ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
ಶ್ರೀ ಶಂಕರ ಭಗವತ್ಪಾದರ ಮತ್ತೊಂದು ಅತ್ಯಂತ ಶ್ರೇಷ್ಠ ರಚನೆ ಶ್ರೀ ದಕ್ಷಿಣಾಮೂರ್ತಿ ಸ್ತೋತ್ರ ಅಥವಾ ಅಷ್ಟಕ. ಇದು ಕೇವಲ ಅತ್ಯುತ್ತಮ ಕಾವ್ಯ ಮಾತ್ರ ಅಲ್ಲದೆ ಅದ್ವೈತ ವೇದಾಂತವನ್ನು ವಿವರಿಸುವ ಆಧ್ಯಾತ್ಮಿಕ ಕೃತಿ. ಅತ್ಯುತ್ತಮ ಕಾವ್ಯದ ಗುಣಗಳನ್ನು ಹೊಂದಿ ಆಧ್ಯಾತ್ಮಿಕ ತಿರುಳನ್ನೇ ಉಣಬಡಿಸುವಂತಹ ರಚನೆಗಳಿಗೆ ಶ್ರೀ ಶಂಕರ ಭಗವತ್ಪಾದರಿಗೆ ಸಾಟಿ ಶ್ರೀ ಶಂಕರ ಭಗವತ್ಪಾದರೇ ಆಗಿದ್ದಾರೆ.
ಶ್ರೀ ಶಂಕರ ಭಗವತ್ಪಾದರ ಶಿಷ್ಯರಾದ ಶ್ರೀ ಸುರೇಶ್ವರಾ ಚಾರ್ಯರ ಭಾಷ್ಯ ಮಾನಸೋಲ್ಲಾಸ ವನ್ನು ಆಧರಿಸಿ ಕನ್ನಡದಲ್ಲಿ ವಿವರಣೆ ನೀಡುವ ಒಂದು ವಿನಮ್ರ ಪ್ರಯತ್ನವನ್ನು ಗುರುಮಂಡಲದ ಅನುಗ್ರಹದೊಂದಿಗೆ ಹಮ್ಮಿಕೊಂಡಿದ್ದೇನೆ. ಇನ್ನು ಮುಂದಿನ ಹಾದಿ ಶ್ರೀ ಗುರು ತೋರಿಸುವ ಹಾದಿಯಷ್ಟೇ.
ಶ್ರೀ ದಕ್ಷಿಣಾಮೂರ್ತಿಯು ಪರಬ್ರಹ್ಮ, ಗುರು ಮತ್ತು ಆತ್ಮ. ಈ ಮೂರೂ ಬೇರೆ ಬೇರೆ ಅಲ್ಲಾ ಇವು ಒಂದೇ ಆಗಿವೆ
ಮಾನವನ ಎಲ್ಲ ಭಯಗಳಿಗೆ, ಆತಂಕಗಳಿಗೆ ಕಾರಣ, ಅಜ್ಞಾನ ಮತ್ತು ಅವಿದ್ಯೆ. ಇವುಗಳಿಂದ ಹೊರಬಂದು ಶಾಶ್ವತವಾದ ಪರಮಾನಂದವನ್ನು ಪಡೆಯುವುದೇ ಮಾನವ ಜನ್ಮದ ಗುರಿ ಆಗಿದೆ. ಆ ಗುರಿಯೇ ನಮಗೆ ಮರೆತುಹೋಗಿದೆ ಎಂದರೆ ತಪ್ಪಲ್ಲಾ. ಅಜ್ಞಾನ ಮತ್ತು ಅವಿದ್ಯೆ. ಇವುಗಳಿಂದ ಹೊರಬಂದು ಶಾಶ್ವತವಾದ ಪರಮಾನಂದವನ್ನು ಪಡೆಯುವುದು ಎಂದರೆ ಪ್ರಾಪಂಚಿಕ ಸುಖ ಭೋಗಗಳನ್ನು ತ್ಯಜಿಸುವುದು ಅಲ್ಲಾ ಎಂಬುದು ನಮಗೆ ಅರಿವಾಗಬೇಕು.
ಆಧ್ಯಾತ್ಮ ಜ್ಞಾನದ ಬಗ್ಗೆ ಚಿಂತಿಸಬೇಕಾದ್ದು ಅರವತ್ತು ವರ್ಷ ಆದಮೇಲೆ ಎನ್ನುವ ತಪ್ಪು ಕಲ್ಪನೆ ನಮ್ಮ ಮನಸಿನಿಂದ/ ಚಿತ್ತದಿಂದ ಹೊರಹಾಕಬೇಕು. ಒಬ್ಬ ವಿದ್ಯಾರ್ಥಿ ತನ್ನ ಅಭ್ಯಾಸವನ್ನು ಅಭ್ಯಾಸಕ್ಕಾಗಿಯೇ ಮಾಡಿದಾಗ ಆ ವಿದ್ಯಾರ್ಥಿಗೆ ಪರೀಕ್ಷೆಯ ಆತಂಕ ವಿರುವುದಿಲ್ಲಾ ಎನ್ನುವುದು ಆಧ್ಯಾತ್ಮಿಕ ಚಿಂತನೆ ಆಧ್ಯಾತ್ಮಿಕ ಅಭ್ಯಾಸ ಅಲ್ಲವೇ? ಈ ಪ್ರಶ್ನೆಗೆ ಉತ್ತರ ದೊರೆತರೆ ಆಧ್ಯಾತ್ಮಿಕತೆ ಅಂದರೆ ಏನು ಎಂಬುದು ಅರ್ಥವಾಗಬಹದು.
ಗುರು ಮತ್ತು ಆರಾಧಿತ ದೈವ ಇವುಗಳ ನಡುವೆ ಬೇಧವಿಲ್ಲ ಎನ್ನುವುದೇ ಅದ್ವೈತ ವೇದಾಂತದ ತಿರುಳು. ಶ್ರೀ ವಿದ್ಯಾ ಉಪಾಸನೆ ಎಂದು ಕರೆಸಿಕೊಳ್ಳುವ ಶಕ್ತ್ಯಾದ್ವೈತದ ತಿರುಳು ಸಹಾ ಅದೇ ಆಗಿದೆ.
ಜೀವ, ಈಶ್ವರ ಮತ್ತು ಬ್ರಹ್ಮನ್ ಇವು ಸತ್ಯವೆಂಬ ಸಮತಲದಲ್ಲಿ ಒಂದೇ ಆಗಿವೆ ಎಂಬ ಅರಿವು ಮೂಡಿಸುವಲ್ಲಿ ಶ್ರೀ ದಕ್ಷಿಣಾ ಮೂರ್ತಿ ಸ್ತೋತ್ರ ನಮಗೆ ನೆರವು ನೀಡುತ್ತದೆ.
ಈ ಸ್ತೋತ್ರದ ಅರ್ಥವನ್ನು ತಿಳಿದು ಅರ್ಥದಲ್ಲಿ ಮನಸ್ಸನ್ನು ನೆಟ್ಟು ಧ್ಯಾನಿಸುವ ಮೂಲಕ ಈ ಸ್ತೋತ್ರವನ್ನು ಜಪಿಸಿದರೆ ಆತ್ಮಸಾಕ್ಷಾತ್ಕಾರಕ್ಕೆ ಹಾದಿಯಾಗುತ್ತದೆ.
ಈ ಸ್ತೋತ್ರವನ್ನು ನಿಯಮಿತವಾಗಿ ಪಾರಾಯಣ ಮಾಡುವುದರಿಂದ ಮತ್ತು ಶ್ರವಣ ಮಾಡುವುದರಿಂದ ಜಾತಕದಲ್ಲಿನ ದೋಷಗಳು, ಗೋಚಾರದ ದೋಷಗಳು ಮತ್ತು ದಶಾಭುಕ್ತಿಯ ಕಾಲದ ದೋಷಗಳೂ ಗುರುವಿನ ಅನುಗ್ರಹದಿಂದ ಪರಿಹಾರ ಆಗುತ್ತದೆ ಎಂದು ಹೇಳಲಾಗಿದೆ
ಈ ಹಿಂದೆ ತಿಳಿಸಿದಂತೆ ಈ ಸ್ತೋತ್ರಕ್ಕೆ ಶ್ರೀ ಸುರೇಶ್ವರಾಚಾರ್ಯರ ಭಾಷ್ಯವು ಬಹಳ ವಿಸ್ತಾರವಾಗಿದ್ದು, ಈ ಹತ್ತು ಶ್ಲೋಕಗಳ ಅರ್ಥ ಅದೆಷ್ಟು ಆಳ ಮತ್ತು ಅಗಾಧ ಎಂಬುದು ನಮ್ಮ ಊಹೆಗೂ ನಿಲುಕದ್ದು ಎಂದರೆ ತಪ್ಪಲ್ಲಾ.
ವಿವರಣೆ ಯನ್ನು ಆರಂಭಿಸುವ ಮೊದಲು ಈ ಸ್ತೋತ್ರವನ್ನು ಒಮ್ಮೆ ಹೇಳಿಬಿಡುತ್ತೇನೆ.
ಶ್ರೀ ದಕ್ಷಿಣಾ ಮೂರ್ತಿ ಸ್ತೋತ್ರ ಅಥವಾ ಅಷ್ಟಕ
ವಿಶ್ವಂ ದರ್ಪಣದೃಶ್ಯಮಾನನಗರೀತುಲ್ಯಂ ನಿಜಾನ್ತರ್ಗತಂ
ಪಶ್ಯನ್ನಾತ್ಮನಿ ಮಾಯಯಾ ಬಹಿರಿವೋದ್ಭೂತಂ ಯಥಾ ನಿದ್ರಯಾ ।
ಯಃ ಸಾಕ್ಷಾತ್ಕುರುತೇ ಪ್ರಬೋಧಸಮಯೇ ಸ್ವಾತ್ಮಾನಮೇವಾದ್ವಯಂ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ
ಬೀಜಸ್ಯಾನ್ತರಿವಾಂಕುರೋ ಜಗದಿದಂ ಪ್ರಾಙ್ನಿರ್ವಿಕಲ್ಪಂ ಪುನಃ
ಮಾಯಾಕಲ್ಪಿತದೇಶಕಾಲಕಲನಾವೈಚಿತ್ರ್ಯಚಿತ್ರೀಕೃತಮ್ ।
ಮಾಯಾವೀವ ವಿಜೃಮ್ಭಯತ್ಯಪಿ ಮಹಾಯೋಗೀವ ಯಃ ಸ್ವೇಚ್ಛಯಾ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ॥ 2॥
ಯಸ್ಯೈವ ಸ್ಫುರಣಂ ಸದಾತ್ಮಕಮಸತ್ಕಲ್ಪಾರ್ಥಕಂ ಭಾಸತೇ
ಸಾಕ್ಷಾತ್ತತ್ತ್ವಮಸೀತಿ ವೇದವಚಸಾ ಯೋ ಬೋಧಯತ್ಯಾಶ್ರಿತಾನ್ ।
ಯತ್ಸಾಕ್ಷಾತ್ಕರಣಾದ್ಭವೇನ್ನ ಪುನರಾವೃತ್ತಿರ್ಭವಾಮ್ಭೋನಿಧೌ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ॥ 3॥
ನಾನಾಚ್ಛಿದ್ರಘಟೋದರಸ್ಥಿತಮಹಾದೀಪಪ್ರಭಾಭಾಸ್ವರಂ
ಜ್ಞಾನಂ ಯಸ್ಯ ತು ಚಕ್ಷುರಾದಿಕರಣದ್ವಾರಾ ಬಹಿಃ ಸ್ಪನ್ದತೇ ।
ಜಾನಾಮೀತಿ ತಮೇವ ಭಾನ್ತಮನುಭಾತ್ಯೇತತ್ಸಮಸ್ತಂ ಜಗತ್
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ॥ 4॥
ದೇಹಂ ಪ್ರಾಣಮಪೀನ್ದ್ರಿಯಾಣ್ಯಪಿ ಚಲಾಂ ಬುದ್ಧಿಂ ಚ ಶೂನ್ಯಂ ವಿದುಃ
ಸ್ತ್ರೀಬಾಲಾನ್ಧಜಡೋಪಮಾಸ್ತ್ವಹಮಿತಿ ಭ್ರಾನ್ತಾ ಭೃಶಂ ವಾದಿನಃ ।
ಮಾಯಾಶಕ್ತಿವಿಲಾಸಕಲ್ಪಿತಮಹಾ ವ್ಯಾಮೋಹಸಂಹಾರಿಣೇ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ॥ 5॥
ರಾಹುಗ್ರಸ್ತದಿವಾಕರೇನ್ದುಸದೃಶೋ ಮಾಯಾಸಮಾಚ್ಛಾದನಾತ್
ಸನ್ಮಾತ್ರಃ ಕರಣೋಪಸಂಹರಣತೋ ಯೋಽಭೂತ್ಸುಷುಪ್ತಃ ಪುಮಾನ್ ।
ಪ್ರಾಗಸ್ವಾಪ್ಸಮಿತಿ ಪ್ರಬೋಧಸಮಯೇ ಯಃ ಪ್ರತ್ಯಭಿಜ್ಞಾಯತೇ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ॥ 6॥
ಬಾಲ್ಯಾದಿಷ್ವಪಿ ಜಾಗ್ರದಾದಿಷು ತಥಾ ಸರ್ವಾಸ್ವವಸ್ಥಾಸ್ವಪಿ
ವ್ಯಾವೃತ್ತಾಸ್ವನುವರ್ತಮಾನಮಹಮಿತ್ಯನ್ತಃ ಸ್ಫುರನ್ತಂ ಸದಾ ।
ಸ್ವಾತ್ಮಾನಂ ಪ್ರಕಟೀಕರೋತಿ ಭಜತಾಂ ಯೋ ಮುದ್ರಯಾ ಭದ್ರಯಾ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ॥ 7॥
ವಿಶ್ವಂ ಪಶ್ಯತಿ ಕಾರ್ಯಕಾರಣತಯಾ ಸ್ವಸ್ವಾಮಿಸಂಬನ್ಧತಃ
ಶಿಷ್ಯಾಚಾರ್ಯತಯಾ ತಥೈವ ಪಿತೃಪುತ್ರಾದ್ಯಾತ್ಮನಾ ಭೇದತಃ ।
ಸ್ವಪ್ನೇ ಜಾಗ್ರತಿ ವಾ ಯ ಏಷ ಪುರುಷೋ ಮಾಯಾಪರಿಭ್ರಾಮಿತಃ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ॥ 8॥
ಭೂರಮ್ಭಾಂಸ್ಯನಲೋಽನಿಲೋಽಮ್ಬರಮಹರ್ನಾಥೋ ಹಿಮಾಂಶುಃ ಪುಮಾನ್
ಇತ್ಯಾಭಾತಿ ಚರಾಚರಾತ್ಮಕಮಿದಂ ಯಸ್ಯೈವ ಮೂರ್ತ್ಯಷ್ಟಕಮ್ ।
ನಾನ್ಯತ್ಕಿಂಚನ ವಿದ್ಯತೇ ವಿಮೃಶತಾಂ ಯಸ್ಮಾತ್ಪರಸ್ಮಾದ್ವಿಭೋಃ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀದಕ್ಷಿಣಾಮೂರ್ತಯೇ ॥ 9॥
ಸರ್ವಾತ್ಮತ್ವಮಿತಿ ಸ್ಫುಟೀಕೃತಮಿದಂ ಯಸ್ಮಾದಮುಷ್ಮಿನ್ ಸ್ತವೇ
ತೇನಾಸ್ಯ ಶ್ರವಣಾತ್ತದರ್ಥಮನನಾದ್‍ಧ್ಯಾನಾಚ್ಚ ಸಂಕೀರ್ತನಾತ್ ।
ಸರ್ವಾತ್ಮತ್ವಮಹಾವಿಭೂತಿಸಹಿತಂ ಸ್ಯಾದೀಶ್ವರತ್ವಂ ಸ್ವತಃ var ತತಃ
ಸಿದ್‍ಧ್ಯೇತ್ತತ್ಪುನರಷ್ಟಧಾ ಪರಿಣತಂ ಚೈಶ್ವರ್ಯಮವ್ಯಾಹತಮ್ ॥ 10॥
ಇತಿ ಶ್ರೀಮತ್ಪರಮಹಂಸಪರಿವ್ರಾಜಕಾಚಾರ್ಯಸ್ಯ ಶ್ರೀಗೋವಿನ್ದಭಗವತ್ಪೂಜ್ಯಪಾದಶಿಷ್ಯಸ್ಯ
ಶ್ರೀಮಚ್ಛಂಕರಭಗವತಃ ಕೃತೌ ದಕ್ಷಿಣಾಮೂರ್ತ್ಯಷ್ಟಕಂ ಸಮ್ಪೂರ್ಣಮ್
ವಿಡಿಯೋ 1 ಪೀಠಿಕೆ – ವಿಡಿಯೋ 2 ಶ್ರೀ ದಕ್ಷಿಣಾಮೂರ್ತಿ ಸ್ತೋತ್ರ
ವಿಡಿಯೋ 2 ಶ್ರೀ ದಕ್ಷಿಣಾಮೂರ್ತಿ ಸ್ತೋತ್ರ