ಶ್ರೀ ದುರ್ಗಾ ಸಪ್ತಶತೀ ಪಾರಾಯಣದ ಅಂಗ- ದೇವೀ ಕವಚ ವಿವರಣೆ- ಭಾಗ 1


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ

ಶಾಂತಾ ವಿಮಲಾ ಪ್ರಕಾಶಾ ಆತ್ಮಾ ಗುಹಾ ಚಿದ್ಯೋಗಾಸ್ಯ ಶ್ರೀ ಪರಾನಂದಾದಿ ಸದ್ಗುರೂನ್ ನಮಾಮ್ಯಹಂ ಪುನಃ ಪುನಃ

ಓಂ ನಮಃಶ್ಚಂಡಿಕಾಯೈ

ನ್ಯಾಸಃ
ಅಸ್ಯ ಶ್ರೀ ಚಂಡೀ ಕವಚಸ್ಯ | ಬ್ರಹ್ಮಾ ಋಷಿಃ | ಅನುಷ್ಟುಪ್ ಛಂದಃ | ಚಾಮುಂಡಾ ದೇವತಾ | ಅಂಗನ್ಯಾಸೋಕ್ತ ಮಾತರೋ ಬೀಜಮ್ | ನವಾವರಣೋ ಮಂತ್ರಶಕ್ತಿಃ | ದಿಗ್ಬಂಧ ದೇವತಾಃ ತತ್ವಂ | ಶ್ರೀ ಜಗದಂಬಾ ಪ್ರೀತ್ಯರ್ಥೇ ಸಪ್ತಶತೀ ಪಾಠಾಂಗತ್ವೇನ ಜಪೇ ವಿನಿಯೋಗಃ ‖

ಓಂ ನಮಃಶ್ಚಂಡಿಕಾಯೈ


ದೇವೀ ಕವಚ ಅಥವಾ ಚಂಡೀ ಕವಚಕ್ಕೆ ಋಷಿ ಬ್ರಹ್ಮಾ, ಛಂದಸ್ಸು ಅನುಷ್ಟಪ್, ದೇವತೆ ಚಾಮುಂಡಾ. ( ನವಾರ್ಣ ಮಂತ್ರದ ) ಅಂಗನ್ಯಾಸದಲ್ಲಿ ಹೇಳಿರುವ ಅಕ್ಷರಗಳು ಬೀಜ, ನವಾರ್ಣ ಮಂತ್ರವು ಶಕ್ತಿ ,ದಿಗ್ಭಂಧ ದೇವತೆಯು ತತ್ವ. ಸಪ್ತಶತೀ ಪಾರಾಯಣದ ಅಂಗವಾಗಿ ಈ ಜಪವನ್ನು ವಿನಿಯೋಗಿಸುತ್ತಿದ್ದೇನೆ.

ಓಂ ನಮಃಶ್ಚಂಡಿಕಾಯೈ ಎಂಬ ನಾಮಕ್ಕೆ ಈಗಾಗಲೇ ವಿವರಣೆ ನೀಡಲಾಗಿದೆ.

ಮಾರ್ಕಂಡೇಯ ಉವಾಚ |


ಓಂ ಯದ್ಗುಹ್ಯಂ ಪರಮಂ ಲೋಕೇ ಸರ್ವರಕ್ಷಾಕರಂ ನೃಣಾಮ್ |ಯನ್ನ ಕಸ್ಯಚಿದಾಖ್ಯಾತಂ ತನ್ಮೇ ಬ್ರೂಹಿ ಪಿತಾಮಹ ‖ 1 ‖

ಮಾರ್ಕಂಡೇಯರು ಶಿಷ್ಯ ಸ್ಥಾನದಲ್ಲಿ ನಿಂತು ಬ್ರಹ್ಮ ನನ್ನು ಕುರಿತು. ಹೇ ಪಿತಾಮಹ, ಈ ಲೋಕದಲ್ಲಿ ಯಾವುದು ರಹಸ್ಯವಾದುದೋ ಯಾವುದು ಮಾನವರನ್ನು ಎಲ್ಲದರಿಂದಲೂ ರಕ್ಷಿಸುವುದೋ ಯಾವದನ್ನು ಇದುವೆರೆಗೂ ಯಾರಿಗೂ ಹೇಳಿಲ್ಲವೋ ಅದನ್ನು ನನಗೆ ಉಪದೇಶಿಸು ಎಂದು ಪ್ರಾರ್ಥಿಸುತ್ತಾರೆ.

ಬ್ರಹ್ಮೋವಾಚ |

ಅಸ್ತಿ ಗುಹ್ಯತಮಂ ವಿಪ್ರ ಸರ್ವಭೂತೋಪಕಾರಕಮ್ |

ದೇವ್ಯಾಸ್ತು ಕವಚಂ ಪುಣ್ಯಂ ತಚ್ಛೃಣುಷ್ವ ಮಹಾಮುನೇ ‖ 2 ‖

ಬ್ರಹ್ಮ ಹೇಳತ್ತಾರೆ, ಎಲೈ ಮಹಾಮುನಿಯೇ, ವಿಪ್ರಶ್ರೇಷ್ಠನೇ ಸರ್ವಜೀವಿಗಳಗೂ

ಉಪಕಾರವನ್ನುಂಟು ಮಾಡುವ ಅತ್ಯಂತ ರಹಸ್ಯವಾದ ಪುಣ್ಯಕರವಾದ ದೇವೀ ಕವಚವನ್ನು ಆಲಿಸು.

ಪ್ರಥಮಂ ಶೈಲಪುತ್ರೀ ಚ ದ್ವಿತೀಯಂ ಬ್ರಹ್ಮಚಾರಿಣೀ |

ತೃತೀಯಂ ಚಂದ್ರಘಂಟೇತಿ ಕೂಷ್ಮಾಂಡೇತಿ ಚತುರ್ಥಕಮ್ ‖ 3 ‖

ಪಂಚಮಂ ಸ್ಕಂದಮಾತೇತಿ ಷಷ್ಠಂ ಕಾತ್ಯಾಯನೀತಿ ಚ |

ಸಪ್ತಮಂ ಕಾಲರಾತ್ರೀತಿ ಮಹಾಗೌರೀತಿ ಚಾಷ್ಟಮಮ್ ‖ 4 ‖


ನವಮಂ ಸಿದ್ಧಿದಾತ್ರೀ ಚ ನವದುರ್ಗಾಃ ಪ್ರಕೀರ್ತಿತಾಃ |

ಉಕ್ತಾನ್ಯೇತಾನಿ ನಾಮಾನಿ ಬ್ರಹ್ಮಣೈವ ಮಹಾತ್ಮನಾ ‖ 5 ‖


ಮೊಟ್ಟಮೊದಲಾಗಿ ಬ್ರಹ್ಮನು ದುರ್ಗೆಯ ಒಂಬತ್ತು ರೂಪಗಳನ್ನು ತಿಳಿಸುತ್ತಾರೆ. ಶೈಲಪುತ್ರೀ , ಹಿಮವಂತನ, ಹಿಮಗಿರಿಯ ಪುತ್ರಿ.  ಈ ರೂಪವು ದುರ್ಗೆಯ ಶುದ್ಧ ಸತ್ವ ರೂಪ.

ಬ್ರಹ್ಮಚಾರಿಣೀ, ಬ್ರಹ್ಮನಲ್ಲಿ ಸಂಚರಿಸುವವಳು. ಇದು ದುರ್ಗೆಯ ಕ್ರಿಯಾಶೀಲ ಶಕ್ತಿಯ ರೂಪ.

ಚಂದ್ರಘಂಟಾ- ಚಂದ್ರನಂತೆ ಘಂಟೆ ಉಳ್ಳವಳು ಎಂಬ ಅರ್ಥ ಬರುವುದಾದರೂ, ಇದು ದುರ್ಗೆಯ ಸೌಮ್ಯ ಮತ್ತು ಸೃಜನಶೀಲತೆಯ ರೂಪ.  ಹಾಗೆಯೇ ಇದು ದೇವಿಯ 16 ಚಂದ್ರ ಕಲೆಗಳನ್ನು ಸೂಕ್ಷ್ಮವಾಗಿ ಬಿಂಬಿಸುತ್ತದೆ.

ಕೂಷ್ಮಾಂಡಾ, ಈ ರೂಪವು ಫಲವತ್ತತೆ ಯನ್ನು ಸೂಚಿಸುತ್ತದೆ.

.ಸ್ಕಂದಮಾತಾ- ಸ್ಕಂದ, ಸುಬ್ರಹ್ಮಣ್ಯನ ಮಾತೆ. ಈ ರೂಪವು ಶೌರ್ಯವನ್ನು ಸೂಚಿಸುತ್ತದೆ

ಕಾತ್ಯಾಯನಿ ದೇವಿಯ ತ್ರಿಗುಣಾತ್ಮಕವಾದ ಪರಮೋಚ್ಛ ರೂಪವನ್ನು ಸೂಚಿಸುತ್ತದೆ. ತೈತ್ತಿರೀಯ ಅರಣ್ಯಕದಲ್ಲಿ ಕಾತ್ಯಾಯನಿಯ ಹೆಸರು ಉಲ್ಲೇಖವಾಗಿರುವುದನ್ನು ಕಾಣಬಹುದು.

ಸ್ಕಂದ ಪುರಾಣದಲ್ಲಿ ಕಾತ್ಯಾಯಿನೀ ದೇವಿಯು ಮಹಿಷಾಸುರನನ್ನು ವಧಿಸಿರುವ ಉಲ್ಲೇಖವಿದೆ.

ಯೋಗ ಶಾಸ್ತ್ರ ಮತ್ತು ತಂತ್ರಶಾಸ್ತ್ರಗಳು ಆಜ್ಞಾಚಕ್ರದಲ್ಲಿ ಕಾತ್ಯಾಯನಿ ದೇವಿಯನ್ನು ಗುರುತಿಸಿವೆ.

ಕಾಳರಾತ್ರೀ, ಕಪ್ಪು ರಾತ್ರೀ ಈ ರೂಪವು ದೇವಿಯ ಬ್ರಹ್ಮಾಂಡದ ಪ್ರಳಯ ಶಕ್ತಿಯನ್ನು ಸೂಚಿಸುತ್ತದೆ.

ಮಹಾಗೌರೀ – ಅತ್ಯಂತ ಶ್ರೇಷ್ಠವಾಗಿ ಹೊಳೆಯುವ ದೇವಿಯ ರೂಪ. ಈ ರೂಪವು ಜ್ಞಾನದ ವಿಸ್ಮಯಕಾರೀ ಬೆಳಕನ್ನು ಸೂಚಿಸುತ್ತದೆ.

ಸಿದ್ಧಿದಾತ್ರೀ ಈ ರೂಪವು ಸಾಧಕನಿಗೆ ಸಿದ್ಧಿಯನ್ನು ದೊರಕಿಸಿಕೊಡುವ ದೇವಿಯ ರೂಪ.

ಹೆಚ್ಚಿನ ವಿವರಣೆಗೆ ಯೂಟ್ಯೂಬ್ ವಿಡಿಯೋ ಆಲಿಸಿರಿ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: