ಶ್ರೀ ವಿದ್ಯಾ ಪಂಚದಶೀ ಮಂತ್ರದ 7 ಅರ್ಥಗಳು: ಮೊದಲನೇ ಅರ್ಥ – “ಗಾಯತ್ರಿ”


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ

ಶ್ರೀ ಭಾಸ್ಕರಮಖಿಗಳು ( ಶ್ರೀ ಭಾಸುರಾನಂದ ನಾಥರು) ತಮ್ಮ ವಾರಿವಾಸ್ಯ ರಹಸ್ಯ ದ 2 ನೇ ಅಧ್ಯಾಯದಲ್ಲಿ ಶ್ರೀ ವಿದ್ಯಾ ಪಂಚದಶೀ ಮಂತ್ರಕ್ಕೆ 15 ವಿವಿಧ ಅರ್ಥಗಳನ್ನು ಕೊಟ್ಟಿದ್ದಾರೆ. ಈ ಮಂತ್ರದಲ್ಲಿ 15 ಅಕ್ಷರ ಹಾಗೆಯೇ 15 ಅರ್ಥಗಳು.

ಶ್ರೀ ಭಾಸ್ಕರಮಖಿಗಳು ಹೇಳುತ್ತಾರೆ:

ಪುರುಷಾರ್ಥಾ ನಿಚ್ಚಿಂದ್ರಿಃ ಪುರುಷೈರರ್ಥಾ ಪರಿಜ್ಞೇಯಾಃ
ಅರ್ಥಾನಾದರಭಾಜಾಂ ನೈವಾರ್ಥ ಪ್ರತ್ಯುತಾನರ್ಥ
ಏತೇನಾರ್ಥಜ್ಞಾನಸ್ಯ ನಿತ್ಯತ್ವಮುಕ್ತಂ ಭವತಿ.

ಯಾರು ಪುರುಷಾರ್ಥಗಳನ್ನು, ಧರ್ಮ ಅರ್ಥ ಕಾಮ ಮೋಕ್ಷಗಳನ್ನು ಬಯಸುತ್ತಾರೋ ಅವರು ಮಂತ್ರಗಳ ಅರ್ಥವನ್ನು ತಿಳಿದು ಮಂತ್ರ ಸಾಧನೆ ಮಾಡಬೇಕು. ಹಾಗಿಲ್ಲವಾದರೆ ಪುರುಷಾರ್ಥಗಳ ಸಿದ್ಧಿಯಾಗುವುದಿಲ್ಲ, ಅಷ್ಟೇ ಅಲ್ಲದೆ ಅದು ಅನರ್ಥಕ್ಕೂ ಹಾದಿ ಆಗುತ್ತದೆ.

ಅಥಾತಃ ಪೂರ್ಣಗಾಯತ್ರ್ಯಾಃ ಪ್ರತಿಪಾದ್ಯೋsರ್ಥ ಆದಿಮಃ
ಭಾವಾರ್ಥಃ ಸಂಪ್ರದಾಯಾರ್ಥೇ ನಿಗರ್ಭಾರ್ಥಸ್ತುರೀಯಕಃ
ಕೌಲಿಕಾರ್ಥೋ ರಹಸ್ಯಾರ್ಥೋ ಮಹಾತತ್ವಾರ್ಥ ಏವ ಚ
ನಾಮಾರ್ಥ ಶಬ್ದರೂಪಾರ್ಥಶ್ಚಾರ್ಥೇ ನಾಮೈಕದೇಶಗಃ
ಶಾಕ್ತ್ಯಾರ್ಥಃ ಸಾಮರಸ್ಯಾರ್ಥಃ ಸಮಸ್ತಸಗುಣಾರ್ಥಕೌ
ಮಹಾವಾಕ್ಯಾರ್ಥ ಇತ್ಯಾರ್ಥಾಃ ಪಂಚದಶ್ಯಾಃ ಸ್ವಸಂಮಿತಾಃ

ಈ ಕಾರಣಕ್ಕಾಗಿ ಇನ್ನುಮುಂದೆ ಪೂರ್ತಿ ಗಾಯತ್ರಿಯ ಅರ್ಥವನ್ನು ಹೇಳಿ ನಂತರ ಭಾವಾರ್ಥ, ಸಂಪ್ರದಾಯಾರ್ಥ, ನಾಲ್ಕನೆಯದಾಗಿ ನಿಗರ್ಭಾರ್ಥ, ಕೌಲಿಕಾರ್ಥ, ರಹಸ್ಯಾರ್ಥ, ಮಹಾತತ್ವಾರ್ಥ, ನಾಮಾರ್ಥ, ಶಬ್ಧರೂಪಾರ್ಥ, ನಾಮೈಕದೇಶಾರ್ಥ , ಶಾಕ್ತಾರ್ಥ ,ಸಾಮರಸ್ಯಾರ್ಥ, ಸಮಸ್ತಾರ್ಥ, ಸಗುಣಾರ್ಥ, ಮತ್ತು ಮಹಾವಾಕ್ಯಾರ್ಥ, ಅಂದರೆ ಪಂಚದಶಿಯಲ್ಲಿ ಎಷ್ಟು ಅಕ್ಷರಗಳಿವೆಯೋ ಅಷ್ಟು ಅರ್ಥಗಳು

ಸಂಸ್ಕೃತ ಶ್ಲೋಕಗಳನ್ನು ಬರೆದು ನಂತರ ಅರ್ಥ ಕೊಡುವುದು ಬಹಳ ಸಮಯ ತೆಗೆದುಕೊಳ್ಳುವುದರಿಂದ ಈ ಅರ್ಥಗಳನ್ನು ನಾನು ಕನ್ನಡದಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ.

ಪಂಚದಶಿಯ ಮೊದಲನೆಯ ಅರ್ಥ, ಗಾಯತ್ರಿ:

“ಕ” ಅಕ್ಷರ ಕಾಮೇಶ್ವರ ಸೂಚಕ, ಅಂದರೆ ಯಾರು ಆಸೆಯನ್ನು ಹೊಂದುವರೋ ಅವರು. ಇದು ನೇರವಾಗಿ ಬ್ರಹ್ಮವೇ ಆಗಿದೆ. ಹಾಗೂ ’ತತ್’ ಅನ್ನು ಸೂಚಿಸುತ್ತದೆ.
ಎರಡನೇ ಅಕ್ಷರ ’ಏ” ಕಾಮೇಶ್ವರೀ .ಅದು ‘ ಸವಿತುರ್ ವರೇಣ್ಯಂ” “ಈ ” ಅಕ್ಷರ ” ಭರ್ಗೋ ದೇವಸ್ಯ ಧೀ” ಅಂದರೆ ಎಲ್ಲಕ್ಕೂ ಆಧಾರವಾದ, ಸರ್ವಾಂತರ್ಯಾಮಿ “ಶಿವ.” “ಲ” ಅಕ್ಷರ ಭೂಮಿಯನ್ನು ಸೂಚಿಸಿ ಗಾಯತ್ರಿ ಮಂತ್ರದ “ಮಹಿ” ಯನ್ನು ಹೇಳುತ್ತದೆ.
“ಹ್ರೀಂ” ಮಾಯಾಬೀಜ ಗಾಯತ್ರಿಯ ಮೂರು ಮತ್ತು ನಾಲ್ಕನೇ ಪಾದಗಳನ್ನು ಸೂಚಿಸುತ್ತದೆ.
“ಹ ಸ ಕ” ಈ ಮೂರೂ ಅಕ್ಷರಗಳು ಕೂಡಿ ’ “ತತ್ ಸವಿತುರ್ ವರೇಣ್ಯಂ” ಇನ್ನು ಮುಂದಿನ ’ಹ” “ ಭರ್ಗೋ ದೇವಸ್ಯ ಧೀ” ಯನ್ನು ಸೂಚಿಸುತ್ತದೆ.
ಪಂಚದಶಿಯ ಮೂರನೇ ಕೂಟದ ’ಸ ಕ” ಸಹಾ ತತ್ ಸವಿತುರ್ ವರೇಣ್ಯಮ್ ಮತ್ತು ಭರ್ಗೋ ದೇವಸ್ಯ ಧೀ” ಅನ್ನು ಸೂಚಿಸಿದರೆ, ಇನ್ನು ಮಿಕ್ಕ ಎರಡು ಮತ್ತು ಮೂರನೇ ಕೂಟದ ಅಕ್ಷರಗಳು ಮೇಲೆ ಹೇಳಿದ ಎಲ್ಲವನ್ನೂ ಸೂಚಿಸುತ್ತವೆ.

ಶ್ರೀ ಭಾಸ್ಕರಮಖಿಗಳು ಹೇಳುತ್ತಾರೆ

ಗಾಯತ್ರ್ಯರ್ಥಸ್ತ್ರಿಪುರೋಪನಿಷದ್ ಕಥಿತಸ್ತಥೈವ ಭಗವತೇ

ಈ ರೀತಿಯಾಗಿ ಶ್ರೀ ವಿದ್ಯಾ ಮಂತ್ರದ ಗಾಯತ್ರಿಯನ್ನು ತ್ರಿಪುರೋಪನಿಷದ್ ಮತ್ತು ದೇವೀ ಭಾಗವತದಲ್ಲಿ ನಿರೂಪಿಸಲಾಗಿದೆ.
ಆನಂದಶ್ರೀವಿದ್ಯಾ ಯೂಟ್ಯೂಬ್ ಚಾನಲ್ ನಲ್ಲಿ 2016 ರ ಮೇ 8 ರಂದು ತ್ರಿಪುರೋಪನಿಷದ್ ಅನ್ನು ಪಠನ ಮಾಡಿದ್ದು ಆ ಲಿಂಕನ್ನು ಸಹಾ ಇಲ್ಲಿ ಕೊಟ್ಟಿದ್ದೇನೆ.

ಶ್ರೀ ವಿದ್ಯಾ ಪಂಚದಶೀ ಮಂತ್ರದ 7 ಅರ್ಥಗಳ ಲಿಂಕನ್ನು ಸಹಾ ಇಲ್ಲಿ ಕೊಟ್ಟಿದ್ದೇನೆ:

ಮೊದಲನೇ ಅರ್ಥ – “ಗಾಯತ್ರಿ

ಎರಡನೇ ಅರ್ಥ- “ಭಾವಾರ್ಥ

ಮೂರನೇ ಅರ್ಥ- “ಸಂಪ್ರದಾಯಾರ್ಥ

ನಾಲ್ಕನೇ ಅರ್ಥ- “ನಿಗರ್ಭ ಅರ್ಥ

ಐದನೇ ಅರ್ಥ- “ಕೌಲಿಕಾರ್ಥ

ಆರನೇ ಅರ್ಥ – “ಸರ್ವರಹಸ್ಯಾರ್ಥ

ಏಳನೆಯ ಅರ್ಥ – ” ಮಹಾತತ್ವಾರ್ಥ”

ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು.

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: