ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
ಅಷ್ಟಾವಕ್ರ ಗೀತೆಯ 6 ನೆಯ ಅಧ್ಯಾಯದ 4 ನೇ ಶ್ಲೋಕ:
ಅಹಂ ವಾ ಸರ್ವಭೂತೇಷು ಸರ್ವಭೂತಾನ್ಯಥೋ ಮಯಿ ।
ಇತಿ ಜ್ಞಾನಂ ತಥೈತಸ್ಯ ನ ತ್ಯಾಗೋ ನ ಗ್ರಹೋ ಲಯಃ ॥ 6-4॥
ನಾನು ಎಲ್ಲರಲ್ಲಿಯೂ ಎಲ್ಲದರಲ್ಲಿಯೂ ಇದ್ದೇನೆ ಹಾಗೆಯೇ ಎಲ್ಲವೂ ನನ್ನಲ್ಲೇ ಇವೆ. ಇದನ್ನು ಅರಿಯುವುದೇ ಜ್ಞಾನ. ಈ ಜ್ಞಾನ ಬಂದರೆ ತ್ಯಜಿಸುವುದಾಗಲೀ ( ತ್ಯಾಗಮಾಡುವುದು) , ವಶಪಡಿಸುಕೊಳ್ಳುವುದಾಗಲೀ (ಬಂಧನ) , ಲಯ ( ನಾಶವಾಗುವುದು) ಅಂತ್ಯಗೊಳಿಸುವುದಾಗಲೀ ಯಾವುದೂ ಇರುವುದಿಲ್ಲಾ.
ಈ ಶ್ಲೋಕವು ಈ ಅಧ್ಯಾಯದ ಕಡೆಯ ಶ್ಲೋಕ. ಮೊದಲ ಮೂರು ಶ್ಲೋಕಗಳಲ್ಲಿ ’ನಾನು ಏನಾಗಿದ್ದೇನೆ” ಪ್ರಪಂಚ ಏನಾಗಿದೆ” ಇವುಗಳನ್ನು ಹೇಳಿ ಇವುಗಳ ವ್ಯತ್ಯಾಸವನ್ನೂ ತಿಳಿಸಿ. ಈ ಶ್ಲೋಕದಲ್ಲಿ “ನಾನು” ಅಂದರೆ ’ಬ್ರಹ್ಮನ್’ ’ಆತ್ಮ’ ಅದು ಏನು? ಹೇಗಿದೆ? ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ.
ನಾನು ಎಂಬ ಆತ್ಮ ಎಲ್ಲದರಲ್ಲಿಯೂ ಇದೆ ಮತ್ತು ಎಲ್ಲದರಲ್ಲಿಯೂ ಇರುವುದು ನಾನು ಎಂಬ ಆತ್ಮ ಎಂಬುದನ್ನು ಅರಿಯುವುದೇ ಅತ್ಯಂತ ಉನ್ನತವಾದ ಸಾಧನೆ.
ನಾವು ಆತ್ಮನಲ್ಲಿ ಧ್ಯಾನಾಸಕ್ತರಾಗಬೇಕು. ಆಗ ನಮ್ಮಲ್ಲಿ ಅನುಕಂಪ, ತಾದ್ಯಾತ್ಮ ಭಾವನೆ, ಇವೆಲ್ಲವೂ ಉಂಟಾಗುತ್ತದೆ. ನಾವೆಲ್ಲರೂ ನಮ್ಮ ನಮ್ಮ ಮನಸ್ಸು ಎಂಬ ಬಂದೀಖಾನೆಯಲ್ಲಿ ಬಂಧಿತರಾಗಿದ್ದೇವೆ. ಅಹಂಕಾರ, ನಾನು ಎಂಬುದನ್ನು ದೇಹದಿಂದ, ಅಥವಾ ನಾವಿರುವ ಅಧಿಕಾರ,ಅಂತಸ್ತುಗಳಿಂದ ಗುರುತಿಸಿಕೊಳ್ಳುತ್ತಿದ್ದೇವೆ. ಇದು ನಮ್ಮನ್ನು ಸ್ವಾರ್ಥಿಗಳನ್ನಾಗಿ ಮಾಡುವುದಷ್ಟೇ ಅಲ್ಲಾ ಅದರೊಂದಿಗೆ ಉಚಿತವಾಗಿ ಸಿಗುವ ಎಲ್ಲಾ ದುಷ್ಟ ಗುಣಗಳೂ ನಮ್ಮೊಳಗೆ ಸೇರಿಹೋಗುತ್ತವೆ. ನಮ್ಮ್ಮನ್ನು ನಾವು ಎಲ್ಲ್ಲರಲ್ಲೂ ಎಲ್ಲದರಲ್ಲಿಯೂ ಕಾಣುವಂತಾದಾಗ ಬಹಳಷ್ಟು ಸಮಸ್ಯೆಗಳು ದೂರವಾಗುತ್ತವೆ.
ನಾನು ಎನ್ನುವ ಆತ್ಮ ಬ್ರಹ್ಮಾಂಡ ವ್ಯಾಪಿಯಾದ್ದು. ಇದು ಬ್ರಹ್ಮಾಂಡದಲ್ಲಿ ಏನೆಲ್ಲಾ ಇದೆಯೇ ಅವೆಲ್ಲವುಗಳು ಮೊತ್ತವೇ ಆಗಿದೆ. ಸೃಷ್ಠಿಯ ವೈವಿಧ್ಯತೆ ಸ್ಪಷ್ಟವಾಗಿದ್ದರೂ, ಅದರ ಆಧಾರವಾಗಿರುವ ಏಕತೆ ಕಾಣುತ್ತಿಲ್ಲಾ, ಮುಚ್ಚಿಕೊಂಡಿದೆ. ಹಾಗೆಯೇ ನಾನು ಎಂಬುವ ಜೀವಾತ್ಮ ಮತ್ತು ಪರಮಾತ್ಮ ಎರಡಾಗಿ ತೋರುವುದು ಭ್ರಮೆ ಮಾತ್ರವಾಗಿದೆ. ಇವೆರಡೂ ಬೇರ್ಪಡಿಸಲಾಗದ, ಅನಂತವಾದ ಮತ್ತು ಶಾಶ್ವತವಾದ ಸತ್ಯ. ಅದೇ ಶ್ರೀ ಭಗವಾನ್ ಶಂಕರರು ನಿರ್ವಾಣ ಷಟಕ ದಲ್ಲಿ ಪ್ರತಿಪಾದಿಸಿರುವ ” ಚಿದಾನಂದ ರೂಪಾ ಶಿವೋಹಂ ಶಿವೋಹಂ”
ಇತಿ ಜ್ಞಾನಂ ತಥೈತಸ್ಯ ನ ತ್ಯಾಗೋ ನ ಗ್ರಹೋ ಲಯಃ
ಈ ಅರಿವು, ಜ್ಞಾನ ನಮಗೆ ಬಂದಾಗ ಯಾವದನ್ನೋ ತ್ಯಾಗಮಾಡುವದು, ಅಥವಾ ಯಾವುದಕ್ಕೋ ಅಂಟಿ ಕೊಳ್ಳುವುದು ಇರುವುದೇ ಇಲ್ಲಾ. ಹಾಗೆಯೇ ನಾನು ಎನ್ನುವ ಆತ್ಮಕ್ಕೆ ಅಳಿವು, ಅಂತ್ಯ, ಲಯ ಇವು ಯಾವುದೂ ಸಹಾ ಇರುವುದಿಲ್ಲಾ. ಏಕೆಂದರೆ ಅದು ಅನಂತವಾದ್ದು ಮತ್ತು ಶಾಶ್ವತವಾದ್ದು.
ಅಷ್ಟಾವಕ್ರ ಗೀತೆ ಅಧ್ಯಾಯ 6 ಮತ್ತು 8ನೆ – 8 ಶ್ಲೋಕಗಳ ಕೊಂಡಿಗಳು:
ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 1 ರ ಕನ್ನಡ ವಿವರಣೆ
ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 2 ರ ಕನ್ನಡ ವಿವರಣೆ
ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 3 ರ ಕನ್ನಡ ವಿವರಣೆ
ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 4 ರ ಕನ್ನಡ ವಿವರಣೆ
ಅಷ್ಟಾವಕ್ರ ಗೀತೆ: ಅಧ್ಯಾಯ 8, ಶ್ಲೋಕ 1 ರ ಕನ್ನಡ ವಿವರಣೆ
ಅಷ್ಟಾವಕ್ರ ಗೀತೆ: ಅಧ್ಯಾಯ 8 , ಶ್ಲೋಕ 2 ಮತ್ತು 3 ರ ಕನ್ನಡ ವಿವರಣೆ
ಅಷ್ಟಾವಕ್ರ ಗೀತೆ, ಅಧ್ಯಾಯ 8, ಶ್ಲೋಕ 4 ರ ಕನ್ನಡ ವಿವರಣೆ
ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು.
Pingback: ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 1 ರ ಕನ್ನಡ ವಿವರಣೆ – Atmanandanatha
Pingback: ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 3 ರ ಕನ್ನಡ ವಿವರಣೆ – Atmanandanatha
Pingback: ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 2 ರ ಕನ್ನಡ ವಿವರಣೆ – Atmanandanatha
Pingback: ಅಷ್ಟಾವಕ್ರ ಗೀತೆ, ಅಧ್ಯಾಯ 8, ಶ್ಲೋಕ 4 ರ ಕನ್ನಡ ವಿವರಣೆ – Atmanandanatha
Pingback: ಅಷ್ಟಾವಕ್ರ ಗೀತೆ: ಅಧ್ಯಾಯ 8 , ಶ್ಲೋಕ 2 ಮತ್ತು 3 ರ ಕನ್ನಡ ವಿವರಣೆ – Atmanandanatha
Pingback: ಅಷ್ಟಾವಕ್ರ ಗೀತೆ: ಅಧ್ಯಾಯ 8, ಶ್ಲೋಕ 1 ರ ಕನ್ನಡ ವಿವರಣೆ (ಭಾಗ ೫ of ೭) – Atmanandanatha
Pingback: ಅಷ್ಟಾವಕ್ರ ಗೀತೆ: ಅಧ್ಯಾಯ 8 , ಶ್ಲೋಕ 2 ಮತ್ತು 3 ರ ಕನ್ನಡ ವಿವರಣೆ (ಭಾಗ ೬ of ೭) – Atmanandanatha
Pingback: ಅಷ್ಟಾವಕ್ರ ಗೀತೆ, ಅಧ್ಯಾಯ 8, ಶ್ಲೋಕ 4 ರ ಕನ್ನಡ ವಿವರಣೆ (ಭಾಗ ೭ of ೭) – Atmanandanatha