ಓಂ ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
अस्य श्रीमन्महाकुन्डलीसाष्टोत्तरसहस्रनामस्तॊत्रस्य ब्रह्मर्षीर्जगतीच्छन्दॊ भगवती श्रीमन्महाकुंडलीदॆवता सर्वयॊगसमृद्धि सिध्यर्थॆ विनियॊगः
ಅಸ್ಯ ಶ್ರೀಮನ್ಮಹಾಕುಂಡಲೀಸಾಷ್ಟೋತ್ತರಸಹಸ್ರನಾಮಸ್ತೋತ್ರಸ್ಯ
ಬ್ರಹ್ಮರ್ಷೀರ್ಜಗತೀಚ್ಛನ್ದೋ ಭಗವತೀ ಶ್ರೀಮನ್ಮಹಾಕುಂಡಲೀದೇವತಾ ಸರ್ವಯೋಗಸಮೃದ್ಧಿಸಿದ್ಧ್ಯರ್ಥೇ ವಿನಿಯೋಗಃ ॥
ಈ ಮಹಾಕುಂಡಲಿನೀ ಸಹಸ್ರನಾಮವು ಅತೀ ಅಪರೂಪವಾಗಿದ್ದು ಇಲ್ಲಿ ಸಹಸ್ರನಾಮದ ಜತೆಗೆ ಅಷ್ಟೋತ್ತರ, ಕವಚವೂ ಸೇರಿರುವುದು ವಿಶೇಷವಾಗಿದೆ. ಋಷಿ ಬ್ರಹ್ನರ್ಷೀ, ಜಗತೀ ಛಂದಃ, ಸರ್ವಯೋಗಸಮೃದ್ದಿ ಸಿದ್ಧಿಯು ಫಲ ಆಗಿದೆ.
ಲಲಿತಾ ಸಹಸ್ರನಾಮವು ಸೂಕ್ಷ್ಮ ಚಕ್ರಗಳ ವಿವರಣೆ ನೀಡುವಾಗ ವಿಶುದ್ಧ ಚಕ್ರದಿಂದ ಆರಂಭ ಮಾಡಿರುವುದನ್ನು ಗಮನಿಸಬೇಕು. “ಕ” ಎನ್ನುವ ಶಬ್ಧದ ವ್ಯುತ್ಪತ್ತಿ ಆಗುವುದು ವಿಶುದ್ಧ ಚಕ್ರದಲ್ಲಿ. ಕುಂಡಲಿನೀ ಸಹಸ್ರನಾಮದಲ್ಲಿ ಸಹಾ ಎಲ್ಲಾ ನಾಮಗಳೂ ’ಕ” ಎಂಬ ಅಕ್ಷರದಲ್ಲೇ ಆರಂಭ ಆಗಿದೆ. ಶ್ರೀ ವಿದ್ಯಾ ಪಂಚದಶೀ ಮಂತ್ರವೂ ಸಹಾ ’ಕ” ಶಬ್ಧದಿಂದಲೇ ಆರಂಭ. ಶ್ರೀ ವಿದ್ಯಾ ಉಪಾಸಕರಿಗೆ ಮತ್ತು ಕುಂಡಲಿನೀ ಯೋಗಾಭ್ಯಾಸಿಗಳಿಗೆ ಮಾತ್ರ ಈ ಸಹಸ್ರನಾಮ ಉಪಕಾರಿಯಾಗುತ್ತದೆ
This iss a great blog
LikeLike