ತಿಥಿನಿತ್ಯಾ ದೇವಿಯರು: 12-4 ಶ್ರೀ ವಿಜಯಾ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ

ಶ್ರೀ ವಿಜಯಾ ನಿತ್ಯೆಯು, ಶುಕ್ಲಪಕ್ಷ ದ್ವಾದಶಿ ಮತ್ತು ಕೃಷ್ಣ ಚತುರ್ಥಿಯ ನಿತ್ಯಾ ದೇವತೆ.

ಪಂಚವಕ್ತ್ರಾಮ್ ದಶಭುಜಾಮ್ ಪ್ರತಿವಕ್ತ್ರಂ ತ್ರಿಲೋಚನಾಮ್
ಭಾಸ್ವನ್ ಮುಕುಟ ವಿನ್ಯಾಸಚಂದ್ರಲೇಖಾವಿರಾಜಿತಾಂ

ಸರ್ವಾಭರಣ ಸಂಯುಕ್ತಾಮ್ ಪೀತಾಂಬರಸಮುಜ್ವಲಾಮ್
ಉದ್ಯದ್ಭಾಸ್ವ ದ್ವಿಂಬತುಲ್ಯ ದೇಹಕಾಂತಿಂ ಶುಚಿ ಸ್ಥಿತಾಂ

ಶಂಖಂ ಪಾಶಂ ಖೇಟ ಚಾಪೌ ಕಲ್ಹಾರಮ್ ವಾಮಬಾಹುಭಿಃ
ಚಕ್ರಂ ತಥಾನ್ಕುಶಮ್ ಖಡ್ಗಮ್ ಸಾಯಕಂ ಮಾತುಲುಂಗಕಂ

ದಧಾನಾಮ್ ದಕ್ಷಿಣ್ಯೈರ್ಹಸ್ತೇ ಪ್ರಯೋಗೇ ಭೀಮ ದರ್ಶನಾಮ್
ಉಪಾಸನೇತಿಸೌಮ್ಯಾಮ್ ಚ ಸಿಂಹೋಪರಿ ಕೃತಾಸನಾಮ್

ವ್ಯಾಘ್ರಾರೂಢಾಭಿ ರಹಿತಃ ಶಕ್ತಿಭಿಃ ಪರಿವಾರಿತಾಂ
ಸಮರೇ ಪೂಜನೇsನ್ಯೇಷು ಪ್ರಯೋಗೇಷು ಸುಖಾಸನಾಮ್

ಶಕ್ತಯಶ್ಚಾಪಿ ಪೂಜಾಯಾಮ್ ಸುಖಾಸೀನ ಸಮನ್ವಿತಾಃ
ಸರ್ವಾ ದೇವ್ಯಾ ಸಮಾಕಾರಮುಖಪಾಣ್ಯಾ ಯುಧಾ ಅಪಿ

ಚತುರಸ್ರದ್ವಯಂ ಕೃತ್ವಾ ಚತುರ್ದ್ವಾರೋಪಶೋಭಿತಂ
ಶಾಖಾಷ್ಟಕಸಮೋಪೇತಂ ತತ್ರ ಪ್ರಾಗ್ವತ್ಸಮಾರ್ಚಯೇತ್
ತದಂತರ್ವೃತಯುಗ್ಮಾಂತರಷ್ಟಕೋಣಂ ವಿಧಾಯ ತು
ತದಂತಶ್ಚ ತಥಾ ಪದ್ಮಂ ಷೋಡಶಚ್ಛದಸಂಯುತಂ
ತಥೈವಾಷ್ಟಚ್ಛದಂ ಪದ್ಮಂ ವಿಧಾಯಾವಾಹ್ಯ ತತ್ರ ತಾಂ
ತತ್ತಚ್ಛಕ್ತ್ಯಾ ವೃತಾಂ ಸಮ್ಯಗುಪಚಾರೈಸ್ತಥಾರ್ಚಯೇತ್

ಒಂದೊಂದು ಮುಖದಲ್ಲಿಯೂ ಮೂರು ಮೂರು ಕಣ್ಣುಗಳುಳ್ಳ ಐದು ಮುಖಗಳು ಹತ್ತು ಬಾಹುಗಳೂ, ಪ್ರಕಾಶಮಾನವಾದ ಕಿರೀಟದಲ್ಲಿ ವಿನ್ಯಸ್ತವಾಗಿರುವ ಚಂದ್ರಲೇಖೆಯಿಂದ ವಿರಾಜಿಸುತ್ತಿರುವ, ಸಕಲಾಭರಣಯುಕ್ತಳಾದ, ಪೀತಾಂಬರದಿಂದ ಹೊಳೆಯುತ್ತಿರುವ, ಉದಯ ಸೂರ್ಯಬಿಂಬ ಸಮಾನವಾದ ದೇಹಕಾಂತಿಯುಳ್ಳ, ಮಂದಹಾಸ ಬೀರುತ್ತಾ, ಎಡಗೈಗಳಿಂದ ಶಂಖ, ಪಾಶ, ಖಡ್ಗ, ಧನುಸ್ಸು ಮತ್ತು ಕಲ್ಹಾರ ಪುಷ್ಪಗಳನ್ನೂ ಬಲಗೈಗಳಿಂದ ಚಕ್ರ, ಅಂಕುಶ, ಖಡ್ಗ, ಬಾಣ, ಮಾತುಲುಂಗ ಗಳನ್ನು ಧರಿಸಿ ( ಮಾತುಲುಂಗ ಎಂದರೆ ದಾಳೀಂಬೆ) ಸಿಂಹದ ಮೇಲೆ ಕುಳಿತು ಭಯಂಕರ ರೂಪವನ್ನು ತೋರುತ್ತಿರುವ, ಉಪಾಸನಾ ಸಮಯದಲ್ಲಿ ಅತ್ಯಂತ ಸೌಮ್ಯ ಮೂರ್ತಿಯಾಗಿ ಕಾಣುವ, ಹುಲಿಯ ಮೇಲೆ ಕುಳಿತಿರುವ ಅನೇಕ ಶಕ್ತಿಗಳ ಪರಿವಾರ ಯುಕ್ತಳಾಗಿ ಸುಖಾಸೀನ ಳಾಗಿರುವ ದೇವಿಯನ್ನು ಧ್ಯಾನಿಸುತ್ತಿದ್ದೇನೆ.
ಎಂಟು ಶಾಖೆಗಳು ಮತ್ತು ನಾಲ್ಕು ದ್ವಾರಗಳ ಸಹಿತವಾದ ಚತುರಸ್ರ ಮಂಡಲದ್ವಯವನ್ನು ರಚಿಸಿ ಅದರ ಒಳಭಾಗದಲ್ಲಿ ಅಷ್ಟ ಕೋಣಗಳನ್ನು ಮಾಡಿ ಅದರಲ್ಲಿ ಹದಿನಾರು ದಳಗಳ ಪದ್ಮ, ಅದರೊಳಗೆ ಅಷ್ಟದಳ ಪದ್ಮಗಳನ್ನು ಮಾಡಿ ಅಲ್ಲಿ ಆಯಾಯಾ ಶಕ್ತಿ ಸಹಿತ ದೇವಿಯನ್ನು ಆವಾಹನೆ ಮಾಡಿ ಸರಿಯಾದ ಉಪಚಾರಗಳಿಂದ ಪೂಜಿಸಬೇಕು.
ವಿಜಯಾ ನಿತ್ಯೆಯು ವಾದಗಳಲ್ಲಿ ಮತ್ತು ಯುದ್ಧಗಳಲ್ಲಿ ಜಯವನ್ನು ದಯಪಾಲಿಸುತ್ತಾಳೆ.

ಉಳಿದ ೧೪ ತಿಥಿ ನಿತ್ಯ ದೇವಿಯರ ಧ್ಯಾನಶ್ಲೋಕದ ಬ್ಲಾಗ್ನ ಕೊಂಡಿಗಳು:

1-15 ಶ್ರೀ ಕಾಮೇಶ್ವರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

2-14 ಶ್ರೀ ಭಗಮಾಲಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

3-13 ಶ್ರೀ ನಿತ್ಯಕ್ಲಿನ್ನಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

4-12 ಶ್ರೀ ಭೇರುಂಡಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

5-11 ಶ್ರೀ ವಹ್ನಿವಾಸಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

6-10 ಶ್ರೀ ವಜ್ರೇಶ್ವರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

7-9 ಶ್ರೀ ಶಿವಾದೂತೀ ಅಥವಾ ಶಿವದೂತೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

8-8 ಶ್ರೀ ತ್ವರಿತಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

9-7 ಶ್ರೀ ಕುಲಸುಂದರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ

10-6 ಶ್ರೀ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ

11-5 ಶ್ರೀ ನೀಲಪತಾಕಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

13-3 ಶ್ರೀ ಸರ್ವಮಂಗಳಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

14-2 ಶ್ರೀ ಜ್ವಾಲಾಮಾಲಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

15-1 ಶ್ರೀ ಚಿತ್ರಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು

ಓಂ ಶಾಂತಿಃ ಶಾಂತಿಃ ಶಾಂತಿಃ

5 Comments on “ತಿಥಿನಿತ್ಯಾ ದೇವಿಯರು: 12-4 ಶ್ರೀ ವಿಜಯಾ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ

  1. Pingback: ತಿಥಿನಿತ್ಯಾ ದೇವಿಯರು: 1-15 ಶ್ರೀ ಕಾಮೇಶ್ವರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ – Atmanandanatha

  2. Pingback: ತಿಥಿನಿತ್ಯಾ ದೇವಿಯರು: 2-14 ಶ್ರೀ ಭಗಮಾಲಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ – Atmanandanatha

  3. Pingback: ತಿಥಿನಿತ್ಯಾ ದೇವಿಯರು: 6-10 ಶ್ರೀ ವಜ್ರೇಶ್ವರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ – Atmanandanatha

  4. Pingback: ತಿಥಿನಿತ್ಯಾ ದೇವಿಯರು: 10-6 ಶ್ರೀ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ | Atmanandanatha

  5. Pingback: ತಿಥಿನಿತ್ಯಾ ದೇವಿಯರು: 8-8 ಶ್ರೀ ತ್ವರಿತಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ | Atmanandanatha

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: