ಸೌಂದರ್ಯ ಲಹರಿಯ 34 ನೇ ಮಂತ್ರಕ್ಕೆ ವಿವರಣೆ Soundarya Lahari Verse #34 explained


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ
ಶ್ರೀ ಪರಮೇಷ್ಠಿ ಗುರುಭ್ಯೋ ನಮಃ

ಶರೀರಂ ತ್ವಂ ಶಮ್ಭೋಃ ಶಶಿಮಿಹಿರವಕ್ಷೋರುಹಯುಗಂ
ತವಾತ್ಮಾನಂ ಮನ್ಯೇ ಭಗವತಿ ನವಾತ್ಮಾನಮನಘಮ್ ।
ಅತಶ್ಶೇಷಶ್ಶೇಷೀತ್ಯಯಮುಭಯಸಾಧಾರಣತಯಾ
ಸ್ಥಿತಃ ಸಂಬನ್ಧೋ ವಾಂ ಸಮರಸಪರಾನನ್ದಪರಯೋಃ ॥ 34॥

ಓ ಭಗವತೀ ನಿನ್ನ ಶರೀರವು ಶಂಭುವೇ ಆಗಿದೆ ಎಂದು ನನಗೆ ಅರಿವಾಗಿದೆ, ಸೂರ್ಯ ಮತ್ತು ಚಂದ್ರರು ನಿನ್ನ ಸ್ತನಗಳಾಗಿವೆ. ಶುದ್ಧ ಆತ್ಮವು ಒಂಭತ್ತು ಪ್ರಧಾನ ಮತ್ತು ಅನುಬಂಧಗಳ ಅಭಿವ್ಯಕ್ತವಾಗಿದೆ. ಈ ಅಭಿವ್ಯಕ್ತತೆಯು ಅತಿಂದ್ರೀಯ ಆನಂದ ಮತ್ತು ಅತಿಂದ್ರೀಯ ಪ್ರಜ್ಞೆ ಗಳ ಮೂಲಕ ನಿಮ್ಮಿಬ್ಬರಲ್ಲಿ ಸಮತೋಲವನ್ನು ಸಾಧಿಸಿದೆ.
ದೇವಿಯ ಸ್ತನಗಳನ್ನು ಸೂರ್ಯ ಮತ್ತು ಚಂದ್ರ ಎಂಬ ಎರಡು ಆಕಾಶ ಕಾಯಗಳಿಗೆ ಅನ್ವಯಿಸಿಲಾಗಿದ್ದು ಹಾಗೆಯೇ ಈ ಆಕಾಶಕಾಯಗಳು ಶಿವನ ಒಂಭತ್ತು ಕಲೆಗಳ, ಅಂಶಗಳ, ಪೈಕಿ ಒಂದಾದ ಕಾಲವನ್ನು ಸೂಚಿಸುತ್ತಿವೆ. ಯಾವುದೇ ನ್ಯೂನತೆಯಿಲ್ಲದ ನಿನ್ನ ಶರೀರವು ನಿನ್ನದೇ ಅಂಶಗಳಾದ ನವಯೋನಿಗಳಿಂದ ಕೂಡಿರುವ ಶ್ರೀ ಚಕ್ರವಲ್ಲದೆ ಬೇರೇನೂ ಅಲ್ಲಾ . ನವಾತ್ಮನ್- ಶಂಭುವು ಕಲಾ ಅಥವಾ ಮಾತೃಕಾ, ಕುಲ, ನಾಮ, ಜ್ಞಾನ, ಚಿತ್ತ, ನಾದ, ಬಿಂದು, ಕಾಲ ಮತ್ತು ಜೀವ ಎಂಬ ಗುಣಲಕ್ಷಣಗಳನ್ನು ಹೊಂದಿದ್ದಾನೆ.

ಕಲಾ ಅಥವಾ ಮಾತೃಕೆಗಳು ಎಂದರೆ, ಅಕ್ಷರ ಮಾಲೆ, ಕುಲ ಎನ್ನುವುದು ಬಿಳಿ ನೀಲಿ ಬಣ್ಣವಲ್ಲದೆ ಎಲ್ಲಾ ಬಣ್ಣಗಳನ್ನು ಸೂಚಿಸುತ್ತದೆ. ನಾಮ ಎನ್ನುವುದು ಹೆಸರನ್ನು ಸೂಚಿಸಿದರೆ, ಜ್ಞಾನವು ಮೂರ್ತ ಮತ್ತು ಅಮೂರ್ತ ಜ್ಞಾನವನ್ನೂ , ಚಿತ್ತವು, ವ್ಯಕ್ತಿಯ ಪ್ರಜ್ಞೆಯನ್ನೂ, ನಾದವು, ಪರಾ , ಪಶ್ಯಂತಿ ಮಧ್ಯಮಾ ಮತ್ತು ವೈಖರೀ ಹಂತಗಳಲ್ಲಿನ ಶಬ್ದ ತರಂಗಗಳನ್ನೂ ಸೂಚಿಸುತ್ತವೆ. ಲಲಿತಾ ಸಹಸ್ರನಾಮದಲ್ಲ್ಲಿನ ಪರಾ ಪ್ರತ್ಯಕ್ಚಿತೀ ರೂಪಾ ಪಶ್ಯಂತೀ ಪರದೇವತಾ ಮಧ್ಯಮಾ ವೈಖರೀ ರೂಪಾ ಭಕ್ತ ಮಾನಸ ಹಂಸಿಕಾ ಎಂಬ ನಾಮಗಳು
ಶಬ್ದದ ನಾಲ್ಕು ಹಂತಗಳನ್ನು ಸೂಚಿಸಿವೆ. ಬಿಂದು ಎನ್ನುವುದು ಬೀಜಕಣ, ನ್ಯೂಕ್ಲಿಯಸ್ ಆದರೆ, ಕಾಲ ಎನ್ನುವುದು ಕಣ್ಣು ಮಿಟುಕಿಸಲು ತಗಲುವ ಸಮಯದಿಂದ ಹಿಡಿದು ಕಾಲದ ಅನಂತತೆಯವರೆಗೂ ಇರುವ ಸಮಯದ ಅಳತೆಯನ್ನು, ಜೀವ ಎಂದರೆ ಎಲ್ಲವನ್ನು ಅನುಭವಿಸುವ ಜೀವಾತ್ಮನನ್ನು ಸೂಚಿಸುತ್ತಿದೆ
ದೇವಿಯು ಸಹಾ ಒಂಭತ್ತು ವ್ಯೂಹಗಳು ಎಂದು ಕರೆಯಲಾಗುವ ಗುಣಲಕ್ಷಣಗಳನ್ನು ಹೊಂದಿದ್ದಾಳೆ. ವಾಮಾ ಎಂದರೆ, ಎಡಗಡೆಯ ಶರೀರ, ಜ್ಯೇಷ್ಠಾ, ಸರ್ವೋಚ್ಛವಾದ್ದು, ರೌದ್ರೀ ಎಚ್ಚರವಾಗಿರುವಂತಹದ್ದು, ಅಂಬಿಕಾ, ಎಲ್ಲರ ಮಾತೆ, ಇಚ್ಛಾ, ಆಸೆ, ಜ್ಞಾನ, ಕ್ರಿಯಾ, ಶಾಂತತೆ, ಮತ್ತು ಪರಾ
ಸರ್ವೋಚ್ಚವಾದ್ದು ಮತ್ತು ಅತಿಂದ್ರೀಯವಾದ್ದು. ಹೀಗೆ ಶಂಭು ಮತ್ತು ದೇವಿಯರ ಗುಣಲಕ್ಷಣ ಗಳಲ್ಲಿ ಸಾಮ್ಯತೆಯನ್ನು ಹೇಳಿದೆ. ಅತೀಂದ್ರಿಯ ಆನಂದ ಮತ್ತು ಅತಿಂದ್ರೀಯ ಪ್ರಜ್ಞೆಯು ಇಬ್ಬರಲ್ಲಿ ಸಮತೋಲನವನ್ನು ಸಾಧಿಸಿದೆ.
ಶಿವ ಮತ್ತು ಶಕ್ತಿಗಳಲ್ಲಿ ಸಮಾನತೆಯು ಐದು ಬಗೆಯಾಗಿದೆ :-

ಕ್ರಿಯೆಯಲ್ಲಿ, ಅನುಷ್ಠಾನ ಸಮಯ. ಸ್ಥಾನ ಮತ್ತು ಸ್ಥಿತಿಯಲ್ಲಿ, ಅಧಿಷ್ಠಾನ ಸಮಯ, ಅವಸ್ಥೆಯಲ್ಲಿ, ಅವಸ್ಥಾನ ಸಮಯ, ಹೆಸರಿನಲ್ಲಿ, ನಾಮ ಸಮಯ ಮತ್ತು ರೂಪದಲ್ಲಿ, ರೂಪ ಸಮಯ.

ದೇವಿಯ ಸರ್ವೋಚ್ಚ ಬ್ರಹಾಂಡದ ಶಕ್ತಿ ಮತ್ತು ಶಿವನ ಸರ್ವೋಚ್ಚ ಬ್ರಹಾಂಡದ ಪ್ರಜ್ಞೆ ಇವುಗಳ ಸಮಾನತೆಯೇ ಸ್ಪಂದನ. ಈ ಸ್ಪಂದನೆಯು ಸಹಾ ಒಂದೇ ಬಗೆಯ ತರಂಗಾಂತರಗಳನ್ನು ಸೃಷ್ಟಿಸಿ ಹದಿನಾರು ಕಲೆಗಳನ್ನು ಅಂದರೆ ಅಂಶಗಳನ್ನು ಹೊರಸೂಸುತ್ತವೆ.
ಈ ಹಿಂದೆ ಹೇಳಿದ ಶಕ್ತಿಯ ೯ ಅಂಶಗಳು ಬ್ರಹ್ಮಾಂಡದಲ್ಲಿ ಪ್ರಕಟವಾದರೆ, ಶಿವನ ೯ ಅಂಶಗಳು ಸಹಾ ಬ್ರಹ್ಮಾಂಡದಲ್ಲಿ ಪ್ರಕಟವಾಗುತ್ತವೆ ಹಾಗಾಗಿ ಒಬ್ಬರನ್ನೊಬ್ಬರು ಜಡೆಯಂತೆ ಹೆಣೆದುಕೊಂಡಿದ್ದಾರೆ. ಶಿವ ಶಕ್ತಿಯರು ಒಂದೇ ನಾಣ್ಯದ ಎರಡು ಮುಖ ಅಷ್ಟೇ . ಇವರಿಬ್ಬರ ಆದರೆ ಒಂದೇ ಆಗಿರುವ ೯ ಅಂಶಗಳನ್ನು ಬ್ರಹ್ಮಾಂಡವು ಸೇರಿದಂತೆ ಅಲ್ಲಿಯ ಎಲ್ಲ ಸೃಷ್ಟಿಯೂ ಅನುವಂಶಿಕವಾಗಿ ಪಡೆಯುತ್ತವೆ ಏಕೆಂದರೆ ಈ ಒಂಭತ್ತು ಅಂಶಗಳೇ ಬ್ರಹ್ಮಾಂಡದ ಮೂಲ.

ವೇದ ಮತ್ತು ಪುರಾಣಗಳಲ್ಲಿ ಶಿವನ ನೇತ್ರಗಳನ್ನು ಸೂರ್ಯ, ಚಂದ್ರ ಮತ್ತು ಅಗ್ನಿ ಎಂದು ಹೇಳಲಾಗಿದ್ದು ಅವನು ವಿರಾಟ್ ಪುರುಷನಾಗಿ ಎಲ್ಲ ವಿದ್ಯಮಾನಗಳಿಗೂ ಸಾಕ್ಷಿಯಾಗಿದ್ದು, ಅವನ ನೇತ್ರಗಳು ಶಿವನು ದೃಷ್ಟ ಎಂಬುದನ್ನು ಸೂಚಿಸುತ್ತವೆ.

ಶಕ್ತಿಯು ಪರಾಪ್ರಕೃತಿ, ಬ್ರಹ್ಮಾಂಡವನ್ನು ಸೃಷ್ಟಿಸುವವಳಾಗಿದ್ದಾಳೆ. ಆಕೆಯ ಸ್ತನಗಳಾದ ಸೂರ್ಯನು ಪ್ರಾಣ ಶಕ್ತಿಯನ್ನು ಸೂಚಿಸಿದರೆ ಚಂದ್ರನು ಇಡೀ ಬ್ರಹ್ಮಾಂಡವನ್ನು ಪೋಷಿಸುತ್ತಾನೆ, ಆರೈಕೆ ಮಾಡುತ್ತಾನೆ ಎಂಬುದನ್ನು ಸೂಚಿಸುತ್ತದೆ.
ಈ ಮಂತ್ರದ ಮೂಲಕ ದೇವಿಯಲ್ಲಿ ಅಂದರೆ, ಬ್ರಹ್ಮಾಂಡದ ಸರ್ವೋಚ್ಛ ಶಕ್ತಿಯಲ್ಲಿ ಧ್ಯಾನಾಸಕ್ತರಾದರೂ ಅಲ್ಲಿ ಶಿವನನ್ನು ಸಹಾ ಸೇರಿಸಲಾಗಿದೆ, ಏಕೆಂದರೆ, ದೇವಿಯನ್ನು ಶಿವನ ಶರೀರವೆಂದೇ ಹೇಳಲಾಗಿದೆ. ಶಕ್ತಿಯು ಶಿವನ ಬೆಂಬಲ , ಆಸರೆ, ಆಗಿರುವುದರಿಂದ ಇವರಿಬ್ಬರನ್ನು ಬೇರ್ಪಡಿಸಲಾಗದು. ಭಗವಾನ್ ಶಂಕರರು ಸೌಂದರ್ಯ ಲಹರಿಯ ಮೊದಲನೇ ಮಂತ್ರವನ್ನು ಆರಂಭ ಮಾಡಿರುವುದೇ ‘ ಶಿವ ಶಕ್ತ್ಯಾ ಯುಕ್ತೋ ಇತಿ ಭವತಿ ಶಕ್ತಃ” ಎಂಬ ವಾಕ್ಯದಿಂದ ಎಂಬುದನ್ನು ಗಮನಿಸಬೇಕು.
ಪರಾಶಕ್ತಿಯ ಪಂಚದಶೀ ಮಂತ್ರದ ಮೊದಲನೇ ಕೂಟ ಅಂದರೆ ಮೊದಲ ಗುಂಪು ವಾಗ್ಭವ ಕೂಟವೆಂದು ಕರೆಸಿಕೊಂಡಿದ್ದು ಇಲ್ಲಿ ದೇವಿಯ ಕಣ್ಣುಗಳನ್ನು ಸೂರ್ಯ ಚಂದ್ರರೆಂದು ಭಾವಿಸಿ, ಶಿರದಿಂದ ಕಂಠದ ಭಾಗವನ್ನು ಧ್ಯಾನಿಸಲಾಗುತ್ತದೆ. ಹಾಗೆಯೇ ಎರಡನೇ ಕೂಟವು ಕಾಮಕಲಾ ಕೂಟ ಅಥವಾ ಮಧ್ಯಕೂಟವೆಂದು ಕರೆಸಿಕೊಂಡಿದ್ದು ದೇವಿಯ ಸ್ತನಗಳನ್ನೂ ಸೇರಿಸಿ ಕಂಠದಿಂದ ಕಟಿಯವರೆಗಿನ ಭಾಗವನ್ನು ಧ್ಯಾನಿಸಲಾಗುತ್ತದೆ.. ” “ವಾಗ್ಭವ ಕೂಟೈಕ ಸ್ವರೂಪ ಮುಖ ಪಂಕಜಾ” ‘ ಕಂಠಾಧಃ ಕಟಿಪರ್ಯಂತ ಮಧ್ಯ ಕೂಟ ಸ್ವರೂಪಿಣಿ” ಎಂದಿದೆ ಲಲಿತಾ ಸಹಸ್ರನಾಮ.
ಶಿವ ಮತ್ತು ಶಕ್ತಿ ಒಂದು ದೇಹವಾಗಿದ್ದಾರೆ ಹಾಗೂ ಬೇರೆ ಬೇರೆ ಯಾಗಿ ತೋರುವುದಿಲ್ಲಾ ಎಂಬುದನ್ನು “ಶರೀರಂ ತ್ವಂ ಶಂಭೋ” ಎಂದು ಈ ಮಂತ್ರದಲ್ಲಿ ಸ್ಪಷ್ಟವಾಗಿ ಹೇಳಿದೆ.

” ಸಮರಸಪರಾನಂದ ಪರಯೋಃ” ಇದನ್ನು ಮತ್ತೊಮ್ಮೆ ಧೃಢೀ ಕರಿಸುತ್ತಿದೆ. ಕುಂಡಲಿನೀ ಶಕ್ತಿಯನ್ನು ಜಾಗೃತಿ ಗೊಳಿಸಿ ಪರಮಾನಂದದ ಅನುಭವ ಪಡೆಯುವುದು ಶಕ್ತಿ ಪಥವಾದರೆ, ಧ್ಯಾನದ ಮೂಲಕ ಜ್ಞಾನವನ್ನು ಹೊಂದುವುದು ಶಿವ ಪಥ. ಇವೆರಡೂ ಒಂದೇ ಆಗಿವೆ.

ಈ ಮಂತ್ರವನ್ನು ಧ್ಯಾನ ಮಾಡುವುದರಿಂದ ಪ್ರತಿಭಾವಂತರಾಗುತ್ತಾರೆ, ಎಲ್ಲಾ ಸಂಶಯಗಳೂ ನಿವಾರಣೆಯಾಗುತ್ತವೆ ಯಲ್ಲದೆ ಸಂಧಿವಾತವು ನಿವಾರಣೆಯಾಗುತ್ತದೆ

ಈ ಮಂತ್ರಕ್ಕೆ ಯಂತ್ರವು ಸಹಾ ಇದ್ದು. ಕೆಳಮುಖ ತ್ರಿಕೋಣದ ಮಧ್ಯೆ ಹ್ರೀಂ ಬೀಜವನ್ನು ಬರೆದು ತ್ರಿಕೋನದ ಬಾಹುಗಳು ಒಂದಕ್ಕೊಂದು ಕೂಡುವ ಮೂರೂ ಮೂಲೆಗಳಲ್ಲಿ ಹೊರಮುಖವಾಗಿ ತ್ರಿಶೂಲವನ್ನು ಬರೆದರೆ ಅದು ಈ ಮಂತ್ರಕ್ಕೆ ಯಂತ್ರವಾಗುತ್ತದೆ.

ಲೋಕಾ ಸಮಸ್ತ್ರಾ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು

ಓಂ ಶಾಂತಿಃ ಶಾಂತಿಃ ಶಾಂತಿಃ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: