ಹದಿನೆಂಟು ಪುರಾಣಗಳು ಮಹಾಪುರಾಣಗಳೆಂದು ಗುರುತಿಸಲ್ಪಟ್ಟಿವೆ. ಅವು ಯಾವುವೆಂದರೆ ಬ್ರಹ್ಮ, ಪದ್ಮ, ವಿಷ್ಣು, ವಾಯು, ಭಾಗವತ,ನಾರದೀಯ, ಮಾರ್ಕಂಡೇಯ, ಅಗ್ನಿ, ಭವಿಷ್ಯ ,ಬ್ರಹ್ಮವೈವರ್ತ, ಲಿಂಗ, ವರಾಹ, ಸ್ಕಂದ, ವಾಮನ, ಕೂರ್ಮ, ಮತ್ಸ್ಯ, ಗರುಡ ಮತ್ತು ಬ್ರಹ್ಮಾಂಡ.
ಸಾಮಾನ್ಯವಾಗಿ ಎಲ್ಲಾ ಪುರಾಣಗಳು ಪಂಚಲಕ್ಷಣಗಳು ಎಂದು ಕರೆಯಬಹುದಾದ ಏಕರೂಪ ರಚನೆಯನ್ನು ಖಚಿತಪಡಿಸುತ್ತವೆ. ಅವುಗಳು ಈ ಮುಂದೆ ತಿಳಿಸಿರುವ ವಿಷಯಗಳ ಬಗ್ಗೆ ಉಲ್ಲೇಖಿಸುವುದಾಗಿದೆ. ಬ್ರಹ್ಮಾಂಡದ ಸೃಷ್ಟಿ (ಸರ್ಗ), ಪ್ರಳಯ ಅಥವಾ ನಾಶ(ಪ್ರತಿ ಸರ್ಗ), ಸಂತರ ಹಾಗೂ ರಾಜ ಮಹಾರಾಜರ ಪ್ರವರ, ಮಹಾಕಾಲಗಳೆಂದು ಕರೆಯಲ್ಪಡುವ ಮನ್ವಂತರಗಳ ಬಗ್ಗೆ, ಸೂರ್ಯ ಮತ್ತು ಚಂದ್ರ ವಂಶದ ಸಾಮ್ರಾಜ್ಯಗಳ ಇತಿಹಾಸದ ಬಗ್ಗೆ…. ಮುಂತಾದವುಗಳು.
ಪುರಾಣಗಳು ಕೇವಲ ಪದ್ಯಗಳನ್ನಲ್ಲದೆ, ಉದ್ದವಾದ ವಾಕ್ಯಗಳನ್ನು ಸಹ ಹೊಂದಿರುವುದನ್ನು ನಾವು ಹಲವು ಪುರಾಣಗಳಲ್ಲಿ ನೋಡಬಹುದಾಗಿದೆ. ಪ್ರತಿ ಪುರಾಣವೂ ಪುರಾಣವೆಂದು ಕರೆಯಲ್ಪಡುವ ಅದರ ಹಿಂದಿನ ಗ್ರಂಥದ ಮೂಲರೂಪವನ್ನು ಅನುಸರಿಸಲು ಪ್ರಯತ್ನಿಸುತ್ತವೆ.
ಬ್ರಹ್ಮ ಪುರಾಣವು ಸುಮಾರು ಹತ್ತು ಸಾವಿರ ಪದ್ಯಗಳನ್ನು ಹೊಂದಿರುವುದಾಗಿ ಹೇಳಲಾಗಿದೆ.
ಬ್ರಹ್ಮ ಪುರಾಣವು ಈ ಕೆಳಗಿನ ವಿಷಯಗಳನ್ನು ಒಳಗೊಂಡಿದೆ:
ದೇವತೆಗಳು, ಅಸುರರು, ದಕ್ಷ ಪ್ರಜಾಪತಿ ಮತ್ತು ಇತರ ಪ್ರಜಾಪತಿಗಳ ಸೃಷ್ಟಿ, ಸೂರ್ಯ ವಂಶದ ನಿರೂಪಣೆ, ಪರಮಾತ್ಮ, ರಾಮನ ಅವತಾರ, ಚಂದ್ರ ವಂಶದ ನಿರೂಪಣೆ, ಕೃಷ್ಣನ ಕಥೆಗಳು, ಖಂಡ ಮತ್ತು ಉಪಖಂಡಗಳು, ಸ್ವರ್ಗ ಮತ್ತು ನರಕಗಳ ವಿವರಣೆ, ಪಾರ್ವತಿಯ ಜನನ, ವಿವಾಹ ಮತ್ತು ದಕ್ಷನ ನಿರೂಪಣೆ, ಏಕಾಮ್ರ ಕ್ಷೇತ್ರದ ವಿವರಣೆ, ಪುರಿ ಜಗನ್ನಾಥ ಯಾತ್ರೆ, ಕೃಷ್ಣನ ಕಥೆಯ ವಿವರಣೆ, ಯಮಲೋಕದ ವಿವರಣೆ, ಪಿತೃ ಶ್ರಾದ್ಡ ಮಾಡುವ ವಿಧಾನ, ಬೇರೆ ಬೇರೆ ವರ್ಗಗಳ ಜನರ ಕರ್ತವ್ಯಗಳು ಮತ್ತು ಜೀವನದ ವಿವಿಧ ಹಂತಗಳಲ್ಲಿ ನಿರ್ವಹಿಸಬೇಕಾದ ಕರ್ತವ್ಯಗಳ ಬಗ್ಗೆ, ಯುಗಗಳು ಹಾಗೂ ಪ್ರಳಯದ ನಿರೂಪಣೆ, ಸಾಂಖ್ಯ ಯೋಗದ ವಿವರಣೆ, ಬ್ರಹ್ಮವಾದದ ವಿವರಣೆ ಹಾಗೂ ಪುರಾಣದ ಶ್ಲಾಘನೆ.
ಈ ಪುರಾಣವನ್ನು ಓದುವುದರಿಂದ ಎಲ್ಲಾ ಪಾಪಗಳು ನಾಶವಾಗುತ್ತವೆ ಮತ್ತು ಎಲ್ಲಾ ತರಹದ ಸುಖ ಸಮೃದ್ಡಿಗಳು ದಯಪಾಲಿಸ್ಪಡುತ್ತವೆ ಎಂದು ಹೇಳಲಾಗಿದೆ.
ಕೇವಲ ಬ್ರಹ್ಮಾಂಡ ಪುರಾಣದ ಸೂಚಿಕೆಯನ್ನು ಓದಿದರೆ ಅಥವಾ ಕೇಳಿದರೆ ಬ್ರಹ್ಮಾಂಡ ಪುರಾಣದ ಪಾರಾಯಣ ಮಾಡಿದಾಗ ಮತ್ತು ಕೇಳಿದಾಗ ಸಿಗುವ ಎಲ್ಲಾ ಫಲಗಳು ಸಿಗುತ್ತವೆ.
Translation to kannada is done by Sri Durga Prasad (Poornanandanatha) for posting in the blog