ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 3 ರ ಕನ್ನಡ ವಿವರಣೆ (ಭಾಗ ೩ of ೭)


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ

ಅಷ್ಟಾವಕ್ರ ಗೀತೆಯ 6 ನೆಯ ಅಧ್ಯಾಯದ 3 ನೇ ಶ್ಲೋಕ:

अहं स शुक्तिसङ्काशो रूप्यवद् विश्वकल्पना ।
इति ज्ञानं तथैतस्य न त्यागो न ग्रहो लयः ॥ ६-३॥

ಅಹಂ ಸ ಶುಕ್ತಿಸಂಕಾಶೋ ರೂಪ್ಯವದ್ ವಿಶ್ವಕಲ್ಪನಾ ।
ಇತಿ ಜ್ಞಾನಂ ತಥೈತಸ್ಯ ನ ತ್ಯಾಗೋ ನ ಗ್ರಹೋ ಲಯಃ ॥ 6-3॥

ನಾನು ಮುತ್ತನ್ನು ಗರ್ಭದಲ್ಲಿಟ್ಟುಕೊಂಡಿರುವ ಚಿಪ್ಪು, ಅದರ ಹೊರಗಡೆಯ ಬೆಳ್ಳಿಯಂತೆ ಕಾಣುತ್ತಿರುವುದು ಪ್ರಪಂಚ. ಮಿಥ್ಯವಾಗಿ ಕಾಣುವುದನ್ನು ಉದಹರಿಸಲು ಬೆಳ್ಳಿಯಂತೆ ಕಾಣುವ ಕಪ್ಪೆ ಚಿಪ್ಪು ಮತ್ತು ಹಾವಂತೆ ಕಾಣುವ ಹಗ್ಗವನ್ನು ಉಪಮೇಯವಾಗಿ ಶ್ರೀ ಶಂಕರಭಗವತ್ಪಾದರೂ ಸಹಾ ಉಪಯೋಗಿಸಿದ್ದಾರೆ. ಇಲ್ಲಿ ಮಿಥ್ಯ ಎಂಬ ಪದದ ಅರ್ಥ “ ಇಲ್ಲ” ಎಂಬುದಲ್ಲಾ. ಈ ಜಗತ್ತು ಮಿಥ್ಯ ಎಂದರೆ ಜಗತ್ತು ಇಲ್ಲಾ ಎಂಬ ಅರ್ಥವೆಲ್ಲಾ. ಜಗತ್ತನ್ನು ನಾವು ಹೇಗೆ ಕಾಣುತ್ತಿದೇವೆಯೋ ಅಥವಾ ನಮಗೆ ಜಗತ್ತು ಹೇಗೆ ಕಾಣುತ್ತಿದೆಯೋ ಅದು ಹಾಗೆ ಇಲ್ಲಾ, ಅದು ಬೇರೆ ರೀತಿಯಾಗಿಯೇ ಇದೆ ಎಂದು ಅರ್ಥ.

ಈ ಶ್ಲೋಕದಲ್ಲಿ “ಬ್ರಹ್ಮನ್ ” ಅಥವಾ ಆತ್ಮ” ವನ್ನು ಮುತ್ತಿನ ಚಿಪ್ಪಿಗೆ ಹೋಲಿಸಲಾಗಿದೆ. ನಾವು ಮುತ್ತನ್ನು ಗರ್ಭದಲ್ಲಿ ಇಟ್ಟುಕೊಂಡಿರುವ ಚಿಪ್ಪು. ಆದರೆ ನಮ್ಮ ಭೌತಿಕ,ಮಾನಸಿಕ ಕ್ರಿಯೆಗಳಿಂದ, ನಮ್ಮ ಆಸೆಗಳಿಂದ, ಬಂಧನಗಳಿಂದ ಕರ್ಮಗಳಿಂದ ಅಹಂಕಾರದಿಂದ ಅದನ್ನು ಬೆಳ್ಳಿ ಎಂದು ಭಾವಿಸಿದ್ದೇವೆ. ನಾವು ಈ ಮಿಥ್ಯವನ್ನು ತೊರೆದು ಸತ್ಯವನ್ನು ಅರಿಯಬೇಕು. ಈ ಹಿಂದೆ ಹೇಳಿದಂತೆ ಮಿಥ್ಯ ಎಂದರೆ ಒಂದು ವಸ್ತು ನಿಜಯಾಗಿಯೂ ಏನಾಗಿದೆಯೋ ಹಾಗೆ ಕಾಣದೆ ಬೇರೆಯಾಗಿ ಕಾಣುವುದು.

ನಮ್ಮ ಮನಸ್ಸಿಗೆ ಮತ್ತು ದೇಹಕ್ಕೆ ಆಗುವ ಅನುಭವಗಳು ನಮ್ಮ ಆಸೆಗಳ,ಯೋಚನೆಗಳ, ಮತ್ತು ಉದ್ದೇಶಗಳಿಂದ ಉಂಟಾಗುವ ಅನುಭವಗಳು. ಹೇಗೆ ಮೋಡವು ಆಕಾಶವನ್ನು ಮುಚ್ಚಿ ಆಕಾಶವೇ ಕಾಣದಂತೆ ಮಾಡುತ್ತದೋ ಹಾಗೆ ಈ ನಮ್ಮ ಆಸೆಗಳು ಯೋಚನೆಗಳು ಉದ್ದೇಶಗಳು ’ಬ್ರಹ್ಮನ್” ಆತ್ಮ”ಎನ್ನುವ ಸತ್ಯವನ್ನು ಕಾಣದಂತೆ ಮಾಡುತ್ತವೆ.

ಮನಸ್ಸು ಮೌನವಾಗಿ, ಎಲ್ಲಾ ಬಂಧನಗಳಿಂದ ಹೊರಗೆ ಬಂದು “ಆತ್ಮನಲ್ಲಿ” ಸ್ಥಿರಗೊಳ್ಳುವ ಪ್ರಯತ್ನ ನಮ್ಮಿಂದ ಆಗಬೇಕು.

ಅದ್ವೈತ ವೇದಾಂತವು ಬ್ರಹ್ಮನ್ ಅನ್ನು ನಿರಾಕಾರ, ಪರಿಪೂರ್ಣ, ಸ್ವತಂತ್ರವಾದ ಸತ್ಯ ಬ್ರಹ್ಮನ್ ನೊಂದಿಗೆ ಜತೆಗೂಡಿರುವ, ಅಥವಾ ಬ್ರಹ್ಮನ್ ಇಂದ ಉಧ್ಭವಿಸುವ ಎಲ್ಲವೂ ಭ್ರಮೆ, ಮತ್ತು ಕ್ಷಣಿಕ. ಈ ಭ್ರಮೆ ಬದಲಾವಣೆ ಮತ್ತು ನಾಶವನ್ನು ಹೊಂದುವುದು ಶತಸ್ಸಿದ್ಧ. ಬ್ರಹ್ಮನ್ ನಿರಾಕಾರವಾದರೆ ಅದರ ಭೌತಿಕ ರೂಪವೇ ಪ್ರಕೃತಿ. ಇದು ಕ್ರಿಯಾಶೀಲವಾದದ್ದು ಪ್ರಕೃತಿಯನ್ನು ಹೆಣ್ಣು ಎಂದು ಭಾವಿಸಿ ತಾಯಿ ಎಂದು ಕರೆಯುವುದಾದರೆ, ಆ ತಾಯಿಯು ಭೌತಿಕ ಸೃಷ್ಟಿಗೆ ಕಾರಣವಾ ದರೂ ಅದು ಸಹಾ ಸಮರ್ಥ ಮತ್ತು ಅಂತಿಮ ಕಾರಣವೇ ಆಗಿರುವ ಬ್ರಹ್ಮವೇ.ಆಗಿದೆ. ಇವುಗಳನ್ನು ನಾವು ಪುಲ್ಲಿಂಗದಲ್ಲೋ ಸ್ತ್ರೀ ಲಿಂಗದಲ್ಲೋ ನಮ್ಮ ಅನುಕೂಲಕ್ಕೆ ತಕ್ಕಂತೆ ಗುರುತಿಸಿದರೂ ಅದು ಶ್ರೀ ಶಂಕರ ಭಗವತ್ಪಾದರು ಸೌಂದರ್ಯ ಲಹರಿಯಲ್ಲಿ ’ ಶಿವ ಶಕ್ತ್ಯಾಯುಕ್ತೋ ಇದಿ ಭವತಿ ಶಕ್ತಃ ಎಂದು ಹೇಳಿದಂತೆ ಮೂಲಭೂತವಾಗಿ ಇರುವಂತಾದ್ದು ಮತ್ತು ಒಂದರಿಂದ ಮತ್ತೊಂದನ್ನು ಬೇರ್ಪಡಿಸಲಾಗದಂತಹವು.

ನಾನು ಎನ್ನುವುದು ಮುತ್ತಿನ ಚಿಪ್ಪಿನೊಳಗಿನ ಮುತ್ತಿನಂತೆ ,ಆತ್ಮ, ಬ್ರಹ್ಮನ್, ಚಿಪ್ಪಿನ ಮೇಲೆ ಬೆಳ್ಳಿಯಂತೆ ಕಾಣುತ್ತಿರುವುದು ಜಗತ್ತು ಅದು ಮಿಥ್ಯ. ಮತ್ತೊಮ್ಮೆ ಹೇಳುತ್ತೇನೆ, ಮಿಥ್ಯ ಎಂದರೆ ಜಗತ್ತು ಸುಳ್ಳು ಎಂದಲ್ಲಾ. ಅದು ಕಾಣುತ್ತಿರುವುದು ಅದು ಹೇಗಿದೆಯೋ ಹಾಗೆ ಅಲ್ಲಾ. ಮುತ್ತಿನ ಚಿಪ್ಪು ಸತ್ಯ ಅದರ ಬೆಳ್ಳಿಯಂತ ಹೊಳಪು ಮಿಥ್ಯ.

ಇದನ್ನು ಅರಿಯುವುದೇ ಜ್ಞಾನ. ಈ ಜ್ಞಾನ ಬಂದರೆ ತ್ಯಜಿಸುವುದಾಗಲೀ ( ತ್ಯಾಗಮಾಡುವುದು) , ವಶಪಡಿಸುಕೊಳ್ಳುವುದಾಗಲೀ ( ಬಂಧನಕ್ಕೋಳಗಾಗುವುದು) , ಲಯ ( ನಾಶವಾಗುವುದು) ಅಂತ್ಯಗೊಳಿಸುವುದಾಗಲೀ ಯಾವುದೂ ಇರುವುದಿಲ್ಲಾ.

ಈ ಜ್ಞಾನ ನಮ್ಮೆಲ್ಲರಿಗೂ ಬರಲಿ, ಆ ಜ್ಞಾನದ ಸಂಪಾದನೆಗೆ ಗುರುಮಂಡಲ ನಮಗೆ ಹಾದಿ ತೋರಿಸಲಿ ಎಂದು ಪ್ರಾರ್ಥಿಸಿ.

ಅಷ್ಟಾವಕ್ರ ಗೀತೆ ಅಧ್ಯಾಯ  6 ಮತ್ತು 8ನೆ  – 8 ಶ್ಲೋಕಗಳ ಕೊಂಡಿಗಳು:

ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 1 ಕನ್ನಡ ವಿವರಣೆ

ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 2 ಕನ್ನಡ ವಿವರಣೆ

ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 3 ಕನ್ನಡ ವಿವರಣೆ

ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 4 ಕನ್ನಡ ವಿವರಣೆ

ಅಷ್ಟಾವಕ್ರ ಗೀತೆ: ಅಧ್ಯಾಯ 8, ಶ್ಲೋಕ 1 ಕನ್ನಡ ವಿವರಣೆ

ಅಷ್ಟಾವಕ್ರ ಗೀತೆ: ಅಧ್ಯಾಯ 8 , ಶ್ಲೋಕ 2 ಮತ್ತು 3 ಕನ್ನಡ ವಿವರಣೆ

ಅಷ್ಟಾವಕ್ರ ಗೀತೆ, ಅಧ್ಯಾಯ 8, ಶ್ಲೋಕ 4 ಕನ್ನಡ ವಿವರಣೆ

ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು

3 Comments on “ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 3 ರ ಕನ್ನಡ ವಿವರಣೆ (ಭಾಗ ೩ of ೭)

  1. Pingback: ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 1 ರ ಕನ್ನಡ ವಿವರಣೆ – Atmanandanatha

  2. Pingback: ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 4 ರ ಕನ್ನಡ ವಿವರಣೆ – Atmanandanatha

  3. Pingback: ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 2 ರ ಕನ್ನಡ ವಿವರಣೆ – Atmanandanatha

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: