ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
8-8 ಶುಕ್ಲ ಪಕ್ಷ ಅಷ್ಟಮಿ ಮತ್ತು ಕೃಷ್ಣ ಪಕ್ಷ ಅಷ್ಟಮೀ – ತ್ವರಿತಾ ನಿತ್ಯಾದೇವಿ ಧ್ಯಾನಶ್ಲೋಕ
ಶ್ಯಾಮವರ್ಣಶುಭಾಕಾರಾಂ ನವಯೌವನ ಶೋಭಿತಾಂ
ದ್ವಿದ್ವಿಕ್ರಮಾದಷ್ಟ ನಾಗೈಃ ಕಲ್ಪಿತಾಭರಣೋಜ್ವಲೈಃ
ತಾಟಂಕಮಂಗದಂ ತದ್ವದ್ರಸನಾ ನೂಪುರಂ ಚ ತೈಃ
ವಿಪ್ರಕ್ಷತ್ರಿಯವಿಟ್ ಶೂದ್ರ ಜಾತಿಭಿರ್ಭೀಮವಿಗ್ರಹೈಃ
ಪಲ್ಲವಾಂಕುಶಸಂವೀತಾಂ ಶಿಖಿಪಿಚ್ಛಕೃತೈಃ ಶುಭೈಃ
ವಲಯೈರ್ಭೂಷಿತಭುಜಾಂ ಮಾಣಿಕ್ಯಮುಕುಟೋಜ್ವಲಾಂ
ಬರ್ಹಿರ್ಬಹಕೃತಾಪೀಡಾಂ ತ ಚ್ಛತ್ರಾಂ ತತ್ಪತಾಕಿನೀಂ
ಗುಂಜಾಗುಣಲಸದ್ವಕ್ಷಃ ಕುಚಕುಂಕುಮಮಂಡಲಾಂ
ತ್ರಿನೇತ್ರಾಂ ಚಾರುವದನಾಂ ಮಂದಸ್ಮಿತಮುಖಾಂಬುಜಾಂ
ಪಾಶಾಂಕುಶ ವರಾಭೀತಿ ಲಸದ್ಭುಜಚತುಷ್ಟಯಾಂ
ಧ್ಯಾತ್ವ್ಯೈವಂ ತೋತಲಾಂ ದೇವೀಂ ಪೂಜಯೇಚ್ಛಕ್ತಿಭಿರ್ಯುತಾಂ
ತದಗ್ರಸ್ಥಾಂ ತು ಫಟ್ಕಾರೀಂ ಶರ ಚಾಪೆ ಕರೋಜ್ವಲಾಂ
ಶ್ಯಾಮ ವರ್ಣದ ಮಂಗಳಕರವಾದ ನೂತನ ಯೌವನದಿಂದಶೋಭಿತಳಾದ ಎರಡೆರಡು ಸರ್ಪಗಳು ಒಂದು ಗುಂಪಾಗಿರುವ ನಾಲ್ಕುಗುಂಪುಗಳ ಸರ್ಪಗಳ ಅಂದರೆ 8 ಭೀಕರ ನಾಗಗಳನ್ನೇ ಓಲೆ, ಬಾಹುಬಂಧ, ಡಾಬು ಮತ್ತು ಕಾಲುಂಗರಗಳಾಗಿನ್ನಿಸಿ ಆ ಅಭರಣಗಳನ್ನು ತೊಟ್ಟಿರುವ, ಎಲೆಗಳಿಂದ ಮಾಡಿದ ಉಡುಗೆಯನ್ನು ತೊಟ್ಟಿರುವ, ನವಿಲುಗರಿಯ ಕೈಕಡಗಗಳನ್ನು ತೊಟ್ಟ, ಛತ್ರಿ ಮತ್ತು ಕಿರೀಟಗಳೂ ನವಿಲಗರಿಯಿಂದ ಅಲಂಕೃತ ಕೊಂಡು ಮಾಣಿಕ್ಯದ ಕಿರೀಟದಿಂದ ಶೋಭಿತೆಯಾಗಿರುವ, ಗುಂಜಿಎಂಬ ಹಣ್ಣಿನ ಹಾರವನ್ನು ವಕ್ಷ ಸ್ಥಲದಲ್ಲಿ ಧರಿಸಿರುವುದರಿಂದ ಸ್ತನಮಂಡಲಗಳು ಕುಂಕುಮದಂತೆ ಹೊಳೆಯುತ್ತಿವೆ. ಮಂದಹಾಸ, ಮನೋಹರ ಮುಖಕಮಲದಲ್ಲಿ ಮೂರು ಕಣ್ಣುಗಳು ಹೊಳೆಯುತ್ತಿರುವ, ಪಾಶ ಅಂಕುಶ ಗಳನ್ನು ಕರದಲ್ಲಿ ಧರಿಸಿ , ಅಭಯಮುದ್ರೆಯಿಂದ ಅಭಯವನ್ನೂ ವರದ ಮುದ್ರೆಯಿಂದ ಬೇಡಿದ ವರಗಳನ್ನೂ ದಯಪಾಲಿಸುತ್ತಿರುವ ತ್ವರಿತಾ ನಿತ್ಯಾ ದೇವಿಯನ್ನು ತನ್ನ ಪರಿವಾರ ಶಕ್ತಿದೇವತೆಗಳೊಂದಿಗೆ ಮತ್ತು ಬಿಲ್ಲು ಬಾಣಗಳನ್ನು ಹಿಡಿದು ದೇವಿಯಮುಂದೆ ನಿಂತಿರುವ ಫಟ್ಕಾರೀ ದೇವತೆ ಯೊಂದಿಗೆ ಧ್ಯಾನಿಸಬೇಕು.
ಅನಂತ, ವಾಸುಕೀ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧೃತರಾ ಷ್ಟ್ರ, ತಕ್ಷಕ ಕಾಲೀಯ ಎಂಬ ನವನಾಗಗಳಿದ್ದು, ಇಲ್ಲಿ 8 ನಾಗಗಳನ್ನು ಮಾತ್ರ ಹೇಳಿದ್ದು ಮತ್ತು ಅವನ್ನು ನಾಲ್ಕು ವರ್ಣಗಳಾಗಿ ವಿಂಗಡಿಸಿರುವುದು ಏಕೆ ಎಂದು ತಿಳಿಯುತ್ತಿಲ್ಲಾ.
ಈ ನಾಗಗಳನ್ನು ತಾಯಿ ಆಭರಣಗಳಾಗಿ ಧರಿಸಿದ್ದಾಳೆ ಎಂದು ಭಾವಿಸಿ ಧ್ಯಾನ ಮಾಡಿದರೆ ಸಾಕು ಎಂಬ ನನ್ನ ಅನಿಸಿಕೆಯನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಉಳಿದ ೧೪ ತಿಥಿ ನಿತ್ಯ ದೇವಿಯರ ಧ್ಯಾನಶ್ಲೋಕದ ಬ್ಲಾಗ್ನ ಕೊಂಡಿಗಳು:
1-15 ಶ್ರೀ ಕಾಮೇಶ್ವರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
2-14 ಶ್ರೀ ಭಗಮಾಲಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
3-13 ಶ್ರೀ ನಿತ್ಯಕ್ಲಿನ್ನಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
4-12 ಶ್ರೀ ಭೇರುಂಡಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
5-11 ಶ್ರೀ ವಹ್ನಿವಾಸಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
6-10 ಶ್ರೀ ವಜ್ರೇಶ್ವರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
7-9 ಶ್ರೀ ಶಿವಾದೂತೀ ಅಥವಾ ಶಿವದೂತೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
9-7 ಶ್ರೀ ಕುಲಸುಂದರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ
10-6 ಶ್ರೀ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ
11-5 ಶ್ರೀ ನೀಲಪತಾಕಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
12-4 ಶ್ರೀ ವಿಜಯಾ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
13-3 ಶ್ರೀ ಸರ್ವಮಂಗಳಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
14-2 ಶ್ರೀ ಜ್ವಾಲಾಮಾಲಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
15-1 ಶ್ರೀ ಚಿತ್ರಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
ಓಂ ಶಾಂತಿಃ ಶಾಂತಿಃ ಶಾಂತಿಃ
Pingback: ತಿಥಿನಿತ್ಯಾ ದೇವಿಯರು: 1-15 ಶ್ರೀ ಕಾಮೇಶ್ವರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ – Atmanandanatha
Pingback: ತಿಥಿನಿತ್ಯಾ ದೇವಿಯರು: 2-14 ಶ್ರೀ ಭಗಮಾಲಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ – Atmanandanatha
Pingback: ತಿಥಿನಿತ್ಯಾ ದೇವಿಯರು: 4-12 ಶ್ರೀ ಭೇರುಂಡಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ – Atmanandanatha
Pingback: ತಿಥಿನಿತ್ಯಾ ದೇವಿಯರು: 6-10 ಶ್ರೀ ವಜ್ರೇಶ್ವರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ – Atmanandanatha
Pingback: ತಿಥಿನಿತ್ಯಾ ದೇವಿಯರು: 10-6 ಶ್ರೀ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ | Atmanandanatha
Pingback: ತಿಥಿನಿತ್ಯಾ ದೇವಿಯರು: 12-4 ಶ್ರೀ ವಿಜಯಾ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ | Atmanandanatha