ಜ್ಯೋತಿಷ್ಯ ಶಾಸ್ತ್ರದ ಪಾಠಗಳನ್ನು ಆರಂಭಿಸುವ ಮುನ್ನ ನಿಮ್ಮೊಂದಿಗೆ; Introduction to Astrology before commencing lessons


ಶ್ರೀ ಗುರುಭ್ಯೋ ನಮಃ

ಜ್ಯೋತಿಷ್ಯ ಪಾಠಗಳಿಗೆ ಪರಿಚಯ

ಮಹರ್ಷಿ ಪರಾಶರರು , ಜೈಮಿನಿ ಮಹರ್ಷೀಗಳು , ವರಾಹಮಿಹರರು, ಮಾಂತ್ರೀಶ್ವರರು, ವೈದ್ಯನಾಥ ದೀಕ್ಷಿತರು, ತಮಿಳು ನಾಡಿನ ಸಿದ್ಧ ಪುಲ್ಲಿಪಾನಿ ಇನ್ನೂ ಮುಂತಾದ ಹಲವಾರು ವಿದ್ವಾಂಸರು ನಮಗೆ ನೀಡಿರುವ ಜ್ಯೋತಿಷ್ಯ ಜ್ಞಾನ ಭಂಡಾರ ಅಪಾರವಾಗಿದ್ದು ಅದು ನಮ್ಮ ಅತ್ಯಮೂಲ್ಯ ಆಸ್ತಿ ಯಾಗಿದೆ. ಇತ್ತೀಚಿಗೆ ಅಂದರೆ ಕಳೆದ ನೂರು ವರ್ಷಗಳಲ್ಲಿ ಪ್ರೊ’ ಬಿ ಸೂರ್ಯನಾರಾಣರಾವ್ ಮತ್ತು ಅವರ ಮೊಮ್ಮಗ ಅಂತರರಾಷ್ತ್ಟ್ರೀಯ ಖ್ಯಾತಿಯ ಡಾ ಬಿ ವಿ ರಾಮನ್ ಇವರು, ಈ ನಮ್ಮ ಆಸ್ತಿಯನ್ನು ಉಳಿಸಲು ಮಾಡಿದ ಪ್ರಯತ್ನದ ಫಲ ಹಲವಾರು ಪುರಾತನ ಗ್ರಂಥಗಳು ಭಾಷಾಂತರಗೊಂಡಿದ್ದೇ ಅಲ್ಲದೆ ಭಾರತದ ಜ್ಯೋತಿಷ್ಯದ ಬಗ್ಗೆ ಪಾಶ್ಚಾತ್ಯರ ಕಣ್ಣು ತೆರೆಸಿತು.

ನಕ್ಷತ್ರಗಳನ್ನು ಆಧರಿಸಿ, ಪ್ರಾಚೀನ ಜ್ಯೋತಿಷ್ಯದ ತತ್ವಗಳಿಗೆ ಚ್ಯುತಿ ಬರದಂತೆ ಕೃಷ್ಣಮೂರ್ತಿ ಪದ್ಧತಿಯನ್ನು ಪ್ರಸಿದ್ಧಿ ಪಡಿಸಿದ ಕೀರ್ತಿ ತಮಿಳು ನಾಡಿನ ಶ್ರೀ ಕೃಷ್ಣಮೂರ್ತಿಯವರಿಗೆ ಸಲ್ಲುತ್ತದೆ. ಈ ಪದ್ಧತಿಯ ಉಪಯೋಗ ನನಗೆ ತಿಳಿದಂತೆ ಪ್ರಶ್ನ ಜ್ಯ್ಯೋತಿಷ್ಯ ದಲ್ಲಿ ಹೆಚ್ಚು ಉಪಯೋಗವಾಗಿದೆ.
ನಾವು ಯಾರೆಲ್ಲಾ ನಮ್ಮ ಪಾರಂಪಾರಿಕ ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ನಂಬಿಕೆ ಹೊಂದಿದ್ದೇವೆಯೋ ಅವರೆಲ್ಲರೂ ಫಲ ಜ್ಯೋತಿಷ್ಯದ ಮೂಲಭೂತ ಅಂಶಗಳನ್ನಾದರೂ ತಿಳಿದಿರಬೇಕು ಎನ್ನುವುದು ನನ್ನ ಅನಿಸಿಕೆ.
ನನ್ನ ಹತ್ತನೆಯ ವಯಸ್ಸಿನಲ್ಲಿ ಈ ಶಾಸ್ತ್ರದ ಕಲಿಯುವಿಕೆಯನ್ನು ಆರಂಭಿಸಿದ ನಾನು ಇನ್ನೂ ಕಲಿಯುತ್ತಲೇ ಇದ್ದೇನೆ. ಜ್ಯೋತಿಷ್ಯ ಒಂದು ಮಹಾ ಸಾಗರ ಕಲಿಯುವಿಕೆಗೆ ಕೊನೆಯೇ ಇಲ್ಲಾ. ಒಬ್ಬ ವಕೀಲ, ಒಬ್ಬ ವೈದ್ಯ ಹೇಗೆ ತನ್ನ ಜೀವಮಾನವೆಲ್ಲವನ್ನು ಕಲಿಯುತ್ತಲೇ ಸವೆಸುತ್ತಾನೋ ಹಾಗೆಯೇ ಜ್ಯೋತಿಷ್ಯ ಕಲಿಯುವಿಕೆಯೂ ಜೀವನ ಪೂರ್ತಿ ಮುಂದುವರೆಯುತ್ತಲೇ ಇರುತ್ತ್ತದೆ.

ಇಷ್ಟಾದರೂ ನಾನು ವೃತ್ತಿನಿರತ ಜ್ಯೋತಿಷಿ ಅಲ್ಲಾ ಎಂಬುದನ್ನು ಈ
ಜ್ಯೋತಿಷ್ಯ ಶಾಸ್ತ್ರ ನನ್ನ ಆಸಕ್ತಿ ಮಾತ್ರ ಅಷ್ಟೆ.
ಇತ್ತೀಚಿನ ದಿನಗಳಲ್ಲಿ ಹೊಸ ತಲೆಮಾರಿನ ಯುವ ಜ್ಯೋತಿಷ್ಯರು ಇದ್ದಕ್ಕಿದ್ದಂತೆ ಎಲ್ಲಿಂದಲೋ ಪ್ರತ್ಯಕ್ಷರಾಗಿಬಿಡುತಿದ್ದಾರೆ. ಅವರ ಪ್ರಸಾದನ, ವೇಷಭೂಷಣ,ಗಳ ಮೂಲಕ ಜನರನ್ನು ಮರುಳುಗೊಳಿಸುತ್ತಿರುವುದು ಆಘಾತಕಾರಿ ಎನಿಸುತ್ತಿದೆ.ಇದರಿಂದ ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ನಂಬಿಕೆ ಕಳೆದುಕೊಳ್ಳುವುದೇ ಅಲ್ಲದೆ ಶಾಸ್ತ್ರವೇ ಅಪಹಾಸ್ಯಕ್ಕೆ ಗುರಿಯಾಗುವ ಹಂತ ತಲುಪಿದೆ. ಇದಕ್ಕೂ ಮಿಗಿಲಾಗಿ, ಜಾತಕದಲ್ಲಿನ ದೋಷಗಳ ಬಗ್ಗೆ ಜನರನ್ನು ಹೆದರಿಸಿ ಅದಕ್ಕೆ ದುಬಾರಿ ಪರಿಹಾರಗಳನ್ನು ಸೂಚಿಸುವ ನೆಪದಲ್ಲಿ ಅಪಾರ ಹಣವನ್ನು ಸುಲಿಯುತ್ತಿದ್ದಾರೆ.
ಜಾತಕದಲ್ಲಿರಬಹುದಾದ ದೋಷಗಳಿಗೆ ಸುಲಭವಾದ ಪರಿಹಾರ ಸೂಚಿಸಿದಾಗ, ಇಷ್ಟು ಪರಿಹಾರ ಸಾಕೇ ಇನ್ನೂ ಏನಾದರೂ ಹೆಚ್ಚಿಗೆ ಮಾಡಬೇಕಾದರೆ ಮಾಡುತ್ತೇವೆ ಎಂದು ಹೇಳುವಷ್ಟರ ಮಟ್ಟಿಗೆ ಸಾಮಾನ್ಯ ಜನಗಳ ಮನದಲ್ಲಿ ದುಬಾರಿ ಪರಿಹಾರದ ಭೂತವನ್ನು ಆವಾಹಿಸಿದ್ದಾಗಿದೆ.
ಇಂತಹ ಪರಿಸ್ಥಿತಿ ಮುಂದುವರೆಯುವುದನ್ನು ತಡೆಯಲು ನಾನು ಕಂಡುಕೊಂಡ ಮಾರ್ಗ ವೆಂದರೆ, ಸಾಮಾನ್ಯ ಜನರೂ ಸಹಾ ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಸ್ವಲ್ಪ ವಾದರೂ ಜ್ಞಾನವನ್ನು ಪಡೆದುಕೊಳ್ಳಲು ಸಾಧ್ಯವಾಗುವಂತೆ ಮಾಡುವುದಕ್ಕಾಗಿ ಜ್ಯೋತಿಷ್ಯದ ಪಾಠಗಳನ್ನು ನನ್ನ ಬ್ಲಾಗ್ ನಲ್ಲಿ ಬರಯವುದು ಮತ್ತು ಯೂಟ್ಯೂಬ್ ವಿಡಿಯೋ ಮೂಲಕವೂ ನಿಮ್ಮನ್ನು ತಲುಪುವುದು.

ವಾರದಲ್ಲಿ ಮೂರು ಪಾಠಗಳು – ಸೋಮವಾರ, ಬುಧವಾರ ಮತ್ತು ಶುಕ್ರವಾರ.

ಈ ಪಾಠಗಳನ್ನು ಓದಲು ಅಥವಾ ಯುಟ್ಯೂಬ್ ನಲ್ಲಿ ನೋಡಲೂ ಯಾವುದೇ ಶುಲ್ಕ ವಿಲ್ಲಾ. ಈ ಬ್ಲಾಗ್ ಗೆ (http://atmanandanatha.com) ಮತ್ತು ಯೂಟ್ಯೂಬ್ ಚಾನಲ್ (https://www.youtube.com/user/jsdpani) ಗೆ ಸಬ್ಸ್ಕ್ರೈಬ್ ( subscribe) ಮಾಡಿದರೆ ಪಾಠಗಳು ನಾನು ಬರೆದ ಕೂಡಲೇ ನಿಮಗೆ ಮಾಹಿತಿ ಸಿಗುತ್ತದೆ.

ಧನ್ಯವಾದಗಳು.

ಆತ್ಮಾನಂದನಾಥ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: