ಓಂ ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
ಯಾತುಧಾನ ಎಂಬ ರಾಕ್ಷಸರ ಉಲ್ಲೇಖ ಋಗ್ವೇದದ 7 ನೇ ಮಂಡಲದ ಕಡೆಯ ಸೂಕ್ತ 104 ನೇ ಸೂಕ್ತದ 15 ಮತ್ತು 24 ನೇ ಮಂತ್ರಗಳಲ್ಲೂ, 10 ನೇ ಮಂಡಲದ 87 ನೇ ಸೂಕ್ತದ 25 ಮಂತ್ರಗಳ ಪೈಕಿ 7 ಮಂತ್ರಗಳ ಹೊರತಾಗಿ ಮಿಕ್ಕ ಎಲ್ಲಾ ಮಂತ್ರಗಳಲ್ಲೂ ಇದೆ. ಅಲ್ಲದೆ ರುದ್ರಾಧ್ಯಾಯ ಎಂದು ಕರೆಸಿಕೊಳ್ಳುವ ಶ್ರೀ ರುದ್ರ ನಮಕದ ಒಂದನೇ ಅನುವಾಕದಲ್ಲಿ, ಅಧ್ಯವೋಚದಧಿವಕ್ತಾ ಪ್ರಥಮೋ ದೈವ್ಯೋ ಭಿಷಕ್ ಅಹೀಗ್ ಶ್ಚ ಸರ್ವಾಂಜಂಭಯನ್ಧ್ಸರ್ವಾಶ್ಚ ಯಾತುಧಾನ್ಯಃ ಎಂಬ ಮಂತ್ರವು ಯಾತುಧಾನರ ಬಗ್ಗೆ ಉಲ್ಲೇಖಿಸಿ ರುದ್ರನನ್ನು ಭಿಷಕ್ ಎಂದರೆ ವೈದ್ಯ ಎಂದು ಸಂಭೋದಿಸಿ ವಿಷಜಂತುಗಳಿಂದ ರಕ್ಷಿಸುವಂತೆ ಪ್ರಾರ್ಥಿಸಲಾಗಿದೆ.
ಯಾತುಧಾನ ಎಂಬ ರಾಕ್ಷಸರು ಮಾನವರ ರಕ್ತ ಮತ್ತು ಮಾಂಸಗಳನ್ನು ಭಕ್ಷಿಸುವ ಮೂಲಕ ಮಾನವರನ್ನು ಹಿಂಸಿಸುವರು ಎಂದು ಅರ್ಥೈಸಲಾಗಿದೆ. ಈ ರಾಕ್ಷಸರು ಮಾನವರನ್ನು ಭಯಂಕರ ರೋಗಗಳಿಂದ ಬಾಧಿಸುತ್ತಾರಲ್ಲದೆ, ಇವರು ಸಂಜೆ ಮತ್ತು ರಾತ್ರಿಗಳಲ್ಲಿ ಹೆಚ್ಚು ಕ್ರಿಯಾಶೀಲರಾಗಿರುತ್ತಾರೆ ಎಂದು ಹೇಳುವ ಮೂಲಕ ಕಡಿಮೆ ಉಷ್ಣಾಂಶದಲ್ಲಿ ಇವರು ಕ್ರಿಯಾಶೀಲರು ಎಂದು ಹೇಳಿದಂತಾಗಿದೆ. ಅಷ್ಟೆ ಅಲ್ಲದೆ ಅಗ್ನಿಯು ಈ ಯಾತುಧಾನರನ್ನು ನಾಶಮಾಡಲು ಶಕ್ತನಾಗಿದ್ದಾನೆ ಎಂದು ಹೇಳಿದ್ದು ಈ ಎಲ್ಲ ಗುಣಗಳು ಭಯಂಕರ ರೋಗಗಳಿಗೆ ಕಾರಣವಾದ ವೈರಸ್ ಗಳಿಗೆ ಸರಿಯಾಗಿ ಹೊಂದುತ್ತದೆ ಎಂಬ ಬಗ್ಗೆ ಯಾವ ಸಂಶಯವೂ ಇಲ್ಲ.
ಅಷ್ಟೆ ಅಲ್ಲದೆ, ರುದ್ರ ನಮಕದ ಮೊದಲನೇ ಅನುವಾಕದ ಪಾರಾಯಣ/ ಶ್ರವಣ ದಿಂದ ದುಷ್ಟಶಕ್ತಿಗಳಿಂದ ಆಗಬಹುದಾದ ತೊಂದರೆಗಳನ್ನು ತಪ್ಪಿಸುವುದಾಗಿಯೂ, ಎಲ್ಲ ರೋಗಗಳ ನಿವಾರಣೆ ಮತ್ತು ಅಪಮೃತ್ಯು ನಿವಾರಣೆಯನ್ನು ಹೇಳಿರುವುದರಿಂದ ರುದ್ರ ನಮಕದ ಮೊದಲನೇ ಅನುವಾಕದ ಪಾರಾಯಣ ದಿಂದ/ ಶ್ರವಣದಿಂದ ಅಥವಾ ಅಧ್ಯವೋಚದಧಿವಕ್ತಾ ಪ್ರಥಮೋ ದೈವ್ಯೋ ಭಿಷಕ್ ಅಹೀಗ್ ಶ್ಚ ಸರ್ವಾಂಜಂಭಯನ್ಧ್ಸರ್ವಾಶ್ಚ ಯಾತುಧಾನ್ಯಃ ಎಂಬ ಮಂತ್ರವನ್ನು ಜಪಮಾಡುವುದರಿಂದ ಈ ವೈರಸ್ ಗಳಿಂದ ಆಗಬಹುದಾದ ತೊಂದರೆಗಳನ್ನು ನಿವಾರಿಸಿ ಕೊಳ್ಳಬಹುದು ಎಂಬ ನನ್ನ ಅನಿಸಿಕೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳ್ಳುತ್ತಾ,
ಋಗ್ವೇದದ 10 ನೇ ಮಂಡಲದ 87 ನೇ ಸೂಕ್ತದ PDF ಅನ್ನು ಇಲ್ಲಿ ಕೊಟ್ಟಿದೆ.
ಜತೆಗೆ ಶ್ರೀ ರುದ್ರ ನಮಕದ 1 ನೇ ಅನುವಾಕದ ಪಾಠ ಮತ್ತು ಯೂಟ್ಯೂಬ್ ವಿಡಿಯೋ ಹಾಗೂ ಅಧ್ಯವೋಚದಧಿವಕ್ತಾ ಪ್ರಥಮೋ ದೈವ್ಯೋ ಭಿಷಕ್ ಅಹೀಗ್ ಶ್ಚ ಸರ್ವಾಂಜಂಭಯನ್ಧ್ಸರ್ವಾಶ್ಚ ಯಾತುಧಾನ್ಯಃ ಎಂಬ ಮಂತ್ರವನ್ನು 108 ಬಾರಿ ಹೇಳಿರುವ ಯೂಟ್ಯೂಬ್ ವಿಡಿಯೋ ಕೊಂಡಿಯನ್ನೂ ಇಲ್ಲಿ ನೀಡಲಾಗಿದೆ.
॥ ಓಂ ನಮೋ ಭಗವತೇ ರುದ್ರಾಯ ॥
ನಮಸ್ತೇ ರುದ್ರಮನ್ಯವ ಉತೋತ ಇಷವೇ ನಮಃ ।
ನಮಸ್ತೇ ಅಸ್ತು ಧನ್ವನೇ ಬಾಹುಭ್ಯಾ-ಮುತ ತೇ ನಮಃ ॥ 1-1॥
ಯಾತ ಇಷುಃ ಶಿವತಮಾ ಶಿವಂ ಬಭೂವ ತೇ ಧನುಃ ।
ಶಿವಾ ಶರವ್ಯಾ ಯಾ ತವ ತಯಾ ನೋ ರುದ್ರ ಮೃಡಯ ॥ 1-2॥
ಯಾ ತೇ ರುದ್ರ ಶಿವಾ ತನೂ-ರಘೋರಾಽಪಾಪಕಾಶಿನೀ ।
ತಯಾ ನಸ್ತನುವಾ ಶನ್ತಮಯಾ ಗಿರಿಶಂತಾಭಿಚಾಕಶೀಹಿ ॥ 1-3॥
ಯಾಮಿಷುಂ ಗಿರಿಶಂತ ಹಸ್ತೇ ಬಿಭರ್ಷ್ಯಸ್ತವೇ ।
ಶಿವಾಂ ಗಿರಿತ್ರ ತಾಂ ಕುರು ಮಾ ಹಿꣳಸೀಃ ಪುರುಷಂ ಜಗತ್ ॥ 1-4॥
ಶಿವೇನ ವಚಸಾ ತ್ವಾ ಗಿರಿಶಾಚ್ಛಾ ವದಾಮಸಿ ।
ಯಥಾ ನಃ ಸರ್ವಮಿಜ್ಜಗದಯಕ್ಷ್ಮಸುಮನಾ ಅಸತ್ ॥ 1-5॥
ಅಧ್ಯವೋಚದಧಿ ವಕ್ತಾ ಪ್ರಥಮೋ ದೈವ್ಯೋ ಭಿಷಕ್ ।
ಅಹೀಶ್ಚ ಸರ್ವಾಂಜಂಭಯನ್ತ್ಸರ್ವಾಶ್ಚ ಯಾತುಧಾನ್ಯಃ ॥ 1-6॥
ಅಸೌ ಯಸ್ತಾಮ್ರೋ ಅರುಣ ಉತ ಬಭ್ರುಃ ಸುಮಂಗಲಃ ।
ಯೇ ಚೇಮಾರುದ್ರಾ ಅಭಿತೋ ದಿಕ್ಷು ।
ಶ್ರಿತಾಃ ಸಹಸ್ರಶೋಽವೈಷಾಹೇಡ ಈಮಹೇ ॥ 1-7॥
ಅಸೌ ಯೋಽವಸರ್ಪತಿ ನೀಲಗ್ರೀವೋ ವಿಲೋಹಿತಃ ।
ಉತೈನಂ ಗೋಪಾ ಅದೃಶನ್ನದೃಶನ್ನುದಹಾರ್ಯಃ ।
ಉತೈನಂ ವಿಶ್ವಾ ಭೂತಾನಿ ಸ ದೃಷ್ಟೋ ಮೃಡಯಾತಿ ನಃ ॥ 1-8॥
ನಮೋ ಅಸ್ತು ನೀಲಗ್ರೀವಾಯ ಸಹಸ್ರಾಕ್ಷಾಯ ಮೀಢುಷೇ ।
ಅಥೋ ಯೇ ಅಸ್ಯ ಸತ್ವಾನೋಽಹಂ ತೇಭ್ಯೋಽಕರನ್ನಮಃ ॥ 1-9॥
ಪ್ರಮುಂಚ ಧನ್ವನಸ್ತ್ವ-ಮುಭಯೋ-ರಾರ್ತ್ನಿಯೋ-ರ್ಜ್ಯಾಮ್ ।
ಯಾಶ್ಚ ತೇ ಹಸ್ತ ಇಷವಃ ಪರಾ ತಾ ಭಗವೋ ವಪ ॥ 1-10॥
ಅವತತ್ಯ ಧನುಸ್ತ್ವ ಸಹಸ್ರಾಕ್ಷ ಶತೇಷುಧೇ ।
ನಿಶೀರ್ಯ ಶಲ್ಯಾನಾಂ ಮುಖಾ ಶಿವೋ ನಃ ಸುಮನಾ ಭವ ॥ 1-11॥
ವಿಜ್ಯಂ ಧನುಃ ಕಪರ್ದಿನೋ ವಿಶಲ್ಯೋ ಬಾಣವಾ ಉತ ।
ಅನೇಶನ್ನಸ್ಯೇಷವ ಆಭುರಸ್ಯ ನಿಷಂಗಥಿಃ ॥ 1-12॥
ಯಾ ತೇ ಹೇತಿ-ರ್ಮೀಢುಷ್ಟಮ ಹಸ್ತೇ ಬಭೂವ ತೇ ಧನುಃ ।
ತಯಾಽಸ್ಮಾನ್ವಿಶ್ವತಸ್ತ್ವ-ಮಯಕ್ಷ್ಮಯಾ ಪರಿಬ್ಭುಜ ॥ 1-13॥
ನಮಸ್ತೇ ಅಸ್ತ್ವಾಯುಧಾಯಾನಾತತಾಯ ಧೃಷ್ಣವೇ ।
ಉಭಾಭ್ಯಾಮುತ ತೇ ನಮೋ ಬಾಹುಭ್ಯಾಂ ತವ ಧನ್ವನೇ ॥ 1-14॥
ಪರಿ ತೇ ಧನ್ವನೋ ಹೇತಿ-ರಸ್ಮಾನ್ವ್ರುಣಕ್ತು ವಿಶ್ವತಃ ।
ಅಥೋ ಯ ಇಷುಧಿಸ್ತವಾರೇ ಅಸ್ಮನ್ನಿಧೇಹಿ ತಮ್ ॥ 1-15॥