ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ
ಸಾಮಂತವಾಟಿಕಾಪುರ ವಾಸಿ ಎಂದು ಹೇಳಿಕೊಂಡಿರುವ ಶ್ರೀ ಕೃಷ್ಣಶರ್ಮ ರಿಂದ ಪರಿಶೋಧಿಸಿ 1971 ರಲ್ಲಿ ಪ್ರಕಟಗೊಂಡಿರುವ ” ದುರ್ಗಾ ಮಹೋದಧಿ” ಯ ಕನ್ನಡ ಲಿಪ್ಯಂತರ ಕಾರ್ಯ ಶ್ರೀ ಪರಾನಂದನಾಥ ಗ್ರಂಥಮಾಲೆಯಿಂದ ಮುಗಿದಿದ್ದು ಈ ಕೃತಿಯ ಶೀರ್ಷಿಕೆಯನ್ನು ಶೀಘ್ರವೇ ಘೋಷಿಸಿಲಾಗುವುದು.
ಈ ಅತ್ಯಂತ ಮಹೋನ್ನತ ಕೃತಿಯು ಶ್ರೀ ದುರ್ಗಾ ಸಪ್ತಶತಿಯ ಸರಿಯಾದ ಪಾಠವನ್ನು ಹೊಂದಿದೆಯಲ್ಲದೆ, ಸಪ್ತಶತೀ ಯಂತ್ರ ಸ್ಥಾಪನೆ, ಏಕಾದಶ ನ್ಯಾಸಗಳು, ಚಂಡೀ ಆವರಣ, ಸರಿಯಾದ ಪಾರಾಯಣ ಕ್ರಮ, ಸಂಪುಟೀಕರಣ ಕ್ರಮಗಳನ್ನು ಹೊಂದಿದ್ದು ದೇವೀ ಆರಾಧಕರಿಗೆ ಅದರಲ್ಲೂ, ದುರ್ಗಾ ಸಪ್ತಶತೀ ಪಾರಾಯಣ ಮಾಡುವ ಸಾಧಕರಿಗೆ, ಆಸ್ತಿಕರಿಗೆ ಅತ್ಯಂತ ಅವಶ್ಯವಾಗಿದೆ.
ಸಪ್ತಶತೀ ಯಂತ್ರವು ಸುಲಭವಾಗಿ ಲಭ್ಯವಿಲ್ಲದ ಕಾರಣ, ತಾಮ್ರದ ಈ ಯಂತ್ರವನ್ನು ಕೃತಿಯೊಂದಿಗೆಯೀ ನೀಡುವ ಯೋಜನೆಯೂ ಇದೆ.
ಹೆಚ್ಚಿನ ವಿವರಗಳನ್ನು ಶೀಘ್ತವಾಗಿ ಪ್ರಕಟಿಸಲಾಗುವುದು