ಶ್ರೀ ರಾಜರಾಜೇಶ್ವರೀ ಅಷ್ಟಕದ ಮೊದಲನೇ ಸ್ತೋತ್ರಕ್ಕೆ ಕನ್ನಡದಲ್ಲಿ ವಿವರಣೆ


ಶ್ರೀ ಗುರುಭ್ಯೋ ನಮಃ ಶ್ರೀ ಪರಮಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ

ಶ್ರೀ ಶಂಕರ ಭಗವತ್ಪಾದರ ಶ್ರೀ ರಾಜರಾಜೇಶ್ವರೀ ಅಷ್ಟಕ ದೇವಿಯನ್ನು ಹೊಗಳಿ ಹಾಡಿರುವ ಸ್ತೋತ್ರ ಆದರೂ ಅದು ಭಗವತ್ಪಾದರು ದೇವಿಗೆ ಹೇಳುತ್ತಿರುವ ಪರಾಕು ಎಂದು ನನಗೆ ಅನಿಸುತ್ತಿದೆ. ರಾಜರು ಇದ್ದ ಕಾಲದಲ್ಲಿ ಅವರು ಸಭೆಗೆ ಆಗಮಿಸುವಾಗ ಪರಾಕು ಹೇಳುವ ಸಂಪ್ರದಾಯ ಇತ್ತು. ಹಾಗೆಯೇ ಧರ್ಮ ಪೀಠಗಳ ಅಧಿಪತಿಗಳಿಗೂ ಪರಾಕು ಹೇಳುವ ಸಂಪ್ರದಾಯ ಈಗಲೂ ಇದೆ. ಪರಾಕು ಹೇಳುವುದು ಎಂದರೆ ಹೊಗಳಿ ಹಾಡುವುದು ಮಾತ್ರವಲ್ಲದೆ ರಾಜರು ಮತ್ತ ಧರ್ಮ್ಪೀಟದ್ಪತಿಗಳ ಬರುತ್ತಿದ್ದಾರೆ ಎಂದ ಎಚ್ಚ್ರಸ

ಸ್ತೋತ್ರ ದೇವಿಯನ್ನು ಹೊಗಳುವುದಕ್ಕೆ ಮಾತ್ರ ಮೀಸಲಾದರೆ, ಪರಾಕು ದೇವಿಯನ್ನು ಹೊಗಳುವ ಜತೆಗೆ ಅವಳ ಬರುವಿಕೆ

ಅಂಬಾ ಶಾಂಭವಿ ಚಂದ್ರಮೌಳಿರಬಲಾsಪರ್ಣಾ ಉಮಾ ಪಾರ್ವತೀ
ಕಾಳೀ ಹೈಮವತೀ ಶಿವಾ ತ್ರಿನಯನಿ ಕಾತ್ಯಾಯನೀ ಭೈರವೀ
ಸಾವಿತ್ರೀ ನವಯೌವನಾ ಶುಭಕರೀ ಸಾಮ್ರಾಜ್ಯ ಲಕ್ಷ್ಮೀ ಪ್ರದಾ
ಚಿದ್ರೂಪೀ ಪರದೇವತಾ ಭಗವತೀ ಶ್ರೀ ರಾಜರಾಜೇಶ್ವರೀ.

ತಾಯಿ ಶಾಂಭವಿಯೇ, ನೀನು ಅರ್ಧಚಂದ್ರನನ್ನು ಶಿರದಲ್ಲಿ ಧರಿಸಿದ್ದೀಯೆ, ನೀನು ಅಪರ್ಣಾ, ಉಮಾ, ಪಾರ್ವತಿ, ಕಾಳಿ, ಹೈಮವತೀ, ಶಿವಾ, ತ್ರಿನಯನಿ, ಕಾತ್ಯಾಯಿನಿ, ಭೈರವಿ, ಸಾವಿತ್ರಿ ಎಂಬ ನಾಮಗಳಿಂದ ನವಯೌವನೆಯಾಗಿ ಶೋಭಿಸುತ್ತಾ, ಶುಭವನ್ನೂ ಸಾಮ್ರಾಜ್ಯಲಕ್ಷ್ಮಿಯನ್ನೂ ದಯಪಾಲಿಸಿ, ಚಿದ್ರೂಪಿಯೂ, ಪರದೇವತೆಯೂ ಭಗವತಿಯೂ ಆದ ನೀನು ರಾಜರಾಜೇಶ್ವರಿ ಆಗಿದ್ದೀಯೆ.

ತಾಯಿ ಶಾಂಭವೀ, ಇದು ಲಲಿತಾ ಸಹಸ್ರನಾಮದ 122 ನೆಯ ನಾಮ, ಶಿವನ ಅರ್ಧಾಂಗಿ, ಶಂಭುವಿನ ಭಕ್ತರ ತಾಯಿ, ದೇವೀ ಭಾಗವತ ಹೇಳುವಂತೆ 8 ವರ್ಷದ ಕನ್ಯೆ. ಅರ್ಧಚಂದ್ರನನ್ನು ಶಿರದಲ್ಲಿ ದರಿಸಿರುವವಳೇ, ಅಪರ್ಣಾ, ಲಲಿತಾ ಸಹಸ್ರನಾಮದ 754 ನೇ ನಾಮ. ಹಿಮವಂತನ ಮಗಳು ಗಿರಿಜೆ ಶಿವನನ್ನು ಕುರಿತು ಕಠಿಣ ತಪಸ್ಸನ್ನು ಮಾಡುವಾಗ ಒಂದು ಹಸಿರೆಲೆಯನ್ನು ಸಹಾ ಸೇವಿಸಲಿಲ್ಲ. ಆಗ ಅಲ್ಲಿದ್ದ ಋಷಿ ಮುನಿಗಳು ಅವಳನ್ನು ಅಪರ್ಣಾ ಎಂದು ಸಂಭೋಧಿಸಿದರು ಎಂದು ಕಾಳಿಕಾ ಪುರಾಣ ಮತ್ತು ಬ್ರಹ್ಮಾಂಡ ಪುರಾಣಗಳಲ್ಲಿ ಉಲ್ಲೇಖವಾಗಿದೆ. ಅಪರ್ಣಾ ಎಂದರೆ ಎಲೆಯೂ ಇಲ್ಲದಿರುವುದು. ತಾಯಿಯು ಪ್ರಕೃತಿಯೇ ಆಗಿರುವುದರಿಂದ ಮರಗಳಲ್ಲಿ ಎಲೆಯೇ ಇಲ್ಲದಿರುವ ಶಿಶಿರಋತುವನ್ನು ಈ ನಾಮ ಸೂಚಿಸುತ್ತಿದೆ. ಋಣ ಎಂದರೆ ಸಾಲ ಅಪಋಣ ಎಂದರೆ ಸಾಲ ಇಲ್ಲದಿರುವುಕೆ ಎಂಬ ಅರ್ಥವನ್ನೂ ವಿದ್ವಾಂಸರು ನೀಡಿದ್ದಾರೆ ಹಾಗೂ ಈ ನಾಮದ ಸಂಪುಟೀ ಕರಣದೊಂದಿಗೆ ಲಲಿತಾ ಸಹಸ್ರ ನಾಮ ಪಾರಾಯಣ, ದುರ್ಗಾ ಸಪ್ತಶತೀ ಪಾರಾಯಣ ಅಥವಾ ಶ್ರೀವಿದ್ಯಾ ಮಂತ್ರಗಳನ್ನು ಜಪಿಸುವುದರಿಂದ ಋಣಭಾದೆ ಇರುವುದಿಲ್ಲಾ ಎಂದು ನಂಬಲಾಗಿದೆ. 633 ನೆಯ ನಾಮ ಉಮಾ, ಓಂ ಪ್ರಣವ ದ ಎರಡು ಅಕ್ಷರಗಳೇ ಉಮಾ. ಉಮಾ ಹೆಸರಿನ ಬಗ್ಗೆ ಪುರಾಣಗಳು ಹಲವು ಕಥೆಗಳನ್ನು ಹೇಳಿವೆ. ಉಮಾ ಎನ್ನುವುದು ಬೆಳಕಿನ ಶಕ್ತಿ, ಅವಳ ಬೆಳಕಿನಲ್ಲಿ ಜ್ಞಾನವನ್ನು ಪಡೆದುಕೊಳ್ಳುವುದು ಸುಲಭ ಆಗುತ್ತದೆ. ಪಾರ್ವತಿ ಪರ್ವತ ರಾಜನ ಕುವರಿ ಅಷ್ಟು ಮಾತ್ರ ಅಲ್ಲಾ. ತಾಯಿಯ ಈ ರೂಪದಲ್ಲಿ ಬೋಳಾ ಶಂಕರನಲ್ಲಿ ಗೃಹಾಸಕ್ತಿಯನ್ನು ಹುಟ್ಟುಹಾಕುತ್ತಾಳೆ ಹಾಗೂ ಅವನ ನಾಶಮಾಡುವ ಕ್ರಿಯೆಗೆ ಕೊಂಚ ತಡೆ ಒಡ್ಡುತ್ತಾಳೆ. 751 ನೆಯ ನಾಮ ಕಾಳೀ, ಶಿವನ ಮಹಾಕಾಳ ರೂಪದ ಅರ್ಧಾಂಗಿ. ಶಿವನ ನಾಶಮಾಡುವ ಪ್ರವೃತ್ತಿಯನ್ನು ಪ್ರಚೋದಿಸುವವಳು ಕಾಳಿ. ಕಾಲವೇ ಇವಳು. ದಶಾಮಹಾವಿದ್ಯೆಗಳಲ್ಲಿ ಮೊದಲ ವಿದ್ಯೆ ಕಾಳಿ.ಹೈಮವತೀ, ಹಿಮವಂತನ ಮಗಳು. ಗಂಗಾನದಿಯನ್ನು ಸಹಾ ಹೈಮವತೀ ಎಂದು ಕರೆಯಲಾಗಿದೆ. ಗಂಗಾನದಿಯು ಸ್ವರ್ಗದಲ್ಲಿ ಜನಿಸಿ ಮೊಟ್ಟಮೊದಲಿಗೆ ಭೂಲೋಕದಲ್ಲಿ ಕಾಣಿಸಿದ್ದು ಹಿಮಾಚಲದಲ್ಲಿ ಎಂಬ ನಂಬಿಕೆ ಹಾಗಾಗಿ ಗಂಗೆಯೂ ಹೈಮವತಿಯೇ. ಲಲಿತಾ ಸಹಸ್ರನಾಮದ 53 ನೆಯ ನಾಮವೇ ಶಿವಾ. ಶಿವನ ಅರ್ಧಾಂಗಿ.ಶ್ರೀ ಭಾಸುರಾನಂದ ನಾಥರು ಈ ನಾಮಕ್ಕೆ ವಿಸ್ತ್ರುತವಾದ ವಿವರಣೆಯನ್ನು ನೀಡಿದ್ದಾರೆ. ಶಿವನು ಹೇಗೋ ದೇವಿಯೂ ಹಾಗೆ, ದೇವಿಯು ಹೇಗೋ ಶಿವನೂ ಹಾಗೆಯೇ. ಉಮಾ ಮತ್ತು ಶಂಕರರಲ್ಲಿ ಯಾವುದೇ ಭೇದವಿಲ್ಲಾ ಹಾಗಾಗಿ ದೇವಿಯು ಶಿವಾ ಎನ್ನುತ್ತದೆ ಲಿಂಗಪುರಾಣ. ಬೆಂಕಿಗೆ ಬಿಸಿಯು ಹೇಗೋ, ಸೂರ್ಯನಿಗೆ ಬೆಳಕು ಹೇಗೋ, ಚಂದ್ರನಿಗೆ ಬೆಳದಿಂಗಳು ಹೇಗೋ ಹಾಗೆಯೇ ಶಿವ ಮತ್ತು ಶಿವಾ ಎನ್ನುತ್ತದೆ ಆಗಮಗಳು. ಮಹಾನಿರ್ವಾಣ ತಂತ್ರವೂ ಸಹಾ ಶಿವ ಮತ್ತು ಶಿವಾ ಎರಡೂ ಒಂದೇ ಎನ್ನುತ್ತದೆ. 453 ನೇ ನಾಮ ತ್ರಿನಯನೀ, ಮೂರು ಕಣ್ಣುಗಳುಳ್ಳವಳು, ಬಲಗಣ್ಣು ಸೂರ್ಯ, ಎಡಗಡೆ ಚಂದ್ರ ಮೂರನೆಯಕಣ್ಣು ಅಗ್ನಿ ಅದು ಜ್ಞಾನ ಸ್ವರೂಪ. ಷಡಂಗ ನ್ಯಾಸದ ಮೂಲಕ ದೇವತೆಗಳನ್ನು ಆವಾಹನೆ ಮಾಡುವಾಗ ವೌಷಟ್ ಎನ್ನುವುದು ತ್ರಿನಯನಿ. ಇಡಾ ಪಿಂಗಳ ಮತ್ತು ಸುಷುಮ್ನಾ ನಾಡಿಗಳು ಸಹಾ ತ್ರಿನಯನಗಳೇ. ಚೈತನ್ಯ ಹೊರಹೊಮ್ಮುವುದೇ ಕಣ್ಣುಗಳಿಂದ. ನಯನಗಳು ಜ್ಞಾನ ಸ್ವರೂಪ, ಹಾಗಾಗಿ ನೇತ್ರದ ಮೂಲಕ ಗುರುವು ಶಿಷ್ಯನಿಗೆ ನೀಡುವ ದೀಕ್ಷೆ ಶ್ರೇಷ್ಟವಾದದ್ದು. ತ್ರಿನಯನಾಯೈ ನಮಃ ಎನ್ನುವ ಮಂತ್ರ ಜಪದಿಂದ ಜ್ಞಾನವು ವೃದ್ಧಿಯಾಗುತ್ತದ. 556 ನೇ ನಾಮ ಕಾತ್ಯಾಯನೀ, ಕತ ಎನ್ನುವ ಋಷಿಯ ಪುತ್ರಿ ಕಾತ್ಯಾಯನಿ. ಓಡ್ಯಾಣ ಪೀಠದ ದೇವತೆ ಕಾತ್ಯಾಯನಿ, ಯಾವ ಪ್ರಕಾಶವು ಅತ್ಯಂತ ಉತ್ತಮವೂ, ಶ್ರೇಷ್ಟವೂ ಆಗಿದೆಯೋ ಅದು ಕಾತ್ಯಾಯನಿ ಎನ್ನುತ್ತದೆ ವಾಮನ ಪುರಾಣ. ತಾಯಿಯು ನವದುರ್ಗೆಯರಲ್ಲಿ ಆರನೆಯ ದುರ್ಗೆ. ಕಾತ್ಯಾಯನಿ ವ್ರತವನ್ನು ಮಾಡಿದ್ದರಿಂದ ಗೋಪಿಕಾ ಸ್ತ್ರೀಯರು ಕೃಷ್ಣನನ್ನ್ನು ಗಂಡನನ್ನಾಗಿ ಪಡೆದರು ಎಂದು ಭಾಗವತ ಪುರಾಣ ಹೇಳುತ್ತದೆ. ಇದನ್ನು ಗೌರೀ ವ್ರತವೆಂತಲೂ ಕರೆಯುತ್ತಾರೆ. ಮಾರ್ಗಶೀರ್ಷಮಾಸದಲ್ಲಿ ಮಾಡಿದಲ್ಲಿ ಶೀಘ್ರವಾಗಿ ವಿವಾಹವಾಗುತ್ತದೆ ಎಂಬ ನಂಬಿಕೆ ಇದೆ. ದುರ್ಗಾ ಸಪ್ತಶತಿಯ ಪಾರಾಯಣವೂ ಸೇರಿದಂತೆ ದುರ್ಗಾ ಪೂಜೆಯ ವಿವರಗಳು ಕಾತ್ಯಾಯನೀ ತಂತ್ರದಲ್ಲಿ ಲಭ್ಯವಿದೆ. 276 ನೇ ನಾಮ ಭೈರವೀ, ಶಿವನ ಭೈರವರೂಪದ ಅರ್ಧಾಂಗಿ. ದಶಮಹಾವಿದ್ಯೆಯಲ್ಲಿ ಐದನೆಯ ವಿದ್ಯೆ ಭೈರವಿ. ಭರಣ, ರಮಣ, ವಮನ, ಈ ಮೂರು ಪದಗಳಿಂದ ಭೈರವೀ ಎನ್ನುವ ಹೆಸರು ಬಂದಿದೆ ಎನ್ನುತ್ತದೆ ಪರಶುರಾಮ ಕಲ್ಪ ಸೂತ್ರ. ಧೌಮ್ಯ ಎನ್ನುವ ಮುನಿ ಪಾಂಡವರ ಪುರೋಹಿತನಾಗಿದ್ದ ಎಂಬ ಪ್ರಸಂಗ ಮಹಾಭಾರತದಲ್ಲಿ ಬರುತ್ತ. ಭೈರವಿಯು 12 ವರ್ಷದ ಬಾಲಿಕೆಯ ರೂಪ ಎನ್ನುತ್ತಾರೆ ಈ ಧೌಮ್ಯ ಮುನಿಗಳು. ಧೌಮ್ಯ ಮುನಿಗಳ ಬಗ್ಗೆ ಶ್ರೀ ಭಾಸುರಾನಂದನಾಥರು ತಮ್ಮ ಲಲಿತಾ ಸಹಸ್ರನಾಮದ ಭಾಷ್ಯದಲ್ಲಿ ಉಲ್ಲೇಖಿಸಿದ್ದಾರೆ. ಸಾವಿತ್ರಿ, ಇದು 699 ನೆಯ ಸಾವಿತ್ರಿಯು ಸೂರ್ಯನಿಗೆ ಬೆಳಕನ್ನು ಕೊಡುವವಳು, ಬ್ರಹ್ಮಾಂಡವನ್ನು ಸೃಷ್ಟಿಸುವವಳು ಎನ್ನುತ್ತದೆ ಭಾರದ್ವಾಜ ಸ್ಮೃತಿ. ಸ ಎಂದರೆ ಪ್ರವಹಿಸುವುದು ಪ್ರವಹಿಸುವಿಕೆಯಿಂದ ತೇಜಸ್ಸು ಅಂದರೆ ಪ್ರಕಾಶ ಉದ್ಭವಿಸುತ್ತದೆ. ಹಾಗಾಗಿ ಅವಳು ಸಾವಿತ್ರಿ. ಉದಯ ಸೂರ್ಯಕಿರಣದ ಶಕ್ತಿ ಸಾವಿತ್ರಿ, ಸಾವಿತ್ರಿಯ ಸ್ಪರ್ಶದಿಂದ ಏಳುವವರ ವಾಕ್ಕಿನ ಮೂಲಕ ವ್ಯಕ್ತವಾಗುವವಳು ಗಾಯತ್ರಿ, ಈ ವಾಕ್ಕು ನಮ್ಮನ್ನು ಪ್ರವೇಶಿಸಿದ ನಂತರ ಉಂಟಾಗುವ ಸ್ಥಿತಿ ಸರಸ್ವತಿ ಇವಳು ವೇದಗಳ ಮಾತೆ. ನವ ಯೌವನಾ, ಆಗತಾನೇ ಯೌವನಕ್ಕೆ ಕಾಲಿಟ್ಟಿರುವ ಹೆಣ್ಣಿನ ರೂಪ ಅಥವಾ ಸದಾ ಯೌವನವತಿಯೇ ಆಗಿರುವ ತಾಯಿಯನ್ನ ಕಲ್ಪಿಸಿಕೊಳ್ಳಲಾಗಿದೆ. 430 ನೇ ನಾಮ ನಿತ್ಯಯೌವನಾ ಎನ್ನುವುದು ಸಹಾ ನವಯೌವನ ಎಂಬ ಅರ್ಥವನ್ನೇ ಕೊಡುತ್ತದೆ. ತಾಯಿಯು ಭೂತ, ವರ್ತಮಾನ ಮತ್ತು ಭವಿಷ್ಯತ್ ಕಾಲಗಳಲ್ಲೂ ಯೌವನೆಯಾಗಿಯೇ ಇದ್ದಾಳೆ. ಯೌವನ ಎನ್ನುವುದು ದೇಹಕ್ಕೆ ಮಾತ್ರ ಸಂಬಂಧಿಸದೆ, ಮನಸ್ಥಿತಿಗೂ ಸಂಬಂಧಿಸಿರುವುದರಿಂದ ಶ್ರೀ ವಿದ್ಯಾ ಉಪಾಸಕರು ತಮಗೂ ಉಪಾಸಿತ ದೇವತೆಗೂ ಅಬೇಧಭಾವವನ್ನು ಹೊಂದಿರುವುದರಿಂದ ಅವರೂ ಸಹಾ ನಿತ್ಯಯೌವನರೇ ಆಗಿರುತ್ತಾರೆ, ಆಗಿರಬೇಕು ಎನ್ನುವುದು ವಿದ್ವಾಂಸರ ಅಭಿಪ್ರಾಯ. 682 ನೇ ನಾಮ ಶುಭಕರೀ, ಶುಭವನ್ನ್ನು ಕೊಡುವವವಳು, ಅಷ್ಟೆ ಅಲ್ಲ ಶುಭಕಾರ್ಯಗಳನ್ನೇ ತನ್ನ ಭಕ್ತರಿಂದ ಮಾಡಿಸುವವಳು. ಸಾಮ್ರಾಜ್ಯ ಲಕ್ಷ್ಮೀ ಪ್ರದಾ. 582 ನೇ ನಾಮ ಮಹಾಸಾಮ್ರಾಜ್ಯ ಶಾಲಿನ್ಯೈ 692 ನೇ ನಾಮ ಸಾಮ್ರಾಜ್ಯದಾಯಿನ್ಯೈ ಈ ಎರಡೂ ನಾಮಗಳು ಸಾಮ್ರಾಜ್ಯ ಲಕ್ಷ್ಮೀ ಪ್ರದಾ ಎಂಬದನ್ನೂ ಹೇಳುತ್ತಿವೆ. ಮಹಾಸಾಮ್ರಾಜ್ಯ ಕ್ಕೆ ಒಡೆಯಳು ಎಂದು ಮೊದಲ ನಾಮ ಅದರೆ ಅದನ್ನು ನಮಗೆ ದಯಪಾಲಿಸುವಂತಹವಳು ಎನ್ನುತ್ತದೆ ಎರಡನೇ ನಾಮ. ಯಾವುದು ಮಹಾ ಸಾಮ್ರಾಜ್ಯ? ಬ್ರಹ್ಮಾಂಡಕ್ಕೆ ಒಡತಿ ಅವಳು ಬ್ರಹ್ಮಾಂಡವೇ ಅವಳ ಸಾಮ್ರಾಜ್ಯ. ಅದನ್ನು ನಮಗೆ ಕೊಟ್ಟಿದ್ದಾಳೆ ಪಿಂಡಾಂಡದ ಮೂಲಕ.ಅದರ ರಾಜ್ಯಭಾರವನ್ನು ನಿಭಾಯಿಸುವ ಅರ್ಹತೆ ಯನ್ನು ಅಂದರೆ ಪಿಂಡಾಂಡವೂ ಬ್ರಹ್ಮಾಂಡವೂ ಒಂದೇ ಎಂಬ ಅರಿವು, ಪ್ರಜ್ಞೆ, ಜ್ಞಾನವನ್ನು ಅವಳು ಕೊಡಬೇಕಷ್ಟೇ. ಅದೇ ಜೀವನ್ಮುಕ್ತಿ ಅದೇ ಅವಳು ನಮಗೆ ದಯಪಾಲಿಸುವ ಮಹಾ ಸಾಮ್ರಾಜ್ಯ.
ಚಿದ್ರೂಪಿ, ಈ ನಾಮಕ್ಕೆ ವಿವರಣೆಯನ್ನು ಪದಪುಃಜಗಳಿಂದ ಕೊಡಲು ಸಾಧ್ಯವಿಲ್ಲಾ ಎನ್ನುವುದು ನನ್ನ ಅನಿಸಿಕೆ, 4 ನೆಯ ನಾಮ ಚಿದಗ್ನಿ ಕುಂಡ ಸಂಭೂತಾ, 362 ಚಿತ್ಯೈ 364 ಚಿದೇಕರ ಸ್ವರೂಪಿಣಿ, 416 ಚಿಚ್ಚಕ್ತ್ಯೈ 728 ನೆಯ ಚಿತ್ಕಲಾ, ಈ ಎಲ್ಲ ನಾಮಗಳನ್ನು ಅರ್ಥ ಮಾಡಿಕೊಂಡರೆ ಚಿದ್ರೂಪಿ ಎನ್ನುವುದು ಸ್ವಲ್ಪವಾದರೂ ಆಗಬಹುದು. ತಾಯಿಯ ಈ ರೂಪವನ್ನು ಅನುಭವದಿಂದಲೇ ತಿಳಿದುಕೊಳ್ಳಬೇಕಷ್ಟೆ. ಚಿತ್ ರೂಪಿ, ಚಿದೄಪಿ. ಭಾಷ್ಯಬರೆದ ಶ್ರೀ ಭಾಸುರಾನಂದನಾಥರು, ಚಿತ್ ಅಂದರೆ ಶುದ್ದ್ಧ ಬ್ರಹ್ಮ ಎಂದಿದ್ದಾರೆ. ಅದನ್ನು ಯಜ್ಞಕುಂಡ ಎಂದಿದ್ದಾರೆ. ಪ್ರಜ್ಞೆ ಎಂಬುದನ್ನು ಯಜ್ಞಕುಂಡದ ಅಗ್ನಿ ಎಂದಿದ್ದಾರೆ. ಅಯಮಾತ್ಮಾ ಬ್ರಹ್ಮ, ಅದು ತುರೀಯ ಸ್ಥಿತಿ. ಆ ಸ್ಥಿತಿಯೇ ಆ ತಾಯಿ ಚಿದ್ರೂಪಿ, ಪಿಂಡಾಂಡದಿಂದ ಬ್ರಹ್ಮಾಂಡದ ವರೆಗೆ ಚೈತನ್ಯವನ್ನು ನೀಡುವ ಶಕ್ತಿಯ ರೂಪವೇ ಚಿದ್ರೂಪ. ಇಚ್ಚಾ, ಕ್ರಿಯಾ ಜ್ಞಾನಶಕ್ತಿಗಳ ರೂಪವೇ ಚಿದ್ರೂಪ, ಸೃಷ್ಟಿಯ ಆರಂಬಕ್ಕೆ ಮೊದಲೇ ಇದ್ದ ಬ್ರಹ್ಮತೇಜಸ್ಸು ಚಿದ್ರೂಪ, ನನ್ನಲ್ಲಿ ’ ನಾನು” ಇರುವುದೇ ಚಿದ್ರೂಪ, ಭಂಡಾಸುರನೆಂಬ ಅಜ್ಞಾನವನ್ನು ನಾಶಮಾಡಲು ಅವತರಿಸಿದ್ದು ಚಿದ್ರೂಪ, ಉಪನಿಷತ್ತುಗಳು ದುರ್ಗಾದೇವಿ ಎಂದು ಹೇಳಿರುವ ಚಿದ್ರೂಪ, ಅವಿದ್ಯೆಗೆ ವಿರುದ್ಧವಾದ ಶ್ರೀವಿದ್ಯೆ ಚಿದ್ರೂಪ,

369 ನೆಯ ನಾಮ ಪರದೇವತಾ, ಅತ್ಯಂತ ಉನ್ನತವಾದ ದೇವತೆ. ಪಶ್ಯಂತೀ ವಾಕ್ಕಿನ ಸೂಕ್ಷ್ಮ ರೂಪವೇ ಪರದೇವತಾ. ಈ ಪಶ್ಯಂತಿ ರೂಪದ ವಾಕ್ಕುಗಳೇ ಶ್ರುತಿ ಸ್ಮೃತಿ ಗಳಾಗುವುದು, ಆಗಿರುವುದು. 684 ನೆಯ ನಾಮ ರಾಜರಾಜೇಶ್ವರೀ, ಈ ಅಷ್ಟಕದಹೆಸರೇ ರಾಜರಾಜೇಶ್ವರೀ ಅಷ್ಟಕ, ರಾಜರು, ಅವರಿಗೆ ರಾಜರು ಅವರನ್ನು ಈಶ್ವರೀ ಪರಿಪಾಲಿಸುವವಳು. ರಾಜ ಎಂದರೆ ಚಂದ್ರ ಎನ್ನುವ ಅರ್ಥವೂ ಇದ್ದು ಚಂದ್ರನಿಗೆ ರಾಜ ಶಿವ ಆ ಶಿವನಿಗೆ ಪ್ರಾಣೇಶ್ವರಿ ಎಂದು ಅರ್ಥೈಸ ಬಹುದು. ಪ್ರಜೆಗಳನ್ನು ಪರಿಪಾಲಿಸುವವರು ರಾಜರಾದರೆ ಆ ರಾಜರನ್ನು ಪರಿಪಾಲಿಸುವವರು ಅಷ್ಟದಿಕ್ಪಾಲಕರು, ತ್ರಿಮೂರ್ತಿಗಳು ಎಂದಾದರೆ, ತಾಯಿಯು ಈ ರಾಜರಾಜರನ್ನು ಪರಿಪಾಲಿಸುವವಳು ಹಾಗಾಗಿ ಇವಳು ರಾಜರಾಜೇಶ್ವರಿ, ಎಲ್ಲಕ್ಕಿಂತ ಪ್ರಮುಖವಾಗಿ ಶ್ರೀವಿದ್ಯಾ ಮಹಾಷೋಡಶೀ ಮಂತ್ರದ ವಿದ್ಯಾಧಿದೇವತೆ ಶ್ರೀ ರಾಜರಾಜೇಶ್ವರೀ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: