ಕೇತು ಗಂಡಾಂತ- ಸೃಜನಶೀಲತೆಗೆ, ಹೊಸ ಯೋಜನೆಗಳಿಗೆ, ಆಧ್ಯಾತ್ಮ ಚಿಂತನೆಗೆ ಸಹಕಾರಿ.


ಶ್ರೀ ಗುರುಭ್ಯೋ ನಮಃ

ಜಲ ತತ್ತ್ವ ರಾಶಿಗಳ ಕೊನೆಯಲ್ಲಿ ಮತ್ತು ಅಗ್ನಿ ತತ್ವ ರಾಶಿಗಳ ಆರಂಭದಲ್ಲಿ ಒಂದು ನಿರ್ದಿಷ್ಟ ರೇಖಾಂಶದಲ್ಲಿ ಕೇತು ಚಲಿಸುವ ಕಾಲವೇ ಕೇತು ಗಂಡಾಂತ. ಇದು ಮೀನ ಮತ್ತು ಮೇಷ, ಕಾರ್ಕಟಕ ಮತ್ತು ಸಿಂಹ ಮತ್ತು ವೃಶ್ಚಿಕಾ ಮತ್ತು ಧನುಸ್ ರಾಶಿಗಳ ನಡುವೆ ಸಂಭವಿಸುತ್ತದೆ.
ಜನನ ಸಮಯ ಗಂಡಾಂತವನ್ನು ಬೃಹತ್ ಪರಾಶರ ಹೋರಾ ಶಾಸ್ತ್ರದಲ್ಲಿ ವಿವರಿಸಲಾಗಿದೆ ಇದು ಭಾಗ ಕಲೆ ಮತ್ತು ವಿಕಲೆ ಯ ( ಡಿಗ್ರಿ, ನಿಮಿಷಗಳು, ಸೆಕೆಂಡುಗಳು) ಅಂದರೆ ರೇಖಾಂಶ ದ ಲೆಕ್ಕವಾಗಿರದೆ ಇದು ತಿಥಿಯ (ಚಂದ್ರನ ದಿನ) ಸಮಯದ ಭಾಗವಾಗಿದೆ, ನಕ್ಷತ್ರ ಕಾಲದ ಸಮಯದ ಮತ್ತು ಲಗ್ನ ಕಾಲದ ಸಮಯದ ಭಾಗವಾಗಿದೆ . ಗಮನಿಸಬೇಕಾದ ಅಂಶವೆಂದರೆ, ಈ ಮಹಾನ್ ವಿದ್ವಾಂಸರು ಗ್ರಹಗಳಿಗೆ ಸಂಬಂಧಿಸಿದಂತೆ ಗಂಡಾಂತದ ಬಗ್ಗೆ ಪ್ರಸ್ತಾಪಿಸಿಲ್ಲ, ಇವೆಲ್ಲವೂ ಈ ಸಂದರ್ಭದಲ್ಲಿ ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಪ್ರಯತ್ನಿಸುತ್ತಿರುವ ವಿಷಯವಲ್ಲ ಆದರೆ ನಿರ್ದಿಷ್ಟವಾಗಿ ಕೇತು ಗ್ರಹದ ಗಂಡಾಂತ ಸ್ಥಾನ ವನ್ನು ಕುರಿತು ಮಾತ್ರ ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ
ಕೇತು ಗ್ರಹದ ಗಂಡಾಂತ ಸ್ಥಾನವನ್ನು ಜನ್ಮ ಕುಂಡಲಿಯಲ್ಲೂ ಮತ್ತು ಗೋಚಾರದಲ್ಲಿಯೂ ಪರಿಗಣಿಸಬೇಕು ಮತ್ತು ಬೇರೆ ಯಾವುದೇ ಗ್ರಹಗಳಿಗೆ ಅಲ್ಲ ಎಂದು ನನ್ನ ವಿನಮ್ರ ಅಭಿಪ್ರಾಯ.
ನಮಗೆ ತಿಳಿದಿರುವಂತೆ ಗಂಡಾಂತದ ಭಾಗವು ಬುಧ ಮತ್ತು ಕೇತು ನಕ್ಷತ್ರಗಳ ನಡುವೆ ಮಾತ್ರ ಸಂಭವಿಸುತ್ತ್ತದೆ. ಅಗ್ನಿ ತತ್ವ ರಾಶಿಗಳು ಕೇತು ನಕ್ಷತ್ರಗಳಿಂದ ಪ್ರಾರಂಭವಾಗುತ್ತವೆ. ಅಶ್ವಿನಿ ಜೊತೆ ಮೇಷ, ಮಖಾ ಜೊತೆ ಸಿಂಹ ಮತ್ತು ಧನುಸ್ ಜೊತೆ ಮೂಲಾ.
ಎಲ್ಲಾ ಗ್ರಹಗಳ ಪೈಕಿ ಕೇತು ಮಾತ್ರವೇ, ತನ್ನ ಗೋಚಾರ ಕಾಲದಲ್ಲಿ ತನ್ನ ನಕ್ಷತ್ರದಿಂದ ಅಗ್ನಿ ತತ್ವ ರಾಶಿಯಿಂದ ಜಲ ತತ್ವ ರಾಶಿಯ ಬುಧನ ನಕ್ಷತ್ರಕ್ಕೆ ಚಲಿಸುತ್ತದೆ. ಅಂತಹ ಗೋಚಾರವು ಕೇತುವಿಗೆ ಮಾತ್ರ ನಿರ್ದಿಷ್ಟವಾಗಿದೆ ಮತ್ತು ಆದ್ದರಿಂದ ಗೋಚಾರದಲ್ಲಿ ಕೇತು ಗಂಡಾಂತ ಪ್ರಮುಖವಾಗುತ್ತದೆ, ಅದರಲ್ಲೂ ಮೂಲಾದಿಂದ ಜ್ಯೇಷ್ಟಾ ನಕ್ಷತ್ರಕ್ಕೆ ಚಲಿಸುವ ಸಮಯ ಮತ್ತಷ್ಟು ಪ್ರಮುಖವಾಗುತ್ತದೆ.
ನಾರದ ಪುರಾಣವು ನಕ್ಷತ್ರಗಳ ಆಧಿಪತ್ಯ ಹೊಂದಿರುವ ದೇವತೆಗಳನ್ನು ಸೂಚಿಸುತ್ತಾ ಮೂಲಾ ನಕ್ಷತ್ರಕ್ಕೆ ನಿರುತಿ ಆಧಿಪತಿ ಯಾಗಿದ್ದು ಅದು ವಿನಾಶವನ್ನು / ಲಯವನ್ನು ಸೂಚಿಸುತ್ತದೆ, ಮತ್ತು ಜ್ಯೇಷ್ಟ ನಕ್ಷತ್ರಕ್ಕೆ ಇಂದ್ರ ಅಧಿಪತಿ . ನಮಗೆ ತಿಳಿದಿರುವಂತೆ ವೃಶ್ಚಿಕ ರಾಶಿ ಜಲ ತತ್ವವಾಗಿದೆ, ಇದು ಅಮೃತದ ಒಂದು ರೂಪವೂ ಆಗಿದೆ.
ಈ ಎಲ್ಲಾ ಸಂಗತಿಗಳನ್ನು ಒಟ್ಟಿಗೆ ಪರಿಗಣಿಸಿದರೆ, ವೃಶ್ಚಿಕ ರಾಶಿಯನ್ನು ಕೇತುಗ್ರಹದ ಉಚ್ಛ ರಾಶಿಯಾಗಿ ಪರಿಗಣಿಸುವುದು ಸೂಕ್ತ ವಾಗುತ್ತದೆ.
ಕೇತು ಜ್ಞಾನ ಕಾರಕ ಮತ್ತು ಮೋಕ್ಷ ಕಾರಕ. ಮೂಲಾ ನಕ್ಷತ್ರದಿಂದ ಜ್ಯೇಷ್ಟಾ ನಕ್ಷತ್ರದ ಚಲನೆ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ, ಈ ಬರಹದಲ್ಲಿ ಅದರ ಬಗ್ಗೆ ಪ್ರಸ್ತಾವನೆ ಅಪ್ರಸ್ತುತ.
ನಮ್ಮ ಮುಂದಿರುವ ಮುಂದಿನ ಪ್ರಶ್ನೆಯೆಂದರೆ ಧನುಸ್ ರಾಶಿ ಮತ್ತು ವೃಶ್ಚಿಕ ರಾಶಿಯ ಯಾವ ರೇಖಾಂಶವನ್ನು ಗಂಡಾಂತ ಭಾಗ ಎಂದು ಎಂದು ಪರಿಗಣಿಸುವುದು.
ಬೃಹತ್ ಪರಾಶರ ಹೋರಾ ಶಾಸ್ತ್ರವು ಜನನದ ಸಮಯದ ಲಗ್ನದ ಒಂದ ಭಾಗವನ್ನು ಗಂಡಾಂತ ಸಮಯ ಎಂದು ಸೂಚಿಸಿದ್ದು ಅದನ್ನು ಪರಿಗಣಿಸಿದರೆ, ಮೂಲಾ ನಕ್ಷತ್ರದ 1 ನೇ ಪಾದ ಮತ್ತು ಜ್ಯೇಷ್ಟಾ ನಕ್ಷತ್ರದ 4 ನೇ ಪಾದವು ಗಂಡಾತ ಭಾಗ ವಾಗುತ್ತದೆ, ಈ ಭಾಗದಲ್ಲಿ ಕೇತುವಿನ ಸಂಚಾರ ಕಾಲವ ಸುಮಾರು 5 ತಿಂಗಳುಗಳವರೆಗೆ ಇರುತ್ತದೆ. ಇಂತಹ ದೀರ್ಘಾವಧಿಯನ್ನು ಗಂಡಾಂತವಾಗಿ ಪರಿಗಣಿಸುವುದು ಸೂಕ್ತವಾಗಲಾರದು.
ಹಲವು ಜ್ಯೋತಿಷ್ಯಶಾಸ್ತ್ರದ ವಿದ್ವಾಂಸರು ಧನುಸ್ ರಾಶಿಯ ಕೊನೆಯ ಒಂದು ಡಿಗ್ರಿ ( ಭಾಗ) ಮತ್ತು ವೃಶ್ಚಿಕ ರಾಶಿಯ ಕೊನೆಯ ಒಂದು ಡಿಗ್ರಿ ( ಭಾಗವನ್ನು) ಗಂಡಾಂತ ಎಂದು ಪರಿಗಣಿಸಲು ಸೂಚಿಸುತ್ತಾರೆ.
ನನ್ನ ವಿನಮ್ರ ಅನುಭವದಲ್ಲಿ ಮೂಲಾ ನಕ್ಷತ್ರದ ರೇಖಾಂಶದ ಕೊನೆಯ 48 ನಿಮಿಷಗಳು ( ಅಂದರೆ ಧನುಸ್ ರಾಶಿಯ ಕಡೆಯ 48 ಕಲೆಗಳು) ಮತ್ತು ಜ್ಯೇಷ್ಟಾ ನಕ್ಷತ್ರದ ರೇಖಾಂಶದ ಕೊನೆಯ 48 ನಿಮಿಷಗಳು ( ಅಂದರೆ ವೃಶ್ಚಿಕ ರಾಶಿಯ ಕಡೆಯ 48 ಕಲೆಗಳು) ಕೇತು ಗ್ರಹದ ಗಂಡಾಂತ ಸ್ಥಾನವೆಂದು ಪರಿಗಣಿಸುವುದು ಸೂಕ್ತವಾಗಿದೆ.
ಅಂತೆಯೇ, ಕೇತು ಗ್ರಹವು ಸೆಪ್ಟೆಂಬರ್ 7/8 ರಿಂದ ಅಕ್ಟೋಬರ್7/8 ರ ನಡುವೆ ಗಂಡಾಂತ ಭಾಗದಲ್ಲಿ ಚಲಿಸುತ್ತದೆ. ಈ ಅವಧಿಯಲ್ಲಿ ನೇರ ಚಲನೆಯಲ್ಲಿರುವ ಗುರು ಗ್ರಹದೊಂದಿಗೆ ಕೇತು ಗ್ರಹವು ಸೆಪ್ಟೆಂಬರ್ 17 ರಿಂದ ಸೆಪ್ಟೆಂಬರ್ 23 ರವರೆಗೆ ಕೇತು ಗ್ರಹಬಹಳ ಅಮೂಲ್ಯವಾದುದು
ಗಂಡಾಂತ ಎಂದರೇನು – ಗಂಡ ಎಂದರೆ ಗಂಟು , ಸಂಧಿ ಎಂಬ ಅರ್ಥಗಳಿವೆ., ಆಂತಾ ಅದರ ಅಂತ್ಯ.
ಕೇತು ಗ್ರಹದ ಗಂಡಾಂತ ಸಮಯವು ಆಧ್ಯಾತ್ಮಿಕತೆಯ ಕಡೆಗೆ ಹೆಚ್ಚು ಒಲವು ತೋರುವ ಸಾಧ್ಯತೆಗಳು ಅಥವಾ ಆಧ್ಯಾತ್ಮ ಗುರುವನ್ನು ಹುಡುಕುವ ಪ್ರಯತ್ನಗಳು ಆಗಬಹುದು
ಮೂಲಾ ನಕ್ಷತ್ರ ದ ಅಧಿಪತಿ ನಿರುತಿ ವಿನಾಶಕಾರಿ / ಲಯಕಾರಿ ಗುಣ ಹೊಂದಿದ್ದರೂ, ಮೂಲಾ ನಕ್ಷತ್ರವು ಸೃಷ್ಟಿಯ ಮೂಲ ಶಕ್ತಿಯನ್ನು ಸಹ ಸೂಚಿಸುತ್ತದೆ. ಹೀಗಿರುವುದರಿಂದ ಸೃಷ್ಟಿಯ ಶಕ್ತಿ ಮತ್ತು ನಾಶಮಾಡುವ ಶಕ್ತಿಯ ನಡುವಿನ ಒಂದು ರೀತಿಯ ಹೋರಾಟವಾಗಿದ್ದು, ಇದು ಉದ್ವೇಗಕ್ಕೆ ಕಾರಣವಾಗಬಹುದು, ಇದನ್ನು ಗುರುಗಳ ಅನುಗ್ರಹದಿಂದ ಸರಿಯಾಗಿ ನಿರ್ವಹಿಸಬಹುದಾದರೆ ಗುರಿಯನ್ನು ತಲುಪಬಹುದು. ಈ ಗೋಚಾರ ಸಮಯವು ಹೊಸ ಕೌಶಲ್ಯಗಳಿಗೆ ಮತ್ತು ಹೊಸ ಅನುಭವಗಳಿಗೆ ಅವಕಾಶ ನೀಡುತ್ತದೆಯಲ್ಲದೆ. ಸೃಜನಶೀಲತೆ ಉತ್ತುಂಗದಲ್ಲಿರುತ್ತದೆ. ಧೈರ್ಯ ಮತ್ತು ಉತ್ಸಾಹದಿಂದ ಸಕಾರಾತ್ಮಕವಾಗಿ ಸವಾಲುಗಳನ್ನು ಸ್ವೀಕರಸಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ಕೇತು ಗ್ರಹದ ಸೂಕ್ಷ್ಮತೆಯು ಉತ್ತುಂಗದಲ್ಲಿದ್ದ, ಅದು ನಮ್ಮನ್ನು ಎಲ್ಲದರ ಬಗ್ಗೆ ಹೆಚ್ಚು ಸಂವೇದನಾಶೀಲವಾಗಿಸುತ್ತದೆ. ಹಾಗಾಗಿ ನಕಾರಾತ್ಮಕ ಆಲೋಚನೆಗಳಿಗೆ ಕಾರಣವಾಗದಂತೆ ಅಂತಹ ಸೂಕ್ಷ್ಮತೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕು. ವೃತ್ತಿ, ವ್ಯವಹಾರ ಮತ್ತು ವೈಯಕ್ತಿಕ ಬೆಳವಣಿಗೆಯಲ್ಲಿ ದಾಪು ಗಾಲು ಹಾಕಲು ಇದು ಸೂಕ್ತ ಸಮಯ.
ಸಕಾರಾತ್ಮಕ ಬದಲಾವಣೆಗಾಗಿ ಸ್ವಲ್ಪ ಸಮಯ ತಾಳ್ಮೆಯಿಂದ ಕಾಯಬೇಕು.
ಅತಿ ಶೀಘ್ರವಾಗಿ ಮುನ್ನುಗ್ಗುವುದು ಮತ್ತು ತರಾತುರಿಯಲ್ಲಿ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಿ. ಮಾತನಾಡುವ ಮೊದಲು ಯೋಚಿಸಿ.
ನೀವು ವಾಹನವನ್ನು ಓಡಿಸುತ್ತಿದ್ದರೆ ಹೆಚ್ಚಿನ ಎಚ್ಚರಿಕೆ ವಹಿಸಿ.
ಇದು ಧ್ಯಾನಮಾಡಲು ಅತ್ಯುತ್ತಮ ಸಮಯ. ಪ್ರತಿದಿನ ಎರಡು ಬಾರಿ 10-15 ನಿಮಿಷಗಳ ಕಾಲ ಸರಳ ಪ್ರಾಣಾಯಾಮ ಮಾಡುವುದರಿಂದ ಮಾನಸಿಕ ಶಕ್ತಿ ಹೆಚ್ಚಾಗುತ್ತದೆ. ಯಾವುದೇ ಮಂತ್ರವನ್ನು ಪ್ರಾರಂಭಿಸಿದರೆ ಮಂತ್ರ ಮತ್ತು ಧ್ಯಾನದ ನಿರಂತರ ಮತ್ತು ನಿಯಮಿತ ಅಭ್ಯಾಸದಿಂದ ಮಂತ್ರ ಸಿದ್ಧಿಯನ್ನು ಪಡೆಯಲು ಸಾಧ್ಯವಾಗುವ ಸಮಯ ಇದಾಗಿದೆ.
ವಿವಿಧ ರಾಶಿಗಳಿಗೆ ಸಂಬಂಧಿಸಿದಂತೆ ಈ ಕೇತು ಗಂಡಾಂತ ಸಮಯದ ಫಲಗಳನ್ನು ನೀಡುವ ಪ್ರಯತ್ನ ನಾನು ಮಾಡುವದಿಲ್ಲಾ, ಏಕೆಂದರೆ ಜನ್ಮ ನಕ್ಷತ್ರದ ಅಥವಾ ಜನ್ಮ ರಾಶಿಯ ಆಧಾರದ ಮೇಲೆ ಫಲನಿರ್ಣಯ ಮಾಡುವುದು ಸಾಧುವಲ್ಲಾ ಸರಿಯಲ್ಲ ಎಂಬುದು ನನ್ನ ಧೃಡ ನಂಬಿಕೆ.
ಜನ್ಮ ಕುಂಡಲಿಯನ್ನು ಕೂಲಂಕಷವಾಗಿ ಪರಿಶೀಲಿಸಿ, ಲಗ್ನ ಬಲ, ಗ್ರಹಬಲ, ಬಾವ ಬಲ ಗಳನ್ನು ಪರಿಗಣಿಸಿ,ಷೋಡಶ ವರ್ಗಗಳ ಪೈಕಿ ನವಾಂಶವೂ ಸೇರಿದಂತೆ ಆರು ವರ್ಗಗಳನ್ನಾದರೂ ಪರಿಶೀಲಿಸಿ, ಹಾಲಿ ದಶಾ ಭುಕ್ತಿಗಳನ್ನೂ ಪರಿಗಣಿಸಿ ಮಾಡುವ ಫಲ ನಿರೂಪಣೆಯೇ ಶೇ 50-60 ಸತ್ಯವಾಗುವಾಗ, ಜನ್ಮರಾಶಿಯ ಆಧಾರದಲ್ಲಿ ಫಲ ನಿರೂಪಣೆ ಸರಿಯಾದ ಮಾರ್ಗವಲ್ಲಾ.
ಕೇತು ದೆಶೆ ಅಥವಾ ಭುಕ್ತಿ ಈಗ ನಡೆಯುತ್ತಿದ್ದರೆ, ಅಂತಹವರು ಬಾಳ ಸಂಗಾತಿಯನ್ನು ಆರಿಸುವ ಪ್ರಯತ್ನದಲ್ಲಿದ್ದರೆ ಆ ಪ್ರಯತ್ನವನ್ನು ಸದ್ಯಕ್ಕೆ ಮುಂದೂಡುವುದು ಒಳ್ಳೆಯದು. ವಿವಾ ಸತಿ ಪತಿಯರ ನಡುವಣ ಸಣ್ಣ ಪುಟ್ಟ ವಿವಾದಗಳನ್ನು ತತ್ ಕ್ಷಣವೇ ಪರಿಹರಿಸಿ ಕೊಳ್ಳುವ ಮೂಲಕ ಸಂಬಂಧಗಳನ್ನು ಗಟ್ಟಿಯಾಗಿಸುವ ಪ್ರಯತ್ನ ಮಾಡಲೇ ಬೇಕು.
ಅಂತಹವರು ತಮ್ಮ ಜನ್ಮ ಕುಂಡಲಿಯಲ್ಲಿ ಬುಧ ಮತ್ತು ಮಂಗಳ ಗ್ರಹಗಳ ಸ್ಥಾನವನ್ನು ಪರಿಶೀಲಿಸಿ ಸೂಕ್ತ ಪರಿಹಾರಗಳನ್ನು ಮಾಡಬೇಕು.
ಇಂದ್ರ ಗಾಯತ್ರಿ ಜಪಿಸುವುದು ಒಂದು ಉತ್ತಮ ಪರಿಹಾರ.
ಗುರು ಮಂಡಲ ಅನುಗ್ರಹ ಪ್ರಾಪ್ತಿರಸ್ತು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: