ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
6-10 ಶುಕ್ಲ ಪಕ್ಷ ಷಷ್ಠಿ ಮತ್ತು ಕೃಷ್ಣ ಪಕ್ಷ ದಶಮೀ – ಮಹಾ ವಜ್ರೇಶ್ವರೀ ನಿತ್ಯಾದೇವತೆ ಧ್ಯಾನಶ್ಲೋಕ:
ರಕ್ತಾo ರಕ್ತಾಂಬರಾಮ್ ರಕ್ತಗಂಧ ಮಾಲಾವಿಭೂಷಣಂ
ಚತುರ್ಭುಜಾಮ್ ತ್ರಿನಯನಾಮ್ ಮಾಣಿಕ್ಯ ಮುಕುಟೋ ಜ್ವಲಾಮ್
ಪಾಶಾಂಕುಶಾಮಿಕ್ಷುಚಾಪಂ ದಾಡಿಮೀಸಾಯಕಂ ತಥಾ
ದಧಾನಾಮ್ ಬಾಹುಭಿರ್ನೇತ್ರೈರ್ದಯಾ ಸು ಪ್ರೀತಿ ಶೀತಲೈಃ
ಪಶ್ಯಂತೀಮ್ ಸಾಧಕಂ ಅಸ್ತ್ರಷಟ್ಕೋಣಾಬ್ಜ ಮಹೀಪುರೇ
ಚಕ್ರಮಧ್ಯೇ ಸುಖಾಸೀನಾಮ್ ಸ್ಮೇರವಕ್ತ್ರಾ ಸರೋರುಹಾಮ್
ಶಕ್ತಿಭಿಃ ಸ್ವಸ್ವರೂಪಾಭರಾವೃತಾಂ ಪೋತಮಧ್ಯಗೇ
ಸಿಂಹಾಸನೋs ಭಿತಃ ಪ್ರೇಂಖತಪೋತಸ್ಥಾಭಿಶ್ಚ ಶಕ್ತಿಭಿಃ
ವೃತಾಂ ತಾಭಿರ್ವಿನೋದಾನಿ ಯಾತಾಯಾತಾ ದಿಭಿಃ ಸದಾ
ಕುರ್ವಾಣಾಮರುಣಾಂಭೋದೌ ಚಿಂತಯೇನ್ಮಂತ್ರನಾಯಕಾಂ
ರಕ್ತದಬಣ್ಣ ಉಳ್ಳವಳಾಗಿ , ರಕ್ತಬಣ್ಣದ ಉಡುಗೆಯನ್ನೇ ತೊಟ್ಟಿರುವ, ರಕ್ತ ಗಂಧ ಮಾಲಿಕೆಗಳಿಂದ ಆಲಂಕೃತಳಾಗಿರುವ,, ಮೂರುಕಣ್ಣುಗಳುಳ್ಳ , ಮಾಣಿಕ್ಯಮಯವಾದ ಕಿರೀಟದಿಂದ ಪ್ರಕಾಶಿಸುತ್ತಿರುವ, ಪಾಶ, ಅಂಕುಶ, ಕಬ್ಬಿನ ಜಲ್ಲೆಯ ಧನುಸ್ಸು, ದಾಡಿಮೀ ಹೂವಿನ ಬಾಣಗಳನ್ನು ತನ್ನ ನಾಲ್ಕು ಬಾಹುಗಳಲ್ಲಿ ಧರಿಸಿರುವ, ದಯಾಪೂರಿತ ಪ್ರೀತಿಯಿಂದ ಶೀತಲವಾಗಿರುವ ನೇತ್ರಗಳಿಂದ ಭಕ್ತರನ್ನು, ಸಾಧಕರನ್ನು ನೋಡುತ್ತಿರುವ, ಚತುರಸ್ರ, ಷಟ್ಕೋಣ, ಪದ್ಮಗಳಿಂದ ಕೂಡಿದ ತ್ರಿಕೋಣ ಚಕ್ರದ ಅರುಣಾಂಬುಧಿ ಯಲ್ಲಿ ಸಿಂಹಾಸನದಲ್ಲಿ ಸುಖಾಸೀನಳಾಗಿರುವ, ಕಮಲಮುಖಿಯಾದ, ತಾಯಿಯನ್ನು, ತನ್ನಂತೆಯೇ ಇರುವ ಪರಿವಾರ ಶಕ್ತಿದೇವತೆಗಳು ತಮ್ಮ ತಮ್ಮ ದೋಣಿಗಳಲ್ಲಿ ಉಯ್ಯಾಲೆಯಾಡುತ್ತಾ ಸುತ್ತಲೂ ಆವರಿಸಿದ್ದು, ಅವರೊಡನೆ ತಾನು ವಿನೋದಗಳನ್ನು ಮಾಡುತ್ತ್ತಿರುವ ಮಂತ್ರದೇವತೆಯನ್ನು ಧ್ಯಾನಿಸಬೇಕು.
ಅರುಣಾಂಬುಧಿ ಎಂಬುದನ್ನು ಕೆಂಪು ಅಥವಾ ಗುಲಾಬಿ ಮಿಶ್ರಿತ ಕೆಂಪು ಸರೋವರ ಎಂದು ಭಾಷಾಂತರಿಸುವುದಕ್ಕಿಂತ ಕೆಂಪು ಕಮಲಗಳಿಂದ ತುಂಬಿರುವ ಸರೋವರ ಎಂಬ ಭಾಷಾಂತರ ಸೂಕ್ತ ಎನಿಸುತ್ತದೆ.
ಲಲಿತಾ ಸಹಸ್ತನಾಮದ ೫೬೦ ನೆಯ ನಾಮ, ದಾಡಿಮೀ ಕುಸುಮಪ್ರಭಾ ಎನ್ನುವುದಕ್ಕೆ ಭಾಷ್ಯವನ್ನು ಬರೆಯುತ್ತಾ, ದಾಡಿಮೀ ಮರವು ಹೂವನ್ನು ಮಾತ್ರ ಕೊಡುವ ಮರ ಅದು ಹಣ್ಣನ್ನು ಕೊಡುವ ಮರ ಅಲ್ಲ ಎಂದಿದ್ದಾರೆ ಶ್ರೀ ಭಾಸುರಾನಂದನಾಥರು.
ಉಳಿದ ೧೪ ತಿಥಿ ನಿತ್ಯ ದೇವಿಯರ ಧ್ಯಾನಶ್ಲೋಕದ ಬ್ಲಾಗ್ನ ಕೊಂಡಿಗಳು:
1-15 ಶ್ರೀ ಕಾಮೇಶ್ವರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
2-14 ಶ್ರೀ ಭಗಮಾಲಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
3-13 ಶ್ರೀ ನಿತ್ಯಕ್ಲಿನ್ನಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
4-12 ಶ್ರೀ ಭೇರುಂಡಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
5-11 ಶ್ರೀ ವಹ್ನಿವಾಸಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
7-9 ಶ್ರೀ ಶಿವಾದೂತೀ ಅಥವಾ ಶಿವದೂತೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
8-8 ಶ್ರೀ ತ್ವರಿತಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
9-7 ಶ್ರೀ ಕುಲಸುಂದರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ
10-6 ಶ್ರೀ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ
11-5 ಶ್ರೀ ನೀಲಪತಾಕಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
12-4 ಶ್ರೀ ವಿಜಯಾ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
13-3 ಶ್ರೀ ಸರ್ವಮಂಗಳಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
14-2 ಶ್ರೀ ಜ್ವಾಲಾಮಾಲಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
15-1 ಶ್ರೀ ಚಿತ್ರಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ:
ಓಂ ಶಾಂತಿಃ ಶಾಂತಿಃ ಶಾಂತಿಃ
Pingback: ತಿಥಿನಿತ್ಯಾ ದೇವಿಯರು: 1-15 ಶ್ರೀ ಕಾಮೇಶ್ವರೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ – Atmanandanatha
Pingback: ತಿಥಿನಿತ್ಯಾ ದೇವಿಯರು: 2-14 ಶ್ರೀ ಭಗಮಾಲಿನೀ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ – Atmanandanatha
Pingback: ತಿಥಿನಿತ್ಯಾ ದೇವಿಯರು: 4-12 ಶ್ರೀ ಭೇರುಂಡಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ – Atmanandanatha
Pingback: ತಿಥಿನಿತ್ಯಾ ದೇವಿಯರು: 10-6 ಶ್ರೀ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ | Atmanandanatha
Pingback: ತಿಥಿನಿತ್ಯಾ ದೇವಿಯರು: 8-8 ಶ್ರೀ ತ್ವರಿತಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ | Atmanandanatha
Pingback: ತಿಥಿನಿತ್ಯಾ ದೇವಿಯರು: 12-4 ಶ್ರೀ ವಿಜಯಾ ನಿತ್ಯಾ ನಿತ್ಯಾದೇವಿ ಧ್ಯಾನಶ್ಲೋಕ – ಭಾವಾರ್ಥ | Atmanandanatha