ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗಿರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
1917 ರಲ್ಲಿ ಮುದ್ರಣವಾಗಿರುವ ” ದುರ್ಗಾ ಮಹೋದಧಿ: ಗ್ರಂಥವು ಸಾಮಂತ ವಾಟಿಕಾ ಪುರ ನಿವಾಸಿ ಶ್ರೀ ಕೃಷ್ಣಶರ್ಮರಿಂದ ಸಂಕಲಿತ ವಾಗಿದ್ದು, ಇದು, ಸಪ್ತಶತೀ ಯಂತ್ರ ಸ್ಥಾಪನೆ, ಏಕಾದಶ ನ್ಯಾಸ, ಚಂಡೀ ಆವರಣ ಪೂಜಾ, ಪಲ್ಲವ, ಯೋಜನ ಮತ್ತು ಸಂಪುಟೀಕರಣ ಪ್ರಯೋಗಗಳ ವಿವರಣೆಯೊಂದಿಗೆ ಮಾರ್ಕಂಡೇಯ ಪುರಾಣದ ಶ್ರೀ ದುರ್ಗಾ ಸಪ್ತಶತಿಯ ಶುದ್ಧ ಪಾಠವನ್ನು ಒಳಗೊಂಡಿದೆ.
ಈ ಕೃತಿಯ ಯಥಾವತ್ ಕನ್ನಡ ಲಿಪ್ಯಂತರ ” ಶ್ರೀ ದುರ್ಗಾ ಉಪಾಸನಾ ಚಂದ್ರಿಕಾ ” ಕೃತಿಯು ಅತಿ ಶೀಘ್ರದಲ್ಲಿ ದೇವೀ ಉಪಾಸಕರ ಕೈ ಸೇರಲಿದೆ .
ಈ ಕೃತಿಗೆ ನನ್ನ ಶ್ರೀ ವಿದ್ಯಾಗುರುಗಳ ಧರ್ಮಪತ್ನಿ ಶ್ರೀ ಪರಾಂಬ ಅವರು ‘ಉಪೋದ್ಘಾತ” ವನ್ನು ಬರೆದು ನನ್ನನ್ನು ಅನುಗ್ರಹಿಸಿದ್ದಾರೆ, ಉಪೋದ್ಘಾತವು ಆಂಗ್ಲ ಭಾಷೆಯಲ್ಲಿದ್ದು ಅದನ್ನು ಯಥಾವತ್ತಾಗಿ ಇಲ್ಲಿ ಕೊಡಲಾಗಿದ್ದು, ಇದರ ಕನ್ನಡ ಅನುವಾದವನ್ನು ಸಹಾ ಅತಿ ಶೀಘ್ರದಲ್ಲೇ ಇಲ್ಲಿ ನೀಡಲಾಗುವುದು.
ಈ ಕೃತಿಯು ದೇವೀ ಉಪಾಸಕರಿಗೆ ಸಹಕಾರಿಯಾದರೆ ನಾನು ಧನ್ಯ