ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
ಷೋಡಶೀ ಸಹಸ್ರನಾಮ ಸ್ತೋತ್ರ ಇದನ್ನು ಶ್ರೀ ಮಹಾತ್ರಿಪುರಸುಂದರೀ ಸಹಸ್ರನಾಮ ಸ್ತೋತ್ರ / ತ್ರಿಪುರಸುಂದರೀ ಸಹಸ್ರನಾಮ ಸ್ತೋತ್ರವೆಂದು ಸಹಾ ಹೇಳಲಾಗುತ್ತದೆ.
ಈ ಸಹಸ್ರನಾಮ ಸ್ತೋತ್ರವನ್ನು ಈಶ್ವರನು ತನ್ನ ಮಗ ಕಾರ್ತಿಕೇಯನಿಗೆ ಹೇಳಿದ್ದಾಗಿ ವಾಮಕೇಶ್ವರ ತಂತ್ರ ಉಲ್ಲೇಖಿಸುತ್ತದೆ. ಸ್ತೋತ್ರದ ಫಲಶೃತಿಯಲ್ಲಿ “ಕೀಟವತ್ಪ್ರಪಲಾಯನ್ತೇ ತಸ್ಯ ವಕ್ತ್ರಾವಲೋಕನಾತ್” ಎಂದು ಹೇಳಿದ್ದು, ಎಲ್ಲಾ ಕೀಟಗಳು ದೇವಿಯ ಈ ಸಹಸ್ರನಾಮ ಸ್ತೋತ್ರವನ್ನು ಪಠಿಸುತ್ತಿರುವವರ ಮುಖ ದರ್ಶನ ಮಾತ್ರದಿಂದ ಅವು ಓಡಿ ಹೋಗುತ್ತವೆ ಎಂದು ಅರ್ಥವಾಗುತ್ತದೆ.
ಮಹಾಮಾರಿಯು ವಿಶ್ವವನ್ನೇ ವ್ಯಾಪಿಸಿರುವಾಗ ಈ ಸ್ತೋತ್ರ ಪ್ರಯೋಜನಕಾರಿ ಆಗಬಹುದು.
ಈ ಸ್ತೋತ್ರದ ಕನ್ನಡ ಲಿಪ್ಯಂತರ ಪಾಠ ಮತ್ತು ದೇವನಾಗರಿಯ ಪಾಠವನ್ನೂ ಇಲ್ಲಿ ಲಗತ್ತಿಸಿದ್ದು ಲಿಪ್ಯಂತರದಲ್ಲಿ ಕಣ್ತಪ್ಪಿನಿಂದ ಆಗಿರುವ ತಪ್ಪುಗಳನ್ನು ಸರಿಮಾಡಿಕೊಳ್ಳಬಹುದಾಗಿದೆ
ಈ ಸ್ತೋತ್ರವನ್ನು ಪಠಿಸಿರುವ ಯೂಟ್ಯೂಬ್ ಕೊಂಡಿಯನ್ನು ಸಹಾ ಇಲ್ಲಿ ನೀಡಲಾಗಿದೆ.
Shodashi Sahasranama stotra Vamakeshwara tantra
Shodashi Sahasranama Stotra DEvanagari