ಶ್ರೀ ಶಂಕರ ಭಗವತ್ಪಾದರ ಮನೀಷಾ ಪಂಚಕ ಭಾಗ 2


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ

ಈಗ ಮನೀಷಾ ಪಂಚಕದ ಎರಡನೆಯ ಶ್ಲೋಕವನ್ನು ನೋಡೋಣ

ಬ್ರಹ್ಮೈವಾಹಮಿದಂ ಜಗಚ್ಚ ಸಕಲಂ ಚಿನ್ಮಾತ್ರವಿಸ್ತಾರಿತಂ
ಸರ್ವಂ ಚೈತದವಿದ್ಯಾಯಾ ತ್ರಿಗುಣಯಾsಶೋಷಂ ಮಯಾ ಕಲ್ಪಿತಮ್
ಇತ್ಥಂ ಯಸ್ಯ ದೃಢಾ ಮತಿಃ ಸುಖತರೇ ನಿತ್ಯೇ ಪರೇ ನಿರ್ಮಲೇ
ಚಣ್ಡಾಲೋsಸ್ತು ಸ ತು ದ್ವಿಜೋsಸ್ತು ಗುರುರಿತ್ಯೇಷಾ ಮನೀಷಾ ಮಮ

ಬ್ರಹ್ಮೈವಾಹಮಿದಂ ಜಗಚ್ಚ ಸಕಲಂ ಚಿನ್ಮಾತ್ರವಿಸ್ತಾರಿತಂ

ನಾನು ಶುದ್ಧ ಪ್ರಜ್ನೆ ಅಂದರೆ ಬ್ರಹ್ಮನ್. ಇಡೀ ಬ್ರಹ್ಮಾಂಡವು ಈ ಶುದ್ಧ ಪ್ರಜ್ನೆಯ ವಿಸ್ತಾರ ಅಷ್ಟೆ.

ಸರ್ವಂ ಚೈತದವಿದ್ಯಾಯಾ ತ್ರಿಗುಣಯಾsಶೋಷಂ ಮಯಾ ಕಲ್ಪಿತಮ್

ಮಾಯೆಯಿಂದ ಅಥವಾ ಅರಿವು ಇಲ್ಲದಿರುವುದರಿಂದ ನಾವು ಕಾಣುವುದೆಲ್ಲವೂ, ನೋಡುವುದೆಲ್ಲವೂ, ಮೂರು ಗುಣಗಳಿಂದ ಅಗಿರುವುದಾಗಿ ಕಲ್ಪಿಸಿಕೊಳ್ಳಲಾಗಿದೆ ಅಥ್ವಾ ಅರ್ಥ ಮಾಡಿಕೊಳ್ಳಲಾಗಿದೆ.

ಇತ್ಥಂ ಯಸ್ಯ ದೃಢಾ ಮತಿಃ ಸುಖತರೇ ನಿತ್ಯೇ ಪರೇ ನಿರ್ಮಲೇ
ಚಣ್ಡಾಲೋsಸ್ತು ಸ ತು ದ್ವಿಜೋsಸ್ತು ಗುರುರಿತ್ಯೇಷಾ ಮನೀಷಾ ಮಮ

ಪರಮಾನಂದದಲ್ಲಿ, ಶಾಶ್ವತದಲ್ಲಿ, ಮತ್ತು ಪರಿಶುದ್ಧವಾದ ಸರ್ವೋಚ್ಛ ಸತ್ಯದಲ್ಲಿ ಯಾರ ಬುದ್ಧಿಯು ಸ್ಥಿರವಾಗಿ ಸ್ಥಾಪಿತವಾಗಿದೆಯೋ, ಅಂತಹವನು ಚಾಂಡಾಲನೇ ಇರಲಿ, ಬ್ರಾಹ್ಮಣನೇ ಇರಲಿ ನಿಶ್ಚಯವಾಗಿ ಗುರು ಆಗಲು ಅರ್ಹನು ಮತ್ತು ಯೋಗ್ಯನು. ಇದು ನನ್ನ ಸ್ಥಿರವಾದ ನಂಬಿಕೆ. ಮನೀಷಾ ಮಮ

ಎರಡನೇ ಮಹಾವಾಕ್ಯ “ಅಹಂ ಬ್ರಹ್ಮಾಸ್ಮಿ “ ಎಂಬುದನ್ನು ಯಜುರ್ವೇದದ ಬೃಹದಾರಣ್ಯಕ ಉಪನಿಷತ್ತಿನ ಮೊದಲನೇ ಕಾಂಡದ ನಾಲ್ಕನೇ ಅಧ್ಯಾಯದ ಹತ್ತನೇ ಮಂತ್ರದಿಂದ ಪಡೆಯಲಾಗಿದೆ. ಈ ಮಂತ್ರವನ್ನು ಒಮ್ಮೆ ಹೇಳೋಣ:

ಬ್ರಹ್ಮ ವಾ ಇದಮಗ್ರ ಆಸೀತ್ ಬ್ರಹ್ಮ ವೈ ಇದಮ್ ಅಗ್ರೇ ಆಸೀತ್
ತದಾತ್ಮಾನಮೇವಾವೇದ್ ತದ್ ಆತ್ಮಾನಮ್ ಏವ ಅವೇತ್
ಅಹಂ ಬ್ರಹ್ಮಾಸ್ಮೀತಿ ।
ಅಹಮ್ ಬ್ರಹ್ಮ ಅಸ್ಮಿ ಇತಿ ತಸ್ಮಾತ್ತತ್ಸರ್ವಮಭವತ್
ತಸ್ಮಾದ್ ತದ್ ಸರ್ವಮ್ ಅಭವತ್
ತದ್ಯೋ ಯೋ ದೇವಾನಾಂ ಪ್ರತ್ಯಬುಧ್ಯತ
ತದ್ ಯಸ್ ಯಸ್ ದೇವಾನಾಮ್ ಪ್ರತ್ಯಬುಧ್ಯತ ಸ ಏವ ತದಭವತ್
ಸಸ್ ಏವ ತದ್ ಅಭವತ್ ತಥರ್ಷೀಣಾಮ್
ತಥಾ ಋಷೀನಾಮ್ ತಥಾ ಮನುಷ್ಯಾಣಾಮ್ ।
ತಥಾ ಮನುಷ್ಯಾಣಾಮ್ ತದ್ಧೈತತ್ಪಶ್ಯನ್ನೃಷಿರ್ವಾಮದೇವಃ ಪ್ರತಿಪೇದೇ
ತದ್ ಧ ಏತದ್ ಪಶ್ಯನ್ ಋಷಿಸ್ ವಾಮದೇವಸ್ ಪ್ರತಿಪೇದೇಽಹಂ ಮನುರಭವꣳ ಸೂರ್ಯಶ್ಚೇತಿ ।
ಅಹಮ್ ಮನುಸ್ ಅಭವಮ್ ಸೂರ್ಯಸ್ ಚ ಇತಿ ತದಿದಮಪ್ಯೇತರ್ಹಿ ಯ ಏವಂ ವೇದಾಹಂ ಬ್ರಹ್ಮಾಸ್ಮೀತಿ
ತದ್ ಇದಮ್ ಅಪಿ ಏತರ್ಹಿ ಯಸ್ ಏವಮ್ ವೇದ ಅಹಮ್ ಬ್ರಹ್ಮ ಅಸ್ಮಿಇತಿ
ಸ ಇದꣳ ಸರ್ವಂ ಭವತಿ ಸ ಇದಮ್ ಸರ್ವಮ್ ಭವತಿ
ತಸ್ಯ ಹ ನ ದೇವಾಶ್ಚನಾಭೂತ್ಯಾ ಈಶತ ತಸ್ಯ ಹ ನ ದೇವಾಸ್ ಚನ ಅಭೂತ್ಯಾಸ್ ಈಶತೇ
ಆತ್ಮಾ ಹ್ಯೇಷಾꣳ ಸ ಭವತ್ಯ್ ಆತ್ಮಾ ಹಿ ಏಷಾಮ್ ಸ ಭವತಿ
ಅಥ ಯೋಽನ್ಯಾಂ ದೇವತಾಮುಪಾಸ್ತೇ ಅಥ ಯಸ್ ಅನ್ಯಾಮ್ ದೇವತಾಮ್ ಉಪಾಸ್ತೇಽನ್ಯೋಽಸಾವ್
ಅನ್ಯಸ್ ಅಸೌಅನ್ಯೋಽಹಮಸ್ಮೀತಿ
ಅನ್ಯಸ್ ಅಹಮ್ ಅಸ್ಮಿ ಇತಿ
ನ ಸ ವೇದ ।
ನ ಸ ವೇದ
ಯಥಾ ಪಶುರೇವꣳ ಸ ದೇವಾನಾಮ್ ।
ಯಥಾ ಪಶುಸ್ ಏವಮ್ ಸ ದೇವಾನಾಮ್
ಯಥಾ ಹ ವೈ ಬಹವಃ ಪಶವೋ ಮನುಷ್ಯಂ ಭುಂಜ್ಯುರ್
ಯಥಾ ಹ ವೈ ಬಹವಸ್ ಪಶವಸ್ ಮನುಷ್ಯಮ್ ಭುಂಜ್ಯುಃ
ಏವಮೇಕೈಕಃ ಪುರುಷೋ ದೇವಾನ್ಭುನಕ್ತ್ಯ್
ಏವಮ್ ಏಕೈಕಸ್ ಪುರುಷಸ್ ದೇವಾನ್ ಭುನಕ್ತಿ
ಏಕಸ್ಮಿನ್ನೇವ ಪಶಾವಾದೀಯಮಾನೇಽಪ್ರಿಯಂ ಭವತಿ
ಏಕಸ್ಮಿನ್ ಏವ ಪಶೌ ಆದೀಯಮಾನೇ ಅಪ್ರಿಯಮ್ ಭವತಿ
ಕಿಮು ಬಹುಷು
ಕಿಮ್ ಉ ಬಹುಷು
ತಸ್ಮಾದೇಷಾಂ ತನ್ನ ಪ್ರಿಯಂ ಯದೇತನ್ಮನುಷ್ಯಾ ವಿದ್ಯುಃ ॥ 10 ॥

ಈ ಮಂತ್ರದ ಭಾವಾರ್ಥವನ್ನು ನೋಡೋಣ.

ಆರಂಭದಲ್ಲಿ ಆತ್ಮವು ನಿಶ್ಚಯವಾಗಿ ಬ್ರಹ್ಮನೇ ಆಗಿತ್ತು. ನಾನು ಬ್ರಹ್ಮ ಎಂಬ ಅರಿವು ಸಹಾ ಆತ್ಮಕ್ಕೆ ಇತ್ತು. ಹಾಗಾಗಿಯೇ ಅದು ಎಲ್ಲವೂ ತಾನೇ ಆಯಿತು. ಯಾರಿಗೆ, ಯಾವುದಕ್ಕೆ ಈ ಜ್ನಾನೋದಯ ಆಯಿತೋ ಅವೆಲ್ಲವೂ ಬ್ರಹ್ಮನೇ ಆಯಿತು. ಇದು ಋಷಿಗಳಿಗೂ ಸಾಮಾನ್ಯ ಮನುಷ್ಯರಿಗೂ ಒಂದೇ, ಬೇರೆ ಅಲ್ಲಾ. ವಾಮದೇವ ಋಷಿ ಈ ಆತ್ಮವನ್ನು ಅರಿತಾಗಲೇ ತಾನೇ ಮನು ಮತ್ತು ಸೂರ್ಯ ಎಂಬುದು ತಿಳಿದಿದ್ದು. ಹಾಗೆಯೇ, ಈಗಲೂ ಸಹಾ ಯಾರು ಈ ಬ್ರಹ್ಮವನ್ನು ’ನಾನು ಬ್ರಹ್ಮ” ಎಂದು ಅರಿಯುತ್ತಾರೋ ಅವರು ಈ ಬ್ರಹ್ಮಾಂಡದಲ್ಲಿ ಎಲ್ಲವೂ ಅವರೇ ಆಗಿಬಿಡುತ್ತಾರೆ.
ಮನುಷ್ಯ ತಾನು ಬೇರೆ ತಾನು ಆರಾಧಿಸುವ, ಪೂಜಿಸುವ ದೇವತೆ ಬೇರೆ ಎಂದು ಭಾವಿಸಿದರೆ ಅಂತಹವರು ದೇವತೆಗಳಿಗೆ ಪ್ರಾಣಿಗಳ ಸಮಾನರಾಗುತ್ತಾರೆ. ಹೇಗೆಂದರೆ ಪ್ರಾಣಿಗಳು ಮನುಷ್ಯನನ್ನ್ನು ಸೇವಿಸುತ್ತವೆ. ಹಾಗೆಯೇ ಆ ಮನುಷ್ಯನು ದೇವತೆಗಳನ್ನು ಸೇವಿಸಿದಂತಾಗುತ್ತದೆ ಅಷ್ಟೆ. ಈ ರಹಸ್ಯ ನಮಗೆ ಅರ್ಥ ಆಗಬೇಕು. ಆಗ ನಾವು ಆರಾಧಿಸುವ ಮಾನಸಿಕ ಸ್ಥಿತಿಯೇ ಬೇರೆ ಆಗುತ್ತದೆ.

ಬೃಹದಾರಣ್ಯಕ ಉಪನಿಷತ್ ವಾಕ್ಯ ವಿಚಿತ್ರವಾದ್ದನ್ನೋ, ಯಾವುದೋ ಹೊಸತನ್ನೋ ಹೇಳುತ್ತಿಲ್ಲ. ವಾಸ್ತವತೆ ಯನ್ನು ಬಹಳ ಪರಿಣಾಮಕಾರಿಯಾಗಿ ಹೇಳಿದೆ ಅಷ್ಟೆ. ನಾವು ಯಾವುದೇ ದೇವತೆಯನ್ನು ಪೂಜಿಸುವ ಮೊದಲು ಆ ದೇವತೆಯನ್ನು ಕಳಶದಲ್ಲೋ, ಬಿಂಬದಲ್ಲೋ, ಮಂಡಲದಲ್ಲೋ,ಮೂರ್ತಿ ಯಲ್ಲೋ ಅವಾಹಿಸಿ ಪ್ರಾಣಪ್ರತಿಷ್ಠೆ ಮಾಡುತ್ತೇವೆ.. ಈ ಮಂತ್ರವು. “ ನನ್ನ ಜೀವವು, ಪ್ರಾಣವು ವಾಕ್ ಮನಸ್ಸ್ಸು, ಕಿವಿ ಕಣ್ಣು ನಾಲಿಗೆ ಎಲ್ಲವೂ, ನಾನು ಆವಾಹಿಸುತ್ತಿರುವ ದೇವತೆಯದಾಗಿರಲಿ, ಹಾಗೂ ದೇವತೆಯ ಜೀವವೂ ಪ್ರಾಣವೂ ನನ್ನಲ್ಲಿ ನೆಲಸಲಿ, ಎಂದು ಹೇಳುತ್ತದೆ. ಅದು ನಮಗೆ ಅರ್ಥ ಆಗುತ್ತದೋ ಇಲ್ಲವೋ ಪೂಜೆಯನ್ನಂತೂ ಮಾಡುತ್ತೇವೆ.

ಅಹಂ ಬ್ರಹ್ಮಾಸ್ಮಿ ಎಂಬುದು ಕೇಳಲಿಕ್ಕೆ ಅಹಂಕಾರದಿಂದ ಹೇಳುತ್ತಿರುವುದು ಎನಿಸಬಹುದು. ಒಬ್ಬ ವ್ಯಕ್ತಿ ಒಬ್ಬ ಮಹಾತ್ಮನನ್ನು ಕೇಳಿದನಂತೆ. “ ನೀವು ಏಕೆ ಇಷ್ಟು ಸೊಕ್ಕಿನಿಂದ “ ಅಹಂ ಬ್ರಹ್ಮಾಸ್ಮಿ” ಎಂದು ಹೇಳುತ್ತಿದ್ದೀರಿ ಎಂದು. ಆ ಮಹಾತ್ಮ ಉತ್ತರಿಸಿದನಂತೆ, ನನಗೆ ಹಾಗೆ ಹೇಳಲು ಇಷ್ಟವಿಲ್ಲ ಆದರೆ ಏನು ಮಾಡಲಿ “ ನಾನು ಅದೇ”. ಯಾರು ಬ್ರಹ್ಮವನ್ನು ಈ ರೀತಿಯಲ್ಲಿ ಗುರುತಿಸುತ್ತಾರೋ ಅವರು ಚಾಂಡಾಲನಾಗಿರಲಿ, ಬ್ರಾಹ್ಮಣನಾಗಿರಲಿ ಅವರನ್ನು ಗುರು ಎಂದು ಪರಿಗಣಿಸಲು ಅರ್ಹರಾಗಿರುತ್ತಾರೆ. ಇದು ನನ್ನ ಸ್ಥಿರವಾದ ನಂಬಿಕೆ. ಮನೀಷಾ ಮಮ. ಎನ್ನುತ್ತಾರೆ ಶಂಕರ ಭಗವತ್ಪಾದರು.

ಈಗ ಮನೀಷಾ ಪಂಚಕದ ಮೂರನೇ ಶ್ಲೋಕವನ್ನು ನೋಡೋಣ.

ಶಶ್ವನ್ನಶ್ವರಮೇವ ವಿಶ್ವಮಖಿಲಂ ನಿಶ್ಚಿತ ವಾಚಾ ಗುರೋ
ರ್ನಿತ್ಯಂ ಬ್ರಹ್ಮ ನಿರಂತರಮ್ ವಿಮೃಶಾತಾ ನಿರ್ವ್ಯಾಜಶಾಂತಾತ್ಮನಾ
ಭೂತಂ ಭಾವಿ ಚ ದುಷ್ಕೃತಂ ಪ್ರದಹತ ಸಂವಿನ್ಮಯೇ ಪಾವಕೇ
ಪ್ರಾರಬ್ಧಾಯ ಸಮರ್ಪಿತಂ ಸ್ವವಪುರಿತ್ಯೇಷಾ ಮನೀಷಾ ಮಮ ೩

ಶಶ್ವನ್ನಶ್ವರಮೇವ ವಿಶ್ವಮಖಿಲಂ ನಿಶ್ಚಿತ ವಾಚಾ ಗುರೋ

ಗುರುವಿನ ನಿಶ್ಚಿತ ವಾಕ್ಯದಂತೆ ಈ ಜಗತ್ತು ನಶ್ವರವಾದ್ದು ಮತ್ತು ಶಾಶ್ವತವಲ್ಲದ್ದು ಆಗಿದೆ.

ರ್ನಿತ್ಯಂ ಬ್ರಹ್ಮ ನಿರಂತರಮ್ ವಿಮೃಶಾತಾ ನಿರ್ವ್ಯಾಜಶಾಂತಾತ್ಮನಾ

ಎಚ್ಚರಿಕೆಯಿಂದ,ಕಳಂಕ ರಹಿತ,ನೆಮ್ಮದಿಯ ಮತ್ತು ಶಾಂತಿಯ ಪ್ರಜ್ನೆಯಿಂದ ವಿಮರ್ಶೆ ಮಾಡಿದ್ದೇ ಆದರೆ “ಬ್ರಹ್ಮನ್” ಎಂಬುದು ನಿತ್ಯವಾದ್ದ್ದು, ಚಿರಂತನವಾದ್ದು ಶಾಶ್ವತವಾದ್ದು, ಅಪ್ರತಿಮವಾದ್ದು ಮತ್ತು ಭೇದರಹಿತವಾದ್ದೂ ಆಗಿದೆ.

ವಿಭಿನ್ನ ಯೋಚನೆಗಳಿಂದ ಹೊರಬಂದು “ ಬ್ರಹ್ಮನ್” ಎನ್ನುವುದು ಶಾಶ್ವತವಾದ್ದು ಎಂಬುದರ ಮೇಲೆ ಮನಸ್ಸು ನೆಲೆಸಿದರೆ, ಅಂತಹ ಮನಸ್ಸು ಶಾಂತತೆಯನ್ನು , ಸಮತೋಲತೆ ಯನ್ನು ಪಡೆದುಕೊಳ್ಳುತ್ತದೆ ಎಂಬುದಾಗಿಯೂ ಅರ್ಥೈಸಬಹುದು.

ಭೂತಂ ಭಾವಿ ಚ ದುಷ್ಕೃತಂ ಪ್ರದಹತ ಸಂವಿನ್ಮಯೇ ಪಾವಕೇ
ಪ್ರಾರಬ್ಧಾಯ ಸಮರ್ಪಿತಂ ಸ್ವವಪುರಿತ್ಯೇಷಾ ಮನೀಷಾ ಮಮ

ನಮ್ಮ ಭೌತಿಕ ಶರೀರಗಳು ನಾವು ಹಿಂದೆ ಮಾಡಿರುವ, ಈಗ ಮಾಡುತ್ತಿರುವ ಮತ್ತು ಮುಂದೆ ಮಾಡಬಹುದಾದ ( ಭಾವಿ ಚ ಎನ್ನುವದನ್ನು ಗಮನಿಸಬೇಕು- ಇದು ಮುಂದೆ ಮಾಡಬಹುದಾದ ಎಂಬುದನ್ನು ಸೂಚಿಸುತ್ತದೆ) ಪಾಪ ಕೃತ್ಯಗಳ ವಾಸನೆ ಗಳಿಂದಾಗಿರುವುವು. ಯಾರು ಶುದ್ಧ ಪ್ರಜ್ನೆಯೆಂಬ ಅಗ್ನಿಯಲ್ಲಿ ಈ ಪಾಪಗಳನ್ನು ದಹಿಸಬಲ್ಲನೋ ಆತನು ಜ್ನಾನಿ. ಅಂತಹವನು ಚಾಂಡಾಲನೇ ಇರಲಿ, ಬ್ರಾಹ್ಮಣನೇ ಇರಲಿ ನಿಶ್ಚಯವಾಗಿ ಗುರು ಆಗಲು ಅರ್ಹನು ಮತ್ತು ಯೋಗ್ಯನು. ಇದು ನನ್ನ ಸ್ಥಿರವಾದ ನಂಬಿಕೆ. ಮನೀಷಾ ಮಮ.

ಈ ಶ್ಲೋಕವು “ತತ್ ತ್ವಮ್ ಅಸಿ” ಎಂಬ ಮೂರನೇ ಮಹಾವಾಕ್ಯವನ್ನು ಎತ್ತಿಹಿಡಿಯುತ್ತಿದೆ. ತತ್ ತ್ವಂ ಅಸಿ ಎಂದರೆ ಅದು ನೀನು. ಅದು ಅಂದರೆ ನೀನು, ಬ್ರಹ್ಮ, ಅಥ್ವಾ ನೀನು ಪ್ರಜ್ನೆ ಎಂದು ಅರ್ಥ.

ಉದ್ಧಾಲಕ ಮತ್ತು ಆತನ ಮಗ ಶ್ವೇತಕೇತುವಿನ ನಡುವಿನ ಸಂಭಾಷಣೆಯ ರೂಪದಲ್ಲಿ ಛಾಂದೋಗ್ಯ ಉಪನಿಷತ್ತಿನ ಆರನೇ ಅದ್ಯಾಯದ ಏಳನೇ ವಿಭಾಗದ ಎಂಟನೇ ಶ್ಲೋಕದಲ್ಲಿ ತತ್ ತ್ವಂ ಅಸಿ ಎನ್ನುವ ಮಹಾವಾಕ್ಯ ಇದೆ.

ಸ ಯ ಏಷೋ ಣಿಮೈತದಾತ್ಮಮಿದಂ ಸರ್ವ ತತ್ಸತ್ಯಂ ಸ ಆತ್ಮಾ ತತ್ವಮಸಿ ಶ್ವೇತಕೇತೋ ಇತಿ ಭೂಯ ಏವ ಮಾ ಭಗವಾನ್ವಿಜ್ನಾಪಯತ್ವಿತಿ ತಥಾ ಸೋಮ್ಯೇತಿ ಹೋವಾಚ.

ಯಾವುದು ಸೂಕ್ಷ್ಮಾತಿ ಸೂಕ್ಷ್ಮವೋ ಅದು ಸತ್ಯ. ಅದು ಆತ್ಮ. ನಾವು ಅನೇಕ ರೂಪಗಳನ್ನು ನಮ್ಮ ಮುಂದೆ ಕಾಣುತ್ತೇವೆ. ಅವು ನಿರಂತರವಾಗಿ ಬದಲಾವಣೆ ಅಗುತ್ತಲೇ ಇರುತ್ತವೆ. ಆದರೆ ಇವುಗಳ ಮೂಲ ಯಾವುದೋ,ಅದು ಬದಲಾವಣೆ ಆಗುವುದಿಲ್ಲಾ. ಅದು ನಮ್ಮ ನಿಜ ಸ್ವರೂಪ. “ಅದು ನಾನು”- ತತ್ ತ್ವಮ್ ಅಸಿ . ಎಲ್ಲಿಯವರೆಗೆ ನಾವು ನಮ್ಮ ದೇಹದೊಂದಿಗೆ ’ ನಾನು’ ಎನ್ನುವುದನ್ನು ಗುರುತಿಸಿಕೊಳ್ಳ್ಳು ತ್ತೇವೆಯೋ ಅಲ್ಲಿಯವರೆಗೆ ನಾವು ಬೇರೆಯವರೊಂದಿಗೆ ಪ್ರತ್ಯೇಕವಾಗಿಯೇ ಗುರುತಿಸಿಕೊಳ್ಳುತ್ತೇವೆ. ’ನಾನು ಬ್ರಾಹ್ಮಣ, ನಾನು ಬುದ್ಧಿವಂತ, ನಾನು ಅಜ್ನಾನಿ, ನಾನು ಇಂತಹ ಊರಿನವನು, ನಾನು ಉದ್ದವಾಗಿದ್ದೇನೆ, ನಾನು ಕುಳ್ಳಗಿದ್ದೇನೆ, ನಾನು ಬೆಳ್ಳಗಿದ್ದೇನೆ, ನಾನು ಕಪ್ಪಗಿದ್ದೇನೆ ಇವೆಲ್ಲಾ ಉಪಾದಿಗಳು. ಇವೆಲ್ಲವನ್ನೂ ತೆಗೆದುಹಾಕಿದಾಗಲೇ ಸತ್ಯ ದರ್ಶನ ಆಗಲು ಸಾಧ್ಯ.

ಮುಂದುವರೆಯುವುದು…

ಶ್ರೀ ಶಂಕರ ಭಗವತ್ಪಾದರ ಮನೀಷಾ ಪಂಚಕ – ಭಾಗ 1

ಶ್ರೀ ಶಂಕರ ಭಗವತ್ಪಾದರ ಮನೀಷಾ ಪಂಚಕ – ಭಾಗ 3

ಶ್ರೀ ಶಂಕರ ಭಗವತ್ಪಾದರ ಮನೀಷಾ ಪಂಚಕ – ಕೊನೆಯ ಭಾಗ (4)

3 Comments on “ಶ್ರೀ ಶಂಕರ ಭಗವತ್ಪಾದರ ಮನೀಷಾ ಪಂಚಕ ಭಾಗ 2

  1. Pingback: ಶ್ರೀ ಶಂಕರ ಭಗವತ್ಪಾದರ ಮನೀಷಾ ಮಮ- ಕೊನೆಯ ಭಾಗ(4) – Atmanandanatha

  2. Pingback: ಶ್ರೀ ಶಂಕರ ಭಗವತ್ಪಾದರ ಮನೀಷಾ ಪಂಚಕ- ಭಾಗ 3 – Atmanandanatha

  3. Pingback: ಶ್ರೀ ಶಂಕರ ಭಗವತ್ಪಾದರ ಮನೀಷಾ ಪಂಚಕ- ಭಾಗ 1 – Atmanandanatha

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: