ತಿಥಿನಿತ್ಯಾ ದೇವಿಯರು: 9-7 ಶ್ರೀ ಕುಲಸುಂದರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ

9-7 ಶುಕ್ಲ ಪಕ್ಷ ನವಮೀ ಮತ್ತು ಕೃಷ್ಣ ಪಕ್ಷ ಸಪ್ತಮೀ – ಕುಲಸುಂದರೀ ನಿತ್ಯಾದೇವಿ ಧ್ಯಾನಶ್ಲೋಕ

ಲೋಹಿತಾಂ ಲೋಹಿತಾಕಾರ ಶಕ್ತಿ ವೃಂದ ನಿಷೇವಿತಾಂ
ಲೋಹಿತಾಂಕುಶ ಭೂಷಾಸ್ರ ಗ್ಲೇಪನಾಮ್ ಷಣ್ಮುಖಾಂಬುಜಾಂ
ಅನರ್ಘ್ಯರತ್ನಘಟಿತ ಮಾಣಿಕ್ಯಮುಕುಟೋಜ್ವಲಾಂ
ರತ್ನಸ್ತಬಕ ಸಂಛಿನ್ನಲಸದ್ವಕ್ಷಃಸ್ಥಲಾಂ ಶುಭಾಂ
ಕಾರುಣ್ಯನಂದಪರಮಾಂ ಅರುಣಾಮ್ಬುಜವಿಷ್ಟರಾಂ
ಭುಜೈರ್ದ್ವಾದಶಭಿರ್ಯುಕ್ತಾಂ ಸರ್ವೇಷಾಂ ಸರ್ವವಾಜ್ಮಯೀಂ
ಪ್ರವಾಲಾಕ್ಷಸ್ರಜಂ ಪದ್ಮಂ ಕುಂಡಿಕಾಂ ರತ್ನನಿರ್ಮಿತಾಂ
ರತ್ನಪೂರ್ಣ ತು ಚಷಕಂ ಲುಂಗೀಂ ವ್ಯಾಖ್ಯಾನಮುದ್ರಿಕಾಂ
ದಧಾನಾಂ ದಕ್ಷಿಣ್ಯೆರ್ವಾಮೈಃ ಪುಸ್ತಕಂ ಚಾರುಣೋತ್ಪಲಂ
ಹೈಮೀಂಚ ಲೇಖನೀಂ ರತ್ನಮಾಲಾಂ ಕಂಬುವರಂ ಭುಜೈಃ
ಆಭಿತಃ ಸ್ತೂಯಮಾನಾಂ ಚ ದೇವಗಂಧರ್ವಕಿನ್ನರೈಃ
ಯಕ್ಷರಾಕ್ಷಸ ದೈತ್ಯರ್ಷಿಸಿದ್ಧವಿದ್ಯಾಧರಾದಿಭಿಃ
ಧ್ಯಾತ್ವೈವಮರ್ಚಯೇನ್ನಿತ್ಯಾಂ ವಾಗ್ಲಕ್ಷ್ಮೀಕಾಂತಿಸಿದ್ಧಯೇ

ಲೋಹಿತಾಂ ಎಂದರೆ ಕೆಂಪು ಎಂಬ ಅರ್ಥವೇ ಅಲ್ಲದೆ ತಾಮ್ರವರ್ಣವೂ ಆಗಬಹುದು. ಸಾಮಾನ್ಯವಾಗಿ ಕೆಂಪು ಎನ್ನಲು ರಕ್ತವರ್ಣಾಂ ಎಂದೇ ಹೇಳಲಾಗುತ್ತದೆ. ಹಾಗಾಗಿ ಲೋಹಿತಾ ಎಂದು ಹೇಳಿದ್ದು, ತಾಮ್ರವರ್ಣ ಎಂದು ಗ್ರಹಿಸುವುದು ಸೂಕ್ತ. ಲೋಹಿತಾಕಾರ ದ ಶಕ್ತಿವೃಂದಗಳಿಂದ ಸೇವಿಸಲ್ಪಡುತ್ತಿದ್ದಾಳೆ ಎಂದಾಗ, ಲೋಹಿತಾ ಎಂಬ ಪದಕ್ಕೆ ಸರ್ಪ ಎನ್ನುವ ಅರ್ಥವೂ ಇರುವುದನ್ನು ಗಮನಿಸಿದರೆ, ಸರ್ಪಾಕಾರವುಳ್ಳ ಶಕ್ತಿ ದೇವತೆಗಳಿಂದ ಸೇವಿಸಲ್ಪಡುತ್ತಿರುವವಳು ಎಂಬ ಅರ್ಥ ಸಮಂಜಸ ಎನಿಸುತ್ತದೆ. ತಾಮ್ರ ಅಥವಾ ಕೆಂಪುಬಣ್ಣದ ವಸ್ತ್ರ ಆಭರಣ, ಮಾಲಿಕೆಗಳನ್ನು ಧರಿಸಿ ಕಮಲದಂತಹ ಆರು ಮುಖಗಳುಳ್ಳ, ಅಮೂಲ್ಯ ರತ್ನಘಟಿತ ಮಾಣಿಕ್ಯಗ ಳಿಂ ದ ನಿರ್ಮಿತ ವಾದ ಕಿ ರೀಟದಿಂದ ಪ್ರಕಾಶ ಮಾನಳಾಗಿ , ರತ್ನಹಾರಗಳಿಂದ ಯುಕ್ತವಾಗಿ ಹೊಳೆಯುತ್ತಿರುವ ವ ಕ್ಷಸ್ಥಲ ವುಳ್ಳ ಮಂಗಳಕರಳಾದ, ದಯೆ ಮತ್ತು ಆನಂದ ತುಂದಿತ ಳಾಗಿರುವ, ರಕ್ತಕಮಲಾಸನಸ್ಥಿತಳಾದ, ವೇದ ಭಾಷಾಶಬ್ದಮಯಳಾದ, ಹವಳದ ಜಪಮಾಲೆ , ಕಮಲ, ರತ್ನಗಳಿಂದ ತುಂಬಿದ ಪಾತ್ರೆ, ಮಾತುಲುಂಗೀ ಫಲ, ಪುಸ್ತಕ, ಕೆಂಪು ಕನ್ನೈದಿಲೆ ಪುಷ್ಪ, ಬಂಗಾರದ ಲೇಖನಿ, ರತ್ನಹಾರ, ಶಂಖ ಇವುಗಳನ್ನು ತನ್ನ ಹತ್ತು ಕೈಗಳಲ್ಲಿ ಧರಿಸಿ, ಇನ್ನೆರಡು ಕರಗಳು , ವ್ಯಾಖ್ಯಾನ ಮತ್ತು ವರದ ಮುದ್ರೆಯಿಂದ ಶೋಭಿತವಾಗಿದ್ದು, ದೇವತೆಗಳು, ಗಂಧರ್ವರೂ, ಕಿನ್ನರರೂ, ಯಕ್ಷರೂ, ರಾಕ್ಷಸರೂ, ದೈತ್ಯರೂ, ಋಷಿಗಳೂ, ಸಿದ್ಧರೂ ಮತ್ತು ವಿದ್ಯಾಧರರುಗಳಿಂದ ಸ್ತುತಿಸಲ್ಪಡುತ್ತಿರುವ ಕುಲಸುಂದರೀ ನಿತ್ಯಾ ದೇವಿಯ ಧ್ಯಾನದಿಂದ ವಾಗ್ ಲಕ್ಷ್ಮಿ ಮತ್ತು ಕಾಂತಿಯು ಪ್ರಾಪ್ತವಾಗುತ್ತದೆ.

ರಾಕ್ಷಸರನ್ನು ದೈತ್ಯರನ್ನು ಬೇರೆ ಬೇರೆ ಹೇಳಲಾಗಿದೆ. ದೈತ್ಯರು ಅಂದರೆ ಅಗಾಧವಾದ ಶರೀರವುಳ್ಳವರು ಎಂದು ಆರ್ಥೈಸ ಬೇಕು. ವಿದ್ಯಾಧರರು ಎಂದರೆ ಮಹಾನ್ ವಿದ್ವಾಂಸರು.

ಉಳಿದ ೧೪ ತಿಥಿ ನಿತ್ಯ ದೇವಿಯರ ಧ್ಯಾನಶ್ಲೋಕದ ಬ್ಲಾಗ್ನ ಕೊಂಡಿಗಳು:

1-15 ಶ್ರೀ ಕಾಮೇಶ್ವರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

2-14 ಶ್ರೀ ಭಗಮಾಲಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

3-13 ಶ್ರೀ ನಿತ್ಯಕ್ಲಿನ್ನಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

4-12 ಶ್ರೀ ಭೇರುಂಡಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

5-11 ಶ್ರೀ ವಹ್ನಿವಾಸಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

6-10 ಶ್ರೀ ವಜ್ರೇಶ್ವರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

7-9 ಶ್ರೀ ಶಿವಾದೂತೀ ಅಥವಾ ಶಿವದೂತೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

8-8 ಶ್ರೀ ತ್ವರಿತಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

10-6 ಶ್ರೀ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ

11-5 ಶ್ರೀ ನೀಲಪತಾಕಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

12-4 ಶ್ರೀ ವಿಜಯಾ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

13-3 ಶ್ರೀ ಸರ್ವಮಂಗಳಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

14-2 ಶ್ರೀ ಜ್ವಾಲಾಮಾಲಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

15-1 ಶ್ರೀ ಚಿತ್ರಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:

ಓಂ ಶಾಂತಿಃ ಶಾಂತಿಃ ಶಾಂತಿಃ

6 Comments on “ತಿಥಿನಿತ್ಯಾ ದೇವಿಯರು: 9-7 ಶ್ರೀ ಕುಲಸುಂದರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ

  1. Pingback: ತಿಥಿನಿತ್ಯಾ ದೇವಿಯರು: 1-15 ಶ್ರೀ ಕಾಮೇಶ್ವರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ – Atmanandanatha

  2. Pingback: ತಿಥಿನಿತ್ಯಾ ದೇವಿಯರು: 2-14 ಶ್ರೀ ಭಗಮಾಲಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ – Atmanandanatha

  3. Pingback: ತಿಥಿನಿತ್ಯಾ ದೇವಿಯರು: 4-12 ಶ್ರೀ ಭೇರುಂಡಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ – Atmanandanatha

  4. Pingback: ತಿಥಿನಿತ್ಯಾ ದೇವಿಯರು: 10-6 ಶ್ರೀ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ | Atmanandanatha

  5. Pingback: ತಿಥಿನಿತ್ಯಾ ದೇವಿಯರು: 8-8 ಶ್ರೀ ತ್ವರಿತಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ | Atmanandanatha

  6. Pingback: ತಿಥಿನಿತ್ಯಾ ದೇವಿಯರು: 12-4 ಶ್ರೀ ವಿಜಯಾ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ | Atmanandanatha

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: