ಭಗವಾನ್ ಶಂಕರರು ಈ ಪಂಚಪ್ರಾಣ ಗಳನ್ನು ಮಾತ್ರ ಹೇಳಿ ಉಳಿದ ಐದು ಉಪಪ್ರಾಣಗಳ ಬಗ್ಗೆ ಹೇಳಿಲ್ಲಾ ಏಕೆಂದರೆ ಈ ಉಪಪ್ರಾಣಗಳು, ಪ್ರಾಣ, ಅಪಾನ, ವ್ಯಾನ, ಉದಾನ ಮತ್ತು ಸಮಾನ ವಾಯುಗಳಿಂದಲೇ ನಿಯಂತ್ರಿಸಲ್ಪಡುತ್ತವೆ. ಆದರೂ ನಾವು ಅವುಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.
ನಾಗ ಹೆಸರಿನ ಉಪವಾಯವು ಜಠರದ ವಾಯುವನ್ನು ಬಾಯಿಯಿಂದ ತೇಗಿನ ಮೂಲಕ ಹೊರಗೆ ತಳ್ಳುತ್ತದೆ.
ಕಣ್ಣು ಮಿಟುಕಿಸುವ ಕ್ರಿಯೆಗೆ ಕಾರಣ ಕೂರ್ಮ ಎಂಬ ಉಪವಾಯು.
ಕೆಮ್ಮು, ಸೀನುವಿಕೆ, ಹಸಿವು ಮತ್ತು ಬಾಯಾರಿಕೆಗೆ ಕಾರಣ ಕೃಕರ ಎಂಬ ಉಪ ವಾಯು.
ದೇವದತ್ತ ಎಂಬ ಉಪವಾಯು ಆಕಳಿಕೆ ಆಗಿದೆ.
ಧನಂಜಯ ಎಂಬುವ ಉಪವಾಯು ದೇಹದಲ್ಲೆಡೆ ವ್ಯಾಪಿಸಿದೆ. ನಿದ್ರೆ, ಕಫ, ಹೃದಯದಲ್ಲಿ ರಕ್ತ ಪರಿಚಲನೆಯಲ್ಲಿ ಈ ವಾಯುವಿನ ಪಾತ್ರ ಇದೆ. ಎಲ್ಲಕ್ಕಿಂತ ಪ್ರಮುಖವಾಗಿ, ಎಲ್ಲಾ ಪ್ರಾಣಗಳೂ ಸ್ಥೂಲ ದೇಹವನ್ನು ತೊರೆದ ಬಳಿಕವೂ ದನಂಜಯ ಉಪವಾಯುವು ಸ್ಥೂಲ ದೇಹದಲ್ಲಿಯೇ ಉಳಿಯುತ್ತದೆ ಏಕೆಂದರೆ ದೇಹ ಕೊಳೆಯಲು ದನಂಜಯ ಉಪವಾಯುವಿನ ಅವಶ್ಯಕತೆ ಇದೆ.
ದನಂಜಯ ಉಪವಾಯುವಿನ ಬಗ್ಗೆ ಹೆಚ್ಚು ವಿವರ ಇಲ್ಲಿ ಪ್ರಸ್ತುತ ಅಲ್ಲವಾದರೂ, ದನಂಜಯ ಉಪವಾಯುವಿನ ಬಗ್ಗೆ ಮತ್ತಷ್ಟು ವಿವರ ತಿಳಿದುಕೊಳ್ಳಲು ಇದು ಒಂದು ಅವಕಾಶ ಎಂದು ಭಾವಿಸಿದ್ದೇನೆ. ತಿರುಮೂಲರ್ ಎಂಬ ಸಿದ್ದರು ಈ ಉಪವಾಯುವಿನ ಬಗ್ಗೆ ಹೆಚ್ಚು ವಿವರ ನೀಡಿದ್ದಾರೆ ಎಂಬ ಮಾಹಿತಿ ಇದ್ದರೂ ಆ ಮಾಹಿತಿ ನನಗೆ ದೊರೆತಿಲ್ಲ. ಅದು ತಮಿಳು ಭಾಷಯಲ್ಲಿ ಇರುವ ಸಾದ್ಯತೆ ಇದೆ.
ಪ್ರಾಣ ಹೋದ ಹಲವು ಸಮಯದ ನಂತರ ಮತ್ತೆ ಪ್ರಾಣ ಬಂದ ಅಪರೂಪ ಪ್ರಕರಣಗಳನ್ನ ನಾವು ಕೇಳಿದ್ದೇವೆ. ಪ್ರಾಣ ಹೋದನಂತರ ದೇಹದಲ್ಲೇ ಉಳಿಯುವ ಧನಂಜಯ ಉಪವಾಯು ಇದ್ದಕ್ಕಿದ್ದಂತೆ ಹೆಚ್ಚು ಸಕ್ರಿಯ ಆಗಿ ಹೃದಯದಲ್ಲಿ ರಕ್ತ ಪರಿಚಲನೆ ಆರಂಭಿಸಿರುವ ಅಪರೂಪ ಪ್ರಕರಣಗಳು ಇವು ಎಂದೇ ಭಾವಿಸಬೇಕಿದೆ. ಪ್ರಾಣ ಹೋದ ದೇಹವನ್ನು ದಹನ ಮಾಡುವ ಪದ್ಧತಿ ಇರುವ ಸಮಾಜಗಳೂ ಸಹಾ ಆ ಸಮಾಜಕ್ಕೆ ಸೇರಿದ ಸನ್ಯಾಸಿಗಳ ದೇಹವನ್ನು ದಹನ ಮಾಡದೆ ಬೃಂದಾವನ ನಿರ್ಮಿಸುವ ಪದ್ಧತಿ ಇರುವದನ್ನು ಗಮನಿಸಿದರೆ, ಆ ಮಹಾನುಭಾವರು ಧನಂಜಯ ಉಪವಾಯುವನ್ನೂ ಸಹಾ ತಮ್ಮ ಸಾಧನೆ ಇಂದ ಹೊರಹಾಕಿದ್ದು, ಆ ದೇಹ ಕೊಳೆಯವುದಿಲ್ಲಾ ಎಂಬ ನಂಬಿಕೆ ಇರಬಹುದೇ ಎಂಬ ಬಗ್ಗೆ ವಿದ್ವಾಂಸರು ಚಿಂತನೆ ಮಾಡಬಹುದಾಗಿದೆ. ಹಾಗೆಯೇ ವಿಶೇಷ ದೀಕ್ಷೆ ಪಡೆದಿರುವ ವೀರಶೈವರ ಮತ್ತು ಸನ್ಯಾಸಿಗಳ , ಮಠಾಧಿಪತಿಗಳ ಅಂತ್ಯ ಸಂಸ್ಕಾರದಲ್ಲಿ ಕ್ರಿಯಾ ಸಮಾಧಿ ಎಂಬ ವಿಸ್ತೃತವಾದ ಧಾರ್ಮಿಕ ಕ್ರಿಯೆ ಇದ್ದು , ಈ ಕ್ರಿಯೆಯ ಮೂಲಕ ಧನಂಜಯ ಉಪವಾಯುವನ್ನು ಹೊರಹಾಕುವ ಪ್ರಕ್ರಿಯೆ ಆಗಿರಬಹುದೇ ಎಂಬ ಬಗ್ಗೆಯೂ ವಿದ್ವಾಂಸರು ಬೆಳಕು ಚೆಲ್ಲಬೇಕಿದೆ.
ಧನಂಜಯ ಎನ್ನುವ ಹೆಸರು ಗೀತಾಚಾರ್ಯ ಶ್ರೀಕೃಷ್ಣನಿಗೆ ಮಾತ್ರವಲ್ಲದೆ ಅರ್ಜುನನ ಹತ್ತು ಹೆಸರುಗಳಲ್ಲಿ ಒಂದು ಹೆಸರಾಗಿರು ವುದರ ವಿಶೇಷತಯೂ ಸಹಾ ಧನಂಜಯ ಉಪವಾಯು