ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
ಕ ಟ ಪ ಯ ಸೂತ್ರ ಎನ್ನುವುದು ಅಕ್ಷರಗಳನ್ನು ಸಂಖ್ಯೆಯಿಂದ ಗುರುತಿಸುವ ವಿಧಾನವಾಗಿದೆ. ಕ್ರಿ ಪೂ 4 ನೇ ಶತಮಾನದ ಜೈಮಿನಿ ಮಹರ್ಷಿಗಳ ಜ್ಯೋತಿಷ್ಯ ಶಾಸ್ತ್ರದ ಗ್ರಂಥವನ್ನು ಕ ಟ ಪ ಯ ಸೂತ್ರವನ್ನು ತಿಳಿದುಕೊಳ್ಳದೆ ಅರ್ಥ ಮಾಡಿಕೊಳ್ಳಲು ಆಸಾಧ್ಯ. ಹೀಗೆಯೇ ನಮ್ಮ ಹಲವಾರು ಪುರಾತನ ಗ್ರಂಥಗಳ ರಹಸ್ಯಾರ್ಥಗಳನ್ನು ಅರಿಯಲು ಕ ಟ ಪ ಯ ಸೂತ್ರದ ಜ್ಞಾನ ಬೇಕಾಗುತ್ತದೆ.
ಶ್ರೀ ವಿದ್ಯಾ ಮಂತ್ರಗಳಲ್ಲಿ ಕೂಡ ಈ ಕ ಟ ಪ ಯ ಸೂತ್ರದ ಉಪಯೋಗ ಆಗಿರುವುದನ್ನು ಕಾಣಬಹುದಾಗಿದೆ.
ಶ್ರೀ ವಿದ್ಯಾ ಮೂಲಮಂತ್ರ ಪಂಚದಶೀ 15 ಅಕ್ಷರಗಳನ್ನು ಹೊಂದಿರುವುದು ನಮಗೆ ತಿಳಿದಿದೆ. ಈ 15 ಅಕ್ಷರಗಳ ವಿವಿಧ ಸಂಯೋಜನೆಯಿಂದ ಕಾದಿ ವಿದ್ಯೆ ಹಾದಿ ವಿದ್ಯೆ ಮತ್ತು ಸಾದಿ ವಿದ್ಯೆಗಳೆಂದು ಗುರುತಿಸಲಾಗಿದೆ.
ಹಾಗೆಯೇ ಶ್ರೀ ವಿದ್ಯಾ ಉಪಾಸಕರನ್ನು ಆಧರಿಸಿ 12 ವಿವಿಧ ವಿದ್ಯೆಗಳನ್ನು ಗುರುತಿಸಲಾಗಿದೆ. ಮನುವಿದ್ಯೆ, ಚಂದ್ರ ವಿದ್ಯೆ, ನಂದಿ ವಿದ್ಯಾ, ಲೋಪಮುದ್ರಾ ವಿದ್ಯಾ ಹೀಗೆ.
ಶ್ರೀ ವಿದ್ಯಾ ಪೂಜಾ ಸಂಪ್ರದಾಯಗಳನ್ನು ಆಧರಿಸಿ ಶ್ರೀ ದಕ್ಷಿಣಾ ಮೂರ್ತಿ ಮತ, ಶ್ರೀ ಆನಂದ ಭೈರವ ಮತ ಮತ್ತು ಶ್ರೀ ಹಯಗ್ರೀವ ಮತಗಳನ್ನು ಗುರುತಿಸಲಾಗಿದೆ.
ಪಂಚದಶೀ ಮಂತ್ರದ ಹೊರತಾಗಿ 16 ಅಕ್ಷರಗಳ ಷೋಡಶೀ ಮಂತ್ರ, 18 ಅಕ್ಷರಗಳ ಸೌಭಾಗ್ಯ ಪಂಚದಶೀ ಮಂತ್ರ ಮತ್ತು 28 ಅಕ್ಷರಗಳ ಮಹಾಷೋಡಶೀ ಮಂತ್ರಗಳ ಮೂಲಕವೂ ಸಹಾ ದೇವಿಯ ಉಪಾಸನೆ ಆಗುತ್ತದೆ.
ಈಗ ಕ ಟ ಪ ಯ ಸೂತ್ರ ಏನು ಎಂದು ನೋಡೋಣ:-
KA (क) TA (ट) PA प) YA( य) denotes the No 1
KHA (ख) THA (ठ) PHA (फ) RA (र) denotes the no 2
GA (ग) DA (ड) BA (ब) LA (ल) denotes the no 3
GHA (घ) DHA (ढ) BHA (भ) VA (व) denotes the no 4
NGA ( ग्न) NA (ण) MA (म) SA(श) denotes No 5
CHA ( च)) ThA (त) SHA (ष) denotes No 6
CHHA छ) ThhA (थ) sA (स) denotes No 7
JA (ज) DhA (द) HA (ह) denotes no 8
JHA ( झ्) dha (ध) denotes No 9
बा ला
3 3 Makes 6
ल) लि तां बा
3 3 6 3 MAKES 15
श्री ल लि तां बि के
2 3 3 6 3 1 MAKES 18
श्री रा ज रा जॆ श्व रि
2 2 8 2 8 4 2 MAKES 28
ಈ ಸಮಯದಲ್ಲಿ ದೇವಿಯ ಅಂಗ, ಉಪಾಂಗ ಮತ್ತು ಪ್ರತ್ಯಂಗ ದೇವತೆಗಳ ಬಗ್ಗೆ ಹೇಳಬೇಕು.
ಶ್ರೀ ಲಲಿತಾ ಮಹಾತ್ರಿಪುರಸುಂದರಿಯ ಅಂಗದೇವತೆ ನವಾಕ್ಷರೀ ಬಾಲಾ, ಉಪಾಂಗ ದೇವತೆ ಶ್ರೀ ಅನ್ನಪೂರ್ಣ ಹಾಗೂ ಪ್ರತ್ಯಂಗ ದೇವತೆ ಶ್ರೀ ಅಶ್ವಾರೂಢಾ
ಶ್ರೀ ರಾಜಶ್ಯಾಮಲಾದೇವೀ ಅಥವಾ ಶ್ರೀ ರಾಜಮಾತಂಗೀ ದೇವಿಯ ಅಂಗ ದೇವತೆ ಲಘು ಶ್ಯಾಮಲಾ ಉಪಾಂಗ ದೇವತೆ ಶ್ರೀ ವಾಗ್ವಾದಿನೀ ಮತ್ತು ಪ್ರತ್ಯಂಗ ದೇವತೆ ನಕುಲೀ ದೇವಿ ಅಥವಾ ನಕುಲೀ ಸರಸ್ವತೀ
ಶ್ರೀ ಮಹಾವಾರಾಹೀ ಅಂಗದೇವತೆ ಶ್ರೀ ಲಘು ವಾರಾಹಿ, ಉಪಾಂಗ ದೇವತೆ ಶ್ರೀ ಸ್ವಪ್ನ ವಾರಾಹಿ ಮತ್ತು ಪ್ರತ್ಯಂಗ ದೇವತೆ ಶ್ರೀ ತಿರಸ್ಕರಿಣೀ
ಅಂಗ ದೇವತೆ ಮುಖ್ಯ ದೇವತೆಯ ಭಾಗವಾದರೆ, ಉಪಾಂಗ ದೇವತೆ ಮುಖ್ಯದೇವತೆಯ ಪೂರಕ ಅಥವಾ ಸಹಾಯಕ ದೇವತೆ. ಪ್ರೆತ್ಯಂಗ ದೇವತೆ ಮುಖ್ಯ ದೇವತೆಯ ಪ್ರತಿಬಿಂಬ ಎಂದು ತಿಳಿಯಲಾಗಿದೆ.
ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು