ಶ್ರೀ ವಿದ್ಯಾ ಪಂಚದಶೀ ಮಂತ್ರದ 7 ಅರ್ಥಗಳು: ನಾಲ್ಕನೇ ಅರ್ಥ- “ನಿಗರ್ಭ ಅರ್ಥ”


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ
ಶ್ರೀ ಪರಮೇಷ್ಠಿ ಗುರುಭ್ಯೋ ನಮಃ

ವಾರಿವಾಸ್ಯ ರಹಸ್ಯದ ಎರಡನೇ ಅಧ್ಯಾಯದ 82 ನೇ ಶ್ಲೋಕವು ಶ್ರೀ ವಿದ್ಯಾ ಪಂಚದಶೀ ಮಂತ್ರದ ನಿಗರ್ಭ ಅರ್ಥವನ್ನು ನೀಡುತ್ತದೆ.
ಸರ್ವೋಚ್ಛವಾದ ಶಿವ, ಗುರು ಮತ್ತು ಆತ್ಮ ಇವುಗಳ ಐಕ್ಯವನ್ನು ಅಭ್ಯಾಸದಿಂದ ಮಾತ್ರ ಸಾಧಿಸಲು ಸಾಧ್ಯ. ಆತ್ಮನೊಂದಿಗೆ ಶಿವನ ತಾದಾತ್ಮತೆಯ ಅನುಭವವನ್ನು ಅನುಭವಿಸಿಯೇ ಅರ್ಥೈಸಬಹುದೇ ಹೊರತು ಪದಗಳಿಂದ ಹೇಳಲಾಗದು. ಇದು ನಿಗರ್ಭ ಅರ್ಥ.
ಯೋಗಿನೀ ಹೃದಯವು ಸಹಾ ನಿಗರ್ಭ ಅರ್ಥವನ್ನು ನೀಡಿದೆ.
ಸರ್ವೋಚ್ಛನಾದ ಶಿವ ಅಂದರೆ ಪರಬ್ರಹ್ಮ. ಗುರು ಎಂದರೆ ಪರಬ್ರಹ್ಮವನ್ನು ಆತ್ಮದಲ್ಲಿ ದರ್ಶಿಸಿದವನು ಮತ್ತು ಆಗಮಗಳ ಅರ್ಥವನ್ನು ತಿಳಿದವನು.
ಶಿಷ್ಯ ಎಂದರೆ ಗುರುವಿನ ಅನುಗ್ರಹದಿಂದ ಶಿವೈಕ್ಯಾನುಭವವನ್ನು ಹೊಂದಿದವನು.
ಗುರುವು ಅಂದರೆ ಕೇವಲ ಮಾನವ ಶರೀರವನ್ನು ಹೊಂದಿರುವನಲ್ಲಾ. ಗುರುವು ಸಾಕ್ಷಾತ್ ಪರಶಿವನೇ ಆಗಿದ್ದಾನೆ.
ಶಿವ ಎಂಬ ಪರಬ್ರಹ್ಮನಲ್ಲಿನ ನಿಷ್ಕಲತ್ವ ವನ್ನು ಅರಿತು, ಗುರುವಿನ ಶುಶೄಷೆ ಮಾಡಿ ಗುರುವಿನ ಅನುಗ್ರಹದಿಂದ ಸಕಲ ಪಾಪಗಳನ್ನು ಕಳೆದುಕೊಂಡ ಶಿಷ್ಯನು ಜ್ಞಾನವನ್ನು ಹೊಂದುತ್ತಾನೆ.
ಗುರು, ಶಿಷ್ಯ ಮತ್ತು ಪರಬ್ರಹ್ಮ, ಈ ಮೂರರಲ್ಲಿ ಭೇದವಿಲ್ಲದೆ ಯಾವುದರಲ್ಲಿ ಗೋಚರಿಸುತ್ತದೋ ಅದು ನಿಗರ್ಭ.

ಶ್ರೀ ವಿದ್ಯಾ ಪಂಚದಶೀ ಮಂತ್ರದ 7 ಅರ್ಥಗಳ ಲಿಂಕನ್ನು ಸಹಾ ಇಲ್ಲಿ ಕೊಟ್ಟಿದ್ದೇನೆ:

ಮೊದಲನೇ ಅರ್ಥ – “ಗಾಯತ್ರಿ

ಎರಡನೇ ಅರ್ಥ- “ಭಾವಾರ್ಥ

ಮೂರನೇ ಅರ್ಥ- “ಸಂಪ್ರದಾಯಾರ್ಥ

ನಾಲ್ಕನೇ ಅರ್ಥ- “ನಿಗರ್ಭ ಅರ್ಥ

ಐದನೇ ಅರ್ಥ- “ಕೌಲಿಕಾರ್ಥ

ಆರನೇ ಅರ್ಥ – “ಸರ್ವರಹಸ್ಯಾರ್ಥ

ಏಳನೆಯ ಅರ್ಥ – ” ಮಹಾತತ್ವಾರ್ಥ”

ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: