ಶ್ರೀ ರುದ್ರ 7 ನೇ ಅನುವಾಕ ವಿವರಣೆ : Sri Rudra 7th Anuvaka explained in Kannada


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ ಶಾಂತಾ

ವಿಮಲಾ ಪ್ರಕಾಶಾ ಆತ್ಮಾ ಗುಹಾ ಚಿದ್ ಯೋಗಾಸ್ಯ ಶ್ರೀ ಪರಾನಂದಾದಿ ಸದ್ಗುರೂನ್ ನಮಾಮ್ಯಹಂ ಪುನಃ ಪುನಃ 

ನಮೋ’ ದುಂದುಭ್ಯಾ’ಯ ಚಾಹನನ್ಯಾ’ಯ ಚ ನಮೋ’ ಧೃಷ್ಣವೇ’ ಚ ಪ್ರಮೃಶಾಯ’ ಚ ನಮೋ’ ದೂತಾಯ’ ಚ ಪ್ರಹಿ’ತಾಯ ಚನಮೋ’ ನಿಷಂಗಿಣೇ’ ಚೇಷುಧಿಮತೇ’ ಚ ನಮ’ಸ್-ತೀಕ್ಷ್ಣೇಷ’ವೇ ಚಾಯುಧಿನೇ’ ಚ ನಮಃ’ ಸ್ವಾಯುಧಾಯ’ಚ ಸುಧನ್ವ’ನೇ ಚ ನಮಃ ಸ್ರುತ್ಯಾ’ಯ ಚ ಪಥ್ಯಾ’ಯ ಚ ನಮಃ’ ಕಾಟ್ಯಾ’ಯ ಚ ನೀಪ್ಯಾ’ಯ ಚ ನಮಃ ಸೂದ್ಯಾ’ಯ ಚ ಸರಸ್ಯಾ’ಯ ಚ ನಮೋ’ ನಾದ್ಯಾಯ’ ಚ ವೈಶಂತಾಯ’ ಚ ನಮಃ ಕೂಪ್ಯಾ’ಯ ಚಾವಟ್ಯಾ’ಯ ಚ ನಮೋ ವರ್ಷ್ಯಾ’ಯ ಚಾವರ್ಷ್ಯಾಯ’ ಚ ನಮೋ’ ಮೇಘ್ಯಾ’ಯ ಚ ವಿದ್ಯುತ್ಯಾ’ಯ ಚ ನಮ ಈಧ್ರಿಯಾ’ಯ ಚಾತಪ್ಯಾ’ಯ ಚ ನಮೋ ವಾತ್ಯಾ’ಯ ಚ ರೇಷ್ಮಿ’ಯಾಯ ಚ ನಮೋ’ ವಾಸ್ತವ್ಯಾ’ಯ ಚ ವಾಸ್ತುಪಾಯ’ ಚ 

ನಮೋ’ ದುಂದುಭ್ಯಾ’ಯ ಚಾಹನನ್ಯಾ’ಯ ಚ

ರುದ್ರನು ಡಮರುವಿನ ರೂಪದಲ್ಲಿಯೂ ಆ ಡಮರಿನಿಂದ ಶಬ್ಧ ಹೊರಡಿಸುವ ಕಡ್ಡಿಗಳಲ್ಲಿಯೂ ಇದ್ದಾನೆ.
ರುದ್ರನ ಡಮರುವಿನ ಶಬ್ಧದಿಂದಲೇ ಅಕ್ಷರಗಳ ಉತ್ಪತ್ತಿಯಾದದ್ದನ್ನು ನಾವು ಈ ಹಿಂದೆಯೇ ತಿಳಿದುಕೊಂಡಿದ್ದೇವೆ. ಮೂಲಾಧಾರದಲ್ಲಿನ ಶಬ್ಧ ಬ್ರಹ್ಮವು ಮೇಲೆಕ್ಕೆ ಚಲಿಸಿ ವಿಶುದ್ಧ ಚಕ್ರದ ಮೂಲಕ ವೈಖರಿ ಯಾಗಿ ಹೊರಬರುವುದನ್ನೂ ತಿಳಿದುಕೊಂಡಿದ್ದೇವೆ.
ಶಬ್ಧ ರೂಪದಲ್ಲಿರುವ ಬ್ರಹ್ಮ ಶಬ್ಧ ಬ್ರಹ್ಮ ಹೇಗೋ ಹಾಗೆಯೇ ಬ್ರಹ್ಮನಿಂದ ಬ್ರಹ್ಮಾಂಡವು ಪ್ರಕಟ ವಾಗಿದೆ. ವಾಸ್ತವದಲ್ಲಿ ಈ ಎರಡೂ ಒಂದೇ ಅಕ್ಷರ ಅಂದರೆ ಶಬ್ಧಬ್ರಹ್ಮನಿಂದ ಬ್ರಹ್ಮಾಂಡವು ಹುಟ್ಟಿಕೊಂಡಿದೆ

ನಮೋ’ ಧೃಷ್ಣವೇ’ ಚ ಪ್ರಮೃಶಾಯ’ ಚ

ಧೈರ್ಯಶಾಲಿಯಾದ ರುದ್ರನೇ ಹಾಗೂ ಆತುರದಲ್ಲಿ ಕಾರ್ಯವೆಸಗದ ರುದ್ರನೇ ನಿನಗೆ ನಮಸ್ಕಾರಗಳು.
ಮನಸ್ಸಿನಲ್ಲಿ ಧರ್ಮ ಅಧರ್ಮಗಳ ನಡುವೆ ನಿರಂತರವಾಗಿ ಯುದ್ಧ ನಡೆಯುತ್ತಲೇ ಇರುತ್ತದೆ. ನಮ್ಮ ಯೋಚನಾ ಪ್ರಕ್ರಿಯೆಯು ಇವೆರಡರಲ್ಲಿ ಯಾವುದು ಗೆಲ್ಲಬೆಕು ಎಂದು ನಿರ್ಧರಿಸುತ್ತದೆ. ನಮ್ಮ ಕರ್ಮದ ಪ್ರಭಾವ ಈ ಯೋಚನಾ ಪ್ರಕ್ರಿಯೆಯನ್ನು ನಿರ್ಧರಿಸುತ್ತದೆ. ರುದ್ರನು ಅಧರ್ಮದ ಕಡೆ ವಾಲುವ ಮನಸ್ಸನ್ನು ನಾಶಮಾಡುವ ಮೂಲಕ ನಮ್ಮನ್ನ್ನು ಮೋಕ್ಷದ ಕಡೆ ನಡೆಸುತ್ತಾನೆ.

ನಮೋ ದೂತಾಯ ಚ ಪ್ರಹಿತಾಯಬ್ ಚ ಸಂದೇಶಗಳನ್ನು ಸಾಗಿಸುವವನೂ, ಸೇವಕನೂ ಆದ ರುದ್ರನಿಗೆ ನಮಸ್ಕಾರಗಳು.
ಅಗ್ನಿ ಯಮ, ವರುಣ ಇಂದ್ರ ಹೀಗೆ ವಿವಿಧ ದೇವರುಗಳು ರುದ್ರನ ನಿಯಂತ್ರಣದಲ್ಲಿದ್ದು, ಬ್ರಹ್ಮಾಂಡದಲ್ಲಿ ವಿವಿಧ ಕಾರ್ಯಗಳನ್ನು ನಿರ್ವಹಿಸುತ್ತಾರೆ.

ನಮೋ ನಿಷಂಗಿಣೇ ಚೇಶುಧಿಮತೇ ಚ

ಕತ್ತಿಯನ್ನು ಹಿಡಿದಿರುವ ಮತ್ತು ಬತ್ತಳಿಕೆಯನ್ನು ತೊಟ್ಟಿರುವ ರುದ್ರನೇ ನಿನಗೆ ನಮಸ್ಕಾರಗಳು
ಕತ್ತಿ ಮತ್ತು ಬತ್ತಳಿಕೆಯ ಬಗ್ಗೆ ಹಿಂದಿನ ಅನುವಾಕಗಳಲ್ಲಿ ಹೇಳಲಾಗಿದೆ.
ತನ್ನ ಭಕ್ತರನ್ನು ರಕ್ಷಿಸಲು ರುದ್ರನು ತನ್ನ ಆಯುಧಗಳನ್ನು ಉಪಯೋಗಿಸುತ್ತಾನೆ. ಭಕ್ತರ ಅಜ್ನಾನದ ಕತ್ತಲನ್ನು ತೊಲಗಿಸಿ ಬೆಳಕನ್ನು ನೀಡುತ್ತಾನೆ. ರುದ್ರ ಎಂದರೆ ಸಾಕು ಅಜ್ನಾನ ತೊಲಗಿಹೋಗುತ್ತದೆ ಏಕೆಂದರೆ ರುದ್ರನಿಗೆ ಭಕ್ತರ ಮೇಲಿರುವ ಅನುಕಂಪ.

ತೇಷಾಮೇವಾನುಕಂಪಾರ್ಥಮಹಜ್ನಾನಜಂ ತಮಃ
ನಾಶಯಾಮ್ಯಾತ್ಮಭಾವಸ್ಥೋ ಜ್ನಾನದೀಪೇನ ಭಾಸ್ವತಾ
ಇದು ಭಗವದ್ಗೀತೆಯ ಹತ್ತನೇ ಅಧ್ಯಾಯದ ಹನ್ನೊಂದನೇ ಶ್ಲೋಕ

ಅವರನ್ನು, ಅಂದರೆ ನನ್ನ ಭಕ್ತರನ್ನು ಅನುಗ್ರಹಿಸುವುದಕ್ಕಾಗಿ ನಾನೇ ಸ್ವತಃ ಅವರ ಅಂತಃಕರಣದಲ್ಲಿ ಆತ್ಮಭಾವದಿಂದ ಇದ್ದುಕೊಂಡು ಅಜ್ನಾನದಿಂದ ಉಂಟಾದ ಅಂಧಕಾರವನ್ನು ಪ್ರಕಾಶಮಯ ತತ್ವಜ್ನಾನರೂಪೀ ದೀಪದಿಂದ ನಾಶಮಾಡುತ್ತೇನೆ.
ಇದು ಶ್ರೀ ಕೃಷ್ಣನು ತನ್ನ ಭಕ್ತರಿಗೆ ಕೊಡುವ ಅಭಯ.

ನಮ’ಸ್-ತೀಕ್ಷ್ಣೇಷ’ವೇ ಚಾಯುಧಿನೇ’ ಚ ಮೊನಚಾದ ಬಾಣಗಳನ್ನು ಹೊಂದಿರುವ ಜತೆಗೆ ಹಲವಾರು ಆಯುಧಗಳನ್ನೂ ಹೊಂದಿರುವ ರುದ್ರನೇ ನಿನಗೆ ನಮಸ್ಕಾರಗಳು. ಈ ಆಯುಧಗಳು ಅಧರ್ಮಿಗಳನ್ನು ನಾಶಮಾಡಲು ರುದ್ರನು ಹೊಂದಿರುವ ಆಯುಧಗಳು.

ನಮಃ ಸ್ವಾಯುಧಾಯ ಚ ಸುಧನ್ವನೇ ಚ

ಅತ್ಯುತ್ತಮ ಬಾಣಗಳು ಮತ್ತು ತ್ರಿಶೂಲವನ್ನು ಹಿಡಿದಿರುವ ರುದ್ರನೇ ನಿನಗೆ ನಮಸ್ಕಾರಗಳು. ಇದು ರುದ್ರನ ಪಿನಾಕವನ್ನು ಹೇಳುತ್ತಿದೆ. ತ್ರಿಶೂಲವು ದೈವೀಕವಾದ ಇಚ್ಚಾ ಶಕ್ತಿ, ಜ್ನಾನ ಶಕ್ತಿ ಮತ್ತು ಕ್ರಿಯಾ ಶಕ್ತಿಯ ಸಂಕೇತವಾಗಿದೆ. ಈ ಮೂರೂ ಶಕ್ತಿಗಳಿಂದ ಒಳಗೊಂಡಿರುವುದು ಪರಾಶಕ್ತಿ ಅಂದರೆ, ಸರ್ವೋತ್ಕೃಷ್ಟ ವಾದ ಶಕ್ತಿ. ರುದ್ರನು ಈ ಎಲ್ಲ ಶಕ್ತಿಗಳನ್ನೂ ಹೊಂದಿದ್ದಾನೆ,. ತ್ರಿಶೂಲವು ಸೃಷ್ಟಿ , ಸ್ಥಿತಿ ಮತ್ತು ಲಯಗಳನ್ನೂ ಸೂಚಿಸುತ್ತದೆ.

ನಮಃ ಸೃತ್ಯಾಯ ಚ ಪ್ರತ್ಯಾಯ ಚ

ಕಿರಿದಾದ ಹಾದಿಯಲ್ಲೂ ವಿಶಾಲವಾದ ಹಾದಿಯಲ್ಲೂ ಸಂಚರಿಸುವ ರುದ್ರನಿಗೆ ನಮಸ್ಕಾರಗಳು.
ಕಿರಿದಾದ ಹಾದಿಗಳು ಸ್ವರ್ಗಕ್ಕೆ ಮಾರ್ಗವಾದರೆ, ವಿಶಾಲವಾದ ಹಾದಿಗಳು ನರಕಕ್ಕೆ ಮಾರ್ಗ. ವಿವಿಧ ಬಗೆಯ ನರಕಗಳು ಇದ್ದು ಪ್ರತಿಯೊಂದು ನರಕಕ್ಕೂ ಅದರದೇ ಆದ ಹಾದಿಗಳೂ ಇವೆ.
ನಮ್ಮ ನಮ್ಮ ಯೋಚನೆಗಳು, ಭಾವನೆಗಳು ನಮ್ಮ ದಾರಿ ನರಕವೋ ಸ್ವರ್ಗವೋ ಎನ್ನುವುದನ್ನು ನಿರ್ಧರಿಸುತ್ತವೆ, ಏಕೆಂದರೆ ನಾವು ಮಾಡುವ ಕರ್ಮಗಳು ನಮ್ಮ ಯೋಚನೆಗಳಿಗೆ ತಕ್ಕಂತೆ ಇರುತ್ತವೆ. ಬಂಧನ, ಆಸೆ, ಅಹಂಕಾರ, ಲೈಂಗಿಕ ಕಾಮನೆ ಇವೆಲ್ಲವೂ ನಮ್ಮ ಜ್ನಾನೇಂದ್ರಿಯಗಳಿಂದಲೇ ಉಂಟಾಗುವಂತಹವು. ಸಂತೋಷ ಅಥವಾ ದುಃಖ ನಮ್ಮ ದೇಹ ಮತ್ತು ಮನಸ್ಸಿನಿಂದ ಉದ್ಭವ ವಾಗುವಂತಹವು.
ಸಮತೋಲನವಾದ ಮನಸ್ಸು ಸಂತೋಷ ದಿಂದಾಗಲೀ, ದುಃಖ ದಿಂದಾಗಲೀ ವಿಚಲಿತವಾಗುವುದಿಲ್ಲಾ.
ನಮಃ ಕಾಟ್ಯಾಯ ಚ ನೀಪ್ಯಾಯ ಚ
ತೇವದ ಮಣ್ಣು ಇರುವ ಕಡೆಯೂ. ಮೇಲಿನಿಂದ ಸುರಿಯುವ ನೀರು ಇರುವ ಕಡೆಯೂ ಇರುವ ರುದ್ರನೇ ನಿನಗೆ ನಮಸ್ಕಾರಗಳು.

ನಮಃ ಸೂದ್ಯಾಯ ಚ ಸರಸ್ಯಾಯ ಚ

ನೀರು ಒಣಗಿಹೋಗಿರುವ ಹಳ್ಳಗಳಲ್ಲೂ ಮತ್ತು ನೀರು ತುಂಬಿರುವ ಹಳ್ಳ, ಸರೋವರಗಳಲ್ಲೂ ಇರುವ ರುದ್ರನೇ ನಿನಗೆ ನಮಸ್ಕಾರಗಳು.
ಸೃಷ್ಟಿಕರ್ತನಾದ ಬ್ರಹ್ಮನು ಮಾನಸ ಸರೋವರ ಎಂಬ ಸರೋವರವನ್ನು ಕೈಲಾಸ ಪರ್ವತದ ಬಳಿ ಸೃಷ್ಟಿಸಿದನಂತೆ. ಈ ಸರೋವರದ ನೀರು ಪರಿಶುದ್ಧವಾದ್ದು. ಹಂಸಗಳು ಪರಿಶುದ್ಧವಾದ ನೀರನ್ನು ಹುಡುಕಿಕೊಂಡು ಈ ಮಾನಸ ಸರೋವರಕ್ಕೆ ಬರುತ್ತವೆ.
ಶಾಂತ ಮತ್ತು ಪರಿಶುದ್ಧ ಮನಸ್ಸಿನ ಸಂಕೇತ ಈ ಪರಿಶುದ್ಧವಾದ, ಶಾಂತವಾದ ಈ ಮಾನಸ ಸರೋವರ, ಹಂಸಗಳು ಯಾವಾಗಲೂ ಜೋಡಿಯಾಗಿಯೇ ವಿಹರಿಸುತ್ತವೆ. ಈ ಹಂಸಗಳು ಜೀವಾತ್ಮ ಮತ್ತು ಪರಮಾತ್ಮರ ಸಂಕೇತ.

ನಮೋ ನಾದ್ಯಾಯ ಚ ವೈಶಂತಾಯ ಚ
ಸೂಕ್ಷ್ಮ ನಾಡಿಗಳ ಮೂಲಕ ಪ್ರಕಟಗೊಳ್ಳುವ, ಕೊಳವನ್ನು ಪ್ರಕಾಶಮಾನವಾಗಿ ಮಾಡುವ ರುದ್ರನೇ ನಿನಗೆ ನಮಸ್ಕಾರಗಳು. ಇಲ್ಲಿ ಈಡಾ, ಪಿಂಗಳ ಮತ್ತು ಸುಷುಮ್ನಾ ನಾಡಿಗಳನ್ನು ಕುರಿತು ಹೇಳಲಾಗಿದೆ. ಈ ಮೂರೂ ನಾಡಿಗಳು ಸಮತೋಲನದಲ್ಲಿದ್ದರೆ,ದೇಹವು ಬೆಳಗುತ್ತಿರುತ್ತದೆ.

ನಮೋ ಕೂಪ್ಯಾಯ ಚ ಅವತ್ಯಾಯಚ

ಭಾವಿಗಳಲ್ಲಿಯೂ ಸಣ್ಣ ಹಳ್ಳಗಳಲ್ಲಿರುವ ನೀರಿನಲ್ಲಿಯೂ ಇರುವ ರುದ್ರನೇ ನಿನಗೆ ನಮಸ್ಕಾರಗಳು. ಪ್ರಾಯಶಃ ಇದು ಕುಂಡಲಿನೀ ಧ್ಯಾನದಲ್ಲಿ ಸುರಿಸುವ ಅಮೃತದ ಬಗ್ಗೆ ಹೇಳಿರಬಹುದು. ಸಹಸ್ರಾರದ ಮಧ್ಯೆ ಸೋಮ ಚಕ್ರ ಇದೆ ಎಂದು ಹೇಳಲಾಗುತ್ತದೆ. ಕುಂಡಲಿನೀ ಈ ಚಕ್ರ ತಲುಪಿದಾಗ ಆಗ ಉತ್ಪತ್ತಿಯಾಗುವ ಶಾಖದಿಂದ ಅಮೃತವು ಕರಗಿ ಹನಿ ಹನಿಯಾಗಿ ಗಂಟಲಿನಲ್ಲಿ ಬಿದ್ದು ಅದು ಇಡೀ ನರಮಂಡಲವನ್ನು ಸೇರುತ್ತದೆ.  ಈ ಅನುಭವ ಹೊಂದಿರುವ ಯೋಗಿಗಳು ಇದ್ದಾರೆ.

ನಮೋ ವರ್ಷ್ಯಾಯ ಚ ಅವರ್ಷ್ಯಾಯ ಚ

ಮಳೆಯ ನೀರಿನಲ್ಲಿಯೂ ಭೂಮಿಯೊಳಗೆ ಹರಿಯುವ ನೀರಿನಲ್ಲಿಯೂ ಇರುವ ರುದ್ರನೇ ನಿನಗೆ ನಮಸ್ಕಾರಗಳು.

ನಮೋ ಮೇಘ್ಯಾಯ ಚ ವಿದ್ಯುತ್ಯಾಯ ಚ

ಮೋಡಗಳಲ್ಲಿಯೂ ಮಿಂಚಿನಲ್ಲಿಯೂ ಇರುವ ರುದ್ರನೇ ನಿನಗೆ ನಮಸ್ಕಾರಗಳು

ನಮೋ ಈಂಧ್ರಿಯಾಯ ಚ ಆತಪ್ಯಾಯ ಚ

ಶರತ್ಕಾಲದ ಮೋಡಗಳ ರೂಪದಲ್ಲಿರುವ ರುದ್ರನೇ, ರವಿಯ ರೂಪದಲ್ಲಿಯೂ ಆತನ ಬೆಳಕಿನ ರೂಪದಲ್ಲಿಯೂ ಇರುವ ರುದ್ರನೇ ನಿನಗೆ ನಮಸ್ಕಾರಗಳು. ಇಲ್ಲಿ ರುದ್ರನ ಸೃಷ್ಟಿ ಮತ್ತು ಸ್ಥಿತಿ ಕ್ರಿಯೆಯ ಬಗ್ಗೆ ಹೇಳಲಾಗಿದೆ. ಸೂರ್ಯನು ಇಲ್ಲದೆ ಸೃಷ್ಟಿ ಯೂ ಇಲ್ಲಾ ಸ್ಥಿತಿಯೂ ಇಲ್ಲಾ. ರುದ್ರನು ಸೂರ್ಯನ ರೂಪದಲ್ಲಿದ್ದು ನಮ್ಮೆಲ್ಲರನ್ನೂ ರಕ್ಷಿಸುತ್ತಿದ್ದಾನೆ.

ನಮೋ ವಾತ್ಯಾಯ ಚ ರೇಷ್ಮಿಯಾಯ ಚ

ಚಂಡಮಾರುತದ ರೂಪದಲ್ಲಿರುವ ರುದ್ರನೇ, ಅಲಿಕಲ್ಲು ಮಳೆಯಲ್ಲಿಯೂ ಇರುವ ರುದ್ರನೇ ನಿನಗೆ ನಮಸ್ಕಾರಗಳು. ಇಲ್ಲಿ ಪ್ರಳಯರುದ್ರನ ತಾಂಡವವನ್ನು ಹೇಳಿದೆ. ಈ ರುದ್ರತಾಂಡವದ ಸಮಯದಲ್ಲಿ ಶ್ರೀ ಲಲಿತಾಂಬಿಕೆಯ ಹೊರತು ಯಾರೂ ಅವನ ಬಳಿ ಇರುವುದಿಲ್ಲಾ. ಪ್ರಳಯ ಅಂದರೆ ಲಯ ಅಲ್ಲಾ ಅದು ತಿರೋಧಾನ ಅಂದರೆ ಶಿವ ಶಕ್ತಿಯರ ಹೊರತಾಗಿ ಇಡೀ ಬ್ರಹ್ಮಾಂಡವೇ ಇಲ್ಲವಾಗುವುದು. ಇಡೀ ಬ್ರಹ್ಮಾಂಡವು ಶಿವನಲ್ಲಿ ಲೀನವಾಗಿಹೋಗುವುದನ್ನು ಶಕ್ತಿಯು ನೋಡುತ್ತಲೇ ಇರುತ್ತಾಳೆ. ಇದು ಲಲಿತಾ ಮಹಾತ್ರಿಪುರ ಸುಂದರಿಯ ಪಂಚಕೃತ್ಯಗಳಲ್ಲಿ ನಾಲ್ಕನೆಯದು. ತಿರೋಧಾನ ಕರ್ಯೈ ನಮಃ ಈಶ್ವರ್ಯೈ ನಮಃ ಲಲಿತಾ ಸಹಸ್ರನಾಮದ ನಾಮಗಳು. ತಿರೋಧಾನ ಆದಮೇಲೆ ಮತ್ತೆ ಸದಾಶಿವನ ರೂಪದಲ್ಲಿ ದೇವಿಯಿಂದ ಅನುಗ್ರಹ- ಸದಾಶಿವಾಯೈ ನಮಃ ಅನುಗ್ರಹದಾಯೈ ನಮಃ-

ನಮೋ ವಾಸ್ತವ್ಯಾಯ ಚ ವಾಸ್ತುಪಾಯ ಚ

ನಮ್ಮ ಮನೆಯ ರೂಪದಲ್ಲಿಯೂ ನಮ ಎಲ್ಲಾ ಐಷ್ವರ್ಯದ, ವಾಹನಗಳ ರೂಪದಲ್ಲಿಯೂ ಮನೆಯಲ್ಲಿಯ ಎಲ್ಲಾ ವಸ್ತುಗಳ ರೂಪದಲ್ಲಿಯೂ ಇದ್ದು ಅವೆಲ್ಲವನ್ನು ರಕ್ಷಿಸುತ್ತಿರುವ ಆ ಕರುಣಾಳು ರುದ್ರನಿಗೆ ನಮಸ್ಕಾರಗಳು.  ಜೀವ ಮತ್ತು ಜಡ ವಸ್ತುಗಳಲ್ಲಿಯೂ ಇರುವವನು ರುದ್ರನೇ ಎನ್ನುವುದನ್ನು ಮತ್ತೊಮ್ಮೆ ಹೇಳಲಾಗಿದೆ. ಮರಗಳನ್ನು, ಕಲ್ಲುಗಳನ್ನು, ಮಣ್ಣನ್ನು, ನೀರನ್ನು ಪೂಜೆ ಮಾಡುವುದು ಮೂಡನಂಬಿಕೆ, ಆ ಸೃಷ್ಟಿಕರ್ತನಾದ ಪರಬ್ರಹ್ಮನ ಪೂಜೆ ಮಾಡಬೇಕೇ ಹೊರತು ಬೇರೆ ಯಾವ ಪೂಜೆಗಳೂ ಸರಿಯಿಲ್ಲ ಎನ್ನುವವರಿಗೆ, ಇಲ್ಲಿ ರುದ್ರ ಹೇಳುತ್ತಿದ್ದಾನೆ. ಅಹುದು ನಾನೇ ಸೃಷ್ಟಿಕರ್ತನಾದ ಪರಬ್ರಹ್ಮ ಅಷ್ಟೇ ಅಲ್ಲಾ ನಾನು ಈ ಎಲ್ಲಾ ಜಡವಸ್ತುಗಳಲ್ಲಿಯೂ ನಾನೇ ಇದ್ದೇನೆ. ಈ ಜಡವಸ್ತುಗಳೆಲ್ಲವೂ ನಾನೇ ಎಂದು. ನಮಗೆ ಅವನನ್ನು ನೋಡುವ ಕಣ್ಣುಗಳು ಬೇಕಷ್ಟೆ. ಅಂತಹ ಕಣ್ಣುಗಳನ್ನೂ ನಮಗೆ ಕೊಡು ಎಂದು ಅವನನ್ನೇ ಪ್ರಾರ್ಥಿಸೋಣ.
ಪುರಾಣದ ಒಂದು ಕಥೆ ನೆನಪಿಗೆ ಬರುತ್ತಿದೆ. ಒಬ್ಬ ರಾಕ್ಷಸ ದೇವತೆಗಳಿಗೆ ಹಿಂಸೆ ಕೊಡ್ತಾ ಇದ್ದ. ಆ ದೇವತಗಳು ಅವನನ್ನು ಕೆಳಗಡೆಗೆ ನೂಕಿಬಿಟ್ಟರು. ಆ ರಾಕ್ಷಸ ಮಹಾಶಿವಭಕ್ತ. ಅವನು ಶಿವನಲ್ಲಿ ತನ್ನನ್ನು ರಕ್ಷಿಸು ಅಂತ ಮೊರೆಯಿಟ್ಟ. ಆಗ ಶಿವ ಅವನನ್ನು ರಕ್ಷಿಸಿ ಆ ರಾಕ್ಷಸನಿಗೆ ಭೂಮಿಯ ಮೇಲೆ ನಿರ್ಮಾಣವಾಗುವ ಎಲ್ಲಾ ಕಟ್ಟಡಗಳ ಆಧಿಪತ್ಯ ವನ್ನು ವಹಿಸಿಕೊಟ್ಟನಂತೆ. ಅವನೇ ವಾಸ್ತು ಪುರುಷ,
ವಾಸ್ತು ಅಂದರೆ ವಾಸಿಸುವ ಸ್ಠಳ. ರುದ್ರನನ್ನು ಆರಾಧಿಸಿದರೆ ವಾಸ್ತು ಪುರುಷನನ್ನು ಆರಾಧಿಸಿದಂತೆಯೇ ಆಗುತ್ತದೆ. ವಾಸ್ತುಪುರುಷನ ರೂಪದಲ್ಲಿಯೂ ಇರುವ ರುದ್ರನೇ ನಿನಗೆ ನಮಸ್ಕಾರಗಳು.
ಈ ಅನುವಾಕವನ್ನು ಹೇಳಿಕೊಂಡರೆ ಜ್ನಾನ, ಧೀರ್ಘಾಯುಷ್ಯ, ಐಷ್ವರ್ಯ ಆರೋಗ್ಯ ಮತ್ತು ಸಂತಾನ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗಿದೆ.

ಇಲ್ಲಿಗೆ ಶ್ರೀ ರುದ್ರದ ಏಳನೇ ಅನುವಾಕ ಸಂಪನ್ನವಾಗುತ್ತದೆ.

ಸರ್ವೇಷಾಂ ಸ್ವಸ್ತಿರ್ಭವತು ಸರ್ವೇಷಾಂ ಪುಷ್ಟಿರ್ಭವತು
ಸರ್ವೇಶಾಂ ಪೂರ್ಣಂ ಭವತುಸರ್ವೇಶಾಂ ಮಂಗಳಮ್ ಭವತು
ಸರ್ವರೂ ಆರೋಗ್ಯವಾಗಿರಲಿ ಸರ್ವರೂ ಶಕ್ತಿಶಾಲಿಗಳಾಗಿರಲಿ, ಪುಷ್ಟಿವಂತರಾಗಿರಲಿ
ಸರ್ವವೂ ಪೂರ್ಣವೇ ಆಗಿರಲಿ ಸರ್ವವೂ ಮಂಗಳಕರವಾಗಲಿ
ಓಂ ಶಾಂತಿಃ ಶಾಂತಿಃ ಶಾಂತಿಃ

https://atmanandanatha.com/voluntary-contribution/

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: