ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ
ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
ಶ್ರೀ ಕಂಚಿ ಪರಮಾಚಾರ್ಯರು ಶ್ರೀ ಲಲಿತಾ ಸಹಸ್ರನಾಮ ಮತ್ತು ಸೌಂದರ್ಯಲಹರಿಯ ಬಗ್ಗೆ ನೀಡಿರುವಷ್ಟು ವಿವರಣೆ ಪ್ರಾಯಶಃ ಮತ್ತಾವ ಪೀಠಾಧಿಪತಿಗಳೂ ನೀಡಿಲ್ಲಾ ಎಂದೇ ಹೇಳಬೇಕು.
ಪ್ರಾಪಂಚಿಕ ಮತ್ತು ಆಧ್ಯಾತ್ಮಿಕ ಪ್ರಗತಿಗೆ ಶ್ರೀ ಲಲಿತಾ ಸಹಸ್ರನಾಮದ ಹಲವಾರು ನಾಮಗಳನ್ನು ಗುರುತಿಸಲಾಗಿದೆ.
ಶ್ರೀ ಕಂಚಿ ಪರಮಾಚಾರ್ಯ ಶ್ರೀ ಚಂದ್ರಶೇಖರೇಂದ್ರ ಸರಸ್ವತಿಯವರು ಲಲಿತಾ ಸಹಸ್ರನಾಮದ ಏಳು ನಾಮಗಳನ್ನು ಗುರುತಿಸಿ ಅವನ್ನು ಶ್ರೀ ಲಲಿತಾ ಸಪ್ತನಾಮಗಳು ಎಂದು ಕರೆದಿದ್ದಾರೆ. ಈ ನಾಮಗಳನ್ನು ಮಂತ್ರವಾಗಿ ಜಪಿಸಿದರೆ ಭಕ್ತರ ಕೋರಿಕೆಗಳು ಪೂರೈಸುತ್ತವೆ ಎಂಬದಾಗಿ ಪರಮಾಚಾರ್ಯರು ಅಪ್ಪಣೆ ನೀಡಿದ್ದಾರೆ. ಅವರ ಅಪ್ಪಣೆ ಎಂದರೆ ಅದು ಶ್ರೀ ಭಗವಾನ್ ಶಂಕರರ ಅಪ್ಪಣೆಯೇ ಆದಂತೆ.
ಶ್ರೀ ಲಲಿತಾ ಸಪ್ತನಾಮಗಳು ಹೀಗಿವೆ;
ಓಂ ಐಂ ಹ್ರೀಂ ಶ್ರೀಂ ಶ್ರೀ ಮಾತ್ರೇ ನಮಃ
ಓಂ ಐಂ ಹ್ರೀಂ ಶ್ರೀಂ ಅನ್ನದಾಯೈ ನಮಃ
ಓಂ ಐಂ ಹ್ರೀಂ ಶ್ರೀಂ ವಸುದಾಯೈ ನಮಃ
ಓಂ ಐಂ ಹ್ರೀಂ ಶ್ರೀಂ ಸಚಾಮರರಮಾವಾಣೀಸವ್ಯದಕ್ಷಿಣಸೇವಿತಾಯೈ ನಮಃ
ಓಂ ಐಂ ಹ್ರೀಂ ಶ್ರೀಂ ಕಟಾಕ್ಷಕಿಂಕರೀಭೂತಕಮಲಾಕೋಟಿಸೇವಿತಾಯೈ ನಮಃ
ಓಂ ಐಂ ಹ್ರೀಂ ಶ್ರೀಂ ಶಿವಶಕ್ತ್ಯೈಕ್ಯರೂಪಿಣ್ಯ್ಯೈ ನಮಃ
ಓಂ ಐಂ ಹ್ರೀಂ ಶ್ರೀಂ ಲಲಿತಾಂಬಿಕಾಯೈ ನಮಃ
ಇಲ್ಲಿನ ಯೂಟ್ಯೂಬ್ ಕೊಂಡಿಯಲ್ಲಿ ಈ ಸಪ್ತನಾಮಗಳನ್ನು 9 ಬಾರಿ ಹೇಳಿದ್ದು ಇದನ್ನು 12 ಬಾರಿ ಕೇಳಿದರೆ 108 ಬಾರಿ ಕೇಳಿದಂತಾಗುತ್ತದೆ.
Gurugale,
Prana magalu
We vishaya tilisidakkagi bahala dhanyavaadagalu
Nimma samaya namage sreerakshe
Sri Maate ge haagu nimagu hrudayapoorvaka dhanyavadagalu
Ishtannu bittare nanaginnenu magalu shakti illa 😌
Nimma vidya bikshi
Madhukar
Sent from my iPhone
>
LikeLike
ನೀವು ಏನೂ ಮಾಡಬೇಕಿಲ್ಲಾ. ಆ ತಾಯಿಯಲ್ಲಿ ಶರಣಾಗಿ. ಅವಳು ನಿಮಗೆ ಏನು ಬೇಕೋ ಅದೆಲ್ಲವನ್ನು ಅವಳೇ ಮಾಡುತ್ತಾಳೆ. ಗುರುಮಂಡಲ ಸಂಪೂರ್ಣ ಅನುಗ್ರಹ ಪ್ರಾಪ್ತಿ ರಸ್ತು.
ಸಾಧ್ಯವಾದರೆ ನಿಮ್ಮ ಸ್ನೇಹಿತರುಗಳಿಗೂ ಈ ಬ್ಲಾಗ್ ನ್ನು ನೋಡುವಂತೆ ಹೇಳಿ
LikeLike
ಪರಮಾಚಾರ್ಯರ ನಾಮ ಸ್ಮರಣೆ ಮಾಡಿಸಿದ್ದಕ್ಕೆ ನಮೋ ನಮಃ. ನಮ್ಮ ಮನೆಗೆ ಎಲ್ಲವು ಅವರೇ.
LikeLike