ಪಂಚ ಪ್ರಾಣಗಳು/ವಾಯುಗಳು


ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ ಇವು ಪಂಚವಾಯುಗಳು.

ಪ್ರಾಣವು ಸೂರ್ಯ ಅಥವಾ ಅಗ್ನಿಯ ಶಕ್ತಿ. ಈ ಜ್ವಾಲೆ ಮೇಲ್ಮುಖವಾಗಿ ಹರಿಯುವಂತಾದ್ದು. ಪ್ರಾಣವಾಯುವಿನ ಸ್ಥಾನ ಶ್ವಾಸಕೋಶ. ಇದು ಉಸಿರಾಟದ ಪ್ರಕ್ರಿಯೆಯನ್ನು ನಿರ್ವಹಿಸುವುದೇ ಈ ಪ್ರಾಣ ವಾಯು. ಉಸಿರಾಟದ ಅಂಗಾಂಗಗಳು, ಮಾತು ಇವಕ್ಕ್ ಸಂಬಂಧಿಸಿದ ಮಾಂಸಖಂಡಗಳಾನ್ನು ಇದು ನಿಯಂತ್ರಿಸುತ್ತದೆ. ಪ್ರಾಣ ವಾಯುವಿನ ಹರಿವಿನಿಂದ ಸಂವೇದನೆಯ, ಭಾವನೆಗಳ ಅನುಭವ ಆಗುತ್ತದೆ. ಅಷ್ಟೆ ಅಲ್ಲದೆ ಈ ಪ್ರಾಣ ವಾಯುವು ಮನಸ್ಸಿನ ಹತೋಟಿಗೂ ಕಾರಣ ಆಗಿದೆ. ಉಳಿದ ನಾಲ್ಕು ವಾಯುಗಳೂ ಸಹಾ ಈ ಪ್ರಾಣ ವಾಯುವಿನಿಂದಲೇ ಶಕ್ತಿಯನ್ನು ಪಡೆದುಕೊಳ್ಳುತ್ತದೆ.

ಅಪಾನ ವಾಯುವು ಚಂದ್ರನ ಶೀತಲ ಶಕ್ತಿ. ಇದು ದೇಹವನ್ನು ಹೊರಗಿನಿಂದ ರಕ್ಷಿಸುತ್ತದೆ. ಇದು ಗುರುತ್ವಾಕರ್ಷಣೆಯೊಂದಿಗೆ ಜತೆಗೂಡಿದೆ. ಅಧೋಮುಖವಾಗಿ ಚಲಿಸುವ ತಣ್ಣನೆಯ ನೀರಿನೊಂದಿಗೆ ಸಂಪರ್ಕಹೊಂದಿದೆ ಈ ಅಪಾನ ವಾಯು. ಹೊಟ್ಟೆಯ ಭಾಗದಲ್ಲಿ ನಾಭಿಯ ಕೆಳಗೆ ಈ ಅಪಾನ ವಾಯುವಿನ ಸ್ಥಾನವಾಗಿದೆ. ವಿಸರ್ಜನಾ ಅಂಗಗಳ ಮತ್ತು ಜನನೇಂದ್ರಿಯಗಳ ಮೂಲಕ ಆಗುವ ವಿಸರ್ಜನೆಗೆ ಅಪಾನ ವಾಯು ಕಾರಣವಾಗಿದೆ.

ಶರೀರದ ಎಲ್ಲೆಡೆ ವ್ಯಾಪಿಸಿದೆ ವ್ಯಾನ ವಾಯು. ಚಲನೆಯ ಶಕ್ತಿಯೇ ವ್ಯಾನ ವಾಯು. ಇದು ಐಚ್ಚಿಕ ಮತ್ತು ಅನೈಚ್ಚಿಕ ಮಾಂಸಖಂಡಗಳ ಸಂಕುಚನೆ ಮತ್ತು ವಿಕಸನೆಗೆ ಕಾರಣ ವಾದ ವಾಯು. ಕೀಲುಗಳ ಚಲನೆಗೂ ಈ ವಾಯುವೇ ಕಾರಣ ವಾಗಿದೆ, ಹಾಗಾಗಿಯೇ ಕೀಲು ನೋವನ್ನು ವಾಯು ಎಂದು ಆಯುರ್ವೇದ ಎಂದು ಹೇಳಿದೆ ಆಷ್ಟೇ ಅಲ್ಲಾ ಮಾಂಸಖಂಡಗಳ ಉಳಕು ಆಗಿ ನೋವಾದಾಗ ಧೀರ್ಘಉಸಿರಾಟ ಮಾದರೆ ಉಳುಕಿದ ಮಾಂಸಖಂಡ ಸರಯಾಗಿ ನೋವು ಕಡಿಮೆ ಆಗುವುದು ನಮ್ಮಲ್ಲಿ ಅನೇಕರಿಗೆ ಅನುಬವ ಆಗಿರುತ್ತದೆ.

ಉದಾನ ವಾಯುವು ಧ್ವನಿಪೆಟ್ಟಿಗೆಯ ಮೇಲ್ಭಾಗದ ಆಧಿಪತ್ಯವನ್ನು ಹೊಂದಿದೆ. ಈ ವಾಯುವಿನ ಸಹಾಯದಿಂದಲೇ ನಮ್ಮ ವಿಶೇಷವಾದ ಒಳಗಿನ ಭಾವದ ಅರಿವಾಗುವುದು ( Intution) ಕುಂಡಲಿನೀ ಸೂಕ್ಷ್ಮ ದೇಹದಲ್ಲಿ ಮೇಲ್ಭಾಗದ ಚಲನೆಗೆ ಸಹಕರಿಸುವುದೇ ಈ ವಾಯು. ಬುದ್ಧಿ, ವಿವೇಚನೆ ಸಹಾ ಈ ವಾಯುವಿನಂದಲೇ ನಿಯಂತ್ರಿಸಲ್ಪಟ್ಟಿದೆ. ಈ ವಾಯವಿನ ಕ್ರಿಯೆಯು ಸುಷುಮ್ನಾ ನಾಡಿಯಲ್ಲಿ ಗೋಚರಿಸುತ್ತದೆ. ಪ್ರಾಣ ಮತ್ತು ಅಪಾನ ವಾಯುಗಳನ್ನು ಒಳಗೆ ಮತ್ತು ಹೊರ ಗೆ ಹೋಗುವುದನ್ನು ತಡೆಯವುದರ ಮೂಲಕ ಅವನ್ನು ಒಟ್ಟಿಗೆ ಸುಷುಮ್ನಾ ನಾಡಿಯಲ್ಲಿ ಸಂಚರಿಸುವಂತೆ ಮಾಡುವದೇ ಉದಾನ ವಾಯು. ಹೀಗೆ ಪ್ರಾಣ ಅಪಾನ ವಾಯುಗಳು ಸುಷುಮ್ನಾ ನಾಡಿಯಲ್ಲಿ ಸಂಚರಿಸದಾಗ ಅದೇ ತುರೀಯಾತೀತ ಸ್ಥಿತಿ ಅಥವಾ ಸಮಾಧಿ.
ಈ ಬಗೆಯ ವಾಯು ಸಂಚಾರದಿಂದ ಸಾವು ಕೂಡ ಸಂಭವಿಸಬಹುದು.

ಶರೀರದ ಮಧ್ಯ ಭಾಗವು ಸಮಾನ ವಾಯುವಿನ ಸ್ಥಾನ ಆಗಿದೆ. ಪ್ರಾಣ ಮತ್ತು ಆಹಾರವನ್ನು ಹೀರಿಕೊಳ್ಳುವುದೇ ಅಲ್ಲದೆ ಆಹಾರದ ಜೀರ್ಣಕ್ರಿಯೆಯಲ್ಲೂ ಸಹಕರಿಸುತ್ತದೆ. ಪ್ರಾಣ ಮತ್ತು ಅಪಾನ ವಾಯುಗಳ ನಡುವೆ ಸಮತೋಲನಕ್ಕೆ ಸಹಾ ಸಮಾನವಾಯುವೇ ಕಾರಣವಾಗಿದೆ. ಸ್ಥೂಲ ದೇಹದಲ್ಲಿ ಸಮಾನವಾಯುವನ್ನು ನಾಭಿಯಭಾಗದಲ್ಲಿ ಗುರುತಿಸಿದರೆ ಸೂಕ್ಷ್ಮ ದೇಹದಲ್ಲಿ ಮಣಿಪೂರ ಚಕ್ರದಲ್ಲಿ ಗುರುತಿಸಲಾಗಿದೆ. ಇದು ನಾಭಿಯ ಪ್ರಮುಖ ಶಕ್ತಿ ಕೇಂದ್ರ ವಾಗಿದೆ. ಜಠರಾಗ್ನಿಯನ್ನು ಇದು ಉದ್ದೀಪನ ಗೊಳಿಸುತ್ತದೆ. ನಾಭಿಯನ್ನು ಮುಖ್ಯ ಪ್ರಾಣ ಶಕ್ತಿಯ ಕೇಂದ್ರ ಎನ್ನಬ್ಹುದ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: