಣ ಕಾರ್ಯ ಆರಂಭವಾಗಿದ್ದು, ದಿ 30-12-2020 ರಂದು ಸುಕ್ಷೇತ್ರ್ರ ಕುಪ್ಪೂರು ಗದ್ದಿಗೆ ಮಠದ ಜಾತ್ರಾಮಹೋತ್ಸವ ಸಂದರ್ಭದಲ್ಲಿ ಅವದೂತವರೆಣ್ಯ ಶ್ರೀ ವಿನಯ ಗುರೂಜಿಯರಿಂದ ಲೋಕಾರ್ಪಣೆಯಾಗುತ್ತಿದ್ದು, ಇದಕ್ಕೂ ಕಾರಣಭೂತರು ಶ್ರೀ ಕುಪ್ಪೂರು ಶ್ರೀಗಳೇ ಆಗಿದ್ದಾರೆ.

ಇಂತಹ ಕೃತಿಗಳನ್ನು ನಿಯಮಿತ ಪ್ರಮಾಣಲ್ಲಿ ಮುದ್ರಣ ಮಾಡಲು ಸಾಧ್ಯ ಹಾಗಾಗಿ ನಿಮ್ಮ ಪ್ರತಿಗಳಿಗಾಗಿ ಅದಿತ್ರಿ ಪಬ್ಲಿಕೇಶನ್ ಅವರನ್ನು 99809 49005 ಮೂಲಕ ಸಂಪರ್ಕಿಸಬೇಕಾಗಿ ವಿನಂತಿ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: