ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
ಶ್ರೀ ಲಲಿತೋಪಾಖ್ಯಾನದಲ್ಲಿ ಹಯಗ್ರೀವರು ಶ್ರೀ ಲಲಿತಾ ಮಹಾತ್ರಿಪುರ ಸುಂದರಿಯ ಸೈನ್ಯ ಸಮೂಹವು ದಂಡನಾಥ ಮತ್ತು ಮಂತ್ರಿಣಿಯರ ಮುಂದಾಳುತ್ವದಲ್ಲಿ ಭಂಡಾಸುರನ ವಧೆಗೆ ಹೊರಟ ದೃಶ್ಯವನ್ನು ವಿವರವಾಗಿ ಅಗಸ್ತ್ಯರಿಗೆ ವಿವರಿಸುವಾಗ ಶ್ರೀ ವಾರಾಹೀಯ ಹನ್ನೆರಡು ಅತೀ ಶ್ರೇಷ್ಟವಾದ ನಾಮಗಳನ್ನು , ಶ್ಯಾಮಲೆಯ 16 ನಾಮಗಳನ್ನೂ, ಶ್ರೀ ಲಲಿತಾ ಮಹಾತ್ರಿಪುರ ಸುಂದರಿಯ 25 ನಾಮಗಳನ್ನೂ ಹೇಳುತ್ತಾರೆ. ಈ ನಾಮಗಳನ್ನು ಭಕ್ತಿಯಿಂದ ಹೇಳಿಕೊಂಡರೆ ವಾರಾಹಿಯ, ಶ್ಯಾಮಲಾ ದೇವಿಯ ಮತ್ತು ಶ್ರೀ ಲಲಿತಾ ಮಹಾತ್ರಿಪುರಸುಂದರಿಯ ಅನುಗ್ರಹವಾಗುತ್ತದೆ.
ಹಯಗ್ರೀವ ಉವಾಚ:
ಶ್ರುಣು ದ್ವಾದಶನಾಮಾನಿ ತಸ್ಯಾ ದೇವ್ಯಾ ಘಟೋದ್ಭವ
ಯೇಷಾಮಾಕರ್ಣನಾಮಾತ್ರಾತ್ಪ್ರಸನ್ನಾ ಸಾ ಭವಿಷ್ಯತಿ
ಪಂಚಮೀ ದಂಡನಾಥಾ ಚ ಸಂಕೇತಾ ಸಮಯೇಶ್ವರೀ
ತಥಾ ಸಮಯಸಂಕೇತಾ ವಾರಾಹೀ ಪೋತ್ರಿಣೀ ಶಿವಾ
ವಾರ್ತಾಲೀ ಚ ಮಹಾಸೇನಾ ಪ್ಯಾಜ್ಞಾಚಕ್ರೇಶ್ವರೀ ತಥಾ
ಅರಿಘ್ನೀ ಚೇತಿ ಸಂಪ್ರೋಕ್ತಮ್ ನಾಮ ದ್ವಾದಶಕಂ ಮುನೇ
ಹಯಗ್ರೀವರು ಹೇಳುತ್ತಾರೆ :- ಅಯ್ಯಾ ಘಟೋದ್ಭವನೇ ಆ ದಂಡನಾಥಾ ದೇವಿಯ ದ್ವಾದಶನಾಮಗಳನ್ನು ಆಲಿಸು. ಅವುಗಳನ್ನು ಕೇಳಿದ ಮಾತ್ರದಿಂದಲೇ ಆಕೆಯು ಪ್ರಸನ್ನಳಾಗುತ್ತಾಳೆ.
ಶ್ರೀ ವಾರಾಹೀ ದೇವಿಯ ದಿವ್ಯನಾಮಗಳು: ಪಂಚಮೀ , ದಂಡನಾಥಾ, ಸಂಕೇತಾ,ಸಮಯೇಶ್ವರೀ, ಸಮಯಸಂಕೇತಾ, ವಾರಾಹೀ, ಪೋತ್ರಿಣೀ, ಶಿವಾ,ವಾರ್ತಾಲೀ, ಮಹಾಸೇನಾ, ಆಜ್ಞಾಚಕ್ರೇಶ್ವರೀ, ಅರಿಘ್ನೀ, ಇವೇ ಆ ಮಹಾದೇವಿಯ ಹನ್ನೆರಡು ನಾಮಗಳು.
ನಾಮ ದ್ವಾದಶ ಧಾಭಿಖ್ಯ ವಜ್ರಪಂಜರ ಮಧ್ಯಗಃ
ಸಂಕಟೇ ದುಃಖ ಮಾಪ್ನೋ ತಿ ಕದಾಚನ ಮಾನವಃ
ಈ ಹನ್ನೆರಡು ದಿವ್ಯನಾಮಗಳೆಂಬ ವಜ್ರಪಂಜರದ ಮಧ್ಯದಲ್ಲಿ ಸುರಕ್ಷಿತನಾಗಿರುವ ಮಾನವನು ಯಾವಾಗಲೂ ಎಂತಹ ಕಷ್ಟ ಬಂದರೂ ದುಃಖವನ್ನು ಹೊಂದುವುದಿಲ್ಲಾ
ಈಗ ಶ್ಯಾಮಲಾ ದೇವಿಯ ದಿವ್ಯನಾಮಗಳು:
ಸಂಗೀತಯೋಗಿನೀ ಶ್ಯಾಮಾ ಶ್ಯಾಮಲಾ ಮಂತ್ರಿನಾಯಕಾ
ಮಂತ್ರಿಣೀ ಸಚಿವೇಶಾನೀ ಪ್ರಧಾನೇಶೀ ಶುಕಪ್ರಿಯಾ
ವೀಣಾವತೀ ವೈಣಿಕೀ ಚ ಮುದ್ರಿಣೀ ಪ್ರಿಯಕಪ್ರಿಯಾ
ನೀಪಪ್ರಿಯಾ ಕದಂಬೇಶೀ ಕದಂಬವನವಾಸಿನೀ
ಸದಾಮದಾ ಚ ನಾಮಾನೀ ಷೋಡಶೈತಾನಿ ಕುಂಭಜ
ಸಂಗೀತಯೋಗಿನೀ, ಶ್ಯಾಮಾ, ಶ್ಯಾಮಲಾ, ಮಂತ್ರಿನಾಯಕಾ,ಮಂತ್ರಿಣೀ, ಸಚಿವೇಶಾನೀ, ಪ್ರಧಾನೇಶೀ, ಶುಕಪ್ರಿಯಾ,ವೀಣಾವತೀ, ವೈಣಿಕೀ ,ಮುದ್ರಿಣೀ, ಪ್ರಿಯಕಪ್ರಿಯಾ,ನೀಪಪ್ರಿಯಾ, ಕದಂಬೇಶೀ ಕದಂಬವನವಾಸಿನೀ,ಸದಾಮದಾ, ಈ ಹದಿನಾರು ದಿವ್ಯನಾಮಗಳು ಶ್ರೀ ಶ್ಯಾಮಲಾದೇವಿಯದು.
ಏತೈರ್ಯಃ ಸಚಿವೇಶಾನೀಂ ಸಕೃತ್ಸೌತಿ ಶರೀರವಾನ್
ತಸ್ಯ ತ್ರೈಲೋಕ್ಯ ಮಖಿಲಂ ವಶೇ ತಿಷ್ಠತ್ಯಸಂಶಯಃ
ಈ ದಿವ್ಯ ಷೋಡಶನಾಮಗಳಿಂದ ಯಾರು ಮಂತ್ರಿನಾಥಾ ದೇವಿಯನ್ನು ಒಮ್ಮೆಯಾದರೂ ಸ್ತೋತ್ರ ಮಾಡುವರೋ ಅವರಿಗೆ ಆಕೆಯ ಅನುಗ್ರಹವು ದೊರೆತು ಮೂರು ಲೋಕಗಳೂ ಅವರ ವಶವಾಗುವುದರಲ್ಲಿ ಸಂಶಯವೇ ಇಲ್ಲಾ.
ಈಗ ಶ್ರೀ ಲಲಿತಾ ಮಹಾತ್ರಿಪುರಸುಂದರಿಯ ದಿವ್ಯನಾಮಗಳು:
ಸಿಂಹಾಸನೇಶೀ ಲಲಿತಾ ಮಹಾರಾಜ್ಞೀ ವರಾಂಕುಶಾ
ಚಾಪಿನೀ ತ್ರಿಪುರಾ ಚೈವ ಮಹಾತ್ರಿಪುರಸುಂದರೀ
ಸುಂದರೀ ಚಕ್ರನಾಥಾ ಚ ಸಮ್ರಾಜ್ಞೀ ಚಕ್ರಿಣೀ ತಥಾ
ಚಕ್ರೇಶ್ವರೀ ಮಹಾದೇವೀ ಕಾಮೇಶೀ ಪರಮೇಶ್ವರೀ
ಕಾಮರಾಜಪ್ರಿಯಾ ಕಾಮಕೋಟಿಕಾ ಚಕ್ರವರ್ತಿನೀ
ಮಹಾವಿದ್ಯಾ ಶಿವಾನಂಗವಲ್ಲಭಾ ಸರ್ವಪಾಟಲಾ
ಕುಲನಾಥಾಮ್ನಾಯನಾಥಾ ಸರ್ವಾಮ್ನಾಯ ನಿವಾಸಿನೀ
ಶೃಂಗಾರನಾಯಿಕಾ ಚೇತಿ ಪಂಚವಿಂಶತಿನಾಮಭಿಃ
ಸಿಂಹಾಸನೇಶೀ, ಲಲಿತಾ, ಮಹಾರಾಜ್ಞೀ, ವರಾಂಕುಶಾ, ಚಾಪಿನೀ, ತ್ರಿಪುರಾ, ಮಹಾತ್ರಿಪುರಸುಂದರೀ,ಸುಂದರೀ, ಚಕ್ರನಾಥಾ, ಸಮ್ರಾಜ್ಞೀ, ಚಕ್ರಿಣೀ, ಚಕ್ರೇಶ್ವರೀ, ಮಹಾದೇವೀ ,ಕಾಮೇಶೀ, ಪರಮೇಶ್ವರೀ,ಕಾಮರಾಜಪ್ರಿಯಾ, ಕಾಮಕೋಟಿಕಾ, ಚಕ್ರವರ್ತಿನೀ, ಮಹಾವಿದ್ಯಾ, ಶಿವಾನಂಗವಲ್ಲಭಾ, ಸರ್ವಪಾಟಲಾ,ಕುಲನಾಥಾ, ಆಮ್ನಾಯನಾಥಾ, ಸರ್ವಾಮ್ನಾಯನಿವಾಸಿನೀ ಶೃಂಗಾರನಾಯಿಕಾ, ಎಂಬ ಈ ಪಂಚವಿಂಶತಿ ಅಂದರೆ 25 ನಾಮಗಳು ಶ್ರೀ ಲಲಿತಾ ಮಹಾತ್ರಿಪುರಸುದರಿಯ ದಿವ್ಯ ನಾಮಗಳು.
ಸ್ತುವಂತಿ ಯೇ ಮಹಾಭಾಗಾಂ ಲಲಿತಾಂ ಪರಮೇಶ್ವರೀಂ
ತೇ ಪ್ರಾಪ್ನುವಂತಿ ಸೌಭಾಗ್ಯಮಷ್ಟೌ ಸಿದ್ಧೀರ್ಮಹದ್ಯಶಃ
ಈ ಪಂಚವಿಂಶತಿ ನಾಮಗಳಿಂದ ಮಹಾಭಾಗೆಯಾದ ಶ್ರೀ ಲಲಿತಾ ಮಹಾತ್ರಿಪುರ ಸುಂದರಿಯನ್ನು ಸ್ತುತಿಸಿದರೆ ಸಕಲ ಸೌಭಾಗ್ಯಗಳೂ, ಅಷ್ಟಸಿದ್ಧಿಗಳೂ ಮಹಾಯಶಸ್ಸೂ ದೊರಕುತ್ತವೆ.
ಹೀಗೆ ವಾರಾಹಿಯ 12 ನಾಮಗಳನ್ನೂ, ಮಂತ್ರಿಣಿಯ 16 ನಾಮಗಳನ್ನೂ, ಶ್ರೀ ಲಲಿತಾಮಹಾತ್ರಿಪುರ ಸುಂದರಿಯ 25 ನಾಮಗಳನ್ನು ಹಯಗ್ರೀವರು ಅಗಸ್ತ್ಯರಿಗೆ ಹೇಳಿದ್ದು, ಈ ಎಲ್ಲಾ ದೇವತೆಗಳ ಸಹಸ್ರನಾಮವನ್ನು ಮತ್ತೊಮ್ಮೆ ಬೇರೆಯಾಗಿಯೇ ಹೇಳುತ್ತೇನೆ ಎಂಬುದಾಗಿ ಲಲಿತೋಪಾಖ್ಯಾನದಲ್ಲಿ ಉಲ್ಲೇಖವಿದ್ದು, ಬ್ರಹ್ಮಾಂಡ ಪುರಾಣದ ಈ ಸಹಸ್ರನಾಮಗಳು ಲಭ್ಯವಿಲ್ಲದಿರುವುದು ನಮ್ಮ ದೌರ್ಭಾಗ್ಯ.
ಬೇರೆ ಮೂಲಗಳ ವಾರಾಹೀ ಮತ್ತು ಮಂತ್ರಿಣೀ ಸಹಸ್ರನಾಮ ಗಳನ್ನು ಆದಷ್ಟು ಬೇಗ ಇಲ್ಲಿ ಬರೆಯುತ್ತೇನೆ.
ಶ್ರೀ ವಾರಾಹೀ ದೇವಿಯ, ಮಂತ್ರಿಣೀ ದೇವಿಯ ಮತ್ತು ಶ್ರೀ ಲಲಿತಾಮಹಾತ್ರಿಪುರ ಸುಂದರಿಯ ಸಂಪೂರ್ಣ ಅನುಗ್ರಹ ನಮ್ಮೆಲ್ಲರಿಗೂ ದೊರಕಲಿ ಎಂದು ನನ್ನ ವಿದ್ಯಾಗುರುಗಳ ಮತ್ತು ಗುರುಮಂಡಲ ರೂಪಿಣಿ ಶ್ರೀ ಲಲಿತಾ ಮಹಾತ್ರಿಪುರಸುಂದರಿಯ ಪಾದಾರವಿಂದಗಳಲ್ಲಿ ಶ್ರದ್ಧಾ ಭಕ್ತಿಗಳಿಂದ ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದೇನೆ
ಸರ್ವೇಜನಾಃ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು
ಓಂ ಶಾಂತಿಃ ಶಾಂತಿಃ ಶಾಂತಿಃ