ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ
ಶಾಂತಾ ವಿಮಲಾ ಪ್ರಕಾಶಾ ಆತ್ಮಾ ಗುಹಾ ಚಿದ್ಯೋಗಾಸ್ಯ ಶ್ರೀ ಪರಾನಂದಾದಿ ಸದ್ಗುರೂನ್ ನಮಾಮ್ಯಹಂ ಪುನಃ ಪುನಃ
ದೇವೀ ಕವಚವು ದೇವಿಯ 11 ರೂಪಗಳನ್ನು ಹೇಳಿರುವುದು ಈ ಕವಚದ ವೈಶಿಷ್ಟ್ಯ ಎಂದರೆ ತಪ್ಪಲ್ಲಾ-
ಚಾಮುಂಡಾ, ವಾರಾಹೀ, ಐಂದ್ರೀ, ವೈಷ್ಣವೀ, ನಾರಸಿಂಹೀ, ಶಿವದೂತೀ, ಮಾಹೇಶ್ವರೀ,ಕೌಮಾರೀ,ಲಕ್ಷ್ಮೀ, ಈಶ್ವರೀ, ಬ್ರಾಹ್ಮೀ
ಪ್ರಾಚ್ಯಾಂ ರಕ್ಷತು ಮಾಮೈಂದ್ರೀ ಆಗ್ನೇಯ್ಯಾಮಗ್ನಿದೇವತಾ ‖
ದಕ್ಷಿಣೇಽವತು ವಾರಾಹೀ ನೈರೃತ್ಯಾಂ ಖಡ್ಗಧಾರಿಣೀ |18
ಐಂದ್ರೀ ದೇವತೆಯು ಪೂರ್ವದಿಕ್ಕಿನಲ್ಲೂ, ಅಗ್ನಿ ದೇವತೆಯು ಆಗ್ನೇಯ ದಿಕ್ಕಿನಲ್ಲೂ , ವಾರಾಹೀ ದೇವತೆಯು ದಕ್ಷಿಣದಲ್ಲೂ, ನೈಋತ್ಯ ದಿಕ್ಕಿನಲ್ಲಿ ಖಡ್ಗಧಾರಿಣಿಯಾದ ದೇವತೆಯೂ ನನ್ನನ್ನು ರಕ್ಷಿಸಲಿ.
ಇಂದ್ರನ ಶಕ್ತಿ ಐಂದ್ರೀ, ವಿಷ್ಣುವಿನ ವರಾಹ ರೂಪದ ಶಕ್ತಿ ವಾರಾಹೀ,
ಪ್ರತೀಚ್ಯಾಂ ವಾರುಣೀ ರಕ್ಷೇದ್ವಾಯವ್ಯಾಂ ಮೃಗವಾಹಿನೀ ‖
ಉದೀಚ್ಯಾಂ ಪಾತು ಕೌಮಾರೀ ಐಶಾನ್ಯಾಂ ಶೂಲಧಾರಿಣೀ 19
ಪಶ್ಚಿಮದಲ್ಲಿ ವಾರುಣೀ ದೇವತೆಯೂ, ಮೃಗವಾಹಿನಿಯೂ ವಾಯುವ್ಯದಲ್ಲೂ, ಉತ್ತರದಲ್ಲಿ ಕೌಬೇರಿಯೂ, ಈಶಾನ್ಯದಲ್ಲಿ ಶೂಲಧಾರಿಣಿಯೂ ನನ್ನನ್ನು ರಕ್ಷಿಸಲಿ.
ವರುಣನ ಶಕ್ತಿ ವಾರುಣೀ, ಮೃಗವಾಹಿನಿಯು, ಜಿಂಕೆಯನ್ನು ವಾಹನವಾಗಿ ಉಳ್ಳವಳು. ಕೌಮಾರಿಯು, ಕುಮಾರ ಅಂದರೆ ಸುಬ್ರಹ್ಮಣ್ಯನ ಶಕ್ತಿ
ಊರ್ಧ್ವಂ ಬ್ರಹ್ಮಾಣೀ ಮೇ ರಕ್ಷೇದಧಸ್ತಾದ್ವೈಷ್ಣವೀ ತಥಾ ‖ಏವಂ ದಶ ದಿಶೋ ರಕ್ಷೇಚ್ಚಾಮುಂಡಾ ಶವವಾಹನಾ
ಊರ್ಧ್ವ ಎಂದರೆ ಭೂಮಿಯ ಮೇಲಿನ ಲೋಕಗಳಿಂದ ಬ್ರಾಹ್ಮಿಯೂ, ಪಾತಾಳ ಲೋಕಗಳಿಂದ ವೈಷ್ಣವಿಯೂ ಕಾಪಾಡಲಿ. ಹೀಗೆ ಶವವಾಹಿನಿಯಾದ ಚಾಮುಂಡೀ ದೇವಿಯು ಹತ್ತು ದಿಕ್ಕುಗಳನ್ನೂ ರಕ್ಷಿಸಲಿ.
ಬ್ರಹ್ಮಾಣಿಯು ಬ್ರಹ್ಮನ ಸೃಷ್ಟಿ ಯ ಶಕ್ತಿ, ವೈಷ್ಣವಿಯು ವಿಷ್ಣು ವಿನ ಶಕ್ತಿ
ಜಯಾ ಮೇ ಚಾಗ್ರತಃ ಪಾತು ವಿಜಯಾ ಪಾತು ಪೃಷ್ಠತಃ ‖
ಅಜಿತಾ ವಾಮಪಾರ್ಶ್ವೇ ತು ದಕ್ಷಿಣೇ ಚಾಪರಾಜಿತಾ |21
ಜಯಾ ದೇವಿಯು ನನ್ನ ಮುಂಭಾಗದಿಂದಲೂ ವಿಜಯಾ ದೇವಿಯು ನನ್ನ ಹಿಂಬದಿಯಿಂದಲೂ, ಅಜಿತಾ ದೇವಿಯು ಎಡ ಭಾಗದಲ್ಲೂ, ಅಪರಾಜಿತಾ ದೇವಿಯು ನನ್ನ ಬಲಭಾಗವನ್ನು ರಕ್ಷಿಸಲಿ.
ಜಯಾ ಎನ್ನುವ ದೇವತೆ ಗೆಲುವನ್ನು ತಂದು ಕೊಡುವ ದೇವತೆಯಾದರೆ, ವಿಜಯಾ ದೇವತೆ ಆ ಗೆಲುವನ್ನು ಸಂಭ್ರಮಿಸುವ ವಿಜಯೋತ್ಸವವನ್ನು ಆಚರಿಸುವ ದೇವತೆ. ಯಾರಿಂದಲೂ ವಶಪಡಿಸಿಕೊಳ್ಲಲು ಅಸಾಧ್ಯಳಾದವಳು ಅಜಿತಾ ದೇವಿಯಾದರೆ, ಅಪಜಯವನ್ನೇ ಕಾಣದವಳು, ಯಾರಿಂದಲೂ ಪರಾಜಿತಳಾಗದ ದೇವತೆ ಅಪರಾಜಿತಾ.
ಶಿಖಾಮುದ್ಯೋತಿನೀ ರಕ್ಷೇದುಮಾ ಮೂರ್ಧ್ನಿ ವ್ಯವಸ್ಥಿತಾ ‖ ಮಾಲಾಧರೀ ಲಲಾಟೇ ಚ ಭ್ರುವೌ ರಕ್ಷೇದ್ಯಶಸ್ವಿನೀ |22
ಉದ್ಯೋತಿನಿ ದೇವಿಯು ನನ್ನ ಶಿಖೆಯನ್ನು ರಕ್ಷಿಸಲಿ, ಉಮೆಯು ನನ್ನ ಶಿರದಲ್ಲಿ ನೆಲೆಸಿ ಶಿರವನ್ನು ರಕ್ಷಿಸಲಿ. ಮಾಲಾಧರಿಯು ಹಣೆಯನ್ನೂ ಯಶಸ್ವಿನೀ ದೇವಿಯು ಹುಬ್ಬುಗಳನ್ನೂ ರಕ್ಷಿಸಲಿ.
ಉದ್ಯೋತಿನೀ ದೇವಿಯ ವಿವರಣೆ ನಾನು ನೋಡಿರುವ ಭಾಷ್ಯಗಳಲ್ಲಿ ಕಂಡಿಲ್ಲಾ. ಆದರೆ ಉದ್ಯೌತಿ ಅಥ್ವಾ ಉದ್ಯುತಿ ಎಂದರೆ ಊರ್ಧ್ವ ಭಾಗವನ್ನು ಸೂಚಿಸುವ ಪದವಾಗಿದ್ದ್ದು ಶಿಖೆಯನ್ನು ಈ ಬಾಗದಲ್ಲಿ ಉದ್ಯೋತಿನಿ ದೇವತೆಯು ರಕ್ಷಿಸಲಿ ಎನ್ನುವ ಅರ್ಥ ಸಮಂಜಸ ವಾಗಬಹುದು. ಹಾಗೆಯೇ ಶಿಖೆ ಮತ್ತು ಹ್ರೀಂ ಕಾರ ಬೀಜಾಕ್ಷರಕ್ಕೆ ತಂತ್ರ ಶಾಸ್ತ್ರಗಳು ಸಂಬಂಧ ಕಲ್ಪಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ..ದೇವಿಯ ಉಮಾ ಎಂಬ ಶಕ್ತಿ ಸೌಂದರ್ಯ, ಪ್ರೀತಿ, ಫಲವತ್ತತೆ, ಸಂತಾನ, ವಿವಾಹ, ಭಕ್ತಿ ದೈವಿಕ ಶಕ್ತಿ ಯ ಪ್ರತೀಕವಾಗಿದ್ದು ಅದಕ್ಕಾಗಿಯೇ ಪ್ರಮುಖವಾದ ಅಂಗವಾದ ಶಿರವನ್ನು ಉಮಾ ದೇವಿಯು ರಕ್ಷಿಸಲಿ ಎಂದು ಪ್ರಾರ್ಥನೆ ಮಾಡಲಾಗಿದೆ.
https://atmanandanatha.com/voluntary-contribution/