ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
ಯೋಗಿನೀ ಹೃದಯವು ಶ್ರೀ ವಿದ್ಯೆಗೆ, ಮಂತ್ರಾರ್ಥ, ಭಾವಾರ್ಥ, ಸಂಪ್ರದಾಯಾರ್ಥ, ನಿಗರ್ಭಾರ್ಥ ಕೌಳಿಕಾರ್ಥ, ಸರ್ವ ರಹಸ್ಯಾರ್ಥ, ಮತ್ತು ಮಹಾತತ್ವಾರ್ಥ ಎಂಬ ಏಳು ಅರ್ಥಗಳನ್ನು ಮಾತ್ರ ನೀಡಿದ್ದು, ಶ್ರೀ ಭಾಸ್ಕರಮಖಿನ್ ಅವರು ತಮ್ಮ ವರಿವಸ್ಯ ರಹಸ್ಯದಲ್ಲಿ, ಮಂತ್ರದ ಹದಿನೈದು ಅಕ್ಷರಗಳಿಗೆ ಒಂದೊಂದು ಅರ್ಥದಂತೆ ಹದಿನೈದು ಅರ್ಥಗಳನ್ನು ನೀಡಿದ್ದಾರೆ.
ವರಿವಸ್ಯಾ ರಹಸ್ಯದ ಎರಡನೇ ಅಧ್ಯಾಯದ 108 ಮತ್ತು109 ನೆಯ ಶ್ಲೋಕಗಳು ಮತ್ತು ಯೋಗಿನೀ ಹೃದಯದ 73 ಮತ್ತು 74 ನೆಯ ಶ್ಲೋಕಗಳು ಶ್ರೀ ವಿದ್ಯೆಯ ಮಹಾತತ್ವಾರ್ಥ ವನ್ನು ನೀಡಿವೆ
ಯಾವುದನ್ನು ಪದಗಳಿಂದ ವರ್ಣಿಸಲು ಅಸಾಧ್ಯವೋ, ಯಾವುದು ಮನಸ್ಸು ಮತ್ತು ಇತರ ಇಂದ್ರಿಯಗಳ ಮೂಲಕ ಗ್ರಹಿಸಲು ಅಸಾಧ್ಯವಾದುದೋ , ಯಾವುದು ಮೂವತ್ತಾರು ತತ್ವಗಳಿಗೂ ಮೀರಿದ್ದಾಗಿದೆಯೋ, ಯಾವು ಅತಿ ದೊಡ್ಡವಸ್ತುವಿಗಿಂತ ದೊಡ್ಡದಾಗಿಯೂ, ಅತಿ ಚಿಕ್ಕ ವಸ್ತುವಿಗಿಂತ ಚಿಕ್ಕದಾಗಿದೆಯೋ , ಯಾವುದು ಆಕಾಶಕ್ಕಿಂತಲೂ ಮೇಲೆ ಇದೆಯೋ, ಯಾವುದನ್ನು ಬ್ರಹ್ಮಾಂಡ ದೊಂದಿಗೆ ಗುರುತಿಸಲ್ಪಡುವುದೋ, ಯಾವುದು ಅತ್ಯಂತ ಸೂಕ್ಷವಾದ ಸತ್ -ಚಿತ್ ಮತ್ತು ಆನಂದ ಸ್ವರೂಪವನ್ನು ಹೊಂದಿದೆಯೋ ಅಂತಹ ಪರವಸ್ತುವಿನೊಂದಿಗೆ ತನ್ನನ್ನು ತಾನು ಗುರುತಿಸಿಕೊಳ್ಳಲು, ಆ ಪರವಸ್ತುವನ್ನು ಕೇಂದ್ರೀಕರಿಸಿ ಧ್ಯಾನಾಸಕ್ತ ನಾಗುವುದೇ ಶ್ರೀವಿದ್ಯೆಯ ಮಹಾತತ್ವಾರ್ಥವಾಗಿದೆ.
ಯಾವುದು ನಿಷ್ಕಲವೋ ಯಾವುದನ್ನು ವಿಭಜಿಸಲು ಅಸಾಧ್ಯವೋ, ಯಾವುದು ಅತಿ ದೊಡ್ಡದಕ್ಕಿಂತ ದೊಡ್ಡದೋ, ಅತಿ ಚಿಕ್ಕದಕ್ಕಿಂತ ಚಿಕ್ಕದೋ ಆದರೂ ಕಣ್ಣ್ಣಿಗೆ ಕಾಣಲು ಸಾಧ್ಯವಿಲ್ಲವೋ, ಯಾವುದು ಆಕಾಶಕ್ಕೆ ಕಾರಣವಾಗಿದೆಯೋ, ಯಾವುದು ಅವಿನಾಶಿಯೋ, ಹಾಗಾಗಿ ಶಾಶ್ವತವೋ ಮತ್ತು ಬ್ರ ಹ್ಮಾಂಡ ವೆಲ್ಲವನ್ನು ವ್ಯಾಪಿಸಿದೆಯೋ ಯಾವುದು ಬೆಳಕಿಗೇ ಬೆಳಕಾಗಿ ಕಾಂತಿಗೇ ಕಾಂತಿಯಾಗಿದೆಯೋ ಅದು ಸಚ್ಚಿದಾನಂದ ಸ್ವರೂಪವಾದ ಬ್ರಹ್ಮನ್. ಅಂತಹ ಪರವಸ್ತುವಿನೊಂದಿಗೆ ತನ್ನನ್ನು ತಾನು ಗುರುತಿಸಿಕೊಳ್ಳಲು, ಆ ಪರವಸ್ತುವನ್ನು ಕೇಂದ್ರೀಕರಿಸಿ ಧ್ಯಾನಾಸಕ್ತ ನಾಗುವುದೇ ಶ್ರೀವಿದ್ಯೆಯ ಮಹಾತತ್ವಾರ್ಥವಾಗಿದೆ.
ಶ್ರೀ ವಿದ್ಯಾ ಪಂಚದಶೀ ಮಂತ್ರದ 7 ಅರ್ಥಗಳ ಲಿಂಕನ್ನು ಸಹಾ ಇಲ್ಲಿ ಕೊಟ್ಟಿದ್ದೇನೆ:
ಮೊದಲನೇ ಅರ್ಥ – “ಗಾಯತ್ರಿ”
ಎರಡನೇ ಅರ್ಥ- “ಭಾವಾರ್ಥ”
ಮೂರನೇ ಅರ್ಥ- “ಸಂಪ್ರದಾಯಾರ್ಥ”
ನಾಲ್ಕನೇ ಅರ್ಥ- “ನಿಗರ್ಭ ಅರ್ಥ”
ಐದನೇ ಅರ್ಥ- “ಕೌಲಿಕಾರ್ಥ”
ಆರನೇ ಅರ್ಥ – “ಸರ್ವರಹಸ್ಯಾರ್ಥ”
ಏಳನೆಯ ಅರ್ಥ – ” ಮಹಾತತ್ವಾರ್ಥ”
ಲೋಕಾ ಸಮಸ್ತಾ ಸುಖಿನೋ ಭವಂತು
Pingback: ಶ್ರೀ ವಿದ್ಯಾ ಪಂಚದಶೀ ಮಂತ್ರದ 7 ಅರ್ಥಗಳು: ಆರನೇ ಅರ್ಥ – “ಸರ್ವರಹಸ್ಯಾರ್ಥ” | Atmanandanatha
Pingback: ಶ್ರೀ ವಿದ್ಯಾ ಪಂಚದಶೀ ಮಂತ್ರದ 7 ಅರ್ಥಗಳು: ಐದನೇ ಅರ್ಥ- “ಕೌಲಿಕಾರ್ಥ” | Atmanandanatha
Pingback: ಶ್ರೀ ವಿದ್ಯಾ ಪಂಚದಶೀ ಮಂತ್ರದ 7 ಅರ್ಥಗಳು: ಮೊದಲನೇ ಅರ್ಥ – “ಗಾಯತ್ರಿ” | Atmanandanatha
Pingback: ಶ್ರೀ ವಿದ್ಯಾ ಪಂಚದಶೀ ಮಂತ್ರದ 7 ಅರ್ಥಗಳು: ನಾಲ್ಕನೇ ಅರ್ಥ- “ನಿಗರ್ಭ ಅರ್ಥ” | Atmanandanatha
Pingback: ಶ್ರೀ ವಿದ್ಯಾ ಪಂಚದಶೀ ಮಂತ್ರದ 7 ಅರ್ಥಗಳು: ಮೂರನೇ ಅರ್ಥ- “ಸಂಪ್ರದಾಯಾರ್ಥ” | Atmanandanatha
Pingback: ಶ್ರೀ ವಿದ್ಯಾ ಪಂಚದಶೀ ಮಂತ್ರದ 7 ಅರ್ಥಗಳು: ಎರಡನೇ ಅರ್ಥ- “ಭಾವಾರ್ಥ” | Atmanandanatha