ಅಷ್ಟಾವಕ್ರ ಗೀತೆ: ಅಧ್ಯಾಯ 8, ಶ್ಲೋಕ 1 ರ ಕನ್ನಡ ವಿವರಣೆ (ಭಾಗ ೫ of ೭)


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ

ಅಷ್ಟಾವಕ್ರ ಗೀತೆಯ 8 ನೆಯ ಅಧ್ಯಾಯದ 1 ನೇ ಶ್ಲೋಕ:

ತದಾ ಬನ್ಧೋ ಯದಾ ಚಿತ್ತಂ ಕಿಂಚಿದ್ ವಾಂಛತಿ ಶೋಚತಿ ।
ಕಿಂಚಿನ್ ಮುಂಚತಿ ಗೃಹ್ಣಾತಿ ಕಿಂಚಿದ್ ದೃಷ್ಯತಿ ಕುಪ್ಯತಿ ॥ 8-1॥

ಇಲ್ಲಿ ಯಾವ್ಯಾವು ನಮ್ಮನ್ನು ಬಂಧಿಸಿವೆ ಎಂಬುದನ್ನು ಈ ಶ್ಲೋಕ ಹೇಳುತ್ತಿದೆ. ಚಿತ್ತವು ಯಾವುದನ್ನಾದರೂ ಆಶಿಸಿದರೆ, ಅಥವಾ ಯಾವುದರ ಬಗ್ಗೆಯೋ ದುಃಖ ಪಟ್ಟರೆ, ಯಾವುದನ್ನಾದರೂ ಒಪ್ಪಿಕೊಂಡರೆ ಅಥವಾ ತಿರಸ್ಕರಿಸಿದರೆ, ಯಾವುದರ ಬಗ್ಗೆ ಸಂತೋಷವನ್ನೋ ಅಥವಾ ಕೋಪವನ್ನೋ ವ್ಯಕ್ತಪಡಿಸಿದರೆ ಅದು ಬಂಧನ. ( bondage)

ಈ ಮೇಲೆ ಹೇಳಿದ ಇವೆಲ್ಲವೂ ಅಥವಾ ಒಂದೊಂದೂ ಸಹಾ ನಮ್ಮನ್ನು ಬಂಧನಕ್ಕೆ ಒಳಪಡಿಸುತ್ತವೆ.

ಮನಸ್ಸು ಯಾವುದನ್ನಾದರೂ ಯಾವುದನ್ನಾದರೂ ಆಶಿಸಿದರೆ, ಅಥವಾ ಯಾವುದರ ಬಗ್ಗೆಯೋ ದುಃಖ ಪಟ್ಟರೆ, ಯಾವುದನ್ನಾದರೂ ಒಪ್ಪಿಕೊಂಡರೆ ಅಥವಾ ತಿರಸ್ಕರಿಸಿದರೆ, ಯಾವುದರ ಬಗ್ಗೆ ಸಂತೋಷವನ್ನೋ ಅಥವಾ ಕೋಪವನ್ನೋ ವ್ಯಕ್ತಪಡಿಸಿದರೆ ಅದು ಬಂಧನ ಎಂದು ಹೇಳದೆ ಚಿತ್ತವು ಯಾವುದನ್ನಾದರೂ ಆಶಿಸಿದರೆ, ಅಥವಾ ಯಾವುದರ ಬಗ್ಗೆಯೋ ದುಃಖ ಪಟ್ಟರೆ, ಯಾವುದನ್ನಾದರೂ ಒಪ್ಪಿಕೊಂಡರೆ ಅಥವಾ ತಿರಸ್ಕರಿಸಿದರೆ, ಯಾವುದರ ಬಗ್ಗೆ ಸಂತೋಷವನ್ನೋ ಅಥವಾ ಕೋಪವನ್ನೋ ವ್ಯಕ್ತಪಡಿಸಿದರೆ ಅದು ಬಂಧನ ಎಂದು ಹೇಳಿರುವುದರಿಂದ, ಈ ಶ್ಲೋಕದ ಬಗ್ಗೆ ಆಳವಾಗಿ ಚಿಂತಿಸಬೇಕಿದೆ.

ಮನಸ್ಸು ಮತ್ತು ಚಿತ್ತಕ್ಕೆ ಇರುವ ವ್ಯತ್ಯಾಸ ನಮಗೆ ತಿಳಿದಿದೆ. ಮನೋ ಬುದ್ಧಿ ಅಹಂಕಾರ ಚಿತ್ತಾನಿ ನಹಂ ಎಂದು ಹೇಳಿರುವ ಶ್ರೀ ಶಂಕರ ಭಗವತ್ಪಾದರು ಚಿತ್ತ ಎನ್ನುವುದು, ಮನಸ್ಸು,ಬುದ್ಧಿ ಅಥವಾ ಅಹಂಕಾರ ಅಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ನಿರ್ವಾಣ ಷಟಕದ ಬಗ್ಗೆ ವಿವರಣೆ ಕೊಡುವಾಗ  ಸಹಾ ಬಹಳ ದೀರ್ಘವಾಗಿ ಇವುಗಳ ಬಗ್ಗೆ ತಿಳಿದುಕೊಂಡಿದ್ದೇವೆ.

ಅಂತಃಕರಣ ಚತುಷ್ಟಯಗಳಲ್ಲಿ ಮೂರನೆಯದು ಚಿತ್ತ. ಇದನ್ನು ಒಂದು ಬ್ಯಾಂಕ್ ಗೆ ಹೋಲಿಸುವ ಮೂಲಕ ಅರ್ಥಮಾಡಿಕೊಳ್ಳುವುದು ಸುಲಭವಾಗಬಹುದು. ಒಂದು ಜೀವಿ, ಅದರಲ್ಲೂ ಮನುಷ್ಯ ತಾನು ತಾಯಿಯ ಗರ್ಭದಿಂದ ಹೊರಬಂದಾಗ, ಚಿತ್ತವು ಆತನ ಪೂರ್ವ ಸಂಸ್ಕಾರಗಳನ್ನು ತನ್ನಲ್ಲಿಟ್ಟುಕೊಂಡಿರುತ್ತದೆ. ಒಂದು ಬ್ಯಾಂಕ್ ಆರಂಭವಾಗುವಾಗ ತನ್ನ ಮೂಲಧನದೊಂದಿಗೆ ಆರಂಭವಾಗುವ ಹಾಗೆ.

ಮಗು ಹುಟ್ಟಿದ ಹಲವು ದಿನಗಳವರೆಗೂ ಅದು ತನ್ನ ಸುತ್ತಲೂ ಇರುವ ಪ್ರಪಂಚವನ್ನು ಗ್ರಹಿಸುವುದು ಬಹಳ ಕಡಿಮೆ, ಇಲ್ಲವೇ ಇಲ್ಲಾ ಅಂದರೂ ತಪ್ಪಲ್ಲ. ಅದಕ್ಕೆ ಹಸಿವಾದಾಗ ಅಥವಾ ದೈಹಿಕವಾಗಿ ಹಿಂಸೆ ಯಾದಾಗ ಅದನ್ನು ತನ್ನ ಅಳುವಿನ ಮೂಲಕ ವ್ಯಕ್ತಪಡಿಸುತ್ತದೆ. ಹಸಿವಾದಾಗ ಹಾಲುಣಿಸುವ ವ್ಯಕ್ತಿಯನ್ನು ಗುರುತಿಸುವ ಮನಸ್ಸಿಗೆ, ಅಂತಃಕರಣದ ಎರಡನೆಯ ಚತುಷ್ಟಯವಾದ ಬುದ್ಧಿಯು, ಆ ವ್ಯಕ್ತಿಯನ್ನು ತಾಯಿ ಎಂದು ಸಂಕೇತ ನೀಡುತ್ತದೆ. ಮನಸ್ಸು ಅದನ್ನು ಅರ್ಥ ಮಾಡಿಕೊಳ್ಳುತ್ತದೆ. ಹಾಗೆಯೇ ಈ ಸಂಕೇತವು ಚಿತ್ತದಲ್ಲಿ ದಾಖಲಾಗಿ ಬಿಡುತ್ತದೆ. ಅಂದರೆ ಮನಸ್ಸು ತಾಯಿ ಎನ್ನುವ ವ್ಯಕ್ತಿಯ ರೂಪವನ್ನು ಮತ್ತು ಆಕೆಯ ಕ್ರಿಯೆಗಳನ್ನು ‘ಚಿತ್ತ” ಎನ್ನುವ ಬ್ಯಾಂಕಿನಲ್ಲಿ ಜಮೆ ಮಾಡಿಬಿಡುತ್ತದೆ. ಹೀಗೆಯೇ ಮಗು ಬೆಳೆದಂತೆಲ್ಲಾ ತನ್ನ ಮನಸ್ಸಿನ ಅನುಭವಗಳನ್ನು, ಮತ್ತು ಅದನ್ನು ಬುದ್ಧಿಯು ಗ್ರಹಿಸಿದ ರೀತಿಯಲ್ಲಿ ‘ ಚಿತ್ತ; ಎನ್ನುವ ಬ್ಯಾಂಕಿನಲ್ಲಿ ಜಮೆ ಮಾಡುತ್ತಲೇ ಹೋಗುತ್ತದೆ. ಮನಸ್ಸು ಗ್ರಹಿಸುವುದು , ಬುದ್ಧಿಯು ಅದನ್ನು ವಿಶ್ಲೇಷಿಸಿ ಅದನ್ನು ಚಿತ್ತದಲ್ಲಿ ದಾಖಲಿಸುವುದು, ಹಾಗೆಯೇ ಚಿತ್ತದಲ್ಲಿ ದಾಖಲಿಸಿರುವುದನ್ನು ಬೇಕೆಂದಾಗ ಬುದ್ಧಿಯ ಮೂಲಕ ಮನಸ್ಸಿಗೆ ತಲುಪಿಸಿ, ಆ ಸಂಕೇತದಂತೆ ಮನಸ್ಸು ಕ್ರಿಯಾಶೀಲವಾಗುವುದು. ಈ ವರ್ತುಲ ನಿರಂತರವಾಗಿ ಆಗುತ್ತಲೇ ಇರುತ್ತದೆ. ಬ್ಯಾಂಕ್ ನಲ್ಲಿ ಹಣ ತುಂಬುವುದು ಮತ್ತೆ ಬೇಕಾದಾಗ ಅಲ್ಲಿಂದ ತೆಗೆದು ಉಪಯೋಗಿಸುವುದು ಹೇಗೋ ಇದೂ ಹಾಗೆಯೇ . ಒಂದು ಮುಖ್ಯ ವ್ಯತ್ಯಾಸ ಎಂದರೆ  ಹಣ ವಾಪಸು ಪಡೆದಾಗ ವಾಪಸು ಪಡೆದಷ್ಟು ಹಣ ನಮ್ಮ ಖಾತೆಯಲ್ಲಿ ಕಡಿಮೆ ಆಗುತ್ತದೆ ಆದರೆ ಚಿತ್ತದಲ್ಲಿ ಅದು ಕಡಿಮೆ ಆಗುವುದಿಲ್ಲಾ. ಹಾಗೆಯೇ ಹೊಸ ಹೊಸ ವಿದ್ಯಮಾನಗಳನ್ನು ಮನಸ್ಸು ಗ್ರಹಿಸಿ ಬುದ್ಧಿಯು ವಿಶ್ಲೇಷಿಸಿ ಚಿತ್ತದಲ್ಲಿ ದಾಖಲಿಸಿದ ವಿಷಯಗಳು ಚಿತ್ತದಲ್ಲಿ ಜಮೆ ಆಗುತ್ತಲೇ ಹೋಗುತ್ತದೆ. ಹಾಗಾದರೆ ಈ ಚಿತ್ತದ ಗಾತ್ರ ಎಷ್ಟು ? ತಿಳಿಯದು. ಅದು ಅನಂತ ಎಂದು ಹೇಳಲಾಗದಿದ್ದರೂ ಅತ್ಯಂತ ಅಗಾಧವಾಗಿರುವುದು ಸತ್ಯ
ಅಷ್ಟಾವಕ್ರರು ಈ ಶ್ಲೋಕದಲ್ಲಿ,, ಆಶೆ, ದುಃಖ, ಒಪ್ಪಿಕೊಳ್ಳುವುದು, ತಿರಸ್ಕರಿಸುವುದು, ಸಂತೋಷ ಪಡುವುದು, ಕೋಪವನ್ನು ವ್ಯಕ್ತ ಪಡಿಸುವುದು ಇವೆಲ್ಲವೂ ಚಿತ್ತದಲ್ಲಿರುವುದೇ ಬಂಧನಕ್ಕೆ ಕಾರಣ ಎಂದಿದ್ದಾರೆ. ಅಂದರೆ ಇವೆಲ್ಲವೂ ಚಿತ್ತ ಎನ್ನುವ ಬ್ಯಾಂಕಿನಲ್ಲಿ ಜಮೆ ಆಗಿಬಿಟ್ಟಿವೆ ಎಂದಾಯಿತು.ಇವೆಲ್ಲವೂ ಪೂರ್ವ ಸಂಸ್ಕಾರಗಳಿಂದ ಸಹಾ ಮನುಷ್ಯ ಹುಟ್ಟುವಾಗಲೇ ಚಿತ್ತದಲ್ಲಿ ಅಚ್ಚು ಹಾಕಿಕೊಂಡಿರುತ್ತದೆ ಎನ್ನುವುದನ್ನೂ ಮರೆಯುವಂತಿಲ್ಲಾ. ಬ್ಯಾಂಕ್ ಆರಂಭವಾಗುವಾಗ ಮೂಲಧನ ತಂದಂತೆ.
ಚಿತ್ತ ಮತ್ತು ಪೂರ್ವ ಸಂಸ್ಕಾರಗಳ ಬಗ್ಗೆ, ನಾನು ಅರ್ಥಮಾಡಿಕೊಂಡಿರುವದನ್ನು ಇನ್ನೊಮ್ಮೆ ಅವಕಾಶ ಸಿಕ್ಕಾಗ ನಿಮ್ಮೊಟ್ಟಿಗೆ ಹಂಚಿಕೊಳ್ಳುತ್ತೇನೆ.
ಈ ಹಿಂದೆ ಹೇಳಿದಂತೆ,ಬುದ್ಧಿಯ ಮೂಲಕ ಮನಸ್ಸು ಇವುಗಳನ್ನು ಚಿತ್ತದಿಂದ ಹೊರತೆಗದು ಬೇಕಾದಾಗ ಉಪಯೋಗಿಸಿದರೂ, ಚಿತ್ತದಲ್ಲಿ ಸ್ಥಿರವಾಗಿ ಅಚ್ಚು ಹಾಕಿಕೊಂಡಿರುವ ಆಸೆ, ದುಃಖ, ಕೋಪ, ಸಂತೋಷ ಇವೆಲ್ಲವೂ ಹಾಗೆಯೇ ಉಳಿದಿರುತ್ತವೆ ಮತ್ತು ಅವು ಬಂಧನಕ್ಕೆ ಕಾರಣವಾಗುತ್ತವೆ.

ತದಾ ಬನ್ಧೋ ಯದಾ ಚಿತ್ತಂ ಕಿಂಚಿದ್ ವಾಂಛತಿ ಶೋಚತಿ ।
ಕಿಂಚಿನ್ ಮುಂಚತಿ ಗೃಹ್ಣಾತಿ ಕಿಂಚಿದ್ ದೃಷ್ಯತಿ ಕುಪ್ಯತಿ ॥ 8-1॥

ಅಷ್ಟಾವಕ್ರ ಗೀತೆ ಅಧ್ಯಾಯ  6 ಮತ್ತು 8ನೆ  – 8 ಶ್ಲೋಕಗಳ ಕೊಂಡಿಗಳು:

ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 1 ಕನ್ನಡ ವಿವರಣೆ

ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 2 ಕನ್ನಡ ವಿವರಣೆ

ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 3 ಕನ್ನಡ ವಿವರಣೆ

ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 4 ಕನ್ನಡ ವಿವರಣೆ

ಅಷ್ಟಾವಕ್ರ ಗೀತೆ: ಅಧ್ಯಾಯ 8, ಶ್ಲೋಕ 1 ಕನ್ನಡ ವಿವರಣೆ

ಅಷ್ಟಾವಕ್ರ ಗೀತೆ: ಅಧ್ಯಾಯ 8 , ಶ್ಲೋಕ 2 ಮತ್ತು 3 ಕನ್ನಡ ವಿವರಣೆ

ಅಷ್ಟಾವಕ್ರ ಗೀತೆ, ಅಧ್ಯಾಯ 8, ಶ್ಲೋಕ 4 ಕನ್ನಡ ವಿವರಣೆ

ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು

8 Comments on “ಅಷ್ಟಾವಕ್ರ ಗೀತೆ: ಅಧ್ಯಾಯ 8, ಶ್ಲೋಕ 1 ರ ಕನ್ನಡ ವಿವರಣೆ (ಭಾಗ ೫ of ೭)

  1. Pingback: ಅಷ್ಟಾವಕ್ರ ಗೀತೆ, ಅಧ್ಯಾಯ 8, ಶ್ಲೋಕ 4 ರ ಕನ್ನಡ ವಿವರಣೆ – Atmanandanatha

  2. Pingback: ಅಷ್ಟಾವಕ್ರ ಗೀತೆ: ಅಧ್ಯಾಯ 8 , ಶ್ಲೋಕ 2 ಮತ್ತು 3 ರ ಕನ್ನಡ ವಿವರಣೆ – Atmanandanatha

  3. Pingback: ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 4 ರ ಕನ್ನಡ ವಿವರಣೆ (ಭಾಗ ೪ of ೭) – Atmanandanatha

  4. Pingback: ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 3 ರ ಕನ್ನಡ ವಿವರಣೆ (ಭಾಗ ೩ of ೭) – Atmanandanatha

  5. Pingback: ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 2 ರ ಕನ್ನಡ ವಿವರಣೆ (ಭಾಗ ೨ of ೭) – Atmanandanatha

  6. Pingback: ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 1 ರ ಕನ್ನಡ ವಿವರಣೆ (ಭಾಗ ೧ of ೭) – Atmanandanatha

  7. Pingback: ಅಷ್ಟಾವಕ್ರ ಗೀತೆ: ಅಧ್ಯಾಯ 8 , ಶ್ಲೋಕ 2 ಮತ್ತು 3 ರ ಕನ್ನಡ ವಿವರಣೆ (ಭಾಗ ೬ of ೭) – Atmanandanatha

  8. Pingback: ಅಷ್ಟಾವಕ್ರ ಗೀತೆ, ಅಧ್ಯಾಯ 8, ಶ್ಲೋಕ 4 ರ ಕನ್ನಡ ವಿವರಣೆ (ಭಾಗ ೭ of ೭) – Atmanandanatha

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: