ಡಿಸೆಂಬರ್ 26, ಗ್ರಹಣ- ಸಕಾರಾತ್ಮಕ ಉಪಯೋಗ


ಗ್ರಹಣಗಳ ಬಗ್ಗೆ ಭಯ ನಮ್ಮ ನಂಬಿಕೆಯ ಜಾಲದಲ್ಲಿ,   ವ್ಯೂಹದಲ್ಲಿ ಬಹಳ ಆಳವಾಗಿ ಹೊಕ್ಕಿದ್ದು, ಏನೇ ಪ್ರಯತ್ನ ಪಟ್ಟರೂ ಆ ಭಯದಿಂದ ಹೊರಗೆ ಬರಲು ಕಷ್ಟ ವಾಗಿದೆ. ನಾನು  ಹಲವಾರು ಜ್ಯೋತಿಷ್ಯ ಗ್ರಂಥ ಗಳನ್ನು ಆಧರಿಸಿ. ಗ್ರಹಣ ಕಾಲದಲ್ಲಿನ ಗ್ರಹ ಗಳ ಸ್ಥಿತಯನ್ನು ವಿಶ್ಲೇಷಿಸಿ ಗ್ರಹಣಗಳ ಅದರಲ್ಲೂ ಈಗ ಆಗುತ್ತಿರುವ ಸೂರ್ಯ ಗ್ರಹಣ ನಮ್ಮನ್ನು ಹೇಗೆ ಅಭಿವೃದ್ಧಿಯತ್ತ ದೂಡಿಬಿಡುತ್ತದೆ ಹಾಗೂ ನಾವು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು ಎಂಬ ಬಗ್ಗೆ ಬ್ಲಾಗ್ ನಲ್ಲಿ  ಬರೆದಿದ್ದೇನೆ.

ನಿಜ, ಗ್ರಹಣಗಳು ಪ್ರಕೃತಿಯಲ್ಲಿ ಒಂದು ಅಸಮಾನ್ಯ ವಾದ ಪರಿಸರವನ್ನು ಸೃಷ್ಟಿಸುತ್ತದೆ. ಆ ಪರಿಸ್ಥಿತಿಯನ್ನು ನಾವು ನಮ್ಮ ಅನುಕೂಲಕ್ಕೆ ಉಪಯೋಗಿಸಿಕೊಳ್ಳವ ಬಗ್ಗೆ  ಚಿಂತಿಸ ಬೇಕಿದೆ.

ಯಾವುದೇ ಕ್ರಿಯೆ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮಗಳಿಗೆ ಕಾರಣವಾಗುವುದು ಪ್ರಕೃತಿಯ ಸಹಜ ನಿಯಮ. ನಾವು ಆ ಕ್ರಿಯೆಯ ಸಕಾರಾತ್ಮಕ ಪ್ರಯೋಜನ ಹೊಂದುವುದು ನಮಗೆ ಸೇರಿದ್ದು.  ಆಧ್ಯಾತ್ಮಕ ಸಾಧಕರು, ಗ್ರಹಣಕಾಲದಲ್ಲಿ, ಗ್ರಹಣ ಎಲ್ಲಿ ಗೋಚರವಾಗುತ್ತದೋ ಅಂತಹ ತೀರ್ಥ ಕ್ಷೇತ್ರಗಳಿಗೆ ಹೋಗಿ ಗ್ರಹಣ ಕಾಲದಲ್ಲಿ ತಮ್ಮ ಸಾಧನೆ ಮಾಡುವುದರ ಮೂಲಕ ಗ್ರಹಣದಿಂದ ಆಗುವ ಸಕಾರಾತ್ಮಕ ಪರಿಣಾಮಗಳನ್ನು ಉಪಯೋಗಿಸಿಕೊಳ್ಳುತ್ತಿದ್ದರು ಎಂಬ ಬಗ್ಗೆ ಇತಿಹಾಸದಲ್ಲಿ ನಾವು ಓದಿದ್ದೇವೆ, ಕೇಳಿದ್ದೇವೆ.

ನವಧಾನ್ಯಗಳನ್ನು ನವಗ್ರಹಗಳೊಂದಿಗೆ ಸಮೀಕರಿಸಿರುವ ನಮ್ಮ ಅಂದಿನ ಕಾಲದ ಋಷಿಗಳ ಉದ್ದೇಶ, ಈ ಧಾನ್ಯಗಳ ಜೈವಿಕ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯನ್ನು ರಕ್ಷಿಸುವುದಕ್ಕಾಗಿ ಎನ್ನುವುದು ನಮಗೆ ತಿಳಿಯಬೇಕು. ನವಗ್ರಹಗಳ ಆರಾಧನೆಯ ಹೆಸರಿನಲ್ಲಿ ಈ ಧಾನ್ಯಗಳನ್ನು ದಾನ ಮಾಡುವ ಉದ್ದೇಶವೂ ಇದೇ ಆಗಿದೆ.  ರವಿಯ ಧಾನ್ಯ “ಯುವ” ಅಂದರೆ ಬಾರ್ಲಿ, ಅದು ನಂತರದ ದಿನಗಳಲ್ಲಿ ಗೋಧಿಯಾಗಿ ಬದಲಾವಣೆ ಹೊಂದಿತು ಎನ್ನುವುದನ್ನು ಸಹಾ ಇಲ್ಲಿ ಹೇಳಬಯಸುತ್ತೇನೆ. ಹಾಗೆಯೇ,  ಮಂಗಳನ ಧಾನ್ಯ ದಕ್ಸಿಣ ಭಾರತದಲ್ಲಿ ತೊಗರಿ ಬೇಳೆ ಯಾದರೆ, ಮಸೂರಿ ಕಾಳು ಬೆಳೆಯುವ ಪ್ರದೇಶಗಳಲ್ಲಿ ಮಂಗಳನ ಧಾನ್ಯ ಮಸೂರಿ ಬೇಳೆಯಾಗಿದೆ.

ಈಗ ಗ್ರಹಣಗಳ ಸಮಯವನ್ನು ಸಕಾರಾತ್ಮಕವಾಗಿ ಉಪಯೋಗಿಸಿಕೊಳ್ಳುವ ಬಗ್ಗೆ ಚಿಂತಿಸೋಣ. ನಮ್ಮಲ್ಲಿ  ಆಳವಾಗಿ ಹೊಕ್ಕಿರುವ ನಂಬಿಕೆಗಳನ್ನು ಅದುಮಿಕ್ಕುವ ಪ್ರಯತ್ನ ಸಾಧುವಲ್ಲಾ, ಏಕೆಂದರೆ ಅದು ಸಾಧ್ಯವೂ ಅಲ್ಲಾ. ಹಾಗಾಗಿ ಎಲ್ಲ ನಕ್ಷತ್ರ, ರಾಶಿಯವರೂ ಸಹಾ ಗೋಧಿ ಮತ್ತು ಹುರುಳಿಕಾಳನ್ನು ದಾನವಾಗಿ ಕೊಡೋಣ. ಸಾಧ್ಯವಾದರೆ, ಕೆಂಪು ಬಟ್ಟೆ ಮತ್ತು ಬಣ್ಣ ಬಣ್ಣ ಚಿತ್ತಾರವುಳ್ಳ ಬಟ್ಟೆಯನ್ನೂ ದಾನ ಮಾಡೋಣ. ದಾನ ಮಾಡುವಾಗ ಅದರ ಅವಶ್ಯಕತೆ ಇರುವವರಿಗೆ ದಾನ ಮಾಡುವುದು ಹೆಚ್ಚು ಶ್ರೇಯಸ್ಕರ.

ಧರ್ಬೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಅಡಿಗೆಮನೆಯಲ್ಲಿ,   ನೀರಿನ ಟಾಂಕ್, ಸಂಪ್, ದೇವರ ಮನೆ ಯಲ್ಲಿ ಇಡುವುದರಿಂದ  ಗ್ರಹಣ  ಸಮಯದ ವಿಕಿರಣವನ್ನು  ತಡೆಗಟ್ಟುತ್ತದೆ ಎಂದು ವೈಜ್ಞಾನಿಕ ವಾಗಿಯೂ ಸಾಬೀತಾಗಿದೆ.

ನಾವು ಗ್ರಹಣ ಸಮಯದಲ್ಲಿ ಏನು ಮಾಡಬೇಕು:-

ಗ್ರಹಣ ಕಾಲಕ್ಕೆ ಹೊಟ್ಟೆ ಖಾಲಿ ಇಡುವುದರಿಂದ, ಆಹಾರದ ಜೀರ್ಣಶಕ್ತಿಗೆ ಬೇಕಾದ ಶಕ್ತಿಯು ಮನಸ್ಸನ್ನು ಒಂದೆಡೆ ನಿಲ್ಲಿಸಲು ಉಪಯೋಗವಾಗುತ್ತದೆ ಎಂಬುದು ಅನುಭವದಿಂದ ತಿಳಿದವರು ಹೇಳುತ್ತಾರೆ.

ಗ್ರಹಣ ಆರಂಭ ಆದ ತಕ್ಷಣ ಸ್ನಾನ ಮಾಡುವುದು. ಗ್ರಹಣ ಮುಗಿಯುವವರೆಗೂ, ನಮ್ಮ ನಮ್ಮ ಇಷ್ಟದೈವದ ಸ್ತೋತ್ರ, ಪ್ರಾರ್ಥನೆ, ಸಹಸ್ರನಾಮ ಗಳನ್ನು ಹೇಳುವುದು ಇಲ್ಲವೇ  ಭಕ್ತಿಯಿಂದ ಒಂದು ಕಡೆ ಕುಳಿತು ಕೇಳುವುದು.. ಆದಿತ್ಯ ಹೃದಯದ ಪಠಣೆ ಅಥವಾ ಶ್ರವಣವೂ ಒಳ್ಳೆಯದು. ಯಾವುದೇ  ಮಂತ್ರ ಉಪದೇಶ ಆಗಿರುವವರಿಗೆ,  ಗ್ರಹಣದ ಸಮಯದಲ್ಲಿ ಮಂತ್ರ ಸಾಧನೆಯನ್ನು ತಪ್ಪದೆ ಮಾಡಿ ಮಂತ್ರ ಸಿದ್ಧಿ  ಪಡೆದುಕೊಳ್ಳಲು ಪ್ರಕೃತಿಯು ನೀಡಿರುವ ಕೊಡುಗೆಯೇ  ಗ್ರಹಣವಾಗಿದೆ.

ಮಂತ್ರ, ಸ್ತೋತ್ರ, ಪ್ರಾರ್ಥನೆಗಳ ಶಬ್ಧತರಂಗಗಳು ನಮ್ಮ ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದು ನಮ್ಮೆಲ್ಲರ ಅನುಭವಕ್ಕೆ ಬಂದಿದೆ.  ಗ್ರಹಣ ಕಾಲವನ್ನು ಅದಕ್ಕಾಗಿ ಉಪಯೋಗಿಸಿಕೊಳ್ಳೋಣ.

ಆದಿತ್ಯ ಹೃದಯದ ಪಾಠವನ್ನು  ಇಲ್ಲಿ ನೀಡಿದೆ,ಅಲ್ಲದೆ ಅದನ್ನು ಪಠಿಸಿರುವ ಯೂ ಟ್ಯೂಬ್ ಕೊಂಡಿ ಸಹಾ ಇಲ್ಲಿದೆ

ಗ್ರಹಣ ಮುಗಿದನಂತರ ಸಚೇಲ ಸ್ನಾನ ( ಉಟ್ಟ ಬಟ್ಟೆಯಲ್ಲಿ ಸ್ನಾನ) ಮಾಡಿ, ಸ್ವಲ್ಪ ಕಾಲ ಮನಸ್ಸನ್ನು ಕೇಂದ್ರೀಕರಿಸಿ ಧ್ಯಾನ ಮಾಡಿ, ಗ್ರಹಣದ ಎಲ್ಲಾ ಸಕಾರಾತ್ಮಕ ಪರಿಣಾಮಗಳು ನಮ್ಮ ಮೇಲೆ ಆಗಿದೆ, ನಾವು ಎಲ್ಲ ರೀತಿಯಲ್ಲಿಯೂ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದೇವೆ ಎಂಬ ಚಿಂತನೆಯನ್ನು, ಆಲೋಚನೆಯನ್ನು ನಮ್ಮ ಮನದಾಳದಲ್ಲಿ ನೆಲಸುವಂತೆ ಮಾಡೋಣ.  ನಂತರ ಪದ್ಧತಿಯಿರುವವರು, ದೇವರಿಗೆ ಪೂಜೆಸಲ್ಲಿಸಿ, ನೈವೇದ್ಯ ಆರತಿಗಳನ್ನು ಮಾಡಿ, ದೈನಂದಿನ ಕಾರ್ಯಗಳಲ್ಲಿ ಅತ್ಯಂತ ಉತ್ಸುಕತೆಯಿಂದ ತೊಡಗಿಸಿಕೊಳ್ಳೋಣ..

ನಮ್ಮೆಲರಿಗೂ, ಈ ಗ್ರಹಣವು ಅತ್ಯಂತ ಶುಭ ಫಲಗಳನ್ನು ನೀಡುವಂತೆ ಅನುಗ್ರಹಿಸಲಿ ಎಂದು ನನ್ನ ಗುರುಗಳ, ಗುರುಮಂಡಲ ರೂಪಿಣಿ, ಶ್ರೀ ಲಲಿತಾ ಮಹಾತ್ರಿಪುರಸುಂದರಿಯ ಪಾದ ಪದ್ಮಗಳಲ್ಲಿ ಅತ್ಯಂತ ಭಕ್ತಿ ಪೂರ್ವಕವಾಗಿ ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದೇನೆ.

ಅಸ್ಯ ಶ್ರೀ ಆದಿತ್ಯ ಹೃದಯ ಸ್ತೋತ್ರ ಮಹಾ ಮಂತ್ರಸ್ಯ ಅಗಸ್ತ್ಯೋ ಭಗವಾನ್ ಋಷಿಃ ಅನುಷ್ಟುಪ್ ಛಂದಃ ಶ್ರೀ ಆದಿತ್ಯಾತ್ಮಾ ಸೂರ್ಯ ನಾರಾಯಣೋ ದೇವತಾ ಸರ್ವ ಜಯ ಸಿಧ್ಯರ್ಥೇ, ಉತ್ಥಿತ ಕೇತು ಗ್ರಸ್ತ ಸೂರ್ಯ ಗ್ರಹಣ ದೋಷ ಪರಿಹಾರಾರ್ಥೇ ಜಪೇ ವಿನಿಯೋಗಃ

ಧ್ಯಾನಮ್

ನಮಸ್ಸವಿತ್ರೇ ಜಗದೇಕ ಚಕ್ಷುಸೇ
ಜಗತ್ಪ್ರಸೂತಿ ಸ್ಥಿತಿ ನಾಶಹೇತವೇ
ತ್ರಯೀಮಯಾಯ ತ್ರಿಗುಣಾತ್ಮ ಧಾರಿಣೇ
ವಿರಿಂಚಿ ನಾರಾಯಣ ಶಂಕರಾತ್ಮನೇ

ತತೋ ಯುದ್ಧ ಪರಿಶ್ರಾಂತಂ ಸಮರೇ ಚಿಂತಯಾ ಸ್ಥಿತಮ್ |
ರಾವಣಂ ಚಾಗ್ರತೋ ದೃಷ್ಟ್ವಾ ಯುದ್ಧಾಯ ಸಮುಪಸ್ಥಿತಮ್ || 1 ||

ದೈವತೈಶ್ಚ ಸಮಾಗಮ್ಯ ದ್ರಷ್ಟುಮಭ್ಯಾಗತೋ ರಣಮ್ |
ಉಪಗಮ್ಯಾ ಬ್ರವೀದ್ರಾಮಮ್ ಅಗಸ್ತ್ಯೋ ಭಗವಾನ್ ಋಷಿಃ || 2 ||

ರಾಮ ರಾಮ ಮಹಾಬಾಹೋ ಶೃಣು ಗುಹ್ಯಂ ಸನಾತನಮ್ |
ಯೇನ ಸರ್ವಾನರೀನ್ ವತ್ಸ ಸಮರೇ ವಿಜಯಿಷ್ಯಸಿ || 3 ||

ಆದಿತ್ಯ ಹೃದಯಂ ಪುಣ್ಯಂ ಸರ್ವಶತ್ರು ವಿನಾಶನಮ್ |
ಜಯಾವಹಂ ಜಪೇನ್ನಿತ್ಯಂ ಅಕ್ಷಯ್ಯಂ ಪರಮಂ ಶಿವಮ್ || 4 ||

ಸರ್ವಮಂಗಳ ಮಾಂಗಳ್ಯಂ ಸರ್ವ ಪಾಪ ಪ್ರಣಾಶನಮ್ |
ಚಿಂತಾಶೋಕ ಪ್ರಶಮನಂ ಆಯುರ್ವರ್ಧನ ಮುತ್ತಮಮ್ || 5 ||

ರಶ್ಮಿಮಂತಂ ಸಮುದ್ಯಂತಂ ದೇವಾಸುರ ನಮಸ್ಕೃತಮ್ |
ಪೂಜಯಸ್ವ ವಿವಸ್ವಂತಂ ಭಾಸ್ಕರಂ ಭುವನೇಶ್ವರಮ್ || 6 ||

ಸರ್ವದೇವಾತ್ಮಕೋ ಹ್ಯೇಷ ತೇಜಸ್ವೀ ರಶ್ಮಿಭಾವನಃ |
ಏಷ ದೇವಾಸುರ ಗಣಾನ್ ಲೋಕಾನ್ ಪಾತಿ ಗಭಸ್ತಿಭಿಃ || 7 ||

ಏಷ ಬ್ರಹ್ಮಾ ಚ ವಿಷ್ಣುಶ್ಚ ಶಿವಃ ಸ್ಕಂದಃ ಪ್ರಜಾಪತಿಃ |
ಮಹೇಂದ್ರೋ ಧನದಃ ಕಾಲೋ ಯಮಃ ಸೋಮೋ ಹ್ಯಪಾಂ ಪತಿಃ || 8 ||

ಪಿತರೋ ವಸವಃ ಸಾಧ್ಯಾ ಹ್ಯಶ್ವಿನೌ ಮರುತೋ ಮನುಃ |
ವಾಯುರ್ವಹ್ನಿಃ ಪ್ರಜಾಪ್ರಾಣಃ ಋತುಕರ್ತಾ ಪ್ರಭಾಕರಃ || 9 ||

ಆದಿತ್ಯಃ ಸವಿತಾ ಸೂರ್ಯಃ ಖಗಃ ಪೂಷಾ ಗಭಸ್ತಿಮಾನ್ |
ಸುವರ್ಣಸದೃಶೋ ಭಾನುಃ ಹಿರಣ್ಯರೇತಾ ದಿವಾಕರಃ || 10 ||

ಹರಿದಶ್ವಃ ಸಹಸ್ರಾರ್ಚಿಃ ಸಪ್ತಸಪ್ತಿ-ರ್ಮರೀಚಿಮಾನ್ |
ತಿಮಿರೋನ್ಮಥನಃ ಶಂಭುಃ ತ್ವಷ್ಟಾ ಮಾರ್ತಾಂಡಕೋಽಂಶುಮಾನ್ || 11 ||

ಹಿರಣ್ಯಗರ್ಭಃ ಶಿಶಿರಃ ತಪನೋ ಭಾಸ್ಕರೋ ರವಿಃ |
ಅಗ್ನಿಗರ್ಭೋಽದಿತೇಃ ಪುತ್ರಃ ಶಂಖಃ ಶಿಶಿರನಾಶನಃ || 12 ||

ವ್ಯೋಮನಾಥ ಸ್ತಮೋಭೇದೀ ಋಗ್ಯಜುಃಸಾಮ-ಪಾರಗಃ |
ಘನಾವೃಷ್ಟಿ ರಪಾಂ ಮಿತ್ರೋ ವಿಂಧ್ಯವೀಥೀ ಪ್ಲವಂಗಮಃ || 13 ||

ಆತಪೀ ಮಂಡಲೀ ಮೃತ್ಯುಃ ಪಿಂಗಳಃ ಸರ್ವತಾಪನಃ |
ಕವಿರ್ವಿಶ್ವೋ ಮಹಾತೇಜಾ ರಕ್ತಃ ಸರ್ವಭವೋದ್ಭವಃ || 14 ||

ನಕ್ಷತ್ರ ಗ್ರಹ ತಾರಾಣಾಮ್ ಅಧಿಪೋ ವಿಶ್ವಭಾವನಃ |
ತೇಜಸಾಮಪಿ ತೇಜಸ್ವೀ ದ್ವಾದಶಾತ್ಮನ್-ನಮೋಽಸ್ತು ತೇ || 15 ||

ನಮಃ ಪೂರ್ವಾಯ ಗಿರಯೇ ಪಶ್ಚಿಮಾಯಾದ್ರಯೇ ನಮಃ |
ಜ್ಯೋತಿರ್ಗಣಾನಾಂ ಪತಯೇ ದಿನಾಧಿಪತಯೇ ನಮಃ || 16 ||

ಜಯಾಯ ಜಯಭದ್ರಾಯ ಹರ್ಯಶ್ವಾಯ ನಮೋ ನಮಃ |
ನಮೋ ನಮಃ ಸಹಸ್ರಾಂಶೋ ಆದಿತ್ಯಾಯ ನಮೋ ನಮಃ || 17 ||

ನಮ ಉಗ್ರಾಯ ವೀರಾಯ ಸಾರಂಗಾಯ ನಮೋ ನಮಃ |
ನಮಃ ಪದ್ಮಪ್ರಬೋಧಾಯ ಮಾರ್ತಾಂಡಾಯ ನಮೋ ನಮಃ || 18 ||

ಬ್ರಹ್ಮೇಶಾನಾಚ್ಯುತೇಶಾಯ ಸೂರ್ಯಾಯಾದಿತ್ಯ-ವರ್ಚಸೇ |
ಭಾಸ್ವತೇ ಸರ್ವಭಕ್ಷಾಯ ರೌದ್ರಾಯ ವಪುಷೇ ನಮಃ || 19 ||

ತಮೋಘ್ನಾಯ ಹಿಮಘ್ನಾಯ ಶತ್ರುಘ್ನಾಯಾ ಮಿತಾತ್ಮನೇ |
ಕೃತಘ್ನಘ್ನಾಯ ದೇವಾಯ ಜ್ಯೋತಿಷಾಂ ಪತಯೇ ನಮಃ || 20 ||

ತಪ್ತ ಚಾಮೀಕರಾಭಾಯ ವಹ್ನಯೇ ವಿಶ್ವಕರ್ಮಣೇ |
ನಮಸ್ತಮೋಽಭಿ ನಿಘ್ನಾಯ ರುಚಯೇ ಲೋಕಸಾಕ್ಷಿಣೇ || 21 ||

ನಾಶಯತ್ಯೇಷ ವೈ ಭೂತಂ ತದೇವ ಸೃಜತಿ ಪ್ರಭುಃ |
ಪಾಯತ್ಯೇಷ ತಪತ್ಯೇಷ ವರ್ಷತ್ಯೇಷ ಗಭಸ್ತಿಭಿಃ || 22 ||

ಏಷ ಸುಪ್ತೇಷು ಜಾಗರ್ತಿ ಭೂತೇಷು ಪರಿನಿಷ್ಠಿತಃ |
ಏಷ ಏವಾಗ್ನಿಹೋತ್ರಂ ಚ ಫಲಂ ಚೈವಾಗ್ನಿ ಹೋತ್ರಿಣಾಮ್ || 23 ||

ವೇದಾಶ್ಚ ಕ್ರತವಶ್ಚೈವ ಕ್ರತೂನಾಂ ಫಲಮೇವ ಚ |
ಯಾನಿ ಕೃತ್ಯಾನಿ ಲೋಕೇಷು ಸರ್ವ ಏಷ ರವಿಃ ಪ್ರಭುಃ || 24 ||

ಫಲಶ್ರುತಿಃ

ಏನ ಮಾಪತ್ಸು ಕೃಚ್ಛ್ರೇಷು ಕಾಂತಾರೇಷು ಭಯೇಷು ಚ |
ಕೀರ್ತಯನ್ ಪುರುಷಃ ಕಶ್ಚಿನ್-ನಾವಶೀದತಿ ರಾಘವ || 25 ||

ಪೂಜಯಸ್ವೈನ ಮೇಕಾಗ್ರೋ ದೇವದೇವಂ ಜಗತ್ಪತಿಮ್ |
ಏತತ್ ತ್ರಿಗುಣಿತಂ ಜಪ್ತ್ವಾ ಯುದ್ಧೇಷು ವಿಜಯಿಷ್ಯಸಿ || 26 ||

ಅಸ್ಮಿನ್ ಕ್ಷಣೇ ಮಹಾಬಾಹೋ ರಾವಣಂ ತ್ವಂ ವಧಿಷ್ಯಸಿ |
ಏವಮುಕ್ತ್ವಾ ತದಾಗಸ್ತ್ಯೋ ಜಗಾಮ ಚ ಯಥಾಗತಮ್ || 27 ||

ಏತಚ್ಛ್ರುತ್ವಾ ಮಹಾತೇಜಾಃ ನಷ್ಟಶೋಕೋಽಭವತ್-ತದಾ |
ಧಾರಯಾಮಾಸ ಸುಪ್ರೀತೋ ರಾಘವಃ ಪ್ರಯತಾತ್ಮವಾನ್ || 28 ||

ಆದಿತ್ಯಂ ಪ್ರೇಕ್ಷ್ಯ ಜಪ್ತ್ವಾ ತು ಪರಂ ಹರ್ಷಮವಾಪ್ತವಾನ್ |
ತ್ರಿರಾಚಮ್ಯ ಶುಚಿರ್ಭೂತ್ವಾ ಧನುರಾದಾಯ ವೀರ್ಯವಾನ್ || 29 ||

ರಾವಣಂ ಪ್ರೇಕ್ಷ್ಯ ಹೃಷ್ಟಾತ್ಮಾ ಯುದ್ಧಾಯ ಸಮುಪಾಗಮತ್ |
ಸರ್ವಯತ್ನೇನ ಮಹತಾ ವಧೇ ತಸ್ಯ ಧೃತೋಽಭವತ್ || 30 ||

ಅಥ ರವಿರವದನ್-ನಿರೀಕ್ಷ್ಯ ರಾಮಂ ಮುದಿತಮನಾಃ ಪರಮಂ ಪ್ರಹೃಷ್ಯಮಾಣಃ |
ನಿಶಿಚರಪತಿ ಸಂಕ್ಷಯಂ ವಿದಿತ್ವಾ ಸುರಗಣ ಮಧ್ಯಗತೋ ವಚಸ್ತ್ವರೇತಿ || 31 ||

ಸರ್ವೇ ಜನಾಃ ಸುಖಿನೋ ಭವಂತು ಸಮಸ್ತ ಸಂಮಂಗಳಾನಿ ಭವಂತು

ಓಂ  ಶಾಂತಿಃ ಶಾಂತಿಃ ಶಾಂತಿಃ

ಸೂರ್ಯಗ್ರಹಣ: ಒಂದು ವಿಶ್ಲೇಷಣೆ 3 ಭಾಗಗಳಿವೆ ಹೆಚ್ಚಿನ ವಿವರಣೆಗೆ ಮುಂದೆ ಓದಿ

ಭಾಗ 1: ಡಿಸೆಂಬರ್ 26, ಸೂರ್ಯಗ್ರಹಣ: ಒಂದು ವಿಶ್ಲೇಷಣೆ

ಭಾಗ 2: ಡಿಸೆಂಬರ್ 26, ಸೂರ್ಯಗ್ರಹಣ: ಒಂದು ವಿಶ್ಲೇಷಣೆ ಭಾಗ 2

ಭಾಗ 3ಡಿಸೆಂಬರ್ 26, ಸೂರ್ಯಗ್ರಹಣ: ಒಂದು ವಿಶ್ಲೇಷಣೆ ಭಾಗ 3

ಸೂರ್ಯಗ್ರಹಣ ವಿವರಣೆಯ ವಿಡಿಯೋ ಯೂಟ್ಯೂಬ್ ಕೊಂಡಿ:-

ಆದಿತ್ಯ ಹೃದಯ ಪಠಣ ಯೂಟ್ಯೂಬ್ ಕೊಂಡಿ: 

7 Comments on “ಡಿಸೆಂಬರ್ 26, ಗ್ರಹಣ- ಸಕಾರಾತ್ಮಕ ಉಪಯೋಗ

  1. Pingback: ಡಿಸೆಂಬರ್ 26, ಸೂರ್ಯಗ್ರಹಣ-ಒಂದು ವಿಶ್ಲೇಷಣೆ – Atmanandanatha

  2. Pingback: ಡಿಸೆಂಬರ್ 26, ಸೂರ್ಯಗ್ರಹಣ: ಒಂದು ವಿಶ್ಲೇಷಣೆ ಭಾಗ 3 – Atmanandanatha

  3. Pingback: ಡಿಸೆಂಬರ್ 26, ಸೂರ್ಯಗ್ರಹಣ: ಒಂದು ವಿಶ್ಲೇಷಣೆ ಭಾಗ 2 – Atmanandanatha

  4. Pingback: ಗ್ರಹಣದಿಂದ ಆಧ್ಯಾತ್ಮಿಕ ಸಕಾರಾತ್ಮಕ ಉಪಯೋಗವೂ ಸಾಧ್ಯ: ಇಲ್ಲಿದೆ ಮಾಹಿತಿ- Kannada Prabha |

  5. Pingback: ಗ್ರಹಣದಿಂದ ಆಧ್ಯಾತ್ಮಿಕ ಸಕಾರಾತ್ಮಕ ಉಪಯೋಗವೂ ಸಾಧ್ಯ: ಇಲ್ಲಿದೆ ಮಾಹಿತಿ – ಡಿಜಿಟಲ್ ನ್ಯೂಸ್

  6. Pingback: ಗ್ರಹಣದಿಂದ ಆಧ್ಯಾತ್ಮಿಕ ಸಕಾರಾತ್ಮಕ ಉಪಯೋಗವೂ ಸಾಧ್ಯ: ಇಲ್ಲಿದೆ ಮಾಹಿತಿ – Kannada news

  7. Pingback: ಗ್ರಹಣದಿಂದ ಆಧ್ಯಾತ್ಮಿಕ ಸಕಾರಾತ್ಮಕ ಉಪಯೋಗವೂ ಸಾಧ್ಯ: ಇಲ್ಲಿದೆ ಮಾಹಿತಿ- Kannada Prabha – Vartahub – Kannada

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: