ಜನ್ಮ ಕುಂಡಲಿಯಲ್ಲಿ ರಾಹು ಕೇತುಗಳ ಸ್ಥಾನ ವನ್ನು ಪರಿಶೀಲಿಸಿ ಸರ್ಪದೋಷವನ್ನು ನಿರ್ಣಯಿಸಲಾಗುತ್ತದೆ. ಶ್ರೀ ವರಾಹಮಿಹಿರರ ಮತ್ತು ಪರಾಶರರ ಗ್ರಂಥಗಳಲ್ಲಿ ರಾಹು ಕೇತುಗಳ ಬಗ್ಗೆ ಅಂತಹ ವಿವರಗಳೇನೂ ಲಭ್ಯವಿಲ್ಲ ವೆಂಬುದೂ ಸಹಾ ಸಂಶೋಧನೆಗೆ ವಸ್ತು ಆಗಬಹುದಾಗಿದೆ. ರಾಹು ದುರ್ಗಾ ದೇವಿಯನ್ನು ಪ್ರತಿನಿಧಿಸಿದರೆ, ಕೇತು, ಗಣಪತಿ ಮತ್ತು ಸುಬ್ರಹ್ಮಣ್ಯ ರನ್ನು ಪ್ರತಿನಿಧಿಸುತ್ತಾರೆ. ದುರ್ಗಾ ದೇವಿಯು ಪಿಂಗಳ ನಾಡಿ ( ಸೂರ್ಯ) ಯಾದರೆ, ಮಾತಂಗಿ ದೇವಿಯು ಇಡಾ ನಾಡಿ ( ಚಂದ್ರ) ಯಾಗಿದ್ದು,ಈ ಎರಡು ನಾಡಿಗಳಲ್ಲಿ ಸಾಮರಸ್ಯ ವಿಲ್ಲದಿದ್ದಾಗ ಅದು ಷಟ್ಚಕ್ರಗಳಲ್ಲಿಯ ಶಕ್ತಿಯ ಮೇಲೆ ಪರಿಣಾಮ ಬೀರಿದಾಗ ವ್ಯಕ್ತಿಯ ಅಭಿವೃದ್ಧಿ,ಸಂತಾನ ಇವೆಲ್ಲುವುಗಳ ಮೇಲೆ ಪರಿಣಾಮ ಆಗುತ್ತದೆ. ಷಟ್ಚಕ್ರಗಳ ಶಕ್ತಿಯು ಮೂಲಾಧಾರ ಚಕ್ರದಲ್ಲಿ ಸಂಚಯವಾಗಿದ್ದು ಅದು ಸರ್ಪಾಕಾರವಾಗಿದ್ದು, ರಾಹು ಕೇತುಗಳನ್ನು ಸರ್ಪ ಎಂದು ಗುರುತಿಸಿರುವ ಕಾರಣ ಇಡಾ ಪಿಂಗಳಗಳ ಅಸಾಮರಸ್ಯ ವನ್ನು ಸರ್ಪದೋಷ ವೆನ್ನಬಹುದಾಗಿದೆ.
ಆರು ಚಕ್ರಗಳಲ್ಲಿ ಮಣಿಪೂರ ಚಕ್ರವು ಪಿತೃ ಸ್ಥಾನ ಅಂದರೆ ವಂಶವಾಹಿನಿಯ ( ಪಿತೃ) ಸ್ಥಾನ ಎನ್ನಲಾಗಿದೆ. ಈ ಚಕ್ರದಲ್ಲಿ ಯ ಶಕ್ತಿಯ ವ್ಯತ್ಯವ್ಯವೂ ಸಹಾ ಸರ್ಪದೋಷವೆಂದೇ ಪರಿಗಣಿಸಿದ್ದು ಪಿತೃ ದೋಷ ಮತ್ತು ಸರ್ಪದೋಷಗಳಲ್ಲಿ ಸಮಾನತೆಯನ್ನು ಗುರುತಿಸಬಹುದಾಗಿದೆ. ಸರ್ಪ ದೋಷ ಮತ್ತು ಪಿತೃ ದೋಷಗಳು ವಂಶಪಾರಂಪರ್ಯ ವಾಗಿ ಬರುವುದನ್ನೂ ಸಹಾ ಗಮನಿಸಬಹುದು.
- ಇದು ವಂಶವಾಹಿನಿಯಲ್ಲಿಯೇ ಬರುವಂತಾದ್ದು.
- 6 ಚಕ್ರಗಳಲ್ಲಿ ಹರಿಯುವ ಶಕ್ತಿಯು ಇಡಾ ಪಿಂಗಳಗಳ ಮೂಲಕ ನಾವು ಉಸಿರಾಡುವ ವಿಧಾನವನ್ನು ಅವಲಂಬಿಸಿದೆ.
- ಸ್ವಾಧಿಷ್ಟಾನ ಚಕ್ರದಲ್ಲಿನ ಬ್ರಹ್ಮಗ್ರಂಥಿಯನ್ನು ದಾಟಿ ಶಕ್ತಿಯು ಮಣಿಪೂರವನ್ನು ತಲುಪಲು ಸಾಧ್ಯವಾಗದಿದ್ದಾಗಲೂ ಸರ್ಪ ದೋಷ , ಪಿತೃದೋಷದ ಎಲ್ಲಾ ಲಕ್ಷಣಗಳೂ ಅಂದರೆ,ಅಭಿವೃದ್ಧಿಯಲ್ಲಿ,ಹಿನ್ನಡೆ, ಸದಾ ಏರು ಪೇರಿನ ಜೀವನ ಇತ್ಯಾದಿ ಕಾಣಿಸಿಕೊಳ್ಳುತ್ತವೆ.
- ಸ್ಬಾಧಿಷ್ಟಾನ ಚಕ್ರವು ಸಂತಾನೋತ್ಪತ್ತಿ ಯನ್ನು ನಿರ್ವಹಿಸುವುದರಿಂದ ಮತ್ತು ಈ ಚಕ್ರದ ಆಧಿಪತ್ಯವನ್ನು ಸುಬ್ರಹ್ಮಣ್ಯ ( ಬ್ರಹ್ಮ ಎಂತಲೂ ಹೇಳಲಾಗಿದೆ). ಸು- ಬ್ರಹ್ಮಣ್ಯನೇ ಸುಬ್ರಹ್ಮಣ್ಯ. ಈ ಕಾರಣಕ್ಕಾಗಿಯೇ ಸುಬ್ರಹ್ಮಣ್ಯ ಆರಾಧನೆ ಯನ್ನು ಸರ್ಪದೋಷ ಪರಿಹಾರವಾಗಿ ಸೂಚಿಸಲಾಗಿದೆ.
- ಭೂಮಂಡಲದ ಹಲವು ಅಕ್ಷಾಂಶ ರೇಖಾಂಶಗಳಲ್ಲಿರುವ ಪ್ರದೇಶಗಳು ಮತ್ತು ಅಲ್ಲಿ ಇರುವ ದೇವತಾ ಸಾನ್ನಿಧ್ಯವು ಇಡಾ ಪಿಂಗಡ ಗಳ ಅಸಾಮರಸ್ಯ ವನ್ನು ಸರಿಪಡಿಸಲು ಸಹಕಾರಿಯಾಗಿದ್ದು, ಆ ದೇವತಾ ಸಾನ್ನಿಧ್ಯಗಳಲ್ಲಿ ಮಾಡುವ ಪ್ರಾರ್ಥನೆ ಪ್ರಯೋಜನಕಾರಿ ಆಗುತ್ತದೆ.
- ಇದು ಕುಕ್ಕೆ, ಕಾಳಹಸ್ತಿ ಮಾತ್ರವಲ್ಲದೆ, ನಾಗನಾಥ ಮತ್ತು ಮಹಾಕಾಳೇಶ್ವರವೂ ಆಗಬಹುದು.
- , ಮೂಲಾಧಾರದಿಂದ ಸಹಸ್ರಾರದ ವರೆಗೆ ಒಂದೊಂದೇ ಚಕ್ರದಲ್ಲಿ ಮನಸ್ಸನ್ನು ನಿಲ್ಲಿಸುತ್ತಾ ದೀರ್ಘ ಉಸಿರಾಟ ವನ್ನು ಅಬ್ಯಾಸ ಮಾಡಿ, ಆ ಉಸಿರಾಟದ ಮೇಲೆಯೇ ಮನಸ್ಸನ್ನು ನಿಲ್ಲಿಸುವ ಸಾಧನೆ ಸರ್ಪ ದೋಷ ಮತ್ತು ಪಿತೃ ದೋಷ ಗಳ ನಿವಾರಣೆಗೆ ಉತ್ತಮ ಪರಿಹಾರ.
- ಮಾತಾ ಪಿತೃಗಳಿಗೆ ನಮಸ್ಕರಿಸಿ ಅವರಿಂದ ಆಶೀರ್ವಾದವನ್ನು ಪಡೆಯುವುದು ಸಹಾ ಉತ್ತಮ ಪರಿಹಾರ.
- ಮೇಲೆ 7 ರಲ್ಲಿ ಹೇಳಿದಂತೆ ಉಸಿರಾಟ ಮಾಡಿ ನಂತರ ಬಲಗೈ ಯನ್ನು ನಾಭಿಯ ಮೇಲೆ ಇಟ್ಟು ಎಡಗೈಯ ನ್ನು ದೇಹಕ್ಕೆ ಲಂಬವಾಗಿ ಮೇಲಕ್ಕೆ ಎತ್ತಿ ಕಣ್ಣು ಮಚ್ಚಿ ಎಲ್ಲಾ ಪಿತೃ ದೇವತೆ ಗಳನ್ನೂ ದ್ಯಾನಿಸುವುದು ಅತ್ಯುತ್ತಮ ಪರಿಹಾರ ಆಗಿದೆ.
ತಮಿಳು ನಾಡಿನಲ್ಲಿ ಸುಬ್ರಹ್ಮಣ್ಯನ 6 ಕ್ಷೇತ್ರಗಳಿದ್ದು ಆ ಕ್ಷೇತ್ರಗಳನ್ನು ಈ ಕೆಳಗೆ ತಿಳಿಸಿರುವ ಕ್ರಮದಲ್ಲಿ ದರ್ಶನ ಮಾಡಿ ಪಂಚಾಮೃತ ಅಭಿಷೇಕ ಮಾಡಿಸುವುದು ಸಹಾ ಉತ್ತಮ ಪರಿಹಾರ.
ಅ) ತಿರುಪ್ಪರಕುಂಡ್ರಮ್ ಆ) ತಿರಚ್ಚಂದೂರು ಇ) ಪಳನಿ ಈ) ಸ್ವಾಮಿಮಲೆ ಉ)ತಿರುತ್ತಣಿ ಊ) ಪಳಮುದಿರ್ ಶೋಲೈ
ಕೊನೆಯ ಪ್ರಶ್ನ ನಮ್ಮನ್ನು ಕಾಡುವುದು.:- ಈ ದೋಷಗಳು ಭಾರತದಲ್ಲಿರುವವರಿಗೆ ಅದರಲ್ಲೂ ಒಂದು ವರ್ಗದವರಿಗೆ ಮಾತ್ರ ಬರುವಂತಾದ್ದು ಏಕೆ? ಬೇರೆ ದೇಶಗಳಲ್ಲಿ ಅಥವಾ ಬೇರೆ ವರ್ಗದವರಿಗೆ ಏಕೆ ಈ ದೋಷ ಅನ್ವಯಿಸುವುದಿಲ್ಲಾ ?
ಉತ್ತರ: ನಂಬಿಕೆ ಎನ್ನುವುದು ನಮ್ಮ ವಂಶವಾಹಿನಿ ಯೊಟ್ಟಿಗೆ ಸೇರಿಕೊಂಡು ಬಿಟ್ಟಿರುತ್ತದೆ. ನಂಬಿಕೆಗಳು ವಂಶವಾಹಿನಿಯ ಭಾಗ ಅದನ್ನು ಪೂರ್ವ ಸಂಸ್ಕಾರ ಎಂದು ಕರೆಯಲಾಗಿದೆ. ವಂಶವಾಹಿನಿಯ ಈ ನಂಬಿಕೆಗಳನ್ನು ತೆಗೆದುಹಾಕಲು ಸಾಧ್ಯವಾದರೆ ಈ ದೋಷಗಳು ಯಾವವೂ ಬಾಧಿಸುವುದಿಲ್ಲ.