ಶ್ರೀ ವಿದ್ಯಾ ಪಂಚದಶೀ ಮಂತ್ರದ 7 ಅರ್ಥಗಳು: ಮೂರನೇ ಅರ್ಥ- “ಸಂಪ್ರದಾಯಾರ್ಥ”


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ

ವಾರಿವಾಸ್ಯ ರಹಸ್ಯದ ಎರಡನೇ ಅಧ್ಯಾಯದ ೭೪ ರಿಂದ ೮೧ ರ ವರೆಗಿನ ಶ್ಲೋಕಗಳು ಶ್ರೀ ವಿದ್ಯಾ ಪಂಚದಶೀ ಮಂತ್ರದ ಸಂಪ್ರದಾಯಾರ್ಥವನ್ನು ನೀಡುತ್ತವೆ.  ಮಂತ್ರದಲ್ಲಿನ ಹ, ಕ, ರ, ಸ ಮತ್ತು ಲ ಅಕ್ಷರಗಳು ಪಂಚಭೂತಗಳ ಮೂಲವೇ ಆಗಿವೆ. ಹ ಎಂದ ಆಕಾಶ, ಕ ಇಂದ ವಾಯು, ರ ಇಂದ ಅಗ್ನಿ, ಸ ಇಂದ ಜಲ ಮತ್ತು ಲ ಎಂದ ಪೃಥ್ವಿಯ ಸೃಷ್ಟಿ ಯಾಗಿದೆ. ಶಬ್ಧವೇ ಸೃಷ್ಟಿಯ ಮೂಲ ಎನ್ನುವುದನ್ನು ಆಧುನಿಕ ವಿಜ್ಞಾನವೂ ಸಹಾ ಒಪ್ಪಿಕೊಂಡಿದೆ.  ಇಲ್ಲಿ “ರ” ಎಂಬ ಅಕ್ಷರ ಹ್ರೀಂ ಬೀಜಾಕ್ಷರದಲ್ಲಿ ಅಂತರ್ಗತವಾಗಿದೆ.

ಈ ಪಂಚಭೂತಗಳು, ಪಂಚ ಜ್ಞಾನೇಂದ್ರಿಯಗಳಿಗೆ ಅವು  ಪಂಚಜ್ಞಾನೇಂದ್ರಿಯಗಳ ವಿಷಯಗಳಿಗೆ ಅಂದರೆ ಪಂಚತನ್ಮಾತ್ರಗಳಿಗೆ ಸಂಬಂಧಿಸಿವೆ.

ಶಬ್ಧ ತನ್ಮಾತ್ರ ಆಕಾಶಕ್ಕೂ, ಸ್ಪರ್ಶ ತನ್ಮಾತ್ರ ವಾಯುವಿಗೂ, ರೂಪ ತನ್ಮಾತ್ರ  ,ಅಗ್ನಿಗೂ, ರಸ ತನ್ಮಾತ್ರವು ಜಲಕ್ಕೂ, ಗಂಧ ತನ್ಮಾತ್ರವು ಪೃಥ್ವಿ ಗೂ ಸಂಬಂಧಿಸಿದೆ.

ಇವು ಕ್ರಮವಾಗಿ,  ಕಿವಿ, ಚರ್ಮ, ಕಣ್ಣು, ನಾಲಿಗೆ ಮತ್ತು ಮೂಗು ಎಂಬ ಪಂಚಜ್ನಾನೇಂದ್ರಿಯಗಳ ವಿಷಯಗಳಾಗಿವೆ ಅಂದರೆ ತನ್ಮಾತ್ರಗಳಾಗಿವೆ.

“ಆಕಾಶದ್ವಾಯುಃ ವಾಯೋರಗ್ನಿಃ ಅಗ್ನೋರಾಪಃ ಆಪೋ ಪೃಥಿವಿಃ” ಎನ್ನುತ್ತದೆ ಉಪನಿಷದ್ ವಾಕ್ಯ.

ಹಾಗಾಗಿ  ಆಕಾಶವು ಶಬ್ಧ, ವಾಯುವು ಶಬ್ಧ ಮತ್ತು ಸ್ಪರ್ಶ, ಅಗ್ನಿಯು ಶಬ್ಧ, ಸ್ಪರ್ಶ, ರೂಪ, ಜಲವು ಶಬ್ಧ, ಸ್ಪರ್ಶ, ರೂಪ ರಸ,ಪೃಥ್ವಿ ಯು  ಶಬ್ಧ, ಸ್ಪರ್ಶ, ರೂಪ, ರಸ, ಗಂಧ

ಆಕಾಶ ತತ್ವವು 5 ತನ್ಮಾತ್ರಗಳಲ್ಲೂ, ವಾಯು ತತ್ವವು, 4 ತನ್ಮಾತ್ರಗಳಲ್ಲೂ, ಅಗ್ನಿ ತತ್ವವು, 3 ತನ್ಮಾತ್ರಗಳಲ್ಲೂ,  ಜಲ ತತ್ವವು 2 ತನ್ಮಾತ್ರಗಳಲ್ಲೂ, ಪೃಥ್ವೀ ತತ್ವವು 1 ತನ್ಮಾತ್ರದಲ್ಲೂ ಇರುವುದು ನಮಗೆ ಈಗ ತಿಳಿದಿದೆ.

ಪಂಚದಶೀ ಮಂತ್ರದಲ್ಲಿ  5 ಹ ಕಾರಗಳು, 4 ಈ ಕಾರಗಳು, 3 ರ ಕಾರಗಳು, 2 ಸ ಕಾರಗಳು, 1 ಲಕಾರವೂ ಇರುವುದು ನಮಗೆ ತಿಳಿದಿದೆ.

ಈ ಕಾರಗಳು 4 ಹೇಗೆಂದರೆ, ಹ್ರೀಂ ನಲ್ಲಿರುವ 3 ಈ ಕಾರಗಳು ಮತ್ತು ಮೊದಲ ಕೂಟದಲ್ಲಿ ಇರುವ 1 ಈ ಕಾರ.

ರ ಕಾರಗಳ ಬಗ್ಗೆ ಈ ಹಿಂದೆ ಹೇಳಿದಂತೆ , ಅದು ಹ್ರೀಂ ಕಾರದಲ್ಲಿ ಅಡಗಿರುವ ಅಕ್ಷರ ವಾಗಿದೆ.

ಲ ಕಾರಗಳು ಶ್ರೀ ಚಕ್ರದ ಭೂಪುರಕ್ಕೆ ಸಂಬಂಧಿಸಿದ್ದು, ಶ್ರೀ ಚಕ್ರದ ಮೂರೂ ರೇಖೆಗಳು ಸೇರಿ ಭೂಪುರ ವಾಗಿರುವುದರಿಂದ ಮಂತ್ರದಲ್ಲಿ ಲ ಕಾರವನ್ನು ಒಂದು ಎಂದು ಪರಿಗಣಿಸಲಾಗಿದೆ.

5 ಹ ಕಾರಗಳು ಆಕಾಶ ತತ್ವವನ್ನೂ, 4 ಈ ಕಾರಗಳು, ವಾಯುತತ್ವವನ್ನೂ, 3 ರ ಕಾರಗಳು ಅಗ್ನಿತತ್ವವನ್ನೂ, 2 ಸ ಕಾರಗಳು ಜಲ ತತ್ವವನ್ನೂ 1 ಲ ಕಾರವು ಪೃಥ್ವೀ ತತ್ವವನ್ನೂ ಸೂಚಿಸುತ್ತಿವೆ.

4 ಈ ಕಾರಗಳ ಪೈಕಿ 3 ಕಾಮಕಲಾ ಬೀಜವಾದ ಕ ಕಾರದಿಂದ ಉದ್ಭವಿಸಿದ್ದು 1 ಈ ಕಾರವು ಮೊದಲ ಕೂಟದ ಅಕ್ಷರ ಆಗಿದೆ.

ಅಂದರೆ ಹ್ರೀಂ ನಲ್ಲಿ ಅಂತರ್ಗತವಾಗಿರುವ 3 ಈ ಕಾರಗಳು ಕಾಮಕಲೆ ಯನ್ನು ಸೂಚಿಸುತ್ತವೆ.

ಶ್ರೀ ಭಾಸ್ಕರ ಮಖಿಗಳು 3 ಲಕಾರಗಳನ್ನು  ಸ್ವರ್ಗ, ಮರ್ತ್ಯ ಪಾತಾಳ ಗಳೆಂಬ ಮೂರು ಲೋಕಗಳನ್ನು ಸೂಚಿಸುತ್ತದೆ ಎಂದು ಸಹಾ ಹೇಳಿದ್ದಾರೆ. ಹಾಗೆಯೇ 3 ಕ ಕಾರಗಳು ಮೂರು ಬಗೆಯ  ಉಪಾಸಕರನ್ನು ಸೂಚಿಸುತ್ತದೆ ಎಂದು ಹೇಳಿದ್ದು ಅವರನ್ನು  ಸ ಕಾಲರು, ಪ್ರಳಯಕಾಲರು, ಮತ್ತು ವಿಜ್ಞಾನಕೇವಲರು ಎಂಬ ಹೆಸರಿನಿಂದ ಕರೆದಿದ್ದು, ಈ ಉಪಾಸನೆಯ ಬೇಧಗಳನ್ನು ತಿಳಿಸಿಲ್ಲಾ. ಈ ಮೂರು ವಿಧದ ಉಪಾಸಕರ ಬಗ್ಗೆ ಯೋಗಿನೀ ಹೃದಯ ಏನನ್ನೂ ಹೇಳಿಲ್ಲಾ. ಈ ಉಪಾಸನಾ ಬೇಧಗಳನ್ನು, ಸಮಯಾಚಾರ, ಕೌಲಾಚಾರ ಮತ್ತು ಮಿಶ್ರಾಚಾರಗಳೆಂದು ಭಾವಿಸಬಹುದು ಎಂಬುದು ನನ್ನ ವೈಯಕ್ತಿಕ ಅನಿಸಿಕೆ. ಈ ಬಗ್ಗೆ ವಿದ್ವಾಂಸರು ಇನ್ನಷ್ಟು ಬೆಳಕನ್ನು ಚೆಲ್ಲಬಹುದಾಗಿದೆ.

ಪಂಚದಶೀ ಮಂತ್ರದಲ್ಲಿನ ವ್ಯಂಜನಗಳಲ್ಲಿ 10 ಅ ಕಾರಗಳು ಇವೆ. ಉದಾಹರಣೆಕೆ  ಕ್ + ಅ = ಕ. ಇವು ಅನೇಕ ಬಗೆಯ ಜೀವಿಗಳನ್ನು ಸೂಚಿಸಿದರೆ 11 ನೆಯ ಸ್ವರ ವಾದ ಏ ಕಾರವು ಶ್ರೀ ವಿದ್ಯೆಯ ಜೀವವೇ ಆಗಿದೆ.

3 ಹ್ರೀಂ ಕಾರಗಳಲ್ಲಿ 3 ಬಿಂದುಗಳು, ಮತ್ತು ಮೂರು ನಾದಗಳು ಇವೆ.

ಬಿಂದುಗಳು, ರುದ್ರ, ಈಶ್ವರ ಮತ್ತು ಸದಾಶಿವ ಆದರೆ, ಮೂರು ನಾದಗಳು ಶಾಂತಿ, ಶಕ್ತಿ ಮತ್ತು ಶಂಭು ಆಗಿವೆ.

ಯೋಗಿನೀ ಹೃದಯದ ಒಂದು ಶ್ಲೋಕ ಹೀಗಿದೆ:

ಸ್ವರ ವ್ಯಂಜನ ಭೇದೇನ ಸಪ್ತತ್ರಿಂಶತ್ವ  ಭೇದಿನೀ

ಸಪ್ತತ್ರಿಂಶತ್ವ  ಭೇದೇನ ಷಟ್ತ್ರಿಂಶ ಸ್ವರೂಪಿಣೀ

ತತ್ವಾತೀತಾ ಸ್ವಭಾವಾ ಚ ವಿದ್ಯೇಶಾ ಭವ್ಯತ್ ಸದಾ.

ಯೋಗಿನೀ ಹೃದಯವು ವಾಮಕೇಶ್ವರ ತಂತ್ರದ ಎರಡನೇ ಭಾಗ. ಮೊದಲನೇ ಭಾಗವು ನಿತ್ಯಾಷೋಡಶಿಕಾರ್ಣವ. ಈ ಒಂದೊಂದು ಭಾಗವು 400 ಶ್ಲೋಕಗಳನ್ನು ಒಳಗೊಂಡಿದ್ದು, ಭೈರವ ಮತ್ತು ಭೈರವರ ಸಂವಾದ ರೂಪದಲ್ಲಿದೆ.  ಮೂಲ ಪ್ರತಿ ಕಳೆದು ಹೋಗಿರುವುದು ನಮ್ಮ ದುರಾದೃಷ್ಟ.ಈಗ ಲಭ್ಯವಿರುವ ಪ್ರತಿಗಳನ್ನೇ ಮೂಲ ಎಂದುಕೊಳ್ಳಬೇಕಿದೆ.

ಈ ಶ್ಲೋಕದಲ್ಲಿ ಹೇಳಿರುವುದನ್ನು ನೋಡೋಣ;

ಕ  ಲ ಹ ಸ ಕ ಹ ಲ ಸ ಕ ಲ   ಇವುಗಳಲ್ಲಿ  ೧೦ ಅ ಕಾರಗಳಿವೆ

ಕ  ಲ ಹ ಸ ಕ ಹ ಲ ಸ ಕ ಲ     ಇವು ೧೦ ವ್ಯಂಜನಗಳು

ಏ                                                     ೧  ಸ್ವರ

ಹ್ರೀಂ ನಲ್ಲಿ ಇರುವ ಈ ಕಾರ              ೩

ಮೊದಲನೇ ಕೂಟದಲ್ಲಿನ ಈ ಕಾರ     ೧

ಹ್ರೀಂ ನಲ್ಲಿ ಇರುವ ಹ ಕಾರ               ೩

ಹ್ರೀಂ ನಲ್ಲಿ ಇರುವ ರ ಕಾರ                 ೩

ಹ್ರೀಂ ನಲ್ಲಿನ ಬಿಂದುಗಳು                    ೩

ಹ್ರೀಂ ನಲ್ಲಿನ ನಾದ                              ೩

ಒಟ್ಟು                                               ೩೭.

ಈ ೩೭ ಸಂಖ್ಯೆಯನ್ನು ಇನ್ನೊಂದು ರೀತಿಯಲ್ಲೂ ಹೇಳಲಾಗಿದೆ.

ಹ ಕಾರ                          ೫

ಈ ಕಾರ                          ೪

ರೇಫ                               ೩

ಸ ಕಾರ                             ೨

ಲ ಕಾರ                           ೩

ಕ ಕಾರ                            ೩

ಅ ಕಾರ                          ೧೦

ಒಟ್ಟು                           ೩೭

ಈ 37 ಸಂಖ್ಯೆಯು 36 ತತ್ವಗಳನ್ನೂ ಮತ್ತು ಕಡೆಯ 1 ತತ್ವಾತೀತವಾದ ಪರಬ್ರಹ್ಮನನ್ನು ಸೂಚಿಸಿದೆ.  ಈ 36 ತತ್ವಗಳ ಬಗ್ಗೆ ಇನ್ನೊಮ್ಮೆ ಹೇಳುತ್ತೇನೆ. ಈಗ ಅದನ್ನು ಹೇಳಲು ಹೊರಟರೆ ವಿಷಯಾಂತರವಾಗುತ್ತದೆ.

ಯೋಗಿನೀ ಹೃದಯವು ಈ 37 ಸಂಖ್ಯೆಯಲ್ಲಿ ಶ್ರೀ ಚಕ್ರ ಸಂಕೇತವನ್ನೂ ಹೇಳಿದೆ.

ಬಹಳ ಆಶ್ಚರ್ಯಕರವಾದ ಸಂಗತಿ ಎಂದರೆ 36 ತತ್ವಗಳಲ್ಲಿ, ಮನಸು,ಬುದ್ಧಿ ಮತ್ತು ಅಹಂಕಾರ ಎಂಬ 3 ತತ್ವಗಳೂ ಸೇರಿದ್ದು ಅಂತಃಕರಣ ಚತುಷ್ಟಯಗಳಲ್ಲಿ ಒಂದಾಗಿರುವ ’”ಚಿತ್ತ”ವು ಸೇರಿಲ್ಲದೇ ಇರುವುದು.  ಇದನ್ನು ಹೇಗೆ ಅರ್ಥೈಸ ಬೇಕು ಎನ್ನುವುದಕ್ಕೆ ಗುರು ಪರಂಪರೆ ಮತ್ತು ಗುರುಮಂಡಲವು  ಹಾದಿ ತೋರಿಸಬೇಕಷ್ಟೆ.

ಕಾರ್ಯ ಮತ್ತು ಕಾರಣಗಳ ನಡುವೆ ವ್ಯತ್ಯಾಸ ಇಲ್ಲಾ. ವಾಚ್ಯ ಮತ್ತು ವಾಚಕಗಳ ನಡುವೆ ವ್ಯತ್ಯಾಸವಿಲ್ಲಾ. ( ಒಂದು ವಸ್ತುವನ್ನು ಗುರುತಿಸುವುದಕ್ಕೂ  ಆ ವಸ್ತು ವನ್ನು ಗುರುತಿಸುವ ಪದಗಳು)

ಬ್ರಹ್ಮನ್ ಗೂ ಬ್ರಹ್ಮಾಂಡಕ್ಕೂ ವ್ಯತ್ಯಾಸ ವಿಲ್ಲಾ

ಬ್ರಹ್ಮಾಂಡಕ್ಕೂ ಶ್ರೀ ವಿದ್ಯೆಗೂ ವ್ಯತ್ಯಾಸವಿಲ್ಲಾ- ( ಯಾವ ಪಂಚಭೂತಗಳಿಂದ ಬ್ರಹ್ಮಾಂಡ ಆಗಿದೆಯೋ ಅದೇ ಪಂಚಭೂತಗಳಿಂದ ಶ್ರೀ ವಿದ್ಯೆ ಮಂತ್ರವೂ ಆಗಿದೆ)

ಅಯಮಾತ್ಮಾ ಬ್ರಹ್ಮ ಹಾಗಾಗಿ ಆತ್ಮವೂ ಬ್ರಹ್ಮಾಂಡ, ಆತ್ಮವೇ ಶ್ರೀ ವಿದ್ಯೆ.  ಇದಕ್ಕೆ ಹೆಚ್ಚು ವಿವರಣೆ ಬೇಕಿಲ್ಲಾ ಅದು ಸ್ವಯಂವೇದ್ಯ.

ಶ್ರೀ ವಿದ್ಯಾ ಮಂತ್ರವು ಕೇವಲ ಅಕ್ಷರಗಳಲ್ಲಾ. ಅದೇ ಬ್ರಹ್ಮಾಂಡ, ಅದೇ ಬ್ರಹ್ಮನ್, ಅದೇ ಆತ್ಮ. ಈ ಸತ್ಯವನ್ನು ಅರಿತು ಮಂತ್ರಯೋಗದಲ್ಲಿ ತೊಡಗಿಕೊಂಡಾಗ ಆತ್ಮಸಾಕ್ಷಾತ್ಕಾರ ವಾಗಲೇ ಬೇಕು.

ಶ್ರೀ ವಿದ್ಯಾ ಪಂಚದಶೀ ಮಂತ್ರದ 7 ಅರ್ಥಗಳ ಲಿಂಕನ್ನು ಸಹಾ ಇಲ್ಲಿ ಕೊಟ್ಟಿದ್ದೇನೆ:

ಮೊದಲನೇ ಅರ್ಥ – “ಗಾಯತ್ರಿ

ಎರಡನೇ ಅರ್ಥ- “ಭಾವಾರ್ಥ

ಮೂರನೇ ಅರ್ಥ- “ಸಂಪ್ರದಾಯಾರ್ಥ

ನಾಲ್ಕನೇ ಅರ್ಥ- “ನಿಗರ್ಭ ಅರ್ಥ

ಐದನೇ ಅರ್ಥ- “ಕೌಲಿಕಾರ್ಥ

ಆರನೇ ಅರ್ಥ – “ಸರ್ವರಹಸ್ಯಾರ್ಥ

ಏಳನೆಯ ಅರ್ಥ – ” ಮಹಾತತ್ವಾರ್ಥ”

ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: