“ಸಂಸ್ಕಾರ ಶುದ್ಧಿ” ಕಾರ್ಯಾಗಾರ


ಶ್ರೀ ಗುರುಭ್ಯೋ ನಮಃ

ಸ್ವಾಮಿ ಸತ್ಯಸಂಗಾನಂದ ಸರಸ್ವತಿ ಅವರು ಸೌಂದರ್ಯ ಲಹರಿಯ 68 ನೇ ಶ್ಲೋಕವನ್ನು ವಿವರಿಸುತ್ತಾ, ಈ ಮಂತ್ರವು ನಮ್ಮ ಸಂಸ್ಕಾರಗಳನ್ನು ಶುದ್ಧೀಕರಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಇದರಿಂದಾಗಿ ಜೀವನದ ಸಕಾರಾತ್ಮಕ ಭಾಗವನ್ನು ಅನ್ವೇಷಿಸಲು ನಮಗೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ವಾಸ್ತವವಾಗಿ ಅದು ನಮ್ಮಲ್ಲಿ ಪರಿವರ್ತನೆಯನ್ನೇ ಉಂಟುಮಾಡುತ್ತದೆ.

ಈ ಶ್ಲೋಕದ ವರ್ಣಬೀಜಗಳು ಮತ್ತು ಈ ವರ್ಣಬೀಜಗಳ ಧ್ಯಾನ ಶ್ಲೋಕವನ್ನು ಒಳಗೊಂಡಿರುವ, ನಮ್ಮ ಸಂಸ್ಕಾರಗಳನ್ನು ಶುದ್ಧೀಕರಿಸುವ ಕಾರ್ಯಕ್ರಮವನ್ನು  ಶ್ರೀವಿದ್ಯೋಪಾಸಕರಾದ ಶ್ರೀ ಆತ್ಮಾನಂದನಾಥ ಗುರೂಜಿಯವರು ರೂಪಿಸಿದ್ದಾರೆ. ಕಾರ್ಯಕ್ರಮವು ಆನ್‌ಲೈನ್‌ನಲ್ಲಿ 12 ದಿನಗಳವರೆಗೆ ದಿನಕ್ಕೆ 30 ನಿಮಿಷಗಳ ಕಾಲ.ನಡೆಯಲಿದೆ

ಈ ಕಾರ್ಯಕ್ರಮವು ಅವರ ಅನೇಕ ಶಿಷ್ಯರಿಗೆ ಸಹಾಯ ಮಾಡಿದೆ ಮತ್ತು ಅವರ ಆಲೋಚನಾ ಪ್ರಕ್ರಿಯೆಯಲ್ಲಿ ಪರಿವರ್ತನೆಯನ್ನು ತರುವ ಮೂಲಕ ಪ್ರಗತಿ, ಸಂತೋಷ ಮತ್ತು ಸಂತೃಪ್ತಿಗೆ ಕಾರಣವಾಗಿದೆ..

ಕಾರ್ಯಕ್ರಮದಲ್ಲಿ ಭಾಗವಹಿಸಲು ಯಾವುದೇ ನಿಗದಿತ ಶುಲ್ಕವನ್ನು ವಿಧಿಸಿಲ್ಲವಾದರೂ ಒಮ್ಮೆ ಕಾರ್ಯಕ್ರಮ ಪೂರ್ಣಗೊಂಡ ನಂತರ ಭಾಗವಹಿಸಿದವರು, ತಮ್ಮ ಶಕ್ತಿಗೆ ತಕ್ಕಂತೆ ಸ್ವಯಂಪ್ರೇರಿತ ಕೊಡುಗೆಯನ್ನು ನೀಡಬಹುದಾಗಿದೆ. ಇಂತಹ ಪವಿತ್ರ ಜ್ಞಾನವನ್ನು ಎಂದಿಗೂ ಬೆಲೆಗೆ ಮಾರಾಟ ಮಾಡಬಾರದು ಎಂದು ಗುರೂಜಿ ದೃಢವಾಗಿ ನಂಬಿದ್ದಾರೆ..

ಕಾರ್ಯಕ್ರಮದಲ್ಲಿ  ಭಾಗವಹಿಸಲು ಬಯಸುವವರು ತಮ್ಮ ವಿವರಗಳನ್ನು

samskarashuddhi@gmail.com

ಗೆ ಕಳುಹಿಸಬಹುದಾಗಿದೆ. ಹಾಗೆಯೇ  ಕಾರ್ಯಕ್ರಮಕ್ಕೆ ಹಾಜರಾಗಲು ಅನುಕೂಲಕರ ಸಮಯವನ್ನು ಸಹಾ  ಸೂಚಿಸಬಹುದು. ಎರಡು ಮೂರು ಸಮಯದ  ಆಯ್ಕೆಗಳನ್ನು ಸೂಚಿಸಿದರೆ ಒಳ್ಳೆಯದು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: