ಶ್ರೀ ದುರ್ಗಾಸಪ್ತಶತೀ ಪಾರಾಯಣದ ಭಾಗವಾಗಿ ದೇವೀ ಕವಚ ವಿವರಣೆ ಭಾಗ – Devi kavacha explanation part 2


SRI GURUBHYO NAMAH SRI PARAMAGURUBHYO NAMAH SRI PARAMESHTHI GURUBHYO NAMAH

SHAANTAA VIMALAA PRAKAASHAA ATMAA GUHAA CHIDYOGAASAYA SRI PARAANANDAADI SADGUROON NAMAAMYAHAM PUNAH PUNAH

ಅಗ್ನಿನಾ ದಹ್ಯಮಾನಸ್ತು ಶತ್ರುಮಧ್ಯೇ ಗತೋ ರಣೇ |
ವಿಷಮೇ ದುರ್ಗಮೇ ಚೈವ ಭಯಾರ್ತಾಃ ಶರಣಂ ಗತಾಃ ‖ 6

ನ ತೇಷಾಂ ಜಾಯತೇ ಕಿಂಚಿದಶುಭಂ ರಣಸಂಕಟೇ |
ನಾಪದಂ ತಸ್ಯ ಪಶ್ಯಾಮಿ ಶೋಕದುಃಖಭಯಂ ನ ಹಿ ‖ 7 ‖
ಅಗ್ನಿಯಿಂದ ಅಪಘಾತವಾದಾಗ, ರಣರಂಗದಲ್ಲಿ ಶತೃಗಳು ಸುತ್ತುವರಿದಾಗ, ಭಯ ಆತಂಕಗಳು ಕಾಡಿದಾಗ, ಆ ತಾಯಿಯಲ್ಲಿ ಶರಣಾಗತಿ ಕೋರಿದರೆ, ಯಾವುದೇ ಸಂಕಷ್ಟಗಳು ಸಹಾ ದೂರವಾಗುತ್ತವೆ ಯಲ್ಲದೆ, ರಣರಂಗದಲ್ಲೂ ಯಾವುದೇ ಭಯವಿರುವುದಿಲ್ಲ್ಲಾ. ಯಾವುದೇ ಶೋಕ ದುಃಖಗಳು ಸಂಭವಿಸುವುದಿಲ್ಲಾ 


ಯೈಸ್ತು ಭಕ್ತ್ಯಾ ಸ್ಮೃತಾ ನೂನಂ ತೇಷಾಂ ವೃದ್ಧಿಃ ಪ್ರಜಾಯತೇ
ಯೇ ತ್ವಾಂ ಸ್ಮರಂತಿ ದೇವೇಶಿ ರಕ್ಷಸೇ ತಾನ್ನಸಂಶಯಃ ‖ 8 ‖
ಯಾರು ದೇವಿಯನ್ನು ಸದಾ ಭಕ್ತಿಯಿಂದ ಸ್ಮರಿಸುತ್ತಾರೋ ಅಂತಹವರು ಎಲ್ಲರೀತಿಯಲ್ಲೂ ಅಭಿವೃದ್ಧಿಯನ್ನು ಹೊಂದುತ್ತಾರೆ. ಓ ದೇವೀ ಈ ವಿಷಯದಲ್ಲಿ ಯಾವುದೇ ಸಂಶಯವಿಲ್ಲಾ

ಶ್ಲೋಕ 6 ರಿಂದ 8 ರ ವರೆಗಿನ ಶ್ಲೋಕಗಳು ಒಂದು ರೀತಿಯಲ್ಲಿ ದುರ್ಗಾ ಸಪ್ತಶತಿಯ ಪಾರಾಯಣದಿಂದ ಒದಗುವ ಫಲಶೃತಿಯಂತೆ ತೋರುತ್ತದೆ.

ಪ್ರೇತಸಂಸ್ಥಾ ತು ಚಾಮುಂಡಾ ವಾರಾಹೀ ಮಹಿಷಾಸನಾ |
ಐಂದ್ರೀ ಗಜಸಮಾರೂಢಾ ವೈಷ್ಣವೀ ಗರುಡಾಸನಾ ‖ 9 ‖
ಪ್ರೇತ ಎಂದರೆ ಶವದ ಮೇಲೆ ನಿಂತಿರುವವಳು ಚಾಮುಂಡೀ, ಮಹಿಷ ಅಂದರೆ ಎಮ್ಮೆ ಕೋಣದಮೇಲೆ ಕುಳಿತಿರುವವಳು ವಾರಾಹೀ, ಆನೆಯ ಮೇಲೆ ಆಸೀನಳಾಗಿರುವವಳು ಐಂದ್ರೀ ಆದರೆ ವೈಷ್ಣವಿಯ ಆಸನ ಗರುಡ


naarasimhee mahaveerya shivadooti mahabala

ಮಾಹೇಶ್ವರೀ ವೃಷಾರೂಢಾ ಕೌಮಾರೀ ಶಿಖಿವಾಹನಾ |10

ಶೌರ್ಯವೇ ನಾರಸಿಂಹೀ, ಅತ್ಯದಿಕ ಬಲಶಾಲಿ ಶಿವದೂತೀ, ವೃಷಭ ಎಂದರೆ ಗೂಳಿಯ ಮೇಲೆ ಕುಳಿತಿರುವವಳು ಮಾಹೇಶ್ವರೀ, ನವಿಲನ್ನು ವಾಹನವಾಗುಳ್ಳವಳು ಸುಬ್ರಹ್ಮಣ್ಯನ ಶಕ್ತಿಯಾದ ಕೌಮಾರೀ

ಲಕ್ಷ್ಮೀಃ ಪದ್ಮಾಸನಾ ದೇವೀ ಪದ್ಮಹಸ್ತಾ ಹರಿಪ್ರಿಯಾ ‖  ‖
ಶ್ವೇತರೂಪಧರಾ ದೇವೀ ಈಶ್ವರೀ ವೃಷವಾಹನಾ | 11
ಕರದಲ್ಲಿ ಕಮಲವನ್ನು ಹಿಡಿದು ಕಮಲದ ಮೇಲೆ ಆಸೀನಳಾಗಿದ್ದಾಳೆ ಹರಿಪ್ರಿಯಳಾದ ಶ್ರೀ ಲಕ್ಷ್ಮೀ. ಸಾರ್ವಭೌಮಿಣಿಯಾದ ಈಶ್ವರೀ ಪರಿಶುದ್ಧ ಬಿಳಿ ಬಣ್ಣ ದಿಂದ ಕಂಗೊಳಿಸುತ್ತಿದ್ದಾಳೆ.

ಬ್ರಾಹ್ಮೀ ಹಂಸಸಮಾರೂಢಾ ಸರ್ವಾಭರಣಭೂಷಿತಾ ‖  ‖
ಇತ್ಯೇತಾ ಮಾತರಃ ಸರ್ವಾಃ ಸರ್ವಯೋಗಸಮನ್ವಿತಾಃ  12

ನಾನಾಭರಣಾಶೋಭಾಢ್ಯಾ ನಾನಾರತ್ನೋಪಶೋಭಿತಾಃ ‖
ದೃಶ್ಯಂತೇ ರಥಮಾರೂಢಾ ದೇವ್ಯಃ ಕ್ರೋಧಸಮಾಕುಲಾಃ13

ಬ್ರಾಹ್ಮೀ ದೇವತೆಯು ಹಂಸದ ಮೇಲೆ ಸಂಚರಿಸುತ್ತಾ ಸರ್ವಾಭರಣ ಭೂಷಿತೆಯಾಗಿದ್ದಾಳೆ. ಹೀಗೆ ಸಕಲ ಯೋಗಗಳಿಂದ ಕೂಡಿರುವ ನಾನಾ ಆಭರಣ ಮತ್ತು ರತ್ನಗಳಿಂದ ಶೋಭಿಸುತ್ತಿರುವ ಈ ಎಲ್ಲಾ ಮಾತೆಯರೂ ತಮ್ಮ ತಮ್ಮ ರಥಗಳನ್ನು ಏರಿ ಕ್ರೋಧಪೂರಿತರಾಗಿ ಕಂಗೊಳಿಸುತ್ತಿದ್ದಾರೆ.

ಶಂಖಂ ಚಕ್ರಂ ಗದಾಂ ಶಕ್ತಿಂ ಹಲಂ ಚ ಮುಸಲಾಯುಧಮ್ ‖
ಖೇಟಕಂ ತೋಮರಂ ಚೈವ ಪರಶುಂ ಪಾಶಮೇವ ಚ 14
ಕುಂತಾಯುಧಂ ತ್ರಿಶೂಲಂ ಶಾರಂಗಮಾಯುಧಮುತ್ತಮಮ್
ದೈತ್ಯಾನಾಂ ದೇಹನಾಶಾಯ ಭಕ್ತಾನಾಮಭಯಾಯ ಚ 15|
ಧಾರಯಂತ್ಯಾಯುಧಾನೀತ್ಥಂ ದೇವಾನಾಂ ಚ ಹಿತಾಯ ವೈ ‖
ನಮಸ್ತೇಽಸ್ತು ಮಹಾರೌದ್ರೇ ಮಹಾಘೋರಪರಾಕ್ರಮೇ |16
ಮಹಾಬಲೇ ಮಹೋತ್ಸಾಹೇ ಮಹಾಭಯವಿನಾಶಿನಿ ‖  ‖
ತ್ರಾಹಿ ಮಾಂ ದೇವಿ ದುಷ್ಪ್ರೇಕ್ಷ್ಯೇ ಶತ್ರೂಣಾಂ ಭಯವರ್ಧಿನಿ |17

ಶಂಖ ಚಕ್ರ, ಗದೆ, ಶಕ್ತ್ಯಾಯುಧ, ಹಲಾಯುಧ, ಮುಸಲಾಯುಧ, ಗುರಾಣಿ, ತೋಮರ, ಪರಶು, ಪಾಶ ಇವುಗಳನ್ನ್ನೂ ಮತ್ತು ಕುಂತಾಯುಧ, ತ್ರಿಶೂಲ, ಉತ್ತಮವಾದ ಶಾಂಗಾಯುಧ, ಇವುಗಳನ್ನು ದೈತ್ಯರ ದೇಹ ನಾಶಕ್ಕಾಗಿ ಭಕ್ತರಿಗೆ ಅಭಯದಾನಕ್ಕಾಗಿ ಮತ್ತು ದೇವತೆಗಳಿಗೆ ಹಿತವನ್ನುಂಟು ಮಾಡುವುದಕ್ಕಾಗಿ ಧರಿಸಿರುವ, ಮಹಾರೌದ್ರಳೂ, ಮಹಾ ಘೋರಪರಾಕ್ರಮಳೂ ಮಹಾಬಲವಂತಳೂ, ಮಹಾ ಉತ್ಸಾಹ ಶೀಲಳೂ, ಮಹಾಭಯವ ನ್ನು ನಾಶಮಾಡಬಲ್ಲವಳೂ ಆದ ದೇವಿಗೆ ನಮಸ್ಕಾರಗಳು. ಓ ದೇವೀ, ನೋಡಲು ಅಸಾದ್ಯವಾದವಳೆ, ಶತೃಗಳ ಭಯವನ್ನು ಹೆಚ್ಚಿಸುವವಳೇ, ನಮ್ಮನ್ನು ಕಾಪಾಡು.

Kuntayudha is bharji.  Musalaayudha is ONAKE, Tomara is EETi  Shaktyayudha vannu subrahmanya na Velayudha emdu Hekabahudu Muthuswamy Deekashitaru

 shrngAra shaktyAyudha dhara sharavaNasya dAsOham anisham dhana dAnya pradasya

So also there is a mention in Mhabharata that Karna has used Shaktyayudha against Arjuna. I did not find Velayudha in Sanskrit language. 

Shanrgaudha is Special type of Bow

LISTEN TO YOURUBE FOR DETAILED EXPLANATION.

https://atmanandanatha.com/voluntary-contribution/

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: