ಶ್ರೀ ಮಹಾಗಣಪತಿ ಮೂಲಮಂತ್ರ ಪದಮಾಲಾ ಸ್ತೋತ್ರ


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ

ಶ್ರೀ ಮಹಾಗಣಪತಿ ಮೂಲಮಂತ್ರವು 28 ಮಾತೃಕೆಗಳನ್ನು ( ಅಕ್ಷರ) ಒಳಗೊಂಡಿದೆ. ಶ್ರೀ ವಿದ್ಯಾ ಮಂತ್ರ ಆರಂಭವಾಗುವುದೇ ಶ್ರೀ ಮಹಾಗಣಪತಿ ಮಂತ್ರದಿಂದ. ಈ ಮಂತ್ರವು ೨೮ ಅಕ್ಷರಗಳು ( ಮಾತೃಕೆಗಳಿಂದ ) ಕೂಡಿದ್ದು ಇವುಗಳನ್ನು ೧೪ ಪದ ಸಮುಚ್ಛಯಗಳನ್ನಾಗಿಸಿ ೧೪ ಶ್ಲೋಕಗಳನ್ನು ಶ್ರೀ ಅನಂತಾನಂದನಾಥರು, ಅಂದರೆ ಶ್ರೀವಿದ್ಯಾ ಮಾರ್ತಾಂಡ ಶ್ರೀ ವಿದ್ಯಾ ವಾಚಸ್ಪತಿ ಶ್ರೀ ಸಿ ವಿ. ಸ್ವಾಮಿ ಶಾಸ್ತ್ರಿಯವರು (1900-1980) ರಚಿಸಿ ತಮ್ಮ ಶ್ರೀ ವಿದ್ಯಾಗುರು ಶ್ರೀ ಚಿದಾನಂದನಾಥರ ಪಾದಪದ್ಮಗಳಲ್ಲಿ ಅರ್ಪಿಸಿದ್ದಾರೆ.

ಈ ಶ್ಲೋಕಗಳನ್ನು ಪಠಿಸುವುದರಿಂದಲೇ ಮಂತ್ರ ಜಪಿಸಿದ ಫಲ ದೊರಕುವುದೇ ಅಲ್ಲದೆ, ಭಕ್ತರಿಗೆ ಎಲ್ಲಾ ರೀತಿಯ ಶುಭವನ್ನು ನೀಡುತ್ತದೆ.

A link to English and Sanskrit version of this sloka given at the end of this article

ಓಂ ಮಿತ್ಯೇತದಜಸ್ಯ ಕಂಠವಿವರಂ ಭಿತ್ವಾ ಬಹಿರ್ನಿರ್ಗತಂ,

ಹ್ಯೋಮಿತ್ಯೇವ ಸಮಸ್ತಕರ್ಮ ಋಷಿಭಿಃ ಪ್ರಾರಭ್ಯತೇ ಮಾನುಷ್ಯೈಃ

ಓಮತ್ಯೇವ ಸದಾ ಜಪಂತಿ ಯತಯಃ ಸ್ವಾತ್ಮೈಕನಷ್ಠಾಃ ಪರಂ

ಹ್ಯೋಂಕಾರಾಕೃತಿ ವಕ್ತ್ರಮಿನ್ದುನಿಟಿಲಂ ವಿಘ್ನೇಶ್ವರಂ ಭಾವಯೇ     !1!

ಶ್ರೀಂ ಬೀಜಂ ಕ್ಷಮದೃಃಖಜನ್ಮಮರಣವ್ಯಾಧ್ಯಾಯಾಧಿಭೀನಾಶಕಂ,

ಮೃತ್ಯು ಕ್ರೋಧನಾಶಾಂತಿಬಿಂದುವಿಲಸದ್ವರ್ಣಾಕೃತಿ ಶ್ರೀಪ್ರದಂ

ಸ್ವಾಂತಸ್ಥಾತ್ಮಶರಸ್ಯ ಲಕ್ಶ್ಯಮಜರಸ್ವಾತ್ಮಾವಭೋಧಪ್ರದಂ

ಶ್ರೀ ಶ್ರೀನಾಯಕ ಸೇವಿತೇ ಭವದನಪ್ರೇಮಾಸ್ಪದಂ ಭಾವಯೇ           !2!

ಹ್ರೀಂ ಬೀಜಂ ಹೃದಯತ್ರಿಕೋಣ ವಿಲಸನ್ಮಧ್ಯಾಸನಸ್ಥಂ ಸದಾ,

ಚಾಕಾಶಾನಲ ವಾಮಲೋಚನ ನಿಶಾನಾಥಾರ್ಧವರ್ಣಾತ್ಮಕಂ

ಮಾಯಾಕಾರ್ಯ ಜಗತ್ಪ್ರಕಾಶಕಮುಮಾರೂಪಂ ಸ್ವಶಕ್ತಿಪ್ರದಂ

ಮಾಯಾತೀತಾಪದಪ್ರದಂ ಹೃದಿ ಭಜೇ ಲೋಕೇಶ್ವರಾರಾಧಿತಾಂ        !3!

ಕ್ಲೀಂ ಬೀಜಂ ಕಲಿ ಧಾತವಕ್ತಲಯತಾಂ ಸರ್ವೇಷ್ಠದಂ ದೇಹಿನಾಂ

ಧಾತೃಕ್ಷಮಾಯುತಶಾಂತಿ ಬಿಂದು ವಿಲಸದ್ವರ್ಣಾತ್ಮಕಂ ಕಾಮದಂ

ಶ್ರೀಕೃಷ್ಣಪ್ರಿಯಮಿಂದಿರಾಸುತಮನಃ ಪ್ರೀತ್ಯೈಕಹೇತುಂ ಪರಂ

ಹೃತ್ಪದ್ಮೇ ಕಲಯೇ ಸದಾ ಕಲಿಹರಂ ಕಾಲಾರಿಪುತ್ರಪ್ರಿಯಂ                !4!

ಗ್ಲೌಂ ಬೀಜಂ ಗುಣರೂಪನರ್ಗುಣ ಪರಬ್ರಹ್ಮಾದಿಶಕ್ತೇಃ ಮಹಾ-

ಹಂಕಾರಾಕೃತಿ ದಂಡಿನೀಪ್ರಿಯಮಜಶ್ರೀನಾಥ ರುದ್ರೇಷ್ಠದಮ್

ಸರ್ವಾಕರ್ಷಿಣಿ ದೇವರಾಜ ಭುವನಾರ್ಣೇನ್ದ್ವಾತ್ಮಕಂ ಶ್ರೀಕರಂ

ಚಿತ್ತೇ ವಿಘ್ನನಿವಾರಣಾಯ ಗಿರಿಜಾ ಜಾತಪ್ರಿಯಂ ಭಾವಯೇ               !5!

ಗಂಗಾಸುತಂ ಗಂಧಮುಖೋಪಚಾರಪ್ರಿಯಂ ಖಗಾರೋಹಣ

ಭಾಗಿನೇಯಂ ಗಂಗಾಸುತಾದ್ಯಂ ವರಗಂಧತತ್ವಮೂಲಾಂಬುಜಸ್ಥಂ

ಹೃದಿ ಭಾವಯೇ sಹಮ್                                                          !6!

ಗಣಪತಯೇ ವರಗುಣನಿಧಯೇ ಸುರಗಣಪತಯೇ ನತಜನತತಯೇ

ಮಣಿಗಣಭೂಷಿತಚರಣಯುಗಾಶ್ರಿತಮಲಹರಣೇಚಣ ತೇ ನಮಃ            !7!

ವರಾಭಯೇ ಮೋದಕಮೇಕದಂತಂ ಕರಾಂಬುಜಾತೈಸ್ತತತಂ ಧರಂತಂ

ವರಾನ್ಗಚಂದ್ರಂ ಪರಭಕ್ತಿ ಸಾಂದ್ರೈ ಜನೈರ್ಭಜನ್ತಂ ಕಲಯೇ ಸದಾನ್ತಃ        !8!

ವರದ ನತಜನಾನಾಂ ಸಂತತಂ ವಕ್ರತುಂಡ ಸ್ವರಮಯನಿಜಗಾತ್ರ

ಸ್ವಾತ್ಮಬೋಧೌಕಹೇತೋ ಕರಲಸದಮೃತಾಂಭೋಪೂರ್ಣಪಾತ್ರಾದ್ಯ

ಮಹ್ಯಂ ಗರಗಲಸುತ ಶೀಘ್ರಂ ದೇಹಿ ಮದ್ ಬೋಧಮೀಡ್ಯಂ                  !9!

ಸರ್ವಜನಂ ಪರಿಪಾಲಯ ಶರ್ವಜ ಪರ್ವಸುಧಾಕರಗರ್ವಹರ

ಪರ್ವತನಾಥ ಸುತಾಸುತ ಪಾಲಯ ಸರ್ವ ಮಾಂ ಕುರು ದೀನಮಿಮಂ      !10!

ಮೇದೋ s ಸ್ಥಿ ಮಾಂಸ ರುಧಿರಾ ನ್ತ್ರಯಮೇ ಶರೀರೇ

ಮೇದಿನ್ಯ ಬಗ್ನಿಮರುದಂಬರಲಾಸ್ಯಮಾನೇ

ಮೇ ದಾರುಣಂ ಮದಮುಖಧಮುಮಾಜ ಹೃತ್ವಾ

ಮೇಧಾಹ್ವಯಾಸನವರೇ ವಸ ದಂತಿವಕ್ತ್ರ                                             !11!

ವಶಂ ಕುರು ತ್ವಂ ಶಿವಜಾತ ಮಾಂ ತೇ ವಶೀಕೃತಾಶೇಷ ಸಮಸ್ತ ಲೋಕ

ವಸಾರ್ಣ ಸಂಶೋಭಿತಮೂಲಪದ್ಮಲಸಚಿಛ್ರಯಾ s ಲಿಂಗಿತವಾರಣಾಸ್ಯ         !12!

ಆನಯಾಸು ಪದವಾರೀಜಾಂತಿಕಂ ಮಾಂ ನಯಾದಿ ಗುಣವರ್ಜಿತಂ ತವ

ಹಾನಿಹೀನಪದಜಾಮೃತಸ್ಯ ತೇ ಪಾನ ಯೋಗ್ಯಮಿಭವಕ್ತ್ರ ಮಾಂ ಕುರು           !13!

ಸ್ವಾಹಾ ಸ್ವರೂಪೇಣ ವಿರಾಜಸೇ ತ್ವಂ ಸುಧಾಶನಾನಾಂ ಪ್ರಿಯಕರ್ಮಣಿಡ್ಯ

ಸ್ವಧಾ ಸ್ವರೂಪೇಣ ತು ಪಿತೃಕರ್ಮಣ್ಯು ಮಾಸುತೇ ಜ್ಯಾಮಯವಿಶ್ವಮೂರ್ತೇ       !14!

ಅಷ್ಟಾವಿಂಶತಿ ವರ್ಣಪತ್ರಲಸಿತಂ ಹಾರಂ ಗಣೇಶಪ್ರಿಯಂ

ಕಷ್ಟಾ ನಿಷ್ಟಹರಂ ಚತುರ್ದಶಪದ್ಯೈಃ ಪುಷ್ಪೈರ್ಮನೋಹಾರಕಂ

ತುಷ್ಟಚಾತಾದಿಪ್ರದ ಸದ್ಗುರುತ್ತಮಪದಾಂಭೋಜೇ ಚಿದಾನಂದದಂ

ಶಿಷ್ಟೇಷ್ಟೋ ಹಂ ಅನಂತಸೂತ್ರ ಹೃದಯಾ ssಬದ್ಧಂ ಸುಭಕತ್ಯಾ s ರ್ಪಯೇ

ಓಂಕಾರ ರೂಪದ ಓ ವಕ್ರತುಂಡ ಗಣಪತಿಯೇ ನಿನಗೆ ಪ್ರಣಾಮಗಳು. ಶಬ್ಧಬ್ರಹ್ಮನ ಕಂಠದಿಂದ ಬಂದ ಓಂಕಾರವು ಜಗತ್ತೆಲ್ಲವನ್ನೂ ವ್ಯಾಪಿಸಿದೆ. ಎಲ್ಲಾ ಶುಭ ಕಾರ್ಯಗಳಲ್ಲಿಯೂ ಅಶುಭ ಕಾರ್ಯಗಳ ಆರಂಭದಲ್ಲಿ ಓಂಕಾರದ ಪ್ರಯೋಗವಾಗುತ್ತಿದೆ. ಅಂತರ್ಮುಖಿಗಳಾದ ಯೋಗಿಗಳು ಮತ್ತು ಸಾಮಾನ್ಯ ಜನರೂ ಸಹಾ ಓಂಕಾರವನ್ನು ಸದಾ ಜಪಿಸುತ್ತಾರೆ.

ಶ್ರೀ ಎಂದು ಕರೆಯಲ್ಪಡುವ ಲಕ್ಷ್ಮಿ ಮತ್ತು ಶ್ರೀ ನಾಯಕ ಎಂದು ಕರೆಯಲಾಗುವ ವಿಷ್ಣು, ಇವರಿಂದ ಪೂಜೆಯನ್ನು ಕೈಗೊಳ್ಳುತ್ತಿರುವ ಗಣಪತಿಗೆ ನನ್ನ ಪ್ರೀತಿಪೂರ್ವಕ ನಮಸ್ಕಾರಗಳು. ಹುಟ್ಟು ಸಾವುಗಳಿಂದ ರೋಗರುಜಿನಗಳಿಂದ, ಪ್ರಕೃತಿ ವಿಕೋಪಗಳಿಂದ, ಉಂಟಾಗುವ ಹಾನಿ ಮತ್ತು ದುಃಖವು ಶ್ರೀಮ್ ಕಾರವನ್ನು ಜಪಿಸುವುದರಿಂದ, ಗಣಪತಿಯ ಅನುಗ್ರಹ ದೊರೆತು ದುಃಖವು ಶಮನವಾಗುತ್ತದೆ. ಅವಿನಾಶಿಯಾದ, ಶಾಶ್ವತ ವಾದ ಆತ್ಮವನ್ನು ತಲುಪಲು ಹಾಗೂ ನಾನು ಎಂಬುವ ಆತ್ಮನನ್ನು ಎಚ್ಚರಿಸಲು ಗಣಪತಿಯು ನೇರವಾದ ಬಾಣ.

ಓ ಗಣಪತಿ, ಎಲ್ಲಾ ದೇವತೆಗಳು ನಿನ್ನನ್ನು ಆರಾಧಿಸುತ್ತಾರೆ. ನೀನು ಪ್ರಾಪಂಚಿಕ ಗೊಂದಲಗಳನ್ನು ನಿವಾರಿಸಿ ಪರಮಾನಂದವನ್ನು ದಯಪಾಲಿಸುವೆ. ಹೃದಯದ ಆಸ್ಥಾನವಾಗಿರುವ ತ್ರಿಕೋಣದ ಮಧ್ಯಭಾಗವೇ ನಿನ್ನ ಆಸ್ಥಾನವಾಗಿದೆ. ಆಕಾಶ, ಕಾಲ, ಅಗ್ನಿ ಮತ್ತು ಇನ್ನಿತರ ಇನ್ನಿತರ ಬೀಜಾಕ್ಷರಗಳು ಸೇರಿ ಹ್ರೀಂ ಎಂಬ ಬೀಜಾಕ್ಷರವಾಗಿದೆ

ಪರ್ವತರಾಜನ ಪುತ್ರಿಯಾದ ಗಿರಿಜೆಯೆ ಪುತ್ರನಾದ ಓ ಗಣಪತಿಯೇ, ಎಲ್ಲ ಬಗೆಯ ವಿಘ್ನಗಳ ನಿವಾರಣೆಗಾಗಿ ನಿನ್ನನ್ನು ಪ್ರಾರ್ಥಿಸುತ್ತಿದ್ದೇನೆ. ಕ್ಲೀಂ ಬೀಜವು ಮಹಾವಾರಾಹಿ, ಸರ್ವಾಕರ್ಷಿಣೀ ಶಕ್ತಿ, ಇಂದ್ರ ಮತ್ತು ೧೪ ಲೋಕಗಳನ್ನು ಸೂಚಿಸುತ್ತದೆ

ಮೃತ್ಯು ದೇವತೆಯಾದ ಯಮನನ್ನು ಜಯಿಸಿದ ಮಹೇಶ್ವರ ಮತ್ತು ಉಮಾ ದಂಪತಿಗಳ ಪುತ್ರನಾಗಿದ್ದೀಯೆ. ಶ್ರೀ ಕ್ರಷ್ಣನಿಗೆ ಅತಿ ಪ್ರೀತಿಪಾತ್ರಗಳಾದ ಲಕ್ಷ್ಮಿಯ ಅತಿ ಮುದ್ದಿನ ಬಾಲಕನಾಗಿದ್ದೀಯೆ. ಎಲ್ಲಾ ಆಸೆಗಳನ್ನು ಈಡೇರಿಸುವ ಮತ್ತು ಕಲಿಯುಗ್ಮದ ಕೆಟ್ಟ ಪರಿಣಾಮಗಳನ್ನು ನಾಶಪಡಿಸುವವ ನಾಗಿದ್ದೀಯೆ. ಗ್ಲೌಂ ಬೀಜಾಕ್ಷರವು ಬ್ರಹ್ಮ ಮತ್ತು ಭೂಮಿಯ ಘಟಕವಾಗಿದ್ದು ಇನ್ನುಳಿದ ಬೀಜಾಕ್ಷರಗಳನ್ನೊಳಗೊಂಡು ಭೂಮಿಯ ಘಟಕದಲ್ಲಿ ನಿನ್ನ ಆಸ್ಥಾನವನ್ನು ವ್ಯಕ್ತಪಡಿಸುತ್ತಿದೆ

ಗಂಗಾಮಾತೆಯ ಜ್ಯೇಷ್ಟಪುತ್ರನಾದ ಗಣಪತಿಯೇ ನಾನು ನಿನ್ನ ಚರಣಕಮಲಗಳಲ್ಲಿ ಧ್ಯಾನಾಸಕ್ತನಾಗಿದ್ದೇನೆ. ಗಂಧ, ಪುಷ್ಪ, ಧೂಪ, ದೀಪ ಮತ್ತು ನೈವೇದ್ಯಗಳನ್ನು ಪಂಚೋಪಚಾರಗಳಾಗಿ ಪೂಜೆಯಲ್ಲಿ ನಿನಗೆ ಅರ್ಪಿಸಲಾಗುತ್ತದೆ. ಗರುಡವಾಹನ ವಿಷ್ಣುವಿನ ಸಹೋದರನ ಪುತ್ರ ನೀನು. ಗಂಧ ಎಂದರೆ ವಾಸನಾ ಜ್ಞಾನವನ್ನು ಪ್ರತಿನಿಧಿಸುವ ಭೂತತ್ವದ ಮೂಲಾಧಾರವು ನಿನ್ನ ಸ್ಥಾನವಾಗಿದೆ

ಅತ್ಯಮೂಲ್ಯವಾದ ರತ್ನಗಳಿಂದ ಅಡಕವಾಗಿರುವ ಹೊಳೆಯುತ್ತಿರುವ ಕಾಲ್ಗಡಗಳಿಂದ ಅಲಂಕೃತವಾಗಿರುವ ನಿನ್ನ ಪಾದ ಕಮಲಗಳಿಗೆ ನಮಸ್ಕರಿಸುತ್ತಿದ್ದೇನೆ. ಉದಾತ್ತಗುಣಗಳ ಭಂಡಾರವೇ ನೀನಾಗಿದ್ದೀಯೆ. ನೀನು ಗಣಗಳ ನಾಯಕನಾಗಿ, ಭಕ್ತರಿಂದ ಸುತ್ತುವರೆದಿದ್ದೀಯೆ

ಮೋದಕ, ಮುರಿದ ದಂತ ವನ್ನು ಹಿಡಿದು ಅಭಯ ಮತ್ತು ವರದ ಮುದ್ರೆಗಳಿಂದ ನಮ್ಮನ್ನು ಹರಸುತ್ತಿದ್ದೀಯೆ. ಅರ್ಧಚಂದ್ರನು ನಿನ್ನ ಕಿರೀಟವನ್ನು ಅಲಂಕರಿಸಿದ್ದಾನೆ. ಜ್ಞಾನಿಗಳು ತಮ್ಮ ಹೃದಯದಲ್ಲಿ ಸದಾ ನಿನ್ನ ಧ್ಯಾನವನ್ನು ಮಾಡುತ್ತಿದ್ದಾರೆ. ನನ್ನ ಹೃದಯದ ಯಾವುದೋ ಮೂಲೆಯಲ್ಲಿ ನಿನ್ನ ಅನುಗ್ರಹ ಮಿನುಗುತ್ತಿದೆ.

ನಿನ್ನ ಪಾದಗಳಲ್ಲಿ ಶಿರವೊಡ್ಡಿ ಶರಣಾಗತರಾದವರಿಗೆ ಎಲ್ಲಾ ಶುಭಗಳನ್ನೂ ನೀನು ಕರುಣಿಸುತ್ತಿದ್ದೀಯೆ. ಶಬ್ಧದ ಸತ್ವ, ಶಬ್ಧದ ಮೂಲವಾದ ಶಬ್ಧ ಬ್ರಹ್ಮದ ಸಾಕಾರ ರೂಪವೇ ನೀನಾಗಿರುವೆ. ನಿನ್ನ ಹನ್ನೊಂದನೆಯ ಕರವಾದ ಸೊಂಡಿಲಿನಲ್ಲಿ ರತ್ನ ಖಚಿತವಾದ ಬಂಗಾರದ ಕಲಶದಲ್ಲಿರುವ ಅಮೃತವನ್ನು ನನಗೆ ಕರುಣಿಸಿ ನಾನು ಆತ್ಮಸಾಕ್ಷಾತ್ಕಾರ ಜ್ಞಾನ ಹೊಂದುವಂತೆ ಅನುಗ್ರಹಿಸು.

ಓ ಶಿವಪುತ್ರನೇ, ಚೌತಿ ಚಂದ್ರನ ಅಹಂಕಾರವನ್ನು ಅಡಗಿಸಿದವನೇ, ಹಿಮಪರ್ವತನ ಮೊಮ್ಮಗನೇ, ಅತ್ಯಲ್ಪನಾದ ನನ್ನ ಮೇಲೆ ನಿನ್ನ ಅನುಗ್ರಹವೃಷ್ಟಿ ಯನ್ನು ಕರುಣಿಸು.

ನನ್ನ ದೇಹವು ಸಪ್ತಧಾತುಗಳಿಂದಲೂ, ಪಂಚಭೂತಗಳಿಂದಲೂ ಆಗಿದ್ದು, ಓ ಉಮಾಸುತನೇ ನನ್ನ ಅಜ್ಞಾನದಿಂದ, ಅಹಂಕಾರದಿಂದ ಸಂಗ್ರಹಿತವಾಗಿರುವ ಪಾಪಗಳಿಂದ ಪ್ರಕ್ಷುಬ್ಧನಾಗಿದ್ದೇನೆ. ನೀನು ಆಗಮಿಸಿ ನನ್ನ ಮನಸ್ಸಿನ  ಧಾರಣ ಶಕ್ತಿಯ ಸ್ಥಾನದಲ್ಲಿ ಆಸೀನನಾಗಿ  ಅದನ್ನು  ಜ್ಞಾನ ಮತ್ತು ವಿವೇಕಗಳ ಪ್ರವಾಹದಿಂದ ತುಂಬಿಬಿಡು.

ಓ ಎಲ್ಲ ಲೋಕಗಳ ನಿಯಂತ್ರಕನಾದ ನೀನು, ನನ್ನ ಪಳಗಿಲ್ಲದ ಜ್ಞಾನೇಂದ್ರಿಯಗಳನ್ನು ನಿಯಂತ್ರಿಸಿ ನನ್ನನ್ನು ಅನುಗ್ರಹಿಸು. ಓ ಗಜಮುಖನೇ ನೀನು, ವ ಸ ಮತ್ತು ಶ ಷ ಎಂಬ ಬೀಜಮಂತ್ರಗಳನ್ನು ಪ್ರತಿನಿಧಿಸುವ ಮೂಲಾಧಾರ ಪದ್ಮದಲ್ಲಿ ಲಷ್ಮಿಯೊಂದಿಗೆ ಆಸೀನನಾಗಿದ್ದೀಯೆ.

ನಾನು ಅಜ್ಞಾನಿ ಅಷ್ಟೇ ಅಲ್ಲಾ ನಾನು ಎಲ್ಲಾ ಒಳ್ಳೆಯ ಗುಣಗಳಿಂದ ಒಳ್ಳೆಯ ಹಾದಿಯಿಂದ ದೂರವಿದ್ದೇನೆ. ಸದಾ ರಕ್ಷಿಸುತ್ತಿರುವ ನಿನ್ನ ಪಾದಪದ್ಮಗಳೆಂಬ ಅಮೃತವನ್ನು ಸವಿಯುವ ಅರ್ಹತೆಯನ್ನು, ನಿನ್ನ ಪಾದಪದ್ಮಗಳಲ್ಲಿ ಆಶ್ರಯವನ್ನು ನೀಡುವ ಮೂಲಕ ಸದಾ ರಕ್ಷಿಸುತ್ತಿರುವ ನಿನ್ನ ಪಾದಪದ್ಮಗಳೆಂಬ ಅಮೃತವನ್ನು ಸವಿಯುವ ಅರ್ಹತೆಯನ್ನು ಕರುಣಿಸು.

ಓ ಉಮಾಸುತನೇ, ಯಜ್ಜಾಗ್ನಿಯ ದೊರೆಯೇ ನಿನ್ನನ್ನು ಅಗ್ನಿಹೋತ್ರಿಗಳು “ ಸ್ವಾಹಾ” ಎಂಬುದಾಗಿ ಅರ್ಚಿಸುತ್ತಾರೆ ಹಾಗೆಯೇ ಪಿತೃಕಾರ್ಯಗಳಲ್ಲಿ “ಸ್ವಧಾ” ಎಂಬುದಾಗಿ ನಿನ್ನನ್ನು ಪೂಜಿಸುತ್ತಾರೆ

28 ದಳಗಳು 14 ಪದಸಮುಚ್ಚ್ಯವಾಗಿರುವ ಈ ಹಾರವು ಗಣೇಶನಿಗೆ ಪ್ರೀತಿದಾಯಕವಾಗಿದೆ. ಈ ಸ್ತೋತ್ರಹಾರವು ಎಲ್ಲ ರೀತಿಯ ಶುಭವನ್ನು ನೀಡಿ, ಭಕ್ತರ ಆಸೆಗಳನ್ನು ಪೂರೈಸಬಲ್ಲುದಾಗಿದೆ. ಅನುಗ್ರಹಮೂರ್ತಿ ಶ್ರೀ ಸದ್ಗುರು ಚಿದಾನಂದನಾಥರ ಪಾದಪದ್ಮಗಳಲ್ಲಿ ನಾನು ಒಬ್ಬ ಧನ್ಯ ಶಿಷ್ಯನಾಗಿದ್ದೇನೆ. ಈ ಸ್ತೊತ್ರಹಾರವು ಅನಂತಾನಂದನಾಥನ ಹೃದಯದಾಳದಿಂದ ಬಂದಿದ್ದು ಅತ್ಯಂತ ಭಕ್ತಿಪೂರ್ವಕವಾಗಿ ನನ್ನ ಗುರು ಶ್ರೀ ಚಿದಾನಂದನಾಥರ ಪಾದಪದ್ಮಗಳಿಗೆ ಅರ್ಪಣೆಯಾಗಿದೆ.

English Transliteration for Moolamantra – Padamala

Sanskrit/Devanagiri Transliteration for Moolamantra – Padamala

ಲೋಕಾಸಮಸ್ತಾ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು

4 Comments on “ಶ್ರೀ ಮಹಾಗಣಪತಿ ಮೂಲಮಂತ್ರ ಪದಮಾಲಾ ಸ್ತೋತ್ರ

  1. Thank you for this powerful Padamala

    Request yourself to help me understand Swaha and Swadha used in different occasions

    Like

  2. Pingback: Sri Mahaganapati Moola Mantra Pada mala- Meaning in English – Atmanandanatha

  3. Pingback: श्री महागणपती  मूलमन्त्र पदमाला- Sri Mahaganapati Mulamantra Padamala – Atmanandanatha

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: